ಸದ್ಯದಲ್ಲಿ ಭಾರತಕ್ಕೆ ಕಾಲಿಡಲಿದೆ Honor 200: ಇದರ ಬೆಲೆ ಎಷ್ಟು?
ಯುವಕರನ್ನು ಹಾಗೂ ಬಜೆಟ್ ಫ್ರೆಂಡ್ಲಿ ಗ್ರಾಹಕರನ್ನು ಟಾರ್ಗೆಟ್ ಮಾಡಿ ಕಂಪನಿಗಳು ದಿನವೂ ಹೊಸ ಹೊಸ ಫೋನ್‌ಗಳನ್ನು ಲಾಂಚ್ ಮಾಡುತ್ತವೆ. ಈ ಫೋನ್‌ಗಳು ಮಾರುಕಟ್ಟೆಯಲ್ಲಿ ತಮ್ಮ ಹವಾ ಸೃಷ್ಟಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತವೆ.
ಇದೇ ನಿಟ್ಟಿನಲ್ಲಿ ಹಾನರ್ ತನ್ನ ಮತ್ತೆರೆಡು ಫೋನ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. Honor 200 ಬಗ್ಗೆ ಸಿಇಒ ಮಾಧವ್ ಶೇಠ್ ಮತ್ತು ಜಂಟಿ ಎಂಡಿ ಸಿಪಿ ಖಂಡೇಲ್ವಾಲ್ ಅವರು ಎಕ್ಸ್‌ನಲ್ಲಿ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ. ಅಲ್ಲದೆ ಈ ಹ್ಯಾಂಡ್ಸೆಟ್ AI ವೈಶಿಷ್ಟ್ಯಗಳೊಂದಿಗೆ ಬರಬಹುದು ಎಂದು ಹೇಳಲಾಗುತ್ತಿದೆ.

ಭಾರತದಲ್ಲೂ ಪಾದಾರ್ಪಣೆ ಮಾಡಲಿದೆ
ಈ ಮೊಬೈಲ್ ಮಲ್ಟಿಮೋಡಲ್ ಉತ್ಪಾದನೆಯಂತಹ AI ವೈಶಿಷ್ಟ್ಯಗಳನ್ನು ನೀಡಬಹುದು ಎಂದು ಹಾನರ್ ಮಾಡಿದ ಪೋಸ್ಟ್ ನಿಂದ ತಿಳಿದು ಬರುತ್ತದೆ. ಇದಕ್ಕೂ ಮೊದಲು, ಕಂಪನಿಯು ಚೀನಾದಲ್ಲಿ ಹಾನರ್ 200 ಮತ್ತು ಹಾನರ್ 200 ಪ್ರೊ ಅನ್ನು ಪರಿಚಯಿಸಿದೆ. ಈಗ ಈ ಸಾಧನಗಳು ಭಾರತದಲ್ಲೂ ಪದಾರ್ಪಣೆ ಮಾಡಬಹುದು.
ಹಾನರ್ 200 ರ ವಿಶೇಷಣಗಳು
ಹಾನರ್ 200 6.7-ಇಂಚಿನ ಫುಲ್‌ಎಚ್‌ಡಿ ಪ್ಲಸ್ ಕರ್ವಡ್ ಓಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ದರವನ್ನು ಹೊಂದಿದೆ. ಅಲ್ಲದೆ ಈ ಫೋನ್ ಗರಿಷ್ಠ 4,000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿದೆ. ಈ ಫೋನ್‌ನಲ್ಲಿ MagicOS 8.0 ಆಧಾರಿತ ಸ್ಯ್ನಾಪ್ ಡ್ರ್ಯಾಗನ್ 7 ಜನರೇಷನ್ 3 ಇರಲಿದ್ದು, Android 14ನ್ನು ಈ ಫೋನ್ ಹೊಂದಿದೆ.
ಅಲ್ಲದೆ ಈ ಫೋನ್ ಬಹುಶಃ 5,200mAh ಬ್ಯಾಟರಿ ಹೊಂದಿದ್ದು, 100 ವ್ಯಾಟ್ ಚಾರ್ಜಿಂಗ್ ಗೆ ಬೆಂಬಲವನ್ನು ನೀಡುತ್ತದೆ. ಫೋನ್‌ನ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಉತ್ತಮ ಕ್ವಾಲಿಟಿಯ ಕರೆ ಹಾಗೂ ರೆಕಾರ್ಡಿಂಗ್ ಮಾಡಬಹುದಾಗಿದೆ.
ಹಾನರ್ 200 ಪ್ರೋದಲ್ಲಿ ಏನಿದೆ ವಿಶೇಷತೆ?
ಹಾನರ್ 200 Pro ಸಹ 6.78-ಇಂಚಿನ ಇಂಚಿನ ಫುಲ್‌ಎಚ್‌ಡಿ ಪ್ಲಸ್ ಕರ್ವಡ್ ಓಎಲ್‌ಇಡಿ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ. ಈ ಫೋನ್ ರಿಫ್ರೆಶ್ ದರ 120Hz ಆಗಿದ್ದು, 4,000 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ. ಈ ಫೋನ್‌ನಲ್ಲಿ ಸ್ನ್ಯಾಪ್‌ಡ್ರ್ಯಾಗನ್ 8ಎಸ್ ಜನರೇಷನ್ 3 ಪ್ರೊಸೆಸರ್ ಇದ್ದು, ಮ್ಯಾಜಿಕೋಸ್ 8.0 ಆಧಾರಿತ Android 14 ಸೌಲಭ್ಯ ಹೊಂದಿರುವ ಸಾಧ್ಯತೆ ಇದೆ.
ಈ ಫೋನ್ 5200 mAh ಹೊಂದಿದ್ದು, 100 ವ್ಯಾಟ್ ಚಾರ್ಜಿಂಗ್ ಗೆ ಬೆಂಬಲವನ್ನು ಹಾಗೂ 66 ವ್ಯಾಟ್ ವಾಯರಲೆಸ್ ಸಪೋರ್ಟ್‌ನ್ನು ಸಹ ಹೊಂದಿದೆ. ಇದರ ಹಿಂಭಾಗದಲ್ಲಿ ಮೂರು ಕ್ಯಾಮೆರಾ ನೀಡಲಾಗುವ ಸಾಧ್ಯತೆ ಇದ್ದು, ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹಾಗೂ ಸೆಕಂಡರಿ ಕ್ಯಾಮೆರಾ
12ಮೆಗಾ ಪಿಕ್ಸಲ್ ಹೊಂದಿರುವ ಸಾಧ್ಯತೆ ಇದೆ. ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದು.
ಈ ಫೋನ್ ಬೆಲೆ ಎಷ್ಟು?
ಚೀನಾದಲ್ಲಿ Honor 200 ಆರಂಭಿಕ ಬೆಲೆ 2,699 ಯುವಾನ್ ಆಗಿದ್ದು, ಭಾರತದಲ್ಲಿ ಸುಮಾರು 31,000 ರೂ.ಗಳಲ್ಲಿ ಲಭ್ಯ ಆಗುವ ಸಾಧ್ಯತೆ ಇದೆ. ಇನ್ನು Honor 200 Pro 3,499 ಯುವಾನ್ ಇದ್ದು, ಭಾರತದಲ್ಲಿ ಸುಮಾರು 40,200 ರೂ.ಗಳ ಆಸುಪಾಸಿನಲ್ಲಿ ಕಂಪನಿ ಲಾಂಚ್ ಮಾಡುವ ಸಾಧ್ಯತೆ ಇದೆ. ಒಂದು ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್ ಟಾರ್ಗೆಟ್ ಮಾಡಿದೆ.












Click it and Unblock the Notifications