• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಶಕದ ಹಿಂದೆ ಸರಣಿ ಸಾವು: ಭಿಕ್ಷುಕರ ಸ್ವಾವಲಂಬಿ ಬದುಕಿನ ಕೇಂದ್ರವೀಗ ಭೂಲೋಕದ ಸ್ವರ್ಗ!

|
Google Oneindia Kannada News

ಬೆಂಗಳೂರು, ಜು.16: ಅಲ್ಲಿಗೆ ಕಾಲಿಡುತ್ತಿದ್ದಂತೆ ಹಂಸ ಪಕ್ಷಿ ಮತ್ತು ಬಾತುಕೋಳಿಗಳು ಸ್ವಾಗತಿಸುತ್ತವೆ. ಎತ್ತ ನೋಡಿದರೂ ಅಡಿಕೆ, ಬಾಳೆಯ ಹಸಿರು ತೋಟ. ಐದು ಮಾರು ದೂರು ಸಾಗಿದರೆ ಗಿರ್ ತಳಿ ಹಸುಗಳ ಶೆಡ್. ಗರಿ ಬಿಚ್ಚಿ ಅಡುವ ನವಿಲುಗಳ ಕಲವರ. ನೋಡಲಿಕ್ಕೆ ಬೆಂಗಳೂರಿನಲ್ಲಿ ಯಾರಿಗೂ ಕಾಣದ ಭೂ ಲೋಕದ ಒಂದು ಪುಟ್ಟ ಸ್ವರ್ಗ. ಇದರ ಸೃಷ್ಟಿಕರ್ತರು ಭಿಕ್ಷುಕರು!

ದಶಕದ ಹಿಂದೆ (2010) ಊಟ- ಉಪಚಾರ ವಿಲ್ಲದೇ ಭಿಕ್ಷುಕರ ಸರಣಿ ಸಾವಿನಿಂದ ರಾಜ್ಯದಲ್ಲಿ ಸುದ್ದಿಯಾಗಿದ್ದ ಮಾಗಡಿ ರಸ್ತೆಯ ನಿರಾಶ್ರಿತರ ಪರಿಹಾರ ಕೇಂದ್ರ ಬೆಂಗಳೂರಿನಲ್ಲಿ ಪುಟ್ಟ ಸ್ವರ್ಗದಂತೆ ಬದಲಾಗಿದೆ. ಹೇಳಿಕೊಳ್ಳೋಕೆ ಅವರು ಭಿಕ್ಷುಕರು. ಬೆಳಗ್ಗೆ ಅವರು ಕುಡಿಯುವುದು ಗಿರ್ ತಳಿಯ ಹಾಲು. ಅವರು ತಿನ್ನುವ ತರಕಾರಿ ಅವರೇ ಬೆಳೆದ ರಾಸಾಯನಿಕ ಮುಕ್ತ ಅರೋಗ್ಯಕರ ತರಕಾರಿ. ಬಾಳೆಹಣ್ಣು ಅವರ ಬೆಳೆದಿರುವುದೇ. ಅವರು ಹಾಕುವ ಬಟ್ಟೆ ಅವರು ತಯರಿಸಿದ್ದು. ಅಧಿಕಾರಿಗಳು ಬಳಸುವ ಕಡತ ಅವರು ಮಾಡಿದ್ದು. ಪರಿಹಾರ ಕೇಂದ್ರದ ಸ್ವಚ್ಛತೆಗೆ ಬಳಸುವ ಫೆನಾಯಿಲ್ ಸೋಪು ಭಿಕ್ಷುಕರೇ ಮಾಡಿದ್ದು!

ವರ್ಕ್ ಫ್ರಂ ಪ್ಲೈಓವರ್: ಬೆಂಗಳೂರು ಟೆಕ್ಕಿಗೆ ಸರಿಸಾಟಿಯಿಲ್ಲವರ್ಕ್ ಫ್ರಂ ಪ್ಲೈಓವರ್: ಬೆಂಗಳೂರು ಟೆಕ್ಕಿಗೆ ಸರಿಸಾಟಿಯಿಲ್ಲ

ಸುಮಾರು200 ಕ್ಕೂ ಹೆಚ್ಚು ಎಕರೆ ಜಾಗದಲ್ಲಿ ಭಿಕ್ಷುಕರ ನಿರಾಶ್ರಿತರ ಪರಿಹಾರ ಕೇಂದ್ರ ( ಬೆಗ್ಗರ್ಸ್ ಕಾಲೋನಿ)ದ ವಾತಾರಣ ರಾಜ್ಯವನ್ನಾಳುವ ಸಿಎಂಗೂ ಇಲ್ಲ. ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲರಿಗೂ ಇಲ್ಲ.ದಶಕದ ಹಿಂದೆ ದುರಂತಕ್ಕೆ ನಾಂದಿ ಹಾಡಿದ್ದ ನಿರಾಶ್ರಿತರ ಪರಿಹಾರ ಕೇಂದ್ರ ಊಹೆಗೂ ಮೀರಿ ಬದಲಾಗಿದೆ. ಹಸಿರು ವಾತಾವರಣದಲ್ಲಿ ನಿರಾಶ್ರಿತರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

ಸರಣಿ ಸಾವಿನ ಮನೆ ಈಗ ಸುಂದರ ಅರಮನೆ

ಸರಣಿ ಸಾವಿನ ಮನೆ ಈಗ ಸುಂದರ ಅರಮನೆ

ದಶಕದ ಹಿಂದೆ ದುರಂತಕ್ಕೆ ನಾಂದಿ ಹಾಡಿದ್ದ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ "ಒನ್‌ಇಂಡಿಯಾ ಕನ್ನಡ' ಭೇಟಿ ಕೊಟ್ಟಿತು. ಸುಮನಹಳ್ಳಿಯ ರಸ್ತೆಗೆ ಹೊಂದಿಕೊಂಡಿರುವ ಈ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಬೇಕಾಗುವ ಬಹುತೇಕ ತರಕಾರಿ, ಹಾಲು, ಸಮವಸ್ತ್ರ, ಕಡತ, ಫೆನಾಯಿಲ್ ಎಲ್ಲವನ್ನೂ ಭಿಕ್ಷುಕರೇ ತಯಾರಿಸಿಕೊಳ್ಳುತ್ತಾರೆ. ಜತೆಗೆ ಕೃಷಿ, ಹೈನುಗಾರಿಕೆ, ಕುರಿ ಸಾಗಾಣಿಕೆ ಮೂಲಕವೂ ಭಿಕ್ಷಕರ ಕಾಲೋನಿ ಸ್ವಾವಲಂಭಿ ಕೇಂದ್ರವಾಗಿ ರೂಪಾಂತರಗೊಂಡಿದೆ. ದಶಕದ ಹಿಂದೆ ಸರಣಿ ಸಾವಿಗೆ ನಾಂದಿ ಹಾಡಿದ್ದ ಬೆಗ್ಗರ್ಸ್ ಕಾಲೋನಿ ಇದೀಗ ಬೆಂಗಳೂರಿನಲ್ಲಿ ಶ್ರೀಮಂತರೇ ನೆಲೆಸಿರುವ ಡಾಲರ್ಸ್ ಕಾಲೋನಿ ನಾಚುವಂತೆ ರೂಪಗೊಂಡಿದೆ. ಹತ್ತು ವರ್ಷದಿಂದ ಈಚೆಗೆ ಅಲ್ಲಿ ಕೆಲಸ ಮಾಡಿದ ಅಧಿಕಾರಿಗಳ ಪರಿಶ್ರಮದಿಂದ ನಿರಾಶ್ರಿತರ ಪರಿಹಾರ ಕೇಂದ್ರದ ಇವತ್ತಿನ ಚಿತ್ರಣ ಇಲ್ಲಿದೆ.

ನವಿಲು- ಹಂಸಗಳ ಕಲರವ

ನವಿಲು- ಹಂಸಗಳ ಕಲರವ

ಸುಮನಹಳ್ಳಿ ಮೇಲ್ಸೇತುವೆಗೆ ಹೊಂದಿಕೊಂಡಂತೆ ಇರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕಾಲಿಡುತ್ತಿದ್ದಂತೆ ಬಲಗಡೆ ಮುಗಿಲೆತ್ತರ ಬೆಳೆದಿರುವ ಅಡಿಕೆ ಮರಗಳು ಕಾಣುತ್ತವೆ. ಹಸಿರಿನಿಂದ ಕಂಗೊಳಿಸುತ್ತಿರುವ ಅಡಿಕೆ ಕೃಷಿ ರೂಪಿಸಿರುವರು ಭಿಕ್ಷುಕರು. ಅದರಿಂದ ಬರುವ ಆದಾಯ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಅಲ್ಲಿ ಕೆಲಸ ಮಾಡುವ ನಿರಾಶ್ರಿತರಿಗೆ ಕೂಲಿ ರೂಪದಲ್ಲಿ ಹಣ ಪಾವತಿ ಮಾಡಲಾಗುತ್ತಿದೆ. ಅಡಿಕೆ ತೋಟ ತಾಡಿ ಇನ್ನೂರು ಮೀಟರ್ ಸಾಗಿದರೆ ಭಿಕ್ಷಕರ ಸ್ವಾವಲಂಬಿ ಲೋಕದ ಹೊಸ ಪ್ರಪಂಚವೇ ತೆರೆದುಕೊಳ್ಳುತ್ತದೆ.

ಖುಷಿ ಕೃಷಿ ಮತ್ತು ಕುರಿ ಸಾಗಾಣಿಕೆ

ಖುಷಿ ಕೃಷಿ ಮತ್ತು ಕುರಿ ಸಾಗಾಣಿಕೆ

ಎಕರೆ ಗಟ್ಟಲೇ ಜಾಗದಲ್ಲಿ ಭಿಕ್ಷುಕರೇ ಅಡಿಕೆ ಕೃಷಿ ಮಾಡಿ ಸೈ ಎನಿಸಿದ್ದಾರೆ. ಬೇಕಾಗುವಷ್ಟು ಬಾಳೆ ತೋಟ ಮಾಡಿದ್ದಾರೆ. ಸುಮಾರು ನೂರು ಕುರಿ ಸಾಕುತ್ತಿದ್ದಾರೆ. 40 ಕ್ಕೂ ಹೆಚ್ಚು ಹಸುಗಳನ್ನು ಸಾಕಿ ನಿರಾಶ್ರಿತರ ಕೇಂದ್ರಕ್ಕೆ ಬೇಕಾಗುವಷ್ಟೂ ಹಾಲು ಉತ್ಪಾದನೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿಯಲ್ಲಿ ಇಷ್ಟ ಇರುವ ಭಿಕ್ಷುಕರು ರೈತರಾಗಿ ಪರಿವರ್ತನೆಯಾಗಿದ್ದಾರೆ. ಕಾಂಕ್ರೀಟ್ ಗಿಡಗಳಿಂದ ಕೂಡಿದ್ದ ಭೂಮಿಯಲ್ಲಿ ಇದೀಗ ಅಡಿಕೆ ಫಸಲು ಮತ್ತು ಬಾಳೆ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಮಿಗಿಲಾಗಿ ಕುರಿಗಳಿಗೆ ಮತ್ತು ಹಸುಗಳಿಗೆ ಬೇಕಾಗುವ ಹುಲ್ಲನ್ನು ಅವರೇ ಬೆಳೆದಿದ್ದಾರೆ.

ಟೈಲರಿಂಗ್, ಕಡತ ತಯಾರಿ

ಟೈಲರಿಂಗ್, ಕಡತ ತಯಾರಿ

ಇನ್ನು ಕೆಲವು ಭಿಕ್ಷುಕರು ಕುಸರಿ ಕೆಲಸವನ್ನು ಕಲಿತಿದ್ದಾರೆ. ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಬೇಕಾಗುವಷ್ಟು ಸಮವಸ್ತ್ರವನ್ನು ಅವರೇ ಹೊಲಿದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಸದ್ಯಕ್ಕೆ 600 ಕ್ಕೂ ಹೆಚ್ಚು ಭಿಕ್ಷುಕರಿದ್ದು, ಅವರಿಗೆ ಆಗುವಷ್ಟರು ಸಮವಸ್ತ್ರಗಳನ್ನು ಅವರೇ ಹೊಲಿಗೆ ಮಾಡುತ್ತಾರೆ ಎನ್ನುತ್ತಾರೆ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಚಂದ್ರಪ್ಪ. ಇನ್ನು ಪರಿಹಾರ ಕೇಂದ್ರಕ್ಕೆ ಬೇಕಾಗುವಷ್ಟು ಫೆನಾಯಿಲ್, ಸೋಪು ಕೂಡ ಅವರೇ ತಯಾರಿಸಿಕೊಳ್ಳುತ್ತಾರೆ. ಅಗತ್ಯ ವಸ್ತುಗಳನ್ನು ನಿರಾಶ್ರಿತರ ಪರಿಹಾರ ಕೇಂದ್ರದ ಅಧಿಕಾರಿಗಳು ತಂದುಕೊಡುತ್ತಾರೆ. ಉಳಿದ ಕೆಲಸವನ್ನು ಭಿಕ್ಷುಕರೇ ನೋಡಿಕೊಳ್ಳುತ್ತಾರೆ.

2010 ರಲ್ಲಿ ಊಟ ಉಪಚಾರ ಇಲ್ಲದೇ ಭಿಕ್ಷುಕರ ಮಾರಣ ಹೋಮ ನಡೆದಿತ್ತು. ಬಹುತೇಕ ಭಿಕ್ಷುಕರು ಪರಿಹಾರ ಕೇಂದ್ರ ಭಿಟ್ಟು ಪರಾರಿಯಾಗಿದ್ದರು. ಈ ದುರಂತದ ಬಳಿಕ ನಿರಾಶ್ರಿತರ ಪರಿಹಾರ ಕೇಂದ್ರ ಹತ್ತು ವರ್ಷದಲ್ಲಿ ಚಿತ್ರಣವೇ ಬದಲಾಗಿ ಹೋಗಿದೆ. ಭಿಕ್ಷುಕರ ಸ್ವಾವಲಂಬಿ ಬದುಕು, ಪರಿಹಾರ ಕೇಂದ್ರದ ಹಸಿರು ವಾತಾವರಣ ಅಲ್ಲಿ ಹೊಸ ಲೋಕವೇ ತೆರೆದುಕೊಳ್ಳುತ್ತದೆ. ಇದಕ್ಕೆ ನಾಂದಿ ಹಾಡಿದವರು ಅಲ್ಲಿನ ಅಧಿಕಾರಿಗಳು ಮತ್ತು ಅವರ ಪ್ರಾಮಾಣಿಕ ಪರಿಶ್ರಮ ಎದ್ದು ಕಾಣುತ್ತದೆ.

English summary
Royal life of Beggars colony: Reality of Bengaluru Beggars colony know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X