Queen Elizabeth II : ಬ್ರಿಟನ್ ಇತಿಹಾದಲ್ಲೇ ಸುದೀರ್ಘ ಆಳಿದ ಖ್ಯಾತಿಯ ರಾಣಿ ಎಲಿಜಬೆತ್: ಒಂದು ಪರಿಚಯ

ಬ್ರಿಟನ್‌ನ ರಾಣಿ ಎಲಿಜಬೆತ್-2 ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೆ. 8, ಗುರುವಾರದಂದು ಸ್ಕಾಟ್ಲೆಂಡ್‌ನ ತಮ್ಮ ಬಂಗಲೆಯಲ್ಲಿ ವಿಧಿವಶರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಅರಸೊತ್ತಿಗೆಗೆ ವಾರಸುದಾರರಾದ ಪ್ರಿನ್ಸ್ ಚಾರ್ಲ್ಸ್ ಸೇರಿದಂತೆ ನಾಲ್ವರು ಮಕ್ಕಳು ಮತ್ತು ಹಲವು ಮೊಮ್ಮಕ್ಕಳನ್ನು ಅವರು ಅಗಲಿದ್ದಾರೆ.

1952ರಲ್ಲಿ ಬ್ರಿಟನ್ ರಾಣಿಯಾಗಿ ಆಡಳಿತದ ಚುಕ್ಕಾಣಿ ಹಿಡಿದಿದ್ದ ಅವರು 70 ವರ್ಷಗಳಷ್ಟು ಸುದೀರ್ಘ ಕಾಲ ಸಿಂಹಾಸನ ಅಲಂಕರಿಸಿದ್ದರು. ಬ್ರಿಟನ್ ಅರಸೊತ್ತಿಗೆಯಲ್ಲಿ ಅತೀ ಹೆಚ್ಚು ಕಾಲ ಇದ್ದ ದಾಖಲೆ ಅವರದ್ದು. ವಿಕ್ಟೋರಿಯಾ ರಾಣಿಯ ದಾಖಲೆಯನ್ನೂ ಅವರು ಮುರಿದಿದ್ದಾರೆ. ರಾಣಿ ವಿಕ್ಟೋರಿಯಾ 63 ವರ್ಷಗಳ ಕಾಲ ರಾಣಿಯಾಗಿ ದಾಖಲೆ ಮಾಡಿದ್ದರು.

ವಿಶ್ವ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷ ಆಳ್ವಿಕೆ ನಡೆಸಿದ ಅರಸರ ಪಟ್ಟಿಯಲ್ಲಿ ಎರಡನೇ ಎಲಿಜಬೆತ್ ಎರಡನೇ ಸ್ಥಾನ ಪಡೆಯುತ್ತಾರೆ. ಬ್ರಿಟನ್ ರಾಣಿಯಾಗಿ 70 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ಲಾಟಿನಂ ಜುಬಿಲಿ ಆಚರಣೆ ಮಾಡಲಾಗಿತ್ತು. ರಾಣಿ ಅವರು ಬ್ರಿಟನ್ ಹಾಗೂ 14 ದೇಶಗಳಿಗೆ ರಾಣಿಯಾಗಿದ್ದರು.

Introduction to Elizabet-II, The Longest Serving Monarch of Britain

ಇದೀಗ ರಾಣಿ ಎರಡನೇ ಎಲಿಜಬೆತ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಚಾರ್ಲ್ಸ್ ಅವರು ಬ್ರಿಟನ್‌ನ ನೂತನ ಅರಸರಾಗಲಿದ್ದಾರೆ.

ಎಲಿಜಬೆತ್-2 ಪರಿಚಯ:

ಎಲೆಜಬೆತ್ ಅಲೆಕ್ಸಾಂಡರಾ ಮೇರಿ ಹುಟ್ಟಿದ್ದು 1926 ಏಪ್ರಿಲ್ 21ರಂದು ಲಂಡನ್‌ನ ಮೇಫೇರ್‌ನಲ್ಲಿ. ಆಗ ಯಾರ್ಕ್‌ನ ಡ್ಯೂಕ್ ಮತ್ತು ಡಚೆಸ್ ಆಗಿದ್ದ 4ನೇ ಜಾರ್ಜ್ ಮತ್ತು ಎಲಿಜಬೆತ್ ಅವರಿಗೆ ಜನಿಸಿದರು. ಮುಂದೆ 4ನೇ ಜಾರ್ಜ್ ಬ್ರಿಟನ್‌ನ ದೊರೆಯಾಗುತ್ತಾರೆ. ಎಲಿಜಬೆತ್ ಒಂದನೇ ಎಲಿಜಬೆತ್ ಆಗಿ ರಾಣಿಯಾಗುತ್ತಾರೆ.

1936ರಲ್ಲಿ 4ನೇ ಜಾರ್ಜ್ ಬ್ರಿಟನ್ ಅರಸರಾದ ಬಳಿಕ ಅವರ ಮಗಳು ಎಲಿಜಬೆತ್ ವಾರಸುದಾರರಾಗಿ ಎಲ್ಲರ ಗಮನ ಸೆಳೆಯುತ್ತಾರೆ. 1947ರಲ್ಲಿ 22ನೇ ವಯಸ್ಸಿನಲ್ಲಿ ಅವರು ಗ್ರೀಸ್ ಮತ್ತು ಡೆನ್ಮಾರ್ಕ್‌ನ ರಾಜಕುಮಾರರಾಗಿದ್ದ ಪ್ರಿನ್ಸ್ ಫಿಲಿಪ್‌ರನ್ನು ವಿವಾಹವಾಗುತ್ತಾರೆ. 1952ರಲ್ಲಿ ಕಿಂಗ್ ಜಾರ್ಜ್ ಮೃತಪಟ್ಟ ಬಳಿಕ ಎಲಿಜಬೆತ್ ಅರಸ ಪಟ್ಟಕ್ಕೆ ಏರುತ್ತಾರೆ. ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೌತ್ ಅಫ್ರಿಕಾ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಿಗೆ ಅವರು ರಾಣಿ ಆಗುತ್ತಾರೆ.

Introduction to Elizabet-II, The Longest Serving Monarch of Britain

ಫಿಲಿಪ್ ಮತ್ತು ಎಲಿಜಬೆತ್ ದಂಪತಿಗೆ ಒಬ್ಬ ಹೆಣ್ಮಗಳು ಸೇರಿ ನಾಲ್ವರು ಮಕ್ಕಳಿದ್ದಾರೆ. ಪ್ರಿನ್ಸ್ ಚಾರ್ಲ್ಸ್, ಪ್ರಿನ್ಸ್ ಆಂಡ್ರ್ಯೂ, ಪ್ರಿನ್ಸ್ ಎಡ್ವರ್ಡ್ ಮತ್ತು ಪ್ರಿನ್ಸೆಸ್ ಆನ್ನೆ. ವೇಲ್ಸ್ ರಾಜಕುಮಾರರಾಗಿದ್ದ ಚಾರ್ಲ್ಸ್ ಈಗ ಬ್ರಿಟನ್ ಅರಸರಾಗಿ ಸಿಂಹಾಸನ ಏರಲಿದ್ದಾರೆ.

ಬೇಗ ಸ್ವಾತಂತ್ರ್ಯ:

ಎಲಿಜಬೆತ್ ರಾಣಿಯಾಗಿದ್ದಾಗ ಬ್ರಿಟನ್ ವಶದಲ್ಲಿದ್ದ ಅನೇಕ ಪ್ರದೇಶಗಳಿಗೆ ಬೇಗ ಸ್ವಾತಂತ್ರ್ಯ ಸಿಕ್ಕಿದ್ದವು. ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ಆಫ್ರಿಕಾ ಮತ್ತು ಕೆರಿಬಿಯನ್ ಪ್ರದೇಶಗಳ 20ಕ್ಕೂ ಹೆಚ್ಚು ದೇಶಗಳು ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದಿದ್ದವು.

ಮಗ ಮತ್ತು ಸೊಸೆ ದಾಂಪತ್ಯ ಬಿರುಕು

ಈಗ ಅರಸರಾಗಿರುವ ಚಾರ್ಲ್ಸ್ ಹೆಸರು ತೊಂಬತ್ತರ ದಶಕದಲ್ಲಿ ಹೆಚ್ಚು ಸದ್ದು ಮಾಡಿತ್ತು. ಡಯಾನಾ ಸ್ಪೆನ್ಸರ್ ಎಂಬ ಮಾಡೆಲ್ ಅನ್ನು ವಿವಾಹವಾಗಿದ್ದ ಪ್ರಿನ್ಸ್ ಚಾರ್ಲ್ಸ್ 1996ರಲ್ಲಿ ವಿಚ್ಛೇದನ ನೀಡಿದ್ದರು. ಡಯಾನಾಗೆ ಬೇರೆಯವರ ಜೊತೆ ಅನೈತಿಕ ಸಂಬಂಧ ಇತ್ತೆಂದು ಹೇಳಲಾಗುತ್ತದೆ. ಡಯಾನ ಕಾರು ಅಪಘಾತದಲ್ಲಿ ಮೃತಪಟ್ಟರು. 2005ರಲ್ಲಿ ಪ್ರಿನ್ಸ್ ಚಾರ್ಲ್ಸ್ ಅವರು ಕಾಮಿಲಾ ಪಾರ್ಕರ್ ಬೌಲ್ಸ್ ಎಂಬಾಕೆಯನ್ನು ಮದುವೆಯಾದರು.

ಪ್ರಿನ್ಸ್ ಚಾರ್ಲ್ಸ್ ಮತ್ತು ಡಯಾನಾ ಜೋಡಿಗೆ ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸ್ ಹ್ಯಾರಿ ಎಂಬಿಬ್ಬರು ಮಕ್ಕಳಿದ್ದಾರೆ.

ಇನ್ನು, ಎರಡನೇ ಎಲಿಜಬೆತ್ ಅವರ ಇನ್ನಿಬ್ಬರು ಮಕ್ಕಳೂ ಕೂಡ ವಿಚ್ಛೇದನೆ ಹೊಂದಿದವರೇ. ಮಗಳು ಆನ್ನೆ ಮತ್ತು ಪ್ರಿನ್ಸ್ ಆಂಡ್ರ್ಯೂ ಇಬ್ಬರೂ ಡಿವೋರ್ಸಿಗಳೇ. ಆದರೆ, ಪ್ರಿನ್ಸ್ ಆಂಡ್ರ್ಯೂ ಅವರು ಈಗಲೂ ವಿದುರರಾಗಿಯೇ ಉಳಿದಿದ್ದಾರೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+