ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಂಎಸ್, ಆಧಾರ್, ಆಪ್: ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮ ಹೇಗಿರಲಿದೆ? 10 ಅಂಶಗಳು

|
Google Oneindia Kannada News

ನವದೆಹಲಿ, ಜನವರಿ 6: ದೇಶದಲ್ಲಿ ಪ್ರಸ್ತುತ ಎರಡು ಕೊರೊನಾ ವೈರಸ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಜನವರಿ 13ರಂದು ಮೊದಲ ಲಸಿಕೆ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಹೀಗಾಗಿ ಅಧಿಕೃತವಾಗಿ ನೀಡಲಾಗುವ ಮೊದಲ ಲಸಿಕೆ ಯಾವುದು? ಯಾರು ಈ ಲಸಿಕೆಯನ್ನು ಪಡೆದುಕೊಳ್ಳಲಿದ್ದಾರೆ? ಲಸಿಕೆ ಪಡೆದುಕೊಂಡ ಬಳಿಕ ಅವರಲ್ಲಿ ಬದಲಾವಣೆಗಳು ಆಗಲಿವೆಯೇ ಮುಂತಾದ ಪ್ರಶ್ನೆಗಳು ಉದ್ಭವವಾಗಿವೆ.

ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮದ ಪ್ರತಿ ಹಂತವೂ ದಾಖಲಾಗಲಿದೆ. ಲಸಿಕೆ ಪಡೆದುಕೊಳ್ಳುವವರ ವಿವರ, ಅವರ ಆರೋಗ್ಯ ಸ್ಥಿತಿ ಮುಂತಾದವುಗಳ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗುತ್ತದೆ. ಹೀಗಾಗಿ ಲಸಿಕೆಯನ್ನು ಬೇಕಾಬಿಟ್ಟಿ ನೀಡಲಾಗುವುದಿಲ್ಲ.

ಜನವರಿ 13ಕ್ಕೆ ದೇಶದಲ್ಲಿ ಮೊದಲ ಕೊರೊನಾ ಲಸಿಕೆ?ಜನವರಿ 13ಕ್ಕೆ ದೇಶದಲ್ಲಿ ಮೊದಲ ಕೊರೊನಾ ಲಸಿಕೆ?

ಮೊದಲ ಹಂತದಲ್ಲಿ ಲಕ್ಷಾಂತರ ಜನರಿಗೆ, ಕೋವಿಡ್ ವಿರುದ್ಧ ಹೋರಾಟದಲ್ಲಿನ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. ಅದಕ್ಕಾಗಿ 'ಕೋವಿನ್' ಎಂಬ ಆಪ್‌ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆಧಾರ್ ಅಧಿಕೃತತೆ, ಎಸ್‌ಎಂಎಸ್ ಮೂಲಕ ಲಸಿಕೆ ಖಾತರಿಪಡಿಸಿಕೊಳ್ಳುವಿಕೆ ಸೇರಿದಂತೆ ಕನಿಷ್ಠ 12 ಭಾಷೆಗಳಲ್ಲಿ ವಿವಿಧ ಮಾಹಿತಿಗಳನ್ನು ಈ ಆಪ್ ಒಳಗೊಳ್ಳಲಿದೆ.

ಸಾಂಕ್ರಾಮಿಕ ಪಿಡುಗಿನ ನಡುವೆ ಲಸಿಕೆ ನೀಡುವ ಕಾರ್ಯಕ್ರಮವನ್ನು ನಿಭಾಯಿಸಲು ಮತ್ತು ಬೃಹತ್ ಪ್ರಮಾಣದಲ್ಲಿ ನಡೆಸಲು ಕೋವಿಡ್ ಇಂಟೆಲಿಜೆನ್ಸ್ ನೆಟ್ವರ್ಕ್, ಕೋವಿಡ್ ಆಪ್ ಮತ್ತು ಅದರ ಪರಿಸರ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತದೆ. ಮುಂದೆ ಓದಿ.

ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆ ಪರ ಸಚಿವ ಸುಧಾಕರ್ ಬ್ಯಾಟಿಂಗ್ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆ ಪರ ಸಚಿವ ಸುಧಾಕರ್ ಬ್ಯಾಟಿಂಗ್

ವಂಚನೆಗೆ ಅವಕಾಶವಿಲ್ಲ

ವಂಚನೆಗೆ ಅವಕಾಶವಿಲ್ಲ

ಕೋವಿನ್ ಪರಿಸರ ವ್ಯವಸ್ಥೆಯ ಮೂಲಕ ಲಸಿಕೆ ನೀಡುವ ಸಮಯವನ್ನು ಸ್ವಯಂಚಾಲಿತವಾಗಿ ಹಂಚಿಕೆ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇಲ್ಲಿ ವಂಚನೆಗಳನ್ನು ತಡೆಯಲು ಆಧಾರ್ ಸೇರಿದಂತೆ ಅಧಿಕೃತ ಖಚಿತತೆಯಾಗಿ ವಿವಿಧ ಮಾದರಿಗಳನ್ನು ಬಳಸಲಾಗುತ್ತದೆ.

ವಿಶಿಷ್ಟ ಆರೋಗ್ಯ ಗುರುತು

ವಿಶಿಷ್ಟ ಆರೋಗ್ಯ ಗುರುತು

ಲಸಿಕೆ ಪಡೆದುಕೊಳ್ಳಲು ಬಯಸಿದವರಿಗಾಗಿಯೇ ವಿಶಿಷ್ಟ ಆರೋಗ್ಯ ಗುರುತನ್ನು ಸೃಷ್ಟಿಸುವ ಉದ್ದೇಶವಿದೆ. ಇದರಿಂದ ಲಸಿಕೆ ಪಡೆದುಕೊಂಡ ವ್ಯಕ್ತಿಯಲ್ಲಿ ಬಳಿಕ ಯಾವುದೇ ಅಡ್ಡಪರಿಣಾಮಗಳು ಉಂಟಾಗುತ್ತದೆಯೇ ಎಂಬುದನ್ನು ವರದಿ ಮಾಡಲು ಮತ್ತು ಪರಿಶೀಲಿಸಲು ಸಾಧ್ಯವಾಗುತ್ತದೆ.

ಭಾರತದಲ್ಲಿ ಕೊರೊನಾ ಲಸಿಕೆ ಬಂದ ಬಳಿಕ ಮುಂದೇನು?ಭಾರತದಲ್ಲಿ ಕೊರೊನಾ ಲಸಿಕೆ ಬಂದ ಬಳಿಕ ಮುಂದೇನು?

12 ಭಾಷೆಗಳಲ್ಲಿ ಮಾಹಿತಿ

12 ಭಾಷೆಗಳಲ್ಲಿ ಮಾಹಿತಿ

ಲಸಿಕೆ ಪಡೆದುಕೊಳ್ಳಲು ಕಾಯುತ್ತಿರುವವರು ಹಾಗೂ ಈ ಕಾರ್ಯಕ್ರಮದಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲು 12 ಭಾಷೆಗಳಲ್ಲಿ ಎಸ್‌ಎಂಎಸ್ ಕಳುಹಿಸಲಾಗುತ್ತದೆ. ಎಲ್ಲ ಡೋಸ್‌ಗಳ ಲಸಿಕೆಯನ್ನೂ ನೀಡಿದ ಬಳಿಕ ಅವರಿಗೆ ಕ್ಯೂಆರ್ ಕೋಡ್ ಆಧಾರಿತ ಲಸಿಕೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಅದನ್ನು ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು.

ಡಿಜಿಲಾಕರ್‌ನಲ್ಲಿ ವೀಕ್ಷಣೆ

ಡಿಜಿಲಾಕರ್‌ನಲ್ಲಿ ವೀಕ್ಷಣೆ

ಸರ್ಕಾರದ ದಾಖಲೆಗಳ ಸಂಗ್ರಹದ ಆಪ್ 'ಡಿಜಿಲಾಕರ್'ಅನ್ನು ಬಳಸಿಕೊಂಡು ಅದರಲ್ಲಿ ಈ ಕ್ಯೂಆರ್ ಕೋಡ್ ಆಧಾರಿತ ಪ್ರಮಾಣಪತ್ರವನ್ನು ವೀಕ್ಷಿಸಬಹುದು. ಇದು 24*7 ಸಹಾಯವಾಣಿಯಾಗಿರುತ್ತದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಅಧಿಕಾರಿಗಳಿಗೆ ಮಾತ್ರ ಲಭ್ಯ

ಅಧಿಕಾರಿಗಳಿಗೆ ಮಾತ್ರ ಲಭ್ಯ

ಪ್ರಸ್ತುತ ಕೋವಿನ್ ಆಪ್‌ನಲ್ಲಿ ಸಾರ್ವಜನಿಕರು ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ. ಅಧಿಕಾರಿಗಳಿಗೆ ಮಾತ್ರವೇ ಅದನ್ನು ಬಳಸಲು ಅವಕಾಶ ನೀಡಲಾಗಿದೆ. ಈಗಾಗಲೇ ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಸುಮಾರು 75 ಲಕ್ಷ ಆರೋಗ್ಯ ಸಿಬ್ಬಂದಿಯ ವಿವರಗಳನ್ನು ಈ ಆಪ್ ಒಳಗೊಂಡಿದೆ. ಒಮ್ಮೆ ಆಪ್ ಅಧಿಕೃತವಾಗಿ ಕಾರ್ಯಾರಂಭ ಮಾಡಿದ ಬಳಿಕ ಅದು ಬಳಕೆದಾರರ ನಿರ್ವಹಣಾ ಮಾದರಿ, ಫಲಾನುಭವಿಗಳ ನೋಂದಣಿ, ಲಸಿಕೆ ನೀಡುವಿಕೆ ಮತ್ತು ಫಲಾನುಭವಿಗಳಿಗೆ ಮನ್ನಣೆ ಹಾಗೂ ಸ್ಥಿತಿಗತಿಯ ಮಾಹಿತಿಗಳನ್ನು ಒಳಗೊಳ್ಳಲಿದೆ.

ನೋಂದಣಿ ಆಯ್ಕೆಗಳು

ನೋಂದಣಿ ಆಯ್ಕೆಗಳು

ಒಮ್ಮೆ ಆಪ್ ಬಿಡುಗಡೆಯಾದ ಬಳಿಕ ನೋಂದಣಿಗೆ ಮೂರು ಆಯ್ಕೆಗಳನ್ನು ಕೋವಿನ್ ಆಪ್ ನೀಡುತ್ತದೆ. ಸ್ವಯಂ ನೋಂದಣಿ, ವೈಯಕ್ತಿಕ ನೋಂದಣಿ (ದತ್ತಾಂಶ ಅಪ್ಲೋಡ್ ಮಾಡಲು ಅಧಿಕಾರಿ ಸಹಾಯ) ಮತ್ತು ಬಲ್ಕ್ ಅಪ್ಲೋಡ್. ಈ ಪ್ರಕ್ರಿಯೆಯ ನಿಖರ ಪ್ರಕ್ರಿಯೆಯನ್ನು ಇನ್ನೂ ವಿವರಿಸಿಲ್ಲ. ಸರ್ಕಾರ ಶಿಬಿರಗಳನ್ನು ಆಯೋಜಿಸಲಿದ್ದು, ಅಲ್ಲಿ ಜನರು ತೆರಳಿ ಅಧಿಕಾರಿಗಳ ಸಹಾಯದಿಂದ ನೋಂದಣಿ ಮಾಡಿಸಿಕೊಳ್ಳುವ ವ್ಯವಸ್ಥೆ ತರುವ ಸಂಭವವಿದೆ.

ಮತದಾರರ ಪಟ್ಟಿ ಬಳಸಿ ಡೇಟಾ ಅಪ್ಲೋಡ್

ಮತದಾರರ ಪಟ್ಟಿ ಬಳಸಿ ಡೇಟಾ ಅಪ್ಲೋಡ್

'50 ವರ್ಷ ಮೇಲ್ಪಟ್ಟವರ ಮಾಹಿತಿಗಾಗಿ ನಾವು ಚುನಾವಣಾ ಮತದಾನ ಪಟ್ಟಿಯನ್ನು ಪರಿಶೀಲಿಸಿ ಕೋವಿನ್‌ಗೆ ದತ್ತಾಂಶ ಅಡಕ ಮಾಡುತ್ತೇವೆ. ಬಳಿಕ ಅದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುತ್ತೇವೆ. ಜನರು ಅದರಲ್ಲಿ ತಮ್ಮ ಹೆಸರು ಇಲ್ಲದೆ ಹೋದರೆ ಜಿಲ್ಲಾ ಅಥವಾ ಬ್ಲಾಕ್ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಬಹುದು. ಅವರು ಸ್ವಯಂ ನೋಂದಣಿ ಕೂಡ ಮಾಡಬಹುದು. 50ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಅಥವಾ ಕ್ಯಾನ್ಸರ್ ಮುಂತಾದ ಸಮಸ್ಯೆಗಳಿದ್ದರೆ ಅವರ ವೈದ್ಯಕೀಯ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಬಹುದು' ಎಂದು ದೆಹಲಿ ಕೋವಿಡ್ ಕಾರ್ಯಪಡೆ ಸದಸ್ಯ ಡಾ. ಸುನೀಲ ಗರ್ಗ್ ಹೇಳಿದ್ದಾರೆ.

90,000 ಜನರಿಗೆ ತರಬೇತಿ

90,000 ಜನರಿಗೆ ತರಬೇತಿ

ಸಾಫ್ಟ್‌ವೇರ್ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಅದರ ಅಭಿವೃದ್ಧಿಯ ವಿವಿಧ ಹಂತಗಳಲ್ಲಿ ಹಲವಾರು ಪೂರ್ವಾಭ್ಯಾಸ ಚಟುವಟಿಕೆಗಳನ್ನು ನಡೆಸಲಾಗಿದೆ. ಈ ಸಾಫ್ಟ್‌ವೇರ್ ಬಳಕೆಗಾಗಿ 700 ಜಿಲ್ಲೆಗಳ 90,000 ಜನರಿಗೆ ತರಬೇತಿ ನೀಡಲಾಗಿದೆ.

ಕಾರ್ಯಕರ್ತರ ಮಾಹಿತಿ ದಾಖಲು

ಕಾರ್ಯಕರ್ತರ ಮಾಹಿತಿ ದಾಖಲು

ಈ ಪ್ಲಾಟ್‌ಫಾರ್ಮ್‌ನಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಇತರೆ ವೈದ್ಯಕೀಯ ಮುಂಚೂಣಿ ಸಿಬ್ಬಂದಿಯ ದತ್ತಾಂಶಗಳನ್ನು ಅಪ್ಲೋಡ್ ಮಾಡಲಾಗಿದೆ. ಅವರು ತಮ್ಮ ಹೆಸರನ್ನು ಪ್ರತ್ಯೇಕವಾಗಿ ನೋಂದಾಯಿಸುವ ಅಗತ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ನಿರ್ಧಾರ

ಜಿಲ್ಲಾ ಮ್ಯಾಜಿಸ್ಟ್ರೇಟ್ ನಿರ್ಧಾರ

ಜನಸಂಖ್ಯಾ ಆದ್ಯತೆಯ ಗುಂಪುಗಳಲ್ಲಿ ಲಸಿಕೆ ನೀಡುವ ಸಮಯದ ವಿವರಗಳನ್ನು ಈ ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಹಂಚಿಕೆ ಮಾಡುತ್ತದೆ. ಯಾವಾಗ ಲಸಿಕೆ ಕಾರ್ಯಕ್ರಮ ನಡೆಸಬಹುದು ಎಂಬ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ದಿನಾಂಕ ನಿರ್ಧರಿಸಬಹುದಾಗಿದೆ.

Recommended Video

Covid Vaccine ಬಂದ್ರೂ ಮಾಸ್ಕ್ ಕಡ್ಡಾಯ ಹಾಕಬೇಕಾ ? ! | Oneindia Kannada

English summary
Government to use CoWin app ecosystem to register, document and track the people who wish to get vaccinated. Here is the 10 major points in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X