ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುವಿಕೆ ಸಾಮಾನ್ಯವೇ?

|
Google Oneindia Kannada News

ನವದೆಹಲಿ, ಜೂನ್ 08: ಕೊರೊನಾ ಲಸಿಕೆ ಪಡೆದ ಬಳಿಕ ಅಲರ್ಜಿಯಾಗುವುದೇ?, ಗರ್ಭಿಣಿಯರು ಕೊರೊನಾ ಲಸಿಕೆ ಪಡೆಯಬಹುದೇ?, ಹಾಲುಣಿಸುವ ತಾಯಂದಿರು ಲಸಿಕೆ ಪಡೆಯಬಹುದೇ?, ಕೊರೊನಾ ಲಸಿಕೆ ಪಡೆದ ಬಳಿಕ ನನ್ನಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದೇ?, ಕೊರೊನಾ ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುವಿಕೆ ಸಾಮಾನ್ಯವೇ? ಹೀಗೆ ಹತ್ತು ಹಲವು ಪ್ರಶ್ನೆಗಳು ನಿಮ್ಮ ಮುಂದಿವೆ.

ಜತೆಗೆ ನನಗೆ ಕೊರೊನಾ ಸೋಂಕು ತಗುಲಿದೆ, ಎಷ್ಟು ದಿನದ ಬಳಿಕ ಕೊರೊನಾ ಲಸಿಕೆ ಪಡೆಯಬೇಕು ಎನ್ನುವ ಪ್ರಶ್ನೆಯನ್ನು ಕೂಡ ಹಲವು ಮಂದಿ ಕೇಳಿದ್ದಾರೆ. ಇದೆಲ್ಲಕ್ಕೂ ನೀತಿ ಆಯೋಗದ ಡಾ. ವಿಕೆ ಪೌಲ್ ಹಾಗೂ ಡಾ. ರಂದೀಪ್ ಗುಲೇರಿಯಾ ಅವರು 'ಡಿಡಿ ನ್ಯೂಸ್‌'ನಲ್ಲಿ ಭಾನುವಾರ ಪ್ರಕಟವಾದ ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ...

 ಕೊರೊನಾ ಲಸಿಕೆಯಿಂದ ಅಲರ್ಜಿಯಾಗುವುದೇ?

ಕೊರೊನಾ ಲಸಿಕೆಯಿಂದ ಅಲರ್ಜಿಯಾಗುವುದೇ?

ಕೊರೊನಾ ಲಸಿಕೆಯಿಂದ ಅಲರ್ಜಿಯಾಗುವುದೇ ಎಂಬ ಪ್ರಶ್ನೆಗೆ ಡಾ. ವಿಕೆ ಪೌಲ್ ಹಾಗೂ ಡಾ. ಗುಲೇರಿಯಾ ಮಾಹಿತಿ ನೀಡಿದ್ದಾರೆ. ಡಾ. ವಿಕೆ ಪೌಲ್: ಯಾರಿಗಾದರೂ ಮೊದಲಿನಿಂದ ಅಲರ್ಜಿ ಸಮಸ್ಯೆಗಳಿದ್ದರೆ, ವೈದ್ಯಕೀಯ ಸಲಹೆ ಬಳಿಕವಷ್ಟೇ ಕೋವಿಡ್ 19 ಲಸಿಕೆ ಪಡೆದುಕೊಳ್ಳಬೇಕು. ಸಾಮಾನ್ಯ ಶೀತ, ಚರ್ಮದ ಸಣ್ಣ ಅಲರ್ಜಿಯ ಸಮಸ್ಯೆಯಾಗಿದ್ದರೆ ಲಸಿಕೆ ಪಡೆಯಲು ಹಿಂದೇಟು ಹಾಕಬಾರದು ಎಂದು ಹೇಳಿದ್ದಾರೆ. ಡಾ. ಗುಲೇರಿಯಾ: ಅಲರ್ಜಿಗೆ ಮೊದಲೇ ಔಷಧಿಯನ್ನು ಪಡೆಯುತ್ತಿರುವವರು ಅದನ್ನು ನಿಲ್ಲಿಸಬಾರದು, ಲಸಿಕೆ ಪಡೆದ ದಿನವೂ ನಿಯಮಿತವಾಗಿ ಆ ಔಷಧಿಗಳನ್ನು ತೆಗೆದುಕೊಳ್ಳಬೇಕು.ನಿಮಗೆ ತೀವ್ರವಾದ ಅಲರ್ಜಿ ಇದ್ದರೂ ಕೂಡ ಲಸಿಕೆಯನ್ನು ಪಡೆಯಿರಿ, ಬಳಿಕ ಅಲರ್ಜಿ ಔಷಧವನ್ನು ಸೇವಿಸಿ ಎಂದು ಸಲಹೆ ನೀಡಿದ್ದಾರೆ.

ಸಂಪೂರ್ಣ ಲಸಿಕೆ ಪಡೆದಿದ್ದರೆ, ದೇಶೀಯ ವಿಮಾನ ಪ್ರಯಾಣ ಸುಲಭ ಹೇಗೆ?ಸಂಪೂರ್ಣ ಲಸಿಕೆ ಪಡೆದಿದ್ದರೆ, ದೇಶೀಯ ವಿಮಾನ ಪ್ರಯಾಣ ಸುಲಭ ಹೇಗೆ?

 ಗರ್ಭಿಣಿಯರು ಲಸಿಕೆ ತೆಗೆದುಕೊಳ್ಳಬಹುದೇ?

ಗರ್ಭಿಣಿಯರು ಲಸಿಕೆ ತೆಗೆದುಕೊಳ್ಳಬಹುದೇ?

ಡಾ. ಗುಲೇರಿಯಾ: ನಾವು ಇತ್ತೀಚೆಗೆ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಕೊರೊನಾ ಲಸಿಕೆಯನ್ನು ಗರ್ಭಿಣಿಯರಿಗೆ ನೀಡುವಂತಿಲ್ಲ. ಆದರೆ ಕೆಲವು ಲಸಿಕೆಗಳು ಗರ್ಭಿಣಿಯರಿಗೆ ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ. ಲಸಿಕೆಗಳನ್ನು ಬಹಳ ಕಡಿಮೆ ಅವಧಿಯಲ್ಲಿ ಸಂಶೋಧಿಸಲಾಗಿದೆ. ಗರ್ಭಿಣಿಯರನ್ನು ಬಹುಬೇಗ ಈ ಪ್ರಯೋಗಗಳಲ್ಲಿ ಸೇರಿಸಲಾಗುವುದಿಲ್ಲ ಎಂದರು.

 ಗರ್ಭಿಣಿಯರಿಗೆ ಕೊರೊನಾ ಲಸಿಕೆ

ಗರ್ಭಿಣಿಯರಿಗೆ ಕೊರೊನಾ ಲಸಿಕೆ

ಅನೇಕ ದೇಶಗಳಲ್ಲಿ ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ, ಫೈಜರ್, ಮಾಡೆರ್ನಾ ಲಸಿಕೆಗಳಿಗೆ ಅಮೆರಿಕದ ಎಫ್‌ಡಿಎ ಅನುಮೋದನೆ ನೀಡಿದೆ. ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‌ಗೆ ಸಂಬಂಧಿಸಿದ ಡೇಟಾ ಕೂಡ ಶೀಘ್ರದಲ್ಲೇ ಲಭ್ಯವಾಗಲಿದೆ. ಕೆಲವು ಡೇಟಾಗಳು ಈಗಾಗಲೇ ಲಭ್ಯವಿದೆ ಎಂದು ಗುಲೇರಿಯಾ ಹೇಳಿದರು.

ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ ದೇಶದ ಮೊದಲ ಹಳ್ಳಿ ಇದು...ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ ದೇಶದ ಮೊದಲ ಹಳ್ಳಿ ಇದು...

 ದೇಹಕ್ಕೆ ಬೇಕಾಗುವ ರೋಗ ನಿರೋಧಕ ಶಕ್ತಿ ಸಿಗುವುದೇ?

ದೇಹಕ್ಕೆ ಬೇಕಾಗುವ ರೋಗ ನಿರೋಧಕ ಶಕ್ತಿ ಸಿಗುವುದೇ?

ಡಾ. ಪೌಲ್: ಲಸಿಕೆಗಳ ಪರಿಣಾಮಕಾರುತ್ವವನ್ನು ನಾವು ನಿರ್ಣಯಿಸಬಾರದು ಅದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಲಸಿಕೆಗಳು ಅನೇಕ ರೀತಿಯ ರಕ್ಷಣೆಗಳನ್ನು ನೀಡುತ್ತದೆ. ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಅಥವಾ ಸ್ಪುಟ್ನಿಕ್ ಲಸಿಕೆಗಳ ಪರಿಣಾಮಕಾರಿತ್ವವು ಸಮನಾಗಿರುತ್ತದೆ. ಹೀಗಾಗಿ ಯಾವುದೇ ಲಸಿಕೆಯನ್ನು ನೀವು ಪಡೆಯಬಹುದಾಗಿದೆ, ಲಸಿಕೆ ಪಡೆದು ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

 ರಕ್ತ ಹೆಪ್ಪುಗಟ್ಟುವಿಕೆ ಸಾಮಾನ್ಯವೇ?

ರಕ್ತ ಹೆಪ್ಪುಗಟ್ಟುವಿಕೆ ಸಾಮಾನ್ಯವೇ?

ಡಾ. ಪೌಲ್: ಕೊರೊನಾ ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುವಿಕೆಯ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ, ಆಸ್ಟ್ರಾಜೆನೆಕಾ ಲಸಿಕೆ ಪಡೆದ ಬಳಿಕ ಯುರೋಪ್‌ನಲ್ಲಿ ಸಾಕಷ್ಟು ಮಂದಿಗೆ ಈ ಸಮಸ್ಯೆ ಕಾಣಿಸಿಕೊಂಡಿದೆ. ಅವರ ಜೀವನ ಶೈಲಿ, ದೇಹ, ಆನುವಂಶಿಕ ರಚನೆಯಿಂದಾಗಿ ಕಿರಿಯ ವಯಸ್ಸಿನಲ್ಲೇ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಭಾರತದಲ್ಲಿರುವ ಡೇಟಾವನ್ನು ಗಮನಿಸುವುದಾದರೆ ಅಂತಹ ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣಗಳು ಇಲ್ಲಿ ತುಂಬಾ ಕಡಿಮೆ ಎಂದು ಹೇಳಲಾಗಿದೆ.

 ಎಷ್ಟು ದಿನಗಳ ಬಳಿಕ ಲಸಿಕೆ ಪಡೆಯಬೇಕು

ಎಷ್ಟು ದಿನಗಳ ಬಳಿಕ ಲಸಿಕೆ ಪಡೆಯಬೇಕು

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು 3 ತಿಂಗಳ ಬಳಿಕ ಕೊರೊನಾ ಲಸಿಕೆಯನ್ನು ಪಡೆಯಬಹುದಾಗಿದೆ. ಹೀಗೆ ಮಾಡುವುದರಿಂದ ದೇಹದಲ್ಲಿ ಬಲವಾದ ರೋಗ ನಿರೋಧಕ ಶಕ್ತಿ ಅಭಿವೃದ್ಧಿಯಾಗುತ್ತದೆ. ಲಸಿಕೆ ಪರಿಣಾಮವೂ ಉತ್ತಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ(https://pib.gov.in/PressReleasePage.aspx?PRID=1719925).

English summary
Can people with allergies get vaccinated ? Can pregnant women take Covid 19 vaccine? What about lactating mothers ? Do I get enough antibodies after getting vaccinated ? Is blood clotting common after taking the vaccine shots?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X