ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿದೆ ನಾಯಿಗಳಿಗಾಗಿ ಲೈಬ್ರರಿ: ಏನಿದರ ವಿಶೇಷತೆ?

|
Google Oneindia Kannada News

ಗ್ರಂಥಾಲಯಗಳು ಅರಿವಿನ ಜ್ಞಾನದೀವಿಗೆಗಳು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಪುಸ್ತಕವನ್ನು ಓದಬಹುದು. ಆದರೆ ನಾಯಿಗಳಿಗೂ ಗ್ರಂಥಾಲಯವಿರುವುದು ನಿಮಗೆ ಗೊತ್ತಿದಿಯಾ? ನಾಯಿಗಳ ಗ್ರಂಥಾಲಯ ಅಂದರೆ ನಾಯಿಗಳು ಓದುತ್ತಾ? ಅವಕ್ಕಾಗಿ ಪುಸ್ತಕ ಇದಿಯಾ ಅಂತೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. USನಲ್ಲಿ ನಾಯಿಗಳಿಗಾಗಿ ವಿಶೇಷವಾಗಿ ಲೈಬ್ರರಿಯನ್ನು ಮಾಡಲಾಗಿದೆ.

ಟೋಬಿ ದ ಡಾಗ್ ಹೆಸರಿನ ಪ್ರೊಫೈಲ್‌ನಿಂದ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಸಣ್ಣ ಲೈಬ್ರರಿಯ ಚಿತ್ರವನ್ನು ತೋರಿಸುತ್ತದೆ. ಈ ಪೋಸ್ಟ್‌ನಲ್ಲಿ ಶೀರ್ಷಿಕೆ ಹೀಗಿದೆ- "ನಮ್ಮ ನೆರೆಹೊರೆಯ ನಾಯಿಗಳಿಗಾಗಿ ಗ್ರಂಥಾಲಯವನ್ನು ಮಾಡಲಾಗಿದೆ. ಆದರೆ ಇದರಲ್ಲಿ ಪುಸ್ತಕಗಳ ಬದಲಿಗೆ ಆಟಿಕೆಗಳು ಮತ್ತು ಕೋಲುಗಳನ್ನು ತುಂಬಿಸಲಾಗಿದೆ. ಪ್ರತಿಯೊಬ್ಬರೂ ಅದನ್ನು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ"ಎಂದು ಶೀರ್ಷಿಕೆ ವಿವರಿಸಿದೆ. ಲೈಬ್ರರಿಯ ಮೇಲೆ ಒಂದು ಸಣ್ಣ ಫಲಕವಿದ್ದು ಇದರಲ್ಲಿ, "ಒಂದು ತೆಗೆದುಕೊಳ್ಳಿ, ಒಂದನ್ನು ಬಿಡಿ" ಎಂದು ಬರೆಯಲಾಗಿದೆ.

ಪೋಸ್ಟ್ 20 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಮಡಿದೆ ಮತ್ತು ಅಧಿಕ ಪ್ರತಿಕ್ರಿಯೆಗಳನ್ನು ಹೊಂದಿದೆ. ಸಣ್ಣ ಲೈಬ್ರರಿಯ ಉಸ್ತುವಾರಿ ವಹಿಸಿದ್ದ ಡಾಗ್ಗೊ ಅವರ ಗ್ರಂಥಾಲಯವನ್ನು ಭೇಟಿ ಮಾಡಲು ಬಯಸುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

Heres the Library for Dogs: Whats so special?

ಅಫ್ಘಾನಿಸ್ತಾನದ ಭೂಕಂಪ ಬಳಿಕ ಕುಟುಂಬ ಹುಡುಕಿದ ನಾಯಿ

ಇನ್ನೂ ಪ್ರತ್ಯೇಕ ಘಟನೆಯಲ್ಲಿ ನಾಯಿಯ ಹೃದಯವಿದ್ರಾವಕ ಫೋಟೋವೊಂದು ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ. ಅಫ್ಘಾನಿಸ್ತಾನದ ಭೂಕಂಪದ ನಂತರ ಕುಟುಂಬ ಸದಸ್ಯರನ್ನು ಹುಡುಕುತ್ತಿರುವ ನಾಯಿಯ ಹೃದಯವಿದ್ರಾವಕ ಫೋಟೋ ನೆಟ್ಟಿಗರ ಮನ ಕರಗಿಸಿದೆ. ಅಫ್ಘಾನಿಸ್ತಾನದಲ್ಲಿ ಧ್ವಂಸಗೊಂಡ ಮನೆಗಳ ನಡುವೆ ನಾಯಿ ನಿಂತಿರುವುದನ್ನು ತೋರಿಸುವ ಫೋಟೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಇದನ್ನು ಸಮಿರಾ ಎಸ್‌ಆರ್ ಪೋಸ್ಟ್ ಮಾಡಿದ್ದಾರೆ.

"ಈ ನಾಯಿ ಕುಟುಂಬದ ಪ್ರತಿಯೊಬ್ಬರೂ ಭೂಕಂಪದಲ್ಲಿ ಸಾವನ್ನಪ್ಪಿದ್ದಾರೆ. ನೆರೆಹೊರೆಯವರು ಅದನ್ನು ಆಹಾರಕ್ಕಾಗಿ / ಆರೈಕೆಗಾಗಿ ತಮ್ಮೊಂದಿಗೆ ಕರೆದೊಯ್ದರು ಎಂದು ಹೇಳಿದರು. ಈ ನಾಯಿ ತನ್ನ ಕುಟುಂಬಸ್ಥರನ್ನು ಕಾಣದ ಆತಂಕಗೊಂಡಿದ" ಎಂದು ಫೋಟೋದ ಶೀರ್ಷಿಕೆ ಹೇಳುತ್ತದೆ. ನಾಯಿ ತನ್ನ ಮಾಲೀಕರಿಗಾಗಿ ಹತಾಶವಾಗಿ ಹುಡುಕುತ್ತಿರುವ ಹೃದಯ ವಿದ್ರಾವಕ ಚಿತ್ರದಿಂದ ಟ್ವಿಟರ್ ಬಳಕೆದಾರರು ಕಣ್ಣೀರು ಹಾಕಿದ್ದಾರೆ. ಜೊತೆಗೆ ಇವರಲ್ಲಿ ಹಲವರು ನಾಯಿಯನ್ನು ದತ್ತು ತೆಗೆದುಕೊಳ್ಳಲು ಸಹ ಮುಂದಾಗಿದ್ದಾರೆ.

ಅಫ್ಘಾನಿಸ್ತಾನದ ಪ್ರದೇಶದಲ್ಲಿ ಬುಧವಾರ ಮುಂಜಾನೆ (ಭಾರತೀಯ ಕಾಲಮಾನ) ಪ್ರಬಲ ಭೂಕಂಪ ಸಂಭವಿಸಿದೆ. ಭಾರತ ಮತ್ತು ಪಾಕಿಸ್ತಾನದಲ್ಲಿ ಕಂಪನದ ಅನುಭವವಾಗಿದೆ. 6.1 ತೀವ್ರತೆಯ ಭೂಕಂಪಕ್ಕೆ ಹತ್ತಾರು ಜನರು ಸಾವನ್ನಪ್ಪಿದರು ಮತ್ತು ಹಲವಾರು ಮನೆಗಳು ನಾಶವಾದವು. ಬಿಬಿಸಿ ಪ್ರಕಾರ, ಜನರು ಮಲಗಿದ್ದಾಗ ಖೋಸ್ಟ್ ನಗರದಿಂದ ಸರಿಸುಮಾರು 44 ಕಿಲೋಮೀಟರ್ ದೂರದಲ್ಲಿ 01:30 (21:00 GMT ಮಂಗಳವಾರ) ನಂತರ ಭೂಕಂಪ ಸಂಭವಿಸಿದೆ.

Recommended Video

ಅರ್ಜುನ್ ಜೊತೆ ವಾಟ್ ಜೊತೆಗಿರುವ ಫೋಟೋ ವೈರಲ್ | Oneindia Kannada

English summary
The library is made specifically for dogs in the US. What's so special Learn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X