Get Updates
Get notified of breaking news, exclusive insights, and must-see stories!

ದಿನಕ್ಕೆ 82 ಕೊಲೆ, 86 ರೇಪ್, ಗಂಟೆಗೊಂದು ಅಪಹರಣ- ಎನ್‌ಸಿಆರ್‌ಬಿ ವರದಿ ಮುಖ್ಯಾಂಶಗಳು

ಭಾರತದಲ್ಲಿ ದಿನವೂ ಕೊಲೆ, ಸುಲಿಗೆ, ಅತ್ಯಾಚಾರ, ಅಪಹರಣ ಇತ್ಯಾದಿ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಲೇ ಇರುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆ ದಳ (ಎನ್‌ಸಿಆರ್‌ಬಿ) ನಿನ್ನೆ ಬುಧವಾರ ಒಂದು ವರದಿ ಬಿಡುಗಡೆ ಮಾಡಿದ್ದು, 2021ರಲ್ಲಿ ಭಾರತದಲ್ಲಿ ನಡೆದ ಅಪರಾಧ ಪ್ರಕರಣಗಳ ವಿವರಗಳಿವೆ. ಭಾರತದಲ್ಲಿ ಪ್ರತೀ ದಿನ ಸರಾಸರಿಯಾಗಿ 82 ಕೊಲೆಗಳು ಸಂಭವಿಸಿರುವುದು ಈ ವರದಿಯಿಂದ ತಿಳಿದುಬಂದಿದೆ.

ಉತ್ತರಪ್ರದೇಶ, ಬಿಹಾರದಲ್ಲಿ ಅತಿ ಹೆಚ್ಚು ಕೊಲೆ ಪ್ರಕರಣಗಳು ದಾಖಲಾಗಿವೆ. ಉತ್ತರ ತುದಿಯಲ್ಲಿರುವ ರಾಜ್ಯಗಳು, ಅಸ್ಸಾಮ್ ಹೊರತಪಡಿಸಿ ಈಶಾನ್ಯ ರಾಜ್ಯಗಳು ಹಾಗೂ ದಕ್ಷಿಣದಲ್ಲಿ ಕೇರಳ ಈ ಕೆಲ ರಾಜ್ಯಗಳಲ್ಲಿ ಅತಿ ಕಡಿಮೆ ಕೊಲೆ ಘಟನೆಗಳು ನಡೆದಿವೆ.

ಕರ್ನಾಟಕದಲ್ಲಿ 2021ರಲ್ಲಿ 1357 ಕೊಲೆ ಪ್ರಕರಣಗಳು ದಾಖಲಾಗಿವೆ. ಇತರ ಕೆಲ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಮರ್ಡರ್ ರೇಟ್ ತುಸು ಕಡಿಮೆ ಇದೆ. ರಾಜ್ಯದಲ್ಲಿ 555 ಅತ್ಯಾಚಾರ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.

ದೇಶಾದ್ಯಂತ ಒಟ್ಟಾರೆ ಕೊಲೆ ಪ್ರಕರಣಗಳು, ಅತ್ಯಾಚಾರ ಪ್ರಕರಣಗಳು, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಎಷ್ಟು ದಾಖಲಾಗಿವೆ? ಯಾವ ರಾಜ್ಯಗಳಲ್ಲಿ ಹೆಚ್ಚು ಅಪರಾಧಗಳಾಗಿವೆ ಎಂಬಿತ್ಯಾದಿ ವಿವರ ಇಲ್ಲಿದೆ.

ಭಾರತದಲ್ಲಿ ಕೊಲೆ ಪ್ರಕರಣಗಳು

ಭಾರತದಲ್ಲಿ ಕೊಲೆ ಪ್ರಕರಣಗಳು

2021ರಲ್ಲಿ ದೇಶಾದ್ಯಂತ ಒಟ್ಟು 29,272 ಕೊಲೆ ಪ್ರಕರಣಗಳು ದಾಖಲಾಗಿವೆ. 30,132 ಮಂದಿ ಕೊಲೆಯಾಗಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 0.3ರಷ್ಟು ಹೆಚ್ಚಳವಾಗಿರುವುದು ತಿಳಿದುಬರುತ್ತದೆ. ಅತಿ ಹೆಚ್ಚು ಕೊಲೆ ಪ್ರಕರಣಗಳು ದಾಖಲಾದ ಐದು ರಾಜ್ಯಗಳ ಪಟ್ಟಿ ಇಲ್ಲಿದೆ:

1) ಉತ್ತರಪ್ರದೇಶ: 3,717
2) ಬಿಹಾರ: 2799
3) ಮಹಾರಾಷ್ಟ್ರ: 2330
4) ಮಧ್ಯಪ್ರದೇಶ 2034
5) ಪಶ್ಚಿಮ ಬಂಗಾಳ: 1884

ಇವು ಅತಿ ಹೆಚ್ಚು ಕೊಲೆ ಪ್ರಕರಣಗಳು ದಾಖಲಾದ ಅಗ್ರ 5 ರಾಜ್ಯಗಳು. ಹಾಗೆಯೇ, ಕರ್ನಾಟಕ ಹಾಗು ಇನ್ನಿತರ ರಾಜ್ಯಗಳಲ್ಲಿ ಬೆಳಕಿಗೆ ಬಂದ ಕೊಲೆ ಪ್ರಕರಣಗಳ ಸಂಖ್ಯೆ ಇಲ್ಲಿದೆ:
ಕರ್ನಾಟಕ: 1357
ತಮಿಳುನಾಡು: 1686
ತೆಲಂಗಾಣ: 1026
ಆಂಧ್ರ: 956
ಕೇರಳ: 337
ಒಡಿಶಾ: 1394
ಛತ್ತೀಸ್‌ಗಡ: 1007
ಜಾರ್ಖಂಡ್: 1112
ಅಸ್ಸಾಂ: 1192
ಗುಜರಾತ್: 1010
ರಾಜಸ್ಥಾನ್: 1786
ಹರ್ಯಾಣ: 1112
ಪಂಜಾಬ್: 723
ಉತ್ತರಾಖಂಡ್: 208
ಹಿಮಾಚಲಪ್ರದೇಶ: 86
ಜಮ್ಮು ಮತ್ತು ಕಾಶ್ಮೀರ: 136
ಲಡಾಕ್: 5

ಕೊಲೆಗೆ ಉದ್ದೇಶ ಏನು?

ಕೊಲೆಗೆ ಉದ್ದೇಶ ಏನು?

ಹೆಚ್ಚಿನ ಕೊಲೆ ಪ್ರಕರಣಗಳಲ್ಲಿ ವ್ಯಾಜ್ಯಗಳು ಕಾರಣವಾಗಿವೆ. ಜಮೀನು ಇತ್ಯಾದಿ ವ್ಯಾಜ್ಯಗಳಿಂದ ಕೊಲೆಯಾಗಿರುವ 9765 ಪ್ರಕರಣಳಿವೆ. ಅದರ ನಂತರ ವೈಯಕ್ತಿಕ ದ್ವೇಷಕ್ಕೆ ಕೊಲೆಯಾಗಿರುವ 3782 ಪ್ರಕರಣಗಳಿವೆ. ಹಣದ ಆಸೆಗೆ ಕೊಲೆ ಮಾಡಲಾಗಿರುವ 1692 ಪ್ರಕರಣಗಳಿವೆ.

ಜನಸಂಖ್ಯೆ ಮತ್ತು ಕೊಲೆ ಪ್ರಮಾಣ ತುಲನೆ ಮಾಡಿದರೆ ಜಾರ್ಖಂಡ್ ಅಗ್ರಸ್ಥಾನಕ್ಕೆ ಬರುತ್ತದೆ. ಇಲ್ಲಿ ಪ್ರತೀ ಒಂದು ಲಕ್ಷ ಜನಸಂಖ್ಯೆಗೆ 4.1 ಕೊಲೆಗಳಾಗಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಇದು 4. ಇನ್ನು, ರಾಜಧಾನಿ ದೆಹಲಿಯಲ್ಲಿ ಮರ್ಡರ್ ರೇಡ್ 2.2 ಇದೆ.

ಅಪಹರಣ ಪ್ರಕರಣಗಳು

ಅಪಹರಣ ಪ್ರಕರಣಗಳು

ಎನ್‌ಸಿಆರ್‌ಬಿ ಮಾಹಿತಿ ಪ್ರಕಾರ 2021ರಲ್ಲಿ ಭಾರತದಲ್ಲಿ 1,01,707 ಅಪಹರಣ ಪ್ರಕರಣಗಳು ದಾಖಲಾಗಿವೆ. 2020ಕ್ಕೆ ಹೋಲಿಸಿದರೆ ಕಿಡ್ನಾಪಿಂಗ್ ಕೇಸ್‌ಗಳು ಶೇ. 19.9ರಷ್ಟು ಏರಿಕೆಯಾಗಿವೆ.

ಅಪಹರಣಕ್ಕೊಳಗಾದವರಲ್ಲಿ ಹೆಚ್ಚಿನವರು ಮಹಿಳೆಯರೇ. ಒಟ್ಟು 86,543 ಮಹಿಳೆಯರು 2021ರಲ್ಲಿ ಕಿಡ್ನಾಪ್ ಆಗಿದ್ದಾರೆ. 69,014 ಮಕ್ಕಳಿದ್ದಾರೆ.

ದಾಖಲಾದ ಅಪಹರಣ ಪ್ರಕರಣಗಳಲ್ಲಿ ಅಪಹರಿಸಲ್ಪಟ್ಟವರ ಪೈಕಿ 820 ಮಂದಿ ಸಾವನ್ನಪ್ಪಿರುವುದು ತಿಳಿದುಬಂದಿದೆ. 98,860 ಮಂದಿ ಸಜೀವವಾಗಿ ವಾಪಸ್ ಬಂದಿದ್ದರೆ. ಅತಿಹೆಚ್ಚು ಅಪಹರಣ ಪ್ರಕರಣಗಳು ದಾಖಲಾಗಿರುವ ಐದು ರಾಜ್ಯಗಳಿವು:

1) ಉತ್ತರಪ್ರದೇಶ: 14,554
2) ಬಿಹಾರ: 10,198
3) ಮಹಾರಾಷ್ಟ್ರ: 10,502
4) ಮಧ್ಯಪ್ರದೇಶ:: 2,034
5) ಪಶ್ಚಿಮ ಬಂಗಾಳ: 1,884

ಅತ್ಯಾಚಾರ ಪ್ರಕರಣಗಳು

ಅತ್ಯಾಚಾರ ಪ್ರಕರಣಗಳು

ಎನ್‌ಸಿಆರ್‌ಬಿ ವರದಿ ಪ್ರಕಾರ 2021ರಲ್ಲಿ ಭಾರತದಲ್ಲಿ 31,677 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅದಕ್ಕೆ ಹಿಂದಿನ ವರ್ಷ ರೇಪ್ ಪ್ರಕರಣಗಳ ಸಂಖ್ಯೆ 28,046 ಇತ್ತು. 2021ರಲ್ಲಿ ಇದು ತುಸು ಹೆಚ್ಚಳವಾಗಿದೆ.

ದಿನಕ್ಕೆ ಸರಾಸರಿ ಲೆಕ್ಕಹಾಕಿದರೆ 86 ಪ್ರಕರಣವಾಗುತ್ತದೆ. ಮಹಿಳೆಯರ ಮೇಲೆ ಅಪರಾಧವಾಗಿರುವ 49 ಪ್ರಕರಣಗಳು ಪ್ರತೀ ಗಂಟೆಗೆ ದಾಖಲಾದಂತಾಗಿದೆ. ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾದ ಐದು ರಾಜ್ಯಗಳಿವು:

1) ರಾಜಸ್ಥಾನ: 6,337
2) ಮಧ್ಯಪ್ರದೇಶ 2,947
3) ಉತ್ತರಪ್ರದೇಶ: 2,845
4) ಮಹಾರಾಷ್ಟ್ರ: 2,496
5) ದೆಹಲಿ: 1,250

ಕರ್ನಾಟಕದಲ್ಲಿ 2021ರಲ್ಲಿ ಒಟ್ಟು 555 ರೇಪ್ ಪ್ರಕರಣಗಳು ದಾಖಲಾಗಿವೆ. ಕೊಲೆ ಪ್ರಕರಣಗಳು ಕಡಿಮೆ ದಾಖಲಾಗಿರುವ ಕೇರಳದಲ್ಲಿ ಅತ್ಯಾಚಾರ ಪ್ರಕರಣಗಳು 700ಕ್ಕೂ ಹೆಚ್ಚು ಬೆಳಕಿಗೆ ಬಂದಿವೆ.

ಇನ್ನು, ಅತ್ಯಾಚಾರ ಸೇರಿದಂತೆ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯಗಳ ಪ್ರಕರಣ ಸಂಖ್ಯೆ 2021ರಲ್ಲಿ 4,28,278 ಇದೆ. ಪ್ರತೀ ಒಂದು ಲಕ್ಷ ಜನಸಂಖ್ಯೆಯಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಸಂಖ್ಯೆ 64.5 ಇದೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+