Get Updates
Get notified of breaking news, exclusive insights, and must-see stories!

ಹೋಮ್‌ಕಮಿಂಗ್‌ ಪುಸ್ತಕ: ಭಾರತೀಯ ಮಹಿಳಾ ನಾಯಕಿಯರ ಮಾನಸಿಕ ಆರೋಗ್ಯ ಹೋರಾಟಗಳನ್ನು ಬೆಳಕಿಗೆ ತಂದ ನೇಹಾ ಕಿರ್ಪಾಲ್ ಮತ್ತು ಡಾ.ನಂದಿನಿ

ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನ (ಸೆಪ್ಟೆಂಬರ್ 10) ಮತ್ತು ವಿಶ್ವ ಮಾನಸಿಕ ಆರೋಗ್ಯ ದಿನ (ಅಕ್ಟೋಬರ್ 10) ಎರಡು ಪ್ರಮುಖ ದಿನಗಳ ನಡುವೆ ಇಂದಿನ ಅತ್ಯಂತ ಪ್ರಮುಖ ಸಾರ್ವಜನಿಕ ಆರೋಗ್ಯ ಸವಾಲುಗಳಲ್ಲಿ ಒಂದಾಗಿರುವ ಸಮಸ್ಯೆಯ ಬಗ್ಗೆ ಗಮನ ಹರಿಸುವ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ನೇಹಾ ಕಿರ್ಪಾಲ್ ಮತ್ತು ಡಾ. ನಂದಿನಿ ಮುರಳಿ ಅವರು ಹೋಮ್‌ಕಮಿಂಗ್: ಮೆಂಟಲ್ ಹೆಲ್ತ್‌ ಜರ್ನೀಸ್ ಆಫ್ ರೆಸಿಲಿಯನ್ಸ್, ಹೀಲಿಂಗ್ ಅಂಡ್ ಹೋಲ್‌ನೆಸ್ ಪುಸ್ತಕವನ್ನು ವೆಸ್ಟ್‌ಲ್ಯಾಂಡ್ ಬುಕ್ಸ್ ಪ್ರಕಟಿಸಿದೆ. ಈ ರೀತಿಯ ಮೊದಲ ಪುಸ್ತಕ ಮತ್ತು ಸಮುದಾಯ ಆರಂಭವು ಮಾನಸಿಕ ಆರೋಗ್ಯದ ಅನುಭವಗಳನ್ನು ಸಾರ್ವಜನಿಕ ಕ್ಷೇತ್ರದಲ್ಲಿ ಚರ್ಚೆಗೆ ಹಾಗೂ ಮುಖ್ಯ ವಿಷಯವನ್ನಾಗಿಸುತ್ತದೆ. ಭಾರತದಾದ್ಯಂತ ಜನರು ಹಾಗೂ ಆರೋಗ್ಯ ವ್ಯವಸ್ಥೆಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಮತ್ತು ಅದಕ್ಕೆ ಹೇಗೆ ಕಾಳಜಿ ವಹಿಸುತ್ತೇವೆ ಎನ್ನುವುದರಲ್ಲಿ ಕೆಲವೊಂದು ಬದಲಾವಣೆಗೆ ಈ ಪುಸ್ತಕ ಒತ್ತು ನೀಡುತ್ತದೆ.

Homecoming by Neha Kirpal Dr Nandini Murali Chronicles Indian Women Leaders Mental Health Struggles

ನೇಹಾ ಕಿರ್ಪಾಲ್ ಮತ್ತು ಡಾ. ನಂದಿನಿ ಮುರಳಿ ಸಹ-ಲೇಖಕರಾಗಿರುವ "ಹೋಮ್‌ಕಮಿಂಗ್: ಮೆಂಟಲ್ ಹೆಲ್ತ್ ಜರ್ನೀಸ್ ಆಫ್ ರೆಸಿಲಿಯನ್ಸ್, ಹೀಲಿಂಗ್ ಅಂಡ್ ಹೋಲ್ನೆಸ್" ಅನ್ನು ವೆಸ್ಟ್‌ಲ್ಯಾಂಡ್ ಬುಕ್ಸ್‌ ಪ್ರಾರಂಭಿಸಿದೆ. ಇದು ಭಾರತದ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಪರಿಹರಿಸಲು ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರಮುಖ ಮಹಿಳೆಯರ ಯಶೋಗಾಥೆಯನ್ನು ಪರಿಚಯಿಸುತ್ತದೆ. ಮುಂದಿನ ದಿನಗಳಲ್ಲಿ ಈ ಪುಸ್ತಕವು ದೆಹಲಿ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಬಿಡುಗಡೆ ಆಗಲಿದೆ. 300 ಮಿಲಿಯನ್ ಭಾರತೀಯ ವಯಸ್ಕರು ಮತ್ತು 50 ಮಿಲಿಯನ್ ಮಕ್ಕಳು ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರೆ ಪುಸ್ತಕವು ಈ ಸಮಸ್ಯೆಯ ಬಗ್ಗೆ ಬೆಳಕು ಚಲ್ಲುತ್ತದೆ.

ಭಾರತದಲ್ಲಿ ಹೋಮ್‌ಕಮಿಂಗ್ ಮೊದಲ ಸಂಕಲನವಾಗಿದ್ದು, ತೀವ್ರ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಹಿಳಾ ನಾಯಕಿಯರ ನೈಜ ಕಥೆಗಳನ್ನು ಒಳಗೊಂಡಿದೆ. ಈ ಪುಸ್ತಕದಲ್ಲಿ ಖಿನ್ನತೆ, ಸ್ಕಿಜೋಫ್ರೇನಿಯಾ, ದೀರ್ಘಕಾಲದ ಆತಂಕ, ಒಸಿಡಿ, ಬೈಪೋಲಾರ್ ಡಿಸಾರ್ಡರ್, ಆತ್ಮಹತ್ಯೆ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದ ವರದಿಗಳನ್ನು ಸೇರಿಸಲಾಗಿದೆ. ಈ ಪುಸ್ತಕವು ಚಿಕಿತ್ಸೆ ಮತ್ತು ಆರೈಕೆಯ ಕಲ್ಮಷವಿಲ್ಲದ ವಿಧಾನಗಳನ್ನು ಪರಿಚಯಿಸುತ್ತದೆ. ಇಂದು ಭಾರತದಲ್ಲಿ ಮಾನಸಿಕ ಆರೋಗ್ಯ ರಕ್ಷಣೆಯ ಸ್ವರೂಪವನ್ನು ಎತ್ತಿ ತೋರಿಸುತ್ತದೆ ಮತ್ತು ರಾಷ್ಟ್ರವ್ಯಾಪ್ತಿ ಮಾನಸಿಕ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ತುರ್ತು ಗಮನ ಹರಿಸುವುದಕ್ಕೆ ಸಂಬಧಿಸಿದಂತೆ ಹೆಚ್ಚು ಗಮನ ನೀಡುವಂತೆ ಒತ್ತಾಯಿಸುತ್ತದೆ.

ಈ ಪುಸ್ತಕವನ್ನು ಸಾಮಾಜಿಕ ಉದ್ಯಮಿ ನೇಹಾ ಕಿರ್ಪಾಲ್ (ಅಮಹಾ ಹೆಲ್ತ್, ಚಿಲ್ಡ್ರನ್ ಫಸ್ಟ್, ಇಂಡಿಯಾ ಮೆಂಟಲ್ ಹೆಲ್ತ್ ಅಲೈಯನ್ಸ್ (IMHA) ಮತ್ತು ಹಿಂದೆ ಇಂಡಿಯಾ ಆರ್ಟ್ ಫೇರ್) ಮತ್ತು ಡಾ. ನಂದಿನಿ ಮುರಳಿ (SPEAK ಸ್ಥಾಪಕಿ, ಅವತಾರ್‌ನಲ್ಲಿ ಉಪಾಧ್ಯಕ್ಷೆ - ಕಲಿಕೆ ಮತ್ತು ಸಂಶೋಧನೆ; ಲಿಂಗ ಮತ್ತು ವೈವಿಧ್ಯತೆ ವೃತ್ತಿಪರ; ಲೇಖಕಿ) ಸೇರಿ ಬರೆದಿದ್ದಾರೆ. ಇದು 11 ಮಹಿಳಾ ನಾಯಕಿಯರ ಪಯಣದ ಕಥೆಯನ್ನು ಒಳಗೊಂಡಿದೆ. ಉದ್ಯಮಿಗಳು, ಮನೋವೈದ್ಯರು, LGBTQI+ ಕಾರ್ಯಕರ್ತರು, ಸಮಾಜ ಸೇವಕರು ಮತ್ತು ಶಿಕ್ಷಕ ಸೇರಿದಂತೆ ಹಲವರ ಒಳನೋಟಗಳು ಮತ್ತು ಅನುಭವಗಳು ಭಾರತದಲ್ಲಿ ಸಮುದಾಯಗಳು, ಸಂಸ್ಥೆಗಳು ಮತ್ತು ಸರ್ಕಾರಗಳ ಮೂಲಕ ಮಾನಸಿಕ ಆರೋಗ್ಯ ಆರೈಕೆ ಮತ್ತು ಬೆಂಬಲವನ್ನು ಹೇಗೆ ನಿರ್ಮಿಸಬಹುದು ಎಂಬುದನ್ನು ವಿವರವಾಗಿ ನೀಡಲಾಗಿದೆ.

ಪುಸ್ತಕದ ಬಗ್ಗೆ ಮಾತನಾಡಿದ ನೇಹಾ ಕಿರ್ಪಾಲ್, "ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವ ಪೋಷಕರು ಮತ್ತು ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದ ಸಹೋದರನಿಗೆ ಜೀವಮಾನದ ಆರೈಕೆದಾರಳಾಗಿ, ಕಳೆದ ಮೂರು ದಶಕಗಳಲ್ಲಿ ನಮ್ಮ ಸ್ವಂತ ಅನುಭವಗಳಿಂದ ಮತ್ತು ಕಲಿತ ವಿಷಯಗಳನ್ನು ಹಂಚಿಕೊಳ್ಳುವುದು ಆರೈಕೆಯನ್ನು ಪಡೆಯಲು ಪ್ರಯತ್ನಿಸುತ್ತಿರುವ ಜನರಿಗೆ ಮತ್ತು ನಮ್ಮ ದೇಶದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ಚಿಕಿತ್ಸಾ ವ್ಯವಸ್ಥೆಗಳನ್ನು ನಿರ್ಮಿಸುವವರಿಗೆ ಬಹಳ ಸಹಾಯ ಮಾಡುತ್ತದೆ ಎಂದು ನಾನು ಅರಿತುಕೊಂಡಿದ್ದೇನೆ" ಎಂದು ಹೇಳಿದ್ದಾರೆ.

"ಹೋಮ್‌ಕಮಿಂಗ್‌ನ ಸಹ-ಲೇಖಕಿ ಮತ್ತು ಲೆಫ್ಟ್ ಬಿಹೈಂಡ್: ಸರ್ವೈವಿಂಗ್ ಸುಸೈಡ್ ಲಾಸ್‌ನ ಲೇಖಕಿ ಡಾ. ನಂದಿನಿ ಮುರಳಿ ಅವರು, "ಮಹಿಳೆಯರು ಹೆಚ್ಚಾಗಿ ಆರೈಕೆ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಯಲ್ಲಿ ಸವಾಲುಗಳನ್ನು ಎದುರಿಸುತ್ತಾರೆ. ಆದರೆ ಮಾನಸಿಕ ಆರೋಗ್ಯದ ಬಗ್ಗೆ ಸಾರ್ವಜನಿಕ ಕ್ಷೇತ್ರದಲ್ಲಿ ಚರ್ಚೆ ಮಾಡುವ ಸಂದರ್ಭದಲ್ಲಿ ಅವರ ಅನುಭವಗಳನ್ನು ಕಡೆಗಣಿಸಲಾಗುತ್ತದೆ. ಹೋಮ್‌ಕಮಿಂಗ್ ಈ ವಿಷಯಗಳನ್ನು ವಸ್ತುನಿಷ್ಠವಾಗಿ ನಿರೂಪಣೆ ಮಾಡಿದೆ. ಅಲ್ಲದೇ ಈ ವಿಷಯಗಳನ್ನು ಕೇಂದ್ರೀಕರಿಸುವ ಪ್ರಯತ್ನ ಮಾಡಲಾಗಿದೆ. ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರ ಬಗ್ಗೆ ಘನತೆಯಿಂದ ಹಾಗೂ ಇದು ಗುಣಪಡಿಸು ವ ಆರೋಗ್ಯ ಸಮಸ್ಯೆ ಎನ್ನುವುದನ್ನು ಅಚ್ಚುಕಟ್ಟಾಗಿ ವಿವರಿಸಲಾಗಿದೆ" ಎಂದು ಅವರು ವಿವರಿಸಿದ್ದಾರೆ.

ಭಾರತವು ಖಿನ್ನತೆ, ವ್ಯಸನ ಮತ್ತು ಆತ್ಮಹತ್ಯೆಯ ಸಮಸ್ಯೆ ಎದುರಿಸುತ್ತಿರುವುದರಲ್ಲಿ ವಿಶ್ವದಲ್ಲೇ ಮೂರನೇ ಒಂದು ಭಾಗವನ್ನು ಹೊಂದಿದೆ. ಇಂದು 300 ಮಿಲಿಯನ್ ಭಾರತೀಯ ವಯಸ್ಕರು ಮತ್ತು 50 ಮಿಲಿಯನ್ ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅಪಮಾನ ಮತ್ತು ಮೌನವು ಸಾರ್ವಜನಿಕ ಚರ್ಚೆಯಲ್ಲಿ ಪ್ರಾಬಲ್ಯ ಸಾಧಿಸುತ್ತದೆ. ಅಲ್ಲದೇ ಸರಿಯಾದ ಸಮಯದಲ್ಲಿ ಸಹಾಯ ಪಡೆಯುವುದನ್ನು ಸಹ ತಡೆಯುತ್ತದೆ. ಇದು 95% ವರೆಗಿನ ಚಿಕಿತ್ಸೆಯ ಅಂತರವನ್ನು ಹೆಚ್ಚಿಸುತ್ತದೆ. ಮನೆ, ಕಾಲೇಜುಗಳು ಮತ್ತು ಕೆಲಸದ ಸ್ಥಳಗಳಲ್ಲಿ ಗುಣಮಟ್ಟದ ಆರೈಕೆ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸೃಷ್ಟಿಸುವುದಕ್ಕೆ ಸಂಬಂಧಿಸಿದ ಒಳನೋಟಗಳು, ಮೌಲ್ಯೀಕರಣ ಹಾಗೂ ಭರವಸೆಯನ್ನು ಒದಗಿಸುವ ದಿಟ್ಟ ವೈಯಕ್ತಿಕ ನಿರೂಪಣೆಗಳೊಂದಿಗೆ ಹೋಮ್‌ಕಮಿಂಗ್ ಉಳಿದ ಪುಸ್ತಕಗಳಿಗಿಂತಲೂ ಭಾರೀ ಭಿನ್ನವಾಗಿದೆ.

ಇನ್ನು ಈ ಪುಸ್ತಕವು ಮಾನಸಿಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವವರೊಂದಿಗೆ ಹೇಗೆ ಇರಬೇಕು ಹಾಗೂ ಅವರನ್ನು ಹೇಗೆ ಆರೈಕೆ ಮಾಡಬೇಕು, ಭಾರತದಾದ್ಯಂತ ಆರೈಕೆ ಅಭ್ಯಾಸಗಳು, ಸಾರ್ವಜನಿಕ ಸಹಕಾರ ಮತ್ತು ಸಮುದಾಯ ಬೆಂಬಲ ವ್ಯವಸ್ಥೆಗಳನ್ನು ರೂಪಿಸುವುದಕ್ಕೆ ಅವಶ್ಯವಿರುವ ಮತ್ತು ಅಗತ್ಯವಾದ ನೈಜ ಅನುಭವದ ಪರಿಣತಿಯಿಂದ ಕಲಿಯುವ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಪುಸ್ತಕ ಕೊಡುಗೆದಾರರು: ಡಾ. ಪೂರ್ಣಿಮಾ ವಿಶ್ವನಾಥನ್, ಜೈನಾಬ್ ಪಟೇಲ್, ಡಾ. ಕವಿತಾ ಅರೋರಾ, ಸಿದ್ರಾ ನಾಯರ್, ಡಾ. ರೈಸಾ ಆರ್.ಎಂ, ಕೈರವಿ ಭರತ್ ರಾಮ್, ಡಾ. ಫೆರೋಜಾ ಜೆ. ಗೋದ್ರೇಜ್, ಜನನಿ ಅಯ್ಯರ್, ಅಪರ್ಣ ಪಿರಮಲ್ ರಾಜೇ.

ಪುಸ್ತಕ ಬಿಡುಗಡೆ ದಿನಾಂಕಗಳ ವಿವರ

ದೆಹಲಿ: 29 ಸೆಪ್ಟೆಂಬರ್ 2025, ಇಂಡಿಯಾ ಹ್ಯಾಬಿಟ್ಯಾಟ್ ಸೆಂಟರ್

ಮುಂಬೈ: 10 ಅಕ್ಟೋಬರ್ 2025

ಬೆಂಗಳೂರು: 7 ನವೆಂಬರ್ 2025, ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ

ಈ ವಿಚಾರವಾಗಿ ನಡೆಯುವ ಮಹತ್ವದ ಚರ್ಚೆಗಳು, ಸಂವಾದದಲ್ಲಿ ಪಾಲ್ಗೊಳ್ಳುವುದಕ್ಕೆ Instagram ಮತ್ತು YouTube ನಲ್ಲಿ ಹೋಮ್‌ಕಮಿಂಗ್ ಎನ್ನುವ ಪೇಜ್ ಫಾಲೋ ಮಾಡಿ.

ಹೆಚ್ಚಿನ ಮಾಹಿತಿ, ಸಂದರ್ಶನ ಮತ್ತು ಪ್ರಶ್ನೆಗಳಿಗಾಗಿ ಸಂಪರ್ಕಿಸಿ:

[email protected]
| +91 85277 93252

ವೆಸ್ಟ್‌ಲ್ಯಾಂಡ್ ಪುಸ್ತಕಗಳು: [email protected]
| +91 88266 03355

Homecoming by Neha Kirpal Dr Nandini Murali Chronicles Indian Women Leaders Mental Health Struggles

ನೇಹಾ ಕಿರ್ಪಾಲ್‌ ಪರಿಚಯ

ಸೃಜನಶೀಲ ಹಾಗೂ ಸಾಮಾಜಿಕ ಉದ್ಯಮಿ ನೇಹಾ ಕಿರ್ಪಾಲ್ 2008ರಿಂದ 2018ರವರೆಗೆ ಇಂಡಿಯಾ ಆರ್ಟ್ ಫೇರ್‌ ಅನ್ನು ಸ್ಥಾಪಿಸಿ ನಡೆಸಿದರು. ನಂತರ ಅವರು ಸಂಪೂರ್ಣವಾಗಿ ಮಾನಸಿಕ ಆರೋಗ್ಯ ಕ್ಷೇತ್ರದತ್ತ ಗಮನಹರಿಸಿದರು. ಸ್ಕಿಜೋಫ್ರೀನಿಯಾ ಸಮಸ್ಯೆಯಿಂದ ಬಳಲುತ್ತಿರುವ ಪೋಷಕರಿಗೆ ಮಕ್ಕಳು ನೀಡುವ ಆರೈಕೆಯನ್ನು ನೀಡಿರುವ ಅನುಭವ ಅವರದ್ದಾಗಿದೆ.

ಸಹೋದರನ ಆತ್ಮಹತ್ಯೆಯು ನೀಡಿದ ಅಗಾಧ ನೋವು ನೇಹಾ ಜೀವನಕ್ಕೆ ಹೊಸ ತಿರುವನ್ನು ನೀಡಿದ್ದು, ಈ ಮೂಲಕ 2019ರಲ್ಲಿ ಅಮಹಾ ಸಂಸ್ಥೆಯನ್ನು ಸ್ಥಾಪಿಸಿದರು. ಇಂದು ಅಮಹಾ ಸಂಸ್ಥೆಯು ಭಾರತದಲ್ಲಿನ ಅತಿದೊಡ್ಡ ಖಾಸಗಿ ಮಾನಸಿಕ ಆರೋಗ್ಯ ಸೇವಾ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ 200ಕ್ಕಿಂತ ಹೆಚ್ಚು ತಜ್ಞರಿದ್ದಾರೆ. ಅಮಹಾ ಸಂಸ್ಥೆಯ ಮೂಲಕ ಥೆರಪಿಸ್ಟ್‌ಗಳು ಹಾಗೂ ಮನೋವೈದ್ಯರು 600ಕ್ಕೂ ಹೆಚ್ಚು ನಗರಗಳಲ್ಲಿ ಆನ್‌ಲೈನ್‌ ಮೂಲಕ ಸೇವೆ ನೀಡುತ್ತಿದ್ದಾರೆ. ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಈ ಸಂಸ್ಥೆಯು ಎಂಟು ಕೇಂದ್ರಗಳನ್ನು ಹೊಂದಿದೆ. ಇತ್ತೀಚೆಗೆ ಅಮಹಾ ತನ್ನ ಮೊದಲ ವಿಶೇಷ ಮಾನಸಿಕ ಆರೋಗ್ಯ ಆಸ್ಪತ್ರೆಗೆ ಚಾಲನೆ ನೀಡಿದೆ.

ಅಮಹಾ ಹಾಗೂ ಚಿಲ್ಡ್ರನ್ ಫಸ್ಟ್ ಸಂಸ್ಥೆಗಳು ಜಂಟಿಯಾಗಿ ಸಂತ್ರಸ್ಥ ಕುಟುಂಬಗಳಿಗೆ ಜೀವನಪರ್ಯಂತ ಸೇವೆ ಸಲ್ಲಿಸುತ್ತಿವೆ. ಶಾಲೆಗಳು, ಸಮುದಾಯಗಳು ಮತ್ತು ಯುವಜನರ ಮಾನಸಿಕ ಆರೋಗ್ಯ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಿವೆ. ನೇಹಾ ಅವರು 2023ರಲ್ಲಿ ಸ್ಥಾಪಿತವಾದ ಇಂಡಿಯಾ ಮೆಂಟಲ್ ಹೆಲ್ತ್ ಅಲಯನ್ಸ್ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲೊಬ್ಬರು. ಈ ಸಂಸ್ಥೆಯು ಭಾರತದ ಮಾನಸಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ. ನೇಹಾ ಅವರು ಹೋಂಕಮಿಂಗ್ ಪುಸ್ತಕದ ಸಹಲೇಖಕಿಯೂ ಹೌದು.

ನೇಹಾ ಅವರಿಗೆ ಆಸ್ಪೆನ್ ಫೆಲೋ ಮತ್ತು ಐಸೆನ್‌ಹೋವರ್ ಫೆಲೋ ಗೌರವ ಸಹ ದೊರೆತಿದೆ. ಜೊತೆಗೆ ಎನ್‌ಡಿಟಿವಿಯ ಇಂಡಿಯನ್ ಆಫ್ ದಿ ಇಯರ್ ಪ್ರಶಸ್ತಿ, ಬಿಸಿನೆಸ್ ಟುಡೇಯ ಮೋಸ್ಟ್ ಪವರ್‌ಫುಲ್ ವುಮನ್ ಇನ್ ಬಿಸಿನೆಸ್ ಪ್ರಶಸ್ತಿ ಮತ್ತು ಭಾರತದ ರಾಷ್ಟ್ರಪತಿಗಳಿಂದ ಪ್ರದಾನವಾಗುವ ನಾರಿ ಶಕ್ತಿ ಪ್ರಶಸ್ತಿಯನ್ನೂ ಅವರು ಪಡೆದಿದ್ದಾರೆ.

ಡಾ. ನಂದಿನಿ ಮುರಳಿ ಪರಿಚಯ

ಡಾ. ನಂದಿನಿ ಮುರಳಿ ಅವರು ಲಿಂಗ ಸಂವೇದನಾಶೀಲ ಮಾನಸಿಕ ಆರೋಗ್ಯ ಹೋರಾಟಗಾರ್ತಿಯಾಗಿ ಹೆಸರುವಾಸಿಯಾಗಿದ್ದಾರೆ. ಅವರು ಆತ್ಮಹತ್ಯೆ ತಡೆಯುವಿಕೆಯಂತಹ ಕೆಲಸಗಳಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಪತಿಯ ಆತ್ಮಹತ್ಯೆಯ ನಂತರ, ಅವರು ಸ್ಪೀಕ್‌ (SPEAK) ಎಂಬ ವೇದಿಕೆಯನ್ನು ಸ್ಥಾಪಿಸಿದರು. ಇದು ಆತ್ಮಹತ್ಯೆ ಕುರಿತ ಸಂವಾದಗಳನ್ನು ಕೈಗೊಳ್ಳುತ್ತಿದೆ. ಜೊತೆಗೆ, ಸ್ಪೀಕ್‌ ಟು ಅಸ್‌ (SPEAK2US) ಎಂಬ ಸಂವೇದನಶೀಲ ಹೆಲ್ಪ್‌ಲೈನ್‌ನ್ನು ಆರಂಭಿಸಿದ್ದಾರೆ. ಅಲ್ಲದೆ ಪ್ರಾಜೆಕ್ಟ್ ಸ್ಪೀಕ್‌ (SPEAK) ಎಂಬ ಗ್ರಾಮೀಣ ಉಪಕ್ರಮವನ್ನೂ ಆರಂಭಿಸಿದ್ದಾರೆ. ಈ ಮೂಲಕ ಆತ್ಮಹತ್ಯೆಯ ಯತ್ನಗಳಿಂದ ಬಳಲಿದ 600 ಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯ ಹಸ್ತವನ್ನು ಚಾಚಿದ್ದಾರೆ.

ಲೈಫ್ ಕೋಚ್ ಆಗಿರುವ ಡಾ. ನಂದಿನಿ ಮುರಳಿ ಕಳೆದುಕೊಳ್ಳುವಿಕೆ (Loss) ಮತ್ತು ಕಂಡುಕೊಳ್ಳುವಿಕೆಯಂತಹ (transition) ಮಾನಸಿಕ ಪ್ರಕ್ರಿಯೆಗಳಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ಅವರು ಜೆಂಡರ್ ಸ್ಟಡೀಸ್‌ನಲ್ಲಿ ಪಿಎಚ್‌ಡಿ ಹಾಗೂ ಜೆಂಡರ್ ಅಂಡ್ ಡೆವಲಪ್ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಹೊಂದಿದ್ದಾರೆ. 'Left Behind: Surviving Suicide Loss' ಸೇರಿದಂತೆ ಹಲವಾರು ಪುಸ್ತಕಗಳ ಲೇಖಕಿಯಾಗಿರುವ ಅವರು, ಲೈಫ್ ಕೋಚಿಂಗ್ ಹಾಗೂ ಸಂವಹಣಗಳನ್ನು ಸಂಯೋಜಿಸುತ್ತಿದ್ದಾರೆ. ಭಾರತದಲ್ಲಿ ವ್ಯವಸ್ಥಾತ್ಮಕ ಮಾನಸಿಕ ಆರೋಗ್ಯ ಬದಲಾವಣೆ ತರುವಲ್ಲಿ ಅವರು ಪಾತ್ರ ದೊಡ್ಡದೆಂದೇ ಹೇಳಬಹುದು.

ವೆಸ್ಟ್‌ಲ್ಯಾಂಡ್ ಬುಕ್ಸ್ ಕುರಿತು

ವೆಸ್ಟ್‌ಲ್ಯಾಂಡ್ ಬುಕ್ಸ್ ಸಂಸ್ಥೆಯು ಹೆಸರಾಂತ ಭಾರತೀಯ ಪ್ರಕಾಶನ ಸಂಸ್ಥೆಯಾಗಿದೆ. ಇದು ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸಿದೆ. ಕಂಟೆಕ್ಸ್ಟ್‌, ಏಕದಾ, ಟ್ರಾನ್‌ಕ್ವಿಬಾರ್‌, ವೆಸ್ಟ್‌ಲ್ಯಾಂಡ್‌ ಸ್ಪೋರ್ಟ್ಸ್‌, ವೆಸ್ಟ್‌ಲ್ಯಾಂಡ್‌ ಬ್ಯೂಸಿನೆಸ್‌, ವೆಸ್ಟ್‌ಲ್ಯಾಂಡ್‌ ನಾನ್‌ ಫಿಕ್ಷನ್‌, ರೆಡ್‌ ಪಂಡಾ, ಇಂಡೀ ಪ್ರೆಸ್‌, ಇಫ್‌ ಹಾಗೂ ಕ್ವೀರ್‌ ಡಿರೆಕ್ಷನ್ಸ್‌ ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದ ಪ್ರಕಟಣೆಗಳನ್ನು ಮಾಡಿದೆ. ಇದು ಕಾದಂಬರಿ, ಮಕ್ಕಳ ಸಾಹಿತ್ಯ ಹಾಗೂ ಎಲ್‌ಜಿಬಿಟಿಕ್ಯೂ ಧ್ವನಿಯಾಗಿ ಕೆಲಸ ಮಾಡುತ್ತಿದೆ.

ಇಂಡಿಯಾ ಮೆಂಟಲ್ ಹೆಲ್ತ್ ಅಲಯನ್ಸ್ (IMHA) ಕುರಿತು

IMHA ಒಂದು ರಾಷ್ಟ್ರವ್ಯಾಪಿ ಹರಡಿಕೊಂಡಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯು 220ಕ್ಕೂ ಹೆಚ್ಚು ಶಿಕ್ಷಣ, ಆರೋಗ್ಯ, ಲಿಂಗ ಹಾಗೂ ಜೀವನೋಪಾಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳನ್ನು ಒಟ್ಟುಗೂಡಿಸಿದೆ. 2023ರಲ್ಲಿ ವಾಸ್ವಿ ಮತ್ತು ಅಶೀಷ್ ಭಾರತ್ ರಾಮ್ ಅವರಿಂದ, ಅಮಹಾ ಮತ್ತು ಚಿಲ್ಡ್ರನ್ ಫಸ್ಟ್ ಜೊತೆಗೂಡಿ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯ ಭಾರತದಲ್ಲಿ ಸಹಕಾರದ ಮಾನಸಿಕ ಆರೋಗ್ಯ ಪರಿಸರವನ್ನು ನಿರ್ಮಿಸುತ್ತಿದೆ.

ಮಾನಸಿಕ ಆರೋಗ್ಯ ವೃತ್ತಿಪರರು, ಸಂಸ್ಥೆಗಳು ಮತ್ತು ವ್ಯವಸ್ಥೆಗಳಿಗಾಗಿ 'lived experience' (ಜೀವನಾನುಭವ ಆಧಾರಿತ) ಪರಿಣತಿಯನ್ನು ಕೇಂದ್ರವಾಗಿಟ್ಟುಕೊಂಡ ತರಬೇತಿ ಕಾರ್ಯಕ್ರಮಗಳನ್ನು ಇದು ನೀಡುತ್ತದೆ. ಮೊದಲ ವರ್ಷದೊಳಗೆ 2000 ಕ್ಕೂ ಹೆಚ್ಚು ವೃತ್ತಿಪರರನ್ನು ಈ ಸಂಸ್ಥೆ ತಲುಪಿದೆ. IMHA ಯ ಮೊದಲ ವಾರ್ಷಿಕ ಸಮ್ಮೇಳನವು 2025ರ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿದೆ.

ಸಹಾಯಕ್ಕೆ ಒಂದು ಕರೆ ಮಾಡಿ

ಪೂರ್ಣ ಗೌಪ್ಯತಯಿಂದ ಕೂಡಿದ ವೃತ್ತಿಪರ ಸಮಾಲೋಚನಾ ಸೇವೆಗಳನ್ನು ಒದಗಿಸಲಾಗುತ್ತದೆ.

ಐಕಾಲ್‌ ಮಾನಸಿಕ ಆರೋಗ್ಯ ಸಹಾಯವಾಣಿ ಸಂಖ್ಯೆ: 9152987821

ಸೋಮವಾರದಿಂದ ಶನಿವಾರದ ವರೆಗೆ: ಬೆಳಿಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆಯ ವರೆಗೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+