ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಆಮೆ ದಿನ: 20 ವರ್ಷ ಸೆರೆ, 26 ತಿಂಗಳ ಪ್ರಯಾಣ- ಇದು ಆಮೆ ಕಥೆ

|
Google Oneindia Kannada News

ಸಮುದ್ರದಲ್ಲಿ ವಾಸಿಸುವ ಅದ್ಭುತ ಜೀವಿ ಆಮೆ. ಸಾಮಾನ್ಯವಾಗಿ ಶಾಂತವಾಗಿ ಕಾಣುವ ಆಮೆಯ ಬೇಟೆಯು ಕಳೆದ ಹಲವಾರು ವರ್ಷಗಳಿಂದ ಉತ್ಕರ್ಷಕ್ಕೆ ಸಾಕ್ಷಿಯಾಗಿದೆ. ಆಮೆಗಳ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಮೇ 23 ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಈ ದಿನದ ಥೀಮ್ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಈ ದಿನದಂದು ಜನ ಜೀವಿಗಳ ಪ್ರೇಮಿಗಳು ಹಸಿರು ಬಟ್ಟೆಗಳನ್ನು ಧರಿಸುತ್ತಾರೆ. ವಿಶ್ವ ಆಮೆ ದಿನವನ್ನು 2000 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು, ಅಂದಿನಿಂದ ಇಂದಿನವರೆಗೂ ಈ ಪ್ರವೃತ್ತಿ ಮುಂದುವರೆದಿದೆ. ಇತ್ತೀಚೆಗಷ್ಟೇ ಆಮೆಯೊಂದು ಸಮುದ್ರದಲ್ಲಿ 37 ಸಾವಿರ ಕಿಲೋಮೀಟರ್ ಪ್ರಯಾಣಿಸಿದ್ದು, ಅದರ ಕಥೆ ಜನರಿಗೆ ಸ್ಪೂರ್ತಿದಾಯಕವಾಗಿದೆ.

ಕಿತ್ತಳೆ ಬಣ್ಣದ ಈ ನದಿ ನೀರಿನಲ್ಲಿ ವಾಸಿಸುವ ಜೀವಿಗಳಿಗಿಲ್ಲ ಆಯಸ್ಸುಕಿತ್ತಳೆ ಬಣ್ಣದ ಈ ನದಿ ನೀರಿನಲ್ಲಿ ವಾಸಿಸುವ ಜೀವಿಗಳಿಗಿಲ್ಲ ಆಯಸ್ಸು

37000 ಕಿಮೀ ಪ್ರಯಾಣಿಸಿದ ಆಮೆ

37000 ಕಿಮೀ ಪ್ರಯಾಣಿಸಿದ ಆಮೆ

ಜೀವಶಾಸ್ತ್ರಜ್ಞರ ಪ್ರಕಾರ, ಯೋಶಿ ಎಂಬ ಆಮೆ ತನ್ನ ಮರಿಗಳಿಗೆ ಜನ್ಮ ನೀಡಲು ಸ್ಥಳವನ್ನು ಹುಡುಕುತ್ತಾ 37 ಸಾವಿರ ಕಿಲೋಮೀಟರ್ ಪ್ರಯಾಣಿಸಿದೆ. ಅದು ಆಫ್ರಿಕಾದಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣ ಮಾಡಿದೆ. ಈ ಪ್ರಾಣಿಗಳು ಏಕೆ ಮತ್ತು ಹೇಗೆ ಇಷ್ಟು ದೂರ ಪ್ರಯಾಣಿಸುತ್ತವೆ ಎಂಬುದನ್ನು ತಿಳಿಯುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.

ವಿಡಿಯೋ: ಮದುವೆ ವೇದಿಕೆ ಮೇಲೆ ವಧು-ವರನ ಹೈಡ್ರಾಮಾವಿಡಿಯೋ: ಮದುವೆ ವೇದಿಕೆ ಮೇಲೆ ವಧು-ವರನ ಹೈಡ್ರಾಮಾ

ಗಾಯಗೊಂಡ ಸ್ಥಿತಿಯಲ್ಲಿ ಆಮೆ ಪತ್ತೆ

ಗಾಯಗೊಂಡ ಸ್ಥಿತಿಯಲ್ಲಿ ಆಮೆ ಪತ್ತೆ

ವರದಿಯ ಪ್ರಕಾರ ಯೋಶಿ ಎಂಬ ಹೆಣ್ಣು ಆಮೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಂತರ ಪ್ರಾಣಿ ಪ್ರಿಯರು ಅದಕ್ಕೆ ಚಿಕಿತ್ಸೆ ನೀಡಿ ಆರೋಗ್ಯವಾಗುವವರೆಗೂ ನಿಗಾ ಇರಿಸಿದ್ದಾರೆ. ಐದು ವರ್ಷಗಳ ಬಳಿಕ ಇದು ಎರಡು ವರ್ಷ ಪ್ರಯಾಣಿಸಿದ ಬಗ್ಗೆ ತಿಳಿದು ಬಂದಿದೆ. ಇದೇ ವೇಳೆ ಇದರ ದೇಹದ ಮೇಲೆ ಇರುವ ಚಿತ್ರ ಹಾಗೂ ಬಣ್ಣ, ಗುರುತಿನಿಂದ ಅದರ ಜಾತಿಯ ಬಗ್ಗೆ ಹಾಗೂ ಇದು ಆಫ್ರಿಕಾದಿಂದ ಬಂದಿರುವ ಹೆಚ್ಚಿನ ಮಾಹಿತಿ ಪಡೆಯಲಾಗಿದೆ. ಇದು ಮಕ್ಕಳಿಗೆ ಜನ್ಮ ನೀಡಲು ತನ್ನ ಗಮ್ಯಸ್ಥಾನವನ್ನು ಹುಡುಕುತ್ತಾ ಅರ್ಧ ಪ್ರಪಂಚವನ್ನು ಪ್ರಯಾಣಿಸಿರುವುದ ತಿಳಿದು ಬಂದಿದೆ. ಇದರ 37 ಸಾವಿರ ಕಿಲೋಮೀಟರ್ ಪಯಣದ ಕಥೆ ಕೇಳಿ ಜನರ ಬೆಚ್ಚಿಬಿದ್ದಿದ್ದಾರೆ.

ಎರಡು ವರ್ಷ ಎರಡು ತಿಂಗಳ ಬಳಿಕ ಆಸ್ಟ್ರೇಲಿಯಾಕ್ಕೆ ಆಮೆ

ಎರಡು ವರ್ಷ ಎರಡು ತಿಂಗಳ ಬಳಿಕ ಆಸ್ಟ್ರೇಲಿಯಾಕ್ಕೆ ಆಮೆ

ಯೋಶಿ ಎಂಬ ಲಾಗರ್ ಹೆಡ್ ಆಮೆ 20 ವರ್ಷಗಳ ಕಾಲ ಸೆರೆಯಲ್ಲಿತ್ತು. ಇದನ್ನು ಆಫ್ರಿಕಾದ ಕೇಪ್ ಟೌನ್‌ನಲ್ಲಿರುವ ಎರಡು ಸಾಗರಗಳ ಅಕ್ವೇರಿಯಂನಿಂದ ಬಿಡುಗಡೆ ಮಾಡಲಾಗಿತ್ತು. ಅದರ ಬಿಡುಗಡೆಯ ನಂತರ ನಂಬಲಾಗದ ವಿಷಯ ಹೊರಬಂದಿದೆ. ಯೋಶಿ ಆಮೆಯು ಡಿಸೆಂಬರ್ 2017 ರಿಂದ 26 ತಿಂಗಳ ಕಾಲ 37,000 ಕಿಲೋಮೀಟರ್ ಪ್ರಯಾಣಿಸಿ ಆಸ್ಟ್ರೇಲಿಯಾಕ್ಕೆ ತನ್ನ ಗೂಡುಕಟ್ಟುವ ಸ್ಥಳವನ್ನು ತಲುಪಿದೆ ಎಂದು ಹೇಳಲಾಗುತ್ತಿದೆ.

ದೇವರ ಆಶೀರ್ವಾದದಿಂದ ದೀರ್ಘಾಯುಷ್ಯ ಹೊಂದಿದ ಆಮೆ

ದೇವರ ಆಶೀರ್ವಾದದಿಂದ ದೀರ್ಘಾಯುಷ್ಯ ಹೊಂದಿದ ಆಮೆ

ಭೂಮಿಯ ಮೇಲಿನ ಜೀವಿಗಳಲ್ಲಿ ಆಮೆಯ ಜೀವಿತ ಅವಧಿ ಅಗ್ರಸ್ಥಾನದಲ್ಲಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇದರ ಸರಾಸರಿ ಜೀವಿತಾವಧಿ ಸುಮಾರು 150-200 ವರ್ಷಗಳು. ಪ್ರಾಚೀನ ಧಾರ್ಮಿಕ ಗ್ರಂಥಗಳ ಪ್ರಕಾರ, ಭಗವಾನ್ ವಿಷ್ಣುವು ಸಮುದ್ರ ಮಂಥನದ ಸಮಯದಲ್ಲಿ 'ಕಚಪ ಅವತಾರ' (ಆಮೆಯ ಅವತಾರ) ತೆಗೆದುಕೊಂಡನು. ದೇವರ ಆಶೀರ್ವಾದದಿಂದ ಆಮೆಗಳು ದೀರ್ಘಾಯುಷ್ಯವನ್ನು ಪಡೆಯುತ್ತವೆ ಎಂಬುದು ನಂಬಿಕೆ.

English summary
International Turtle Day 2022: Recently a tortoise traveled 37,000 kilometers from Africa to Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X