ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎನ್‌ಎಸ್ ವಿಕ್ರಾಂತ್; ವಿಶ್ವದ ಅತಿದೊಡ್ಡ ವಿಮಾನವಾಹಕ ಹಡಗುಗಳ ಪಟ್ಟಿ

|
Google Oneindia Kannada News

ಭಾರತದಲ್ಲಿ ದೇಶೀಯವಾಗಿ ತಯಾರಿಸಲಾದ ಐಎನ್‌ಎಸ್ ವಿಕ್ರಾಂತ್ ಹಡಗನ್ನು ಶುಕ್ರವಾರ ನೌಕಾಪಡೆಗೆ ನಿಯೋಜಿಸಲಾಯಿತು. ಇನ್ನು ಕೆಲ ತಿಂಗಳ ಪ್ರಾಯೋಗಿಕ ಪರೀಕ್ಷೆಗಳ ಬಳಿಕ ಸಂಪೂರ್ಣ ಕಾರ್ಯಾಚರಣೆ ಹಂತಕ್ಕೆ ಈ ವಿಮಾನವಾಹಕ ಹಡಗು ಅಣಿಗೊಳ್ಳಲಿದೆ.

ದೇಶೀಯವಾಗಿ ಏರ್‌ಕ್ರಾಫ್ಟ್ ಕ್ಯಾರಿಯರ್ ಅನ್ನು ತಯಾರಿಸುವ ಸಾಮರ್ಥ್ಯ ಇರುವ ಕೆಲವೇ ದೇಶಗಳ ಗುಂಪಿಗೆ ಭಾರತ ಸೇರಿಕೊಂಡಿದೆ. ಅಲ್ಲದೇ, ಐಎನ್‌ಎಸ್ ವಿಕ್ರಾಂತ್ ವಿಶ್ವದ ಅತಿ ದೊಡ್ಡ ಯುದ್ಧನೌಕೆಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ ಭಾರತ ಐಎನ್‌ಎಸ್ ವಿಕ್ರಾಂತ್‌ಗಿಂತಲೂ ಬೃಹತ್ ಆದ ಯುದ್ಧನೌಕೆಯನ್ನು ತಯಾರಿಸಲು ಯೋಜಿಸುತ್ತಿದೆ.

ವಿಕ್ರಾಂತ್ ಆಯ್ತು, ಬರಲಿದೆ ವಿಶಾಲ್; ಇದಾಗಲಿದೆ ವಿಶ್ವದ 4ನೇ ಅತಿದೊಡ್ಡ ಯುದ್ಧನೌಕೆವಿಕ್ರಾಂತ್ ಆಯ್ತು, ಬರಲಿದೆ ವಿಶಾಲ್; ಇದಾಗಲಿದೆ ವಿಶ್ವದ 4ನೇ ಅತಿದೊಡ್ಡ ಯುದ್ಧನೌಕೆ

ಇದೇ ವೇಳೆ, ವಿಶ್ವದ 10 ಅತಿದೊಡ್ಡ ಯುದ್ಧನೌಕೆಗಳಲ್ಲಿ ಭಾರತದ ಎರಡು ಏರ್‌ಕ್ರಾಫ್ಟ್ ಕ್ಯಾರಿಯರ್‌ಗಳಿವೆ. ಚೀನಾ ಮೂರು ಹಡಗುಗಳನ್ನು ಹೊಂದಿವೆ. ಮೊದಲೆರಡು ಅತಿದೊಡ್ಡ ವಿಮಾನವಾಹಕ ಹಡಗುಗಳು ಅಮೆರಿಕದವೇ ಆಗಿವೆ. ವಿಶ್ವದ ಅತಿ ದೊಡ್ಡ ಯುದ್ಧನೌಕೆ ಎನಿಸಿದ ಯುಎಸ್‌ಎಸ್ ಜೆರಾಲ್ಡ್ ಆರ್ ಫೋರ್ಡ್ ಸುಮಾರು 1 ಲಕ್ಷ ಟನ್‌ಗಳಷ್ಟು ತೂಕವನ್ನು ಹೊತ್ತು ಸಾಗಬಲ್ಲುದು. ಭಾರತ ಇದೀಗ ತಯಾರಿಸಿರುವ ಐಎನ್‌ಎಸ್ ವಿಕ್ರಾಂತ್‌ನ ಸಾಮರ್ಥ್ಯ 40 ಸಾವಿರ ಟನ್. ಇನ್ನು, ಐಎನ್‌ಎಸ್ ವಿಕ್ರಮಾದಿತ್ಯ 44,500 ಟನ್ ತೂಕವನ್ನು ಹೊತ್ತು ಹೋಗಬಲ್ಲುದು.

ಭಾರತ ಮುಂದಿನ ದಿನಗಳಲ್ಲಿ ತಯಾರಿಸಲು ಯೋಜಿಸುತ್ತಿರುವ ಐಎನ್‌ಎಸ್ ವಿಶಾಲ್ ಹಡಗಿನ ಸಾಮರ್ಥ್ಯ 65 ಸಾವಿರ ಟನ್ ಇರಬಹುದು ಎಂದು ಹೇಳಲಾಗುತ್ತದೆ. ಅದು ಸಾಕಾರಗೊಂಡರೆ ಬ್ರಿಟನ್‌ನ ಎಲಿಜಬೆತ್ ಕ್ಲಾಸ್‌ನ ಕ್ಯಾರಿಯರ್‌ಗಳಿಗೆ ಸಮಾನವಾಗುತ್ತದೆ.

Indias Two Vessels Among Worlds Largest Aircraft Carriers, Here is List

ವಿಶ್ವದ ಅತಿದೊಡ್ಡ ಯುದ್ಧವಾಹಕ ನೌಕೆಗಳು
1) ಗೆರಾಲ್ಡ್ ಆರ್ ಫೋರ್ಡ್ ಕ್ಲಾಸ್, ಅಮೆರಿಕ
ತೂಕ ಸಾಗಿಸುವ ಸಾಮರ್ಥ್ಯ: 1 ಲಕ್ಷ ಟನ್
78 ಮೀಟರ್ ಅಗಲ ಇರುವ ಇದರಲ್ಲಿ 75 ಏರ್‌ಕ್ರಾಫ್ಟ್, 4539 ಸಿಬ್ಬಂದಿ ಇರಬಹುದು.
ಯುಎಸ್‌ಎಸ್ ಜೆರಾಲ್ಡ್ ಆರ್ ಫೋರ್ಡ್ (ಸಿವಿಎನ್ 78) 2017ರಲ್ಲಿ ಸೇವೆಗೆ ನಿಯೋಜನೆಯಾಯಿತು. 2021ರಲ್ಲಿ ಕಾರ್ಯಾಚರಣೆಗೆ ಇದು ಸಿದ್ಧವಾಗಿದೆ.

2) ನಿಮಿಟ್ಜ್ ಕ್ಲಾಸ್, ಅಮೆರಿಕ
ತೂಕ ಸಾಗಿಸುವ ಸಾಮರ್ಥ್ಯ: 97000 ಟನ್
332 ಮೀಟರ್ ಉದ್ದ ಇದ್ದು, 60ಕ್ಕೂ ಹೆಚ್ಚು ಏರ್‌ಕ್ರಾಫ್ಟ್‌ಗಳನ್ನು ಇರಿಸಿಕೊಳ್ಳಬಲ್ಲುದು.
ಈ ದರ್ಜೆಯಲ್ಲಿ 1975ರಲ್ಲಿ ಮೊದಲ ಹಡಗು ತಯಾರಿಸಲಾಗಿತ್ತು. 2009ರಲ್ಲಿ ಕೊನೆಯ ಹಡಗು ಯುಎಸ್‌ಎಸ್‌ ಜಾರ್ಜ್ ಎಚ್‌ಡಬ್ಲ್ಯು ಬುಷ್ ನಿಯೋಜನೆಗೊಂಡಿದೆ.

3) ಕ್ವೀನ್ ಎಲಿಜಬೆತ್ ಕ್ಲಾಸ್, ಬ್ರಿಟನ್
ತೂಕ ಸಾಗಿಸುವ ಸಾಮರ್ಥ್ಯ: 65,000 ಟನ್
ಬ್ರಿಟನ್‌ನ ರಾಯಲ್ ನೇವಿಯಿಂದ ತಯಾರಿಸಲಾದ ಅತಿ ದೊಡ್ಡ ವಿಮಾನವಾಹಕ ನೌಕೆಗಳು ಇವು. ಹೆಚ್‌ಎಂಎಲ್ ಕ್ವೀನ್ ಎಲಿಜಬಿತ್ ಈ ದರ್ಜೆಯ ಒಂದು ಹಡಗು. ಹೆಚ್‌ಎಂಎಸ್ ಪ್ರಿನ್ಸ್ ಆಫ್ ವೇಲ್ಸ್ ಇನ್ನೊಂದು ಹಡಗು. ಇವು ಕಳೆದ ಕೆಲ ವರ್ಷಗಳ ಹಿಂದೆ ಬ್ರಿಟನ್ ಸೇನೆಗೆ ನಿಯೋಜನೆಗೊಂಡಿವೆ.

4) ಅಡ್ಮಿರಲ್ ಕುನೆಟ್ಸೋವ್, ರಷ್ಯನ್ ಫೆಡರೇಶನ್
ತೂಕ ಸಾಗಿಸುವ ಸಾಮರ್ಥ್ಯ: 58,500 ಟನ್
14 ಸಾವಿರ ಚದರ ಮೀಟರ್ ವಿಸ್ತೀರ್ಣದ ಫ್ಲೈಟ್ ಡೆಕ್ ಹೊಂದಿದ್ದು, ರಷ್ಯನ್ ಸೇನೆಯ ಪ್ರಮುಖ ಯುದ್ಧವಿಮಾನಗಳನ್ನು ಇದು ಸಾಗಿಸಬಲ್ಲುದು.
ಇದು ರಷ್ಯನ್ ನೌಕಾಪಡೆಯಲ್ಲಿ ಕಾರ್ಯಾಚರಣೆ ಸ್ಥಿತಿಯಲ್ಲಿರುವ ಏಕೈಕ ಯುದ್ಧವಾಹಕ ನೌಕೆ ಎನಿಸಿದೆ.

5) ಫುಜಿಯಾನ್, ಚೀನಾ
ತೂಕ ಸಾಗಿಸುವ ಸಾಮರ್ಥ್ಯ: 80,000 ಟನ್
ಇದು ಚಿನಾದ ಮೂರನೇ ಏರ್‌ಕ್ರಾಫ್ಟ್ ಕ್ಯಾರಿಯರ್ ಆದರೂ, ಆ ದೇಶದ ಅತ್ಯಾಧುನಿಕ ಯುದ್ಧನೌಕೆ ಎನಿಸಿದೆ. ಕೆಲ ತಿಂಗಳ ಹಿಂದಷ್ಟೇ ಇದು ನಿಯೋಜನೆಗೊಂಡಿದೆ.

Indias Two Vessels Among Worlds Largest Aircraft Carriers, Here is List

6) ಶಾಂಡೋಂಗ್, ಚೀನಾ
ತೂಕ ಸಾಗಿಸುವ ಸಾಮರ್ಥ್ಯ: 70,000 ಟನ್
ಎರಡು ವರ್ಷಗಳ ಹಿಂದೆ ಇದರ ನಿಯೋಜನೆಯಾಗಿದೆ. ಇದು ಚೀನಾ ದೇಶೀಯವಾಗಿ ನಿರ್ಮಿಸಿದ ಮೊದಲ ಏರ್‌ಕ್ರಾಫ್ಟ್ ಕ್ಯಾರಿಯರ್ ಎನಿಸಿದೆ. ಇದರ ಪ್ರಯೋಗ ಯಶಸ್ವಿಯಾಗಿದ್ದು, ಕಾರ್ಯಾಚರಣ ಹಂತಕ್ಕೆ ಸಿದ್ಧ ಇದೆ ಎನ್ನಲಾಗಿದೆ.

7) ಲಿಯಾವೋನಿಂಗ್, ಚೀನಾ
ತೂಕ ಸಾಗಿಸುವ ಸಾಮರ್ಥ್ಯ: 58,000 ಟನ್
ಇದು ಸೋವಿಯತ್ ರಷ್ಯಾದ ಅಡ್ಮಿರಲ್ ಕುಜ್ನೆಟ್ಸೋವ್ ದರ್ಜೆಯ ಹಡಗಿನ ವಿನ್ಯಾಸದಿಂದ ತಯಾರಾದ ಸಮರನೌಕೆ. ಹಾಂಕಾಂಗ್‌ನ ಕಂಪನಿಯೊಂದು ಮೊದಲು ಇದನ್ನು ಖರೀದಿಸಿ, ತೇಲುವ ಕ್ಯಾಸಿನೋ ರೀತಿ ಪರಿವರ್ತಿಸುವ ಆಲೋಚನೆ ಮಾಡಿತ್ತು. ಆದರೆ, ಅದು ಆಗದ ಕಾರಣು ಉಕ್ರೇನ್ ದೇಶಕ್ಕೆ ಇದನ್ನು ಮಾರಲಾಯಿತು. ನಂತರ ಚೀನಾ ಇದನ್ನು ಮರುಖರೀದಿಸಿತು. 2012ರಲ್ಲಿ ಚೀನಾದ ನೌಕಾಪಡೆಗೆ ಇದರ ನಿಯೋಜನೆಯಾಯಿತು.

8) ಐಎನ್‌ಎಸ್ ವಿಕ್ರಮಾದಿತ್ಯ, ಭಾರತ
ತೂಕ ಸಾಗಿಸುವ ಸಾಮರ್ಥ್ಯ: 44,500 ಟನ್
ಇದು ಸದ್ಯ ಭಾರತದಲ್ಲಿರುವ ಅತಿ ದೊಡ್ಡ ವಿಮಾನವಾಹಕ ನೌಕೆ ಎನಿಸಿದೆ.
284 ಮೀಟರ್ ಉದ್ದ, 60 ಮೀಟರ್ ಅಗಲದ ಈ ನೌಕೆ ರಷ್ಯಾದ ಕಿಯೆವ್-ಕ್ಲಾಸ್ ದರ್ಜೆಗೆ ಸೇರಿದೆ. ಇದು 30ಕ್ಕೂ ಹೆಚ್ಚು ವೈಮಾನಿಕ ವಾಹನಗಳನ್ನು ಇರಿಸಿಕೊಳ್ಳುತ್ತದೆ. 2013ರಲ್ಲಿ ಇದರ ನಿಯೋಜನೆಯಾಗಿದೆ.

9) ಚಾರ್ಲ್ಸ್ ಡೀ ಗೌಲೆ (ಆರ್91), ಫ್ರಾನ್ಸ್
ತೂಕ ಸಾಗಿಸುವ ಸಾಮರ್ಥ್ಯ: 42,000 ಟನ್
ಇದು ಫ್ರಾನ್ಸ್ ದೇಶ ತಯಾರಿಸಿದ ಪರಮಾಣುಶಕ್ತ ಹಡಗು. ಅಮೆರಿಕ ಬಿಟ್ಟರೆ ಫ್ರಾನ್ಸ್ ಮಾತ್ರವೇ ಇಂಥ ನೌಕೆಯನ್ನು ಹೊಂದಿರುವುದು. ರಫೇಲ್ ಸೇರಿದಂತೆ ವಿವಿಧ ರೀತಯ 40 ಏರ್‌ಕ್ರಾಫ್ಟ್‌ಗಳನ್ನು ಈ ಹಡಗಿನಿಂದ ನಿರ್ವಹಿಸಬಹುದು. 2013ರಲ್ಲಿ ಇದರ ನಿಯೋಜನೆಯಾಗಿದೆ.

10) ಐಎನ್‌ಎಸ್ ವಿಕ್ರಾಂತ್
ತೂಕ ಸಾಗಿಸುವ ಸಾಮರ್ಥ್ಯ: 40,000 ಟನ್
ಇದು ಭಾರತ ಸ್ವಂತವಾಗಿ ನಿರ್ಮಿಸಿದ ಮೊದಲ ಏರ್‌ಕ್ರಾಫ್ಟ್ ಕ್ಯಾರಿಯರ್ ಎನಿಸಿದೆ. 2013ರಲ್ಲಿ ಇದರ ಉದ್ಘಾಟನೆಯಾಗಿದ್ದು, 2022 ಜನವರಿಯಲ್ಲಿ ಪ್ರಯೋಗಗಳಾಗಿವೆ. ಇಂದು ಸೆ. 2ರಂದು ಇದನ್ನು ನೌಕಾಪಡೆಗೆ ಅಧಿಕೃತವಾಗಿ ನಿಯೋಜನೆ ಮಾಡಲಾಯಿತು. ಇನ್ನೂ ಆರು ತಿಂಗಳು ಇದರ ಪ್ರಯೋಗವಾಗಲಿದೆ. 2023ರಲ್ಲಿ ಇದು ಕಾರ್ಯಾಚರಣೆಗೆ ಸಿದ್ಧವಾಗುವ ನಿರೀಕ್ಷೆ ಇದೆ.

ಐಎನ್‌ಎಸ್ ವಿಶಾಲ್
ತೂಕ ಸಾಗಿಸುವ ಸಾಮರ್ಥ್ಯ: 65,000 ಟನ್
ಇದು ಭಾರತದಿಂದ ಸ್ವಂತವಾಗಿ ತಯಾರಾಗಲಿರುವ ಎರಡನೇ ಏರ್‌ಕ್ರಾಫ್ಟ್ ಕ್ಯಾರಿಯರ್ ಎನಿಸಲಿದೆ. ಬ್ರಿಟನ್ ದೇಶದ ಕ್ವೀನ್ ಎಲಿಜಬೆತ್ ಕ್ಲಾಸ್ ನೌಕೆಗಳ ಸಾಮರ್ಥ್ಯಕ್ಕೆ ಸಮನಾಗಿದೆ. ಇದು ತಯಾರಾದರೆ ವಿಶ್ವದ ಟಾಪ್-5 ಅತಿದೊಡ್ಡ ಯುದ್ಧನೌಕೆಗಳ ಪಟ್ಟಿಗೆ ಸೇರುತ್ತದೆ.

(ಒನ್ಇಂಡಿಯಾ ಸುದ್ದಿ)

English summary
America has world's top 2 largest aircraft carriers in the world. In top-10 list India has 2 vessels, including INS Vikrant and INS Vikramaditya. China has 3 ships.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X