ಕೋವಿಡ್‌ ಹೊಸ ರೂಪಾಂತರ ಐಎಚ್‌ಯು ಬಗ್ಗೆ ಇಲ್ಲಿದೆ ಮಾಹಿತಿ

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಕೊರೊನಾ ವೈರಸ್‌ನ ರೂಪಾಂತರ ಓಮಿಕ್ರಾನ್‌ ರೂಪಾಂತರವನ್ನು ಎದುರಿಸುವ ನಿಟ್ಟಿನಲ್ಲಿ ವಿಶ್ವದಾದ್ಯಂತ ನಿರ್ಬಂಧವನ್ನು ಹೆಚ್ಚಿಸಲಾಗುತ್ತಿದೆ. ವೀಕೆಂಡ್‌ ಕರ್ಫ್ಯೂ, ಲಾಕ್‌ಡೌನ್‌ನಂತಹ ಕ್ರಮವನ್ನು ಕೈಗೊಳ್ಳಲಾಗಿದೆ. ಒಟ್ಟಾರೆಯಾಗಿ ಕೊರೊನಾ ವೈರಸ್‌ನ ರೂಪಾಂತರ ಓಮಿಕ್ರಾನ್‌ ವಿಶ್ವದಲ್ಲಿ ಆತಂಕ ಸೃಷ್ಟಿ ಮಾಡಿದೆ. ಆದರೆ ಈ ನಡುವೆ ಫ್ರಾನ್ಸ್‌ನಲ್ಲಿ ಹೆಚ್ಚು ರೂಪಾಂತರಿಗಳನ್ನು ಹೊಂದಿರುವ ಕೊರೊನಾವೈರಸ್‌ ಸೋಂಕಿನ ಹೊಸ ರೂಪಾಂತರ ಐಎಚ್‌ಯು ಕಾಣಿಸಿಕೊಂಡಿದೆ.

ಈ ಹೊಸ ರೂಪಾಂತರ B.1.640.2 ಕ್ಕೆ ಐಎಚ್‌ಯು ಎಂದು ಹೆಸರಿಸಲಾಗಿದ್ದು, ಈ ಹೊಸ ರೂಪಾಂತರವು ಫ್ರಾನ್ಸ್‌ನಲ್ಲಿ ಕಳೆದ ತಿಂಗಳಲ್ಲೇ ಪತ್ತೆಯಾಗಿದೆ. ಆದರೆ ಈಗ ಈ ರೂಪಾಂತರದ ಬಗ್ಗೆ ಹೆಚ್ಚಿನ ಅಧ್ಯಯನಗಳು ಆರಂಭವಾಗಿದ್ದು, ತಜ್ಞರ ಗಮನವನ್ನು ಈ ಹೊಸ ರೂಪಾತರ ಸೆಳೆದಿದೆ.

ಮರ್ಸಿಲ್ಲೆ ಮೂಲದ ಮೆಡಿಟರೇನಿ ಇನ್‌ಫೆಕ್ಷನ್ ಯೂನಿವರ್ಸಿಟಿ ಹಾಸ್ಪಿಟಲ್ ಇನ್‌ಸ್ಟಿಟ್ಯೂಟ್ (ಐಎಚ್‌ಯು) ನಲ್ಲಿ ಸಂಶೋಧಕರು ಪತ್ತೆಹಚ್ಚಿದ್ದಾರೆ. ಈ ರೂಪಾಂತರವು 46 ರೂಪಾಂತರಿಗಳನ್ನು ಹೊಂದಿದೆ. ಇದು ಪ್ರಸ್ತುತ ಅಸ್ತಿತ್ವದಲ್ಲಿರುವ ಲಸಿಕೆಗಳ ವಿರುದ್ಧ ಹೆಚ್ಚು ಪರಿಣಾಮಕಾರಿ ಆಗಿದೆ ಎಂಬ ಆತಂಕವು ಕೂಡಾ ಇದೆ. ಆದರೆ ಈ ಬಗ್ಗೆ ಯಾವುದೇ ಹೆಚ್ಚಿನ ಅಧ್ಯಯನವಿಲ್ಲದೆ ಹೆಚ್ಚು ಮಾಹಿತಿ ನೀಡಲಾಗದು ಎನ್ನುತ್ತಾರೆ ತಜ್ಞರು.

 ಈವರೆಗೆ ಎಷ್ಟು ಜನರಲ್ಲಿ ಈ ರೂಪಾಂತರ ಪತ್ತೆ?

ಈವರೆಗೆ ಎಷ್ಟು ಜನರಲ್ಲಿ ಈ ರೂಪಾಂತರ ಪತ್ತೆ?

ಫ್ರಾನ್ಸ್‌ನಲ್ಲಿ ಕಾಣಿಸಿಕೊಂಡಿರುವ ಈ ಹೊಸ ರೂಪಾಂತರವು ಈವರೆಗೆ ವಿಶ್ವದ ಬೇರೆ ಯಾವ ರಾಷ್ಟ್ರಗಳಿಗೂ ಹರಡಿಲ್ಲ. ಈ ರೂಪಾಂತರವನ್ನು ಮೊದಲು ಐಎಚ್‌ಯು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಈವರೆಗೆ ಈ ರೂಪಾಂತರ ಫ್ರಾನ್ಸ್‌ನ ಮರ್ಸಿಲ್ಲೆಯಲ್ಲಿ 12 ಮಂದಿಯಲ್ಲಿ ಪತ್ತೆಯಾಗಿದೆ. ಈ ಪೈಕಿ ಕೆಲವರು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲು ಆಗಿದ್ದಾರೆ ಎಂದು ವರದಿಯು ಹೇಳಿದೆ. ಆಫ್ರಿಕನ್‌ ದೇಶ ಕ್ಯಾಮರೂನ್‌ನಿಂದ ಬಂದ ವ್ಯಕ್ತಿಯಲ್ಲಿ ಈ ರೂಪಾಂತರ ಮೊದಲು ಪತ್ತೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಮೊದಲ ಪ್ರಕರಣ ಆಗ್ನೇಯ ಫ್ರಾನ್ಸ್‌ನಲ್ಲಿ ವಯಸ್ಕ ವ್ಯಕ್ತಿಯಲ್ಲಿ ದೃಢಪಟ್ಟಿದೆ. ಆತನ ಕೋವಿಡ್ ಪರೀಕ್ಷೆಯಲ್ಲಿ ಕೋವಿಡ್‌ ದೃಢಪಟ್ಟಿತ್ತು. ಬಳಿಕ ರೂಪಾಂತರ ಪತ್ತೆಯಾಗಿದೆ.

 ಸಂಶೋಧನೆ ಹೇಗೆ ನಡೆಯುತ್ತಿದೆ?

ಸಂಶೋಧನೆ ಹೇಗೆ ನಡೆಯುತ್ತಿದೆ?

ಐಎಚ್‌ಯು ಸಂಶೋಧಕರು ಡಿಸೆಂಬರ್ 10 ರಂದು ಮೊದಲ ಬಾರಿಗೆ ರೂಪಾಂತರವನ್ನು ಪತ್ತೆಹಚ್ಚಿದ್ದಾರೆ. ಅಂದಿನಿಂದ ಅದರ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ. ಇಲ್ಲಿಯವರೆಗೆ, ಅದರಲ್ಲಿ 46 ರೂಪಾಂತರಿಗಳು ಕಂಡುಬಂದಿವೆ. ಈ ರೂಪಾಂತರವು N501Y ರೂಪಾಂತರಿಯನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಮೊದಲು ಆಲ್ಫಾ ರೂಪಾಂತರದಲ್ಲಿ N501Y ರೂಪಾಂತರಿ ಕಂಡುಬಂದಿದೆ. ಆದ್ದರಿಂದ ಈ ರೂಪಾಂತರ ಹೆಚ್ಚು ಹರಡಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಇನ್ನು ಇದು E484K ರೂಪಾಂತರವನ್ನು ಸಹ ಹೊಂದಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಂದರೆ ಈ ರೂಪಾಂತರವು ಲಸಿಕೆಗಳಿಗೆ ಹೆಚ್ಚು ನಿರೋಧಕವಾಗಿರುತ್ತದೆ.ಲಸಿಕೆಯ ವಿರುದ್ಧವಾಗಿರುತ್ತದೆ. ಸಂಶೋಧಕರು ಡಿಸೆಂಬರ್ 29 ರಂದು ಆನ್‌ಲೈನ್‌ನಲ್ಲಿ ವರದಿಯನ್ನು ಪ್ರಕಟ ಮಾಡಿದ್ದಾರೆ. ಆದರೆ ಅಧ್ಯಯನವು ಇನ್ನೂ ಕೂಡಾ ನಡೆಯುತ್ತಿದೆ.

 ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳುತ್ತದೆ?

ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳುತ್ತದೆ?

ಫ್ರಾನ್ಸ್‌ನಲ್ಲಿ ಮೊದಲು ಪತ್ತೆಯಾದ ಈ ಹೊಸ ರೂಪಾಂತರ B.1.640.2 ಅಥವಾ ಐಎಚ್‌ಯು ಬಗ್ಗೆ ಈವರೆಗ ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ರೂಪಾಂತರವು ವಿಶ್ವದ ಬೇರೆ ದೇಶಗಳಲ್ಲಿ ಪತ್ತೆಯಾಗಿಲ್ಲ. ಈ ಹಿನ್ನೆಲೆಯಿಂದಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಇದನ್ನು ಇನ್ನೂ ಕೂಡಾ ಅಧಯ್ಯನ ನಡೆಯುತ್ತಿರುವ ರೂಪಾಂತರ ಎಂಬ ಲೇಬಲ್‌ ಮಾಡಿಲ್ಲ. ಇನ್ನು ಓಮಿಕ್ರಾನ್‌ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಎಲ್ಲಾ ದೇಶಗಳಿಗೆ ಎಚ್ಚರಿಕೆಯನ್ನು ನೀಡಿದೆ.

 ತಜ್ಞರು ಹೊಸ ರೂಪಾಂತರದ ಬಗ್ಗೆ ಹೇಳುವುದು ಏನು?

ತಜ್ಞರು ಹೊಸ ರೂಪಾಂತರದ ಬಗ್ಗೆ ಹೇಳುವುದು ಏನು?

ಓಮಿಕ್ರಾನ್‌ ಹಾಗೂ ಈ ಹೊಸ ರೂಪಾಂತರ ಐಎಚ್‌ಯು ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವವರೆಗೂ ಹೆಚ್ಚು ಜಾಗರೂಕರಾಗಿ ಇರುವಂತೆ ತಜ್ಞರು ಸಲಹೆ ನೀಡಿದ್ದಾರೆ. ಈ ಸಾಂಕ್ರಾಮಿಕ ವೈರಸ್‌ ಸಂದರ್ಭದಲ್ಲಿ ಈ ಹೊಸ ರೂಪಾಂತರಗಳು ಹೊರಹೊಮ್ಮತ್ತದೆ. ಆದರೆ ಈ ಎಲ್ಲಾ ವೈರಸ್‌ಗಳು ತೀವ್ರ ಅನಾರೋಗ್ಯಕ್ಕೆ ಕಾರಣವಾಗುವುದಿಲ್ಲ. ಆದ್ದರಿಂದ ಅಧಿಕ ಮಾಹಿತಿಗಾಗಿ ಕಾಯುವುದು ಉತ್ತಮ. ಆತುರದ ಯಾವುದೇ ನಿರ್ಧಾರ ಬೇಡ ಎಂದು ಕೂಡಾ ತಜ್ಞರು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್‌ ಮಾಡಿರುವ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್, "ಹಲವಾರು ಹೊಸ ರೂಪಾಂತರಗಳನ್ನು ಕಂಡುಹಿಡಿಯಲಾಗುತ್ತದೆ. ಆದರೆ ಅವುಗಳು ಹೆಚ್ಚು ಅಪಾಯಕಾರಿ ಎಂದು ಅರ್ಥವಲ್ಲ. ಅದರಲ್ಲಿರುವ ರೂಪಾಂತರಿಗಳ ಮೇಲೆ ಅದು ಹೆಚ್ಚು ಅಪಾಯಕಾರಿ ಎಂಬುವುದು ತಿಳಿಯುತ್ತದೆ," ಎಂದಿದ್ದಾರೆ. "ಇನ್ನು ಈ ರೂಪಾಂತರವು ಓಮಿಕ್ರಾನ್‌ಗಿಂತ ಹೆಚ್ಚು ಪ್ರಭಾವಶಾಲಿ ಆಗಬಹುದು," ಎಂದು ಕೂಡಾ ಅನುಮಾನ ವ್ಯಕ್ತಪಡಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+