• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿಯ ದೊಡ್ಡ ತಿಮಿಂಗಲ ಸದ್ಯದಲ್ಲೇ ಕಾಂಗ್ರೆಸ್ ಬಲೆಗೆ?

|
Google Oneindia Kannada News

ಸಾಮಾನ್ಯವಾಗಿ ಚುನಾವಣೆಯ ಹೊಸ್ತಿಲಲ್ಲಿ ರಾಜಕಾರಣಿಗಳು ತಮ್ಮ ನಿಯತ್ತನ್ನು ಬದಲಾಯಿಸುವ ಉದಾಹರಣೆಗಳು ಬೇಕಾದಷ್ಟಿವೆ. ಆದರೆ, ಚುನಾವಣೆಗೆ ಇನ್ನೂ 18-19 ತಿಂಗಳು ಇರುವಾಗಲೇ ಪಕ್ಷಾಂತರ ಪರ್ವ ಆರಂಭವಾಗಲಿದೆಯಾ ಎನ್ನುವ ಪ್ರಶ್ನೆ ಎದುರಾಗಿರುವುದಕ್ಕೆ ಕಾರಣಗಳಿವೆ.

ಹಲವು ಸಾಹಸಗಳನ್ನು ಮಾಡಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದರೂ, ಸದಾ ಒಂದಲ್ಲಾ ಒಂದು ಕಿರಿಕಿರಿಯನ್ನು ಎದುರಿಸುತ್ತಲೇ ಇದೆ. ಒಂದಾ ಖಾತೆ ಬೇಕೆನ್ನುವ ಕ್ಯಾತೆ, ಖಾತೆ ಸಿಕ್ಕಿದರೆ ಪ್ರಭಾವೀ ಖಾತೆ ಬೇಕೆನ್ನುವ ಆಸೆ/ದುರಾಸೆ. ಒಟ್ಟಿನಲ್ಲಿ ಇವರನ್ನೆಲ್ಲಾ ಸಂಭಾಳಿಸುವುದೇ ಬಿಜೆಪಿ ಹೈಕಮಾಂಡಿಗೆ ದೊಡ್ಡ ಸವಾಲಾಗುತ್ತಾ ಬರುತ್ತಿದೆ.

"ಸಿದ್ದರಾಮಯ್ಯ ಟಾರ್ಚರ್ ತಡೆದುಕೊಳ್ಳಲಾಗದೇ ತೈಲಬೆಲೆ ಇಳಿಸಿದ ಮೋದಿ"

ಯಡಿಯೂರಪ್ಪನವರು ಕೆಳಗಿಳಿದು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ನಂತರ, ಯಾರು ಬಹಿರಂಗವಾಗಿ ಭಾಷಣಗಳನ್ನು ಬಿಗಿಯುತ್ತಾ ಪಕ್ಷಕ್ಕೆ ಮುಜುಗರ ತರುತ್ತಿದ್ದರೋ, ಅವರನ್ನೆಲ್ಲಾ ಮುಲಾಜಿಲ್ಲದೇ ಬಿಜೆಪಿ ವರಿಷ್ಠರು ಸೈಲೆಂಟಾಗಿ ಸೈಡಿನಲ್ಲಿ ಕೂರಿಸಿದ್ದರು.

ಇಂತವರೆಲ್ಲಾ ಮೊದಮೊದಲು ಅಸಮಾಧಾನ ವ್ಯಕ್ತ ಪಡಿಸಿದರೂ, ಅದಕ್ಕೆ ಹೈಕಮಾಂಡ್ ಸೊಪ್ಪು ಹಾಕದೇ ಇದ್ದಾಗ ಬೇರೆ ದಾರಿ ಕಾಣದೇ ಸುಮ್ಮನಿದ್ದಾರೆ. ಆದರೂ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸಿದವನು ನಾನೇ ಎಂದು ಹೇಳಿ ತಿರುಗಾಡಿಕೊಂಡಿದ್ದ ಬಿಜೆಪಿ ಪ್ರಭಾವೀ ಮುಖಂಡರೋರ್ವರು ಈಗ ಕಾಂಗ್ರೆಸ್ ತದ ತಟ್ಟುತ್ತಿದ್ದಾರೆ ಎನ್ನುವ ಸುದ್ದಿ ವೇಗ ಪಡೆದು ಕೊಳ್ಳುತ್ತಿದೆ.

ಉಪ ಚುನಾವಣೆ: ಎಚ್‌ಡಿಕೆ ಪಾಲಿಗೆ ಅಕ್ಷರಶಃ ವಿಲನ್ ಆದ ಜಮೀರ್ ಅಹ್ಮದ್ಉಪ ಚುನಾವಣೆ: ಎಚ್‌ಡಿಕೆ ಪಾಲಿಗೆ ಅಕ್ಷರಶಃ ವಿಲನ್ ಆದ ಜಮೀರ್ ಅಹ್ಮದ್

 ಯಡಿಯೂರಪ್ಪನವರ ಸರಕಾರ ಬರಲು ಕಾರಣರಾದ ಬಾಂಬೆ ಫ್ರೆಂಡ್ಸ್

ಯಡಿಯೂರಪ್ಪನವರ ಸರಕಾರ ಬರಲು ಕಾರಣರಾದ ಬಾಂಬೆ ಫ್ರೆಂಡ್ಸ್

ಯಡಿಯೂರಪ್ಪನವರ ಸರಕಾರ ಬರಲು ಕಾರಣರಾದ ಬಾಂಬೆ ಫ್ರೆಂಡ್ಸ್ , ಕ್ಯಾಬಿನೆಟ್ ನಲ್ಲಿ ಆಯಕಟ್ಟಿನ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ, ಜಲಸಂಪನ್ಮೂಲ ಖಾತೆಯ ಸಚಿವರಾಗಿದ್ದ ರಮೇಶ್ ಜಾರಕಿಹೊಳಿಯವರಂತೂ ನಾನೇ ಸೂಪರ್ ಸಿಎಂ ಎನ್ನುವ ರೀತಿಯಲ್ಲಿ ರಾಜಕೀಯ ನಡೆಸುತ್ತಿದ್ದರು. ಆದರೆ, ಅವರ ಸಿಡಿ ಪ್ರಕರಣ ಹೊರಬಂದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇವರ ಜೊತೆಜೊತೆಗಿದ್ದ ಸೈನಿಕ ಸಿ.ಪಿ.ಯೋಗೇಶ್ವರ್ ವಿಚಾರದಲ್ಲಿ ಹೀಗಾಗಿರಲಿಲ್ಲ.

 ಬೆಂಗಳೂರಿನಲ್ಲಿ ಕೂತು ಕುಮಾರಸ್ವಾಮಿ ಸರಕಾರವನ್ನು ಉರುಳಿಸಿದ್ದು ನಾನೇ

ಬೆಂಗಳೂರಿನಲ್ಲಿ ಕೂತು ಕುಮಾರಸ್ವಾಮಿ ಸರಕಾರವನ್ನು ಉರುಳಿಸಿದ್ದು ನಾನೇ

ಬೆಂಗಳೂರಿನಲ್ಲಿ ಕೂತು ಕುಮಾರಸ್ವಾಮಿ ಸರಕಾರವನ್ನು ಉರುಳಿಸಿದ್ದು ನಾನೇ ಎಂದು ಹೇಳುತ್ತಿದ್ದ ಯೋಗೇಶ್ವರ್ ಅವರಿಗೆ ಯಡಿಯೂರಪ್ಪ ಸರಕಾರದಲ್ಲಿ ಪ್ರವಾಸೋದ್ಯಮ ಖಾತೆ ಸಿಕ್ಕಿತ್ತು. ಸಿಕ್ಕ ಖಾತೆಯ ಮೇಲೆ ಖುಷಿ ಪಡದ ಅವರು ಈ ಸಚಿವಾಲಯದ ಅಧಿಕಾರವನ್ನು ತೆಗೆದುಕೊಳ್ಳಲೇ ಕೆಲವು ತಿಂಗಳು ಮಾಡಿದ್ದರು. ಇದರ ಜೊತೆಗೆ, ಪಕ್ಷದ ಶಿಸ್ತಿನ ಚೌಕಟ್ಟನ್ನು ಮೀರುತ್ತಾ ಸಾಗಿದ್ದು ಒಂದು ಕಡೆಯಾದರೆ, ದೆಹಲಿಯಲ್ಲಿ ಕೂತು ಒತ್ತಡ ಹೇರಲಾರಂಭಿಸಿದ್ದರು.

 ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಯೋಗೇಶ್ವರ್ ಅವರಿಗೆ ಇದ್ದ ಖಾತೆಯನ್ನೂ ಕಿತ್ತುಕೊಳ್ಳಲಾಯಿತು

ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಯೋಗೇಶ್ವರ್ ಅವರಿಗೆ ಇದ್ದ ಖಾತೆಯನ್ನೂ ಕಿತ್ತುಕೊಳ್ಳಲಾಯಿತು

ಇದನ್ನೆಲ್ಲಾ ಅವಲೋಕಿಸುತ್ತಿದ್ದ ಬಿಜೆಪಿ ಹೈಕಮಾಂಡ್, ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಯೋಗೇಶ್ವರ್ ಅವರಿಗೆ ಇದ್ದ ಖಾತೆಯನ್ನೂ ಕಿತ್ತುಕೊಂಡು ಸಂಪೂರ್ಣವಾಗಿ ಸೈಡಿಗೆ ತಳ್ಳಿಬಿಟ್ಟಿತು. ಎಷ್ಟೇ ಅವಿರತ ಪ್ರಯತ್ನ ಪಟ್ಟರೂ, ಮತ್ತೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂದರಿತ ಯೋಗೇಶ್ವರ್ ಈಗ ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿದ್ದಾರೆ ಎನ್ನುವ ಮಾಹಿತಿಯಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರೂ ಪರೋಕ್ಷವಾಗಿ ಹೌದು ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

  ಹಾಸನಾಂಬೆ ದೇವಿಯ ಬಳಿ ಏನೆಲ್ಲಾ ಬೇಡಿಕೆ ಇಟ್ಟಿದ್ದಾರೆ ಭಕ್ತಾದಿಗಳು | Oneindia Kannada
   ಯೋಗೇಶ್ವರ್ ಕಾಂಗ್ರೆಸ್ ಸೇರುವ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡ ಡಿಕೆಶಿ

  ಯೋಗೇಶ್ವರ್ ಕಾಂಗ್ರೆಸ್ ಸೇರುವ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡ ಡಿಕೆಶಿ

  ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡುತ್ತಿದ್ದ ಡಿ.ಕೆ.ಶಿವಕುಮಾರ್, "ನಮಗೆ ಪಕ್ಷ ಮುಖ್ಯ, ನನ್ನನ್ನು ಕಂಡರೆ ಆಗದವರೂ ಈಗ ಪಕ್ಷಕ್ಕೆ ಸೇರಲು ಸಿದ್ದರಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು ಬರುವವರಿಗೆ ಸ್ವಾಗತವಿದೆ, ಕೆಲವರು ಮಾರುಕಟ್ಟೆ ಹೆಚ್ಚಿಸಲು ಸುದ್ದಿಯನ್ನು ಬಿಟ್ಟಿರುತ್ತಾರೆ. ಪಕ್ಷಕ್ಕೆ ಬರುವವರನ್ನು ಬೇಡ ಎಂದು ಹೇಳುವುದಿಲ್ಲ. ಮುಂದೆ ಏನಾಗುತ್ತೆ ಎನ್ನುವುದನ್ನು ನೀವೇ ನೋಡಿ" ಎಂದು ಡಿಕೆಶಿ ಹೇಳುವ ಮೂಲಕ, ಯೋಗೇಶ್ವರ್ ಅವರು ಕಾಂಗ್ರೆಸ್ ಸೇರುವ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

  English summary
  Is One Of The Senior BJP Leader All Set To Join Congress? Know More,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X