ಕಳೆದು ತಿಂಗಳು ಮಾರುಕಟ್ಟೆಯಲ್ಲಿ ಹವಾ ಕ್ರಿಯೇಟ್‌ ಮಾಡಿರುವ ಕಾರ್‌ಗಳ ಪಟ್ಟಿ ಇಲ್ಲಿದೆ

ಮಾರುತಿ ಸುಜಕಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಿಗಿ ಹಿಡಿತವನ್ನು ಮುಂದುವರೆಸಿದೆ. ಪ್ರಸಕ್ತ ವರ್ಷದ ಆರಂಭದಲ್ಲಿ ಈ ಕಂಪನಿ ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾಗಿದೆ. ಈ ಕಂಪನಿ ಇತ್ತೀಚಿಗೆ ಹೊಸ ಮಾಡೆಲ್ ಕಾರನ್ನು ಪರಿಚಯಿಸಿತ್ತು. ಈ ಕಾರ್ ಮೇಲೆ ಗ್ರಾಹಕರ ಪ್ರೀತಿ ಹೆಚ್ಚಾಗಿದೆ. ಕಳೆದ ತಿಂಗಳೂ ಸಹ ಈ ಕಂಪನಿ ಮಾರುಕಟ್ಟೆಯಲ್ಲಿ ಕಮಾಲ್ ಮಾಡಿದೆ.

ಮಾರುತಿ ಸುಜುಕಿಯ ಇತ್ತೀಚೆಗೆ ಬಿಡುಗಡೆಯಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸ್ವಿಫ್ಟ್ ಮೇ 2024 ರಲ್ಲಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್‌ ಕಾರ್‌ಗಳ ಅಬ್ಬರ ಜೋರಾಗಿದೆ. ಮಾರುಕಟ್ಟೆಯಲ್ಲಿರುವ ಹಲವು ಜನಪ್ರೀಯ ಕಾರ್‌ಗಳ ಪೈಪೋಟಿಯಲ್ಲಿ ಗ್ರಾಹಕ ಈ ಕಾರ್‌ನ್ನು ಕೊಳ್ಳಲು ಹೆಚ್ಚಾಗಿ ಮನಸ್ಸು ಮಾಡಿದ್ದಾನೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

Here is the list of Top 5 cars created Treand in the market last month

ಟಾಟಾ ಪಂಚ್, ಮಾರುತಿ ಸುಜುಕಿ ಡಿಜೈರ್, ಹ್ಯುಂಡೈ ಕ್ರೆಟಾ, ವ್ಯಾಗನ್ಆರ್, ಮಾರುತಿ ಬ್ರೆಝಾ ಜೊತೆಗೆ ಮಾರುತಿ ಬ್ರೆಝಾ, ಮಾರುತಿಯಂತಹ ವಿವಿಧ ಕಂಪನಿಯ ಕಾರ್‌ಗಳ ಜೊತೆ ಸ್ಪರ್ಧೆ ನಡೆಸಿದ್ದ ಈ ಕಾರ್ ಅತಿ ಹೆಚ್ಚು ಸೇಲ್ ಆದ ನಂಬರ್ 1 ಕಾರ್ ಎಂಬ ಖ್ಯಾತಿ ಪಡೆದಿದೆ. ಹಾಗಿದ್ದಾರೆ, ಈ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಐದು ಕಾರಗಳ ಪಟ್ಟಿ ಇಲ್ಲಿದೆ.

ಅತಿ ಹೆಚ್ಚು ಸೇಲ್‌ ಆದ ಕಾರ್‌

ಅತಿ ಹೆಚ್ಚು ಸೇಲ್‌ ಆದ ಕಾರ್‌ಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಅತ್ಯಂತ ಜನಪ್ರೀಯ ಫ್ಯಾಮಿಲಿ ಕಾರ್ ವ್ಯಾಗನ್ಆರ್ ಕಳೆದ ತಿಂಗಳು ಮಾರಾಟದ ವಿಷಯದಲ್ಲಿ 5 ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಈ ಕಾರುಗಳ ಸುಮಾರು 14492 ಮಾರಾಟವಾಗಿವೆ.

Here is the list of Top 5 cars created Treand in the market last month

ಹುಂಡೈ ಮೋಟಾರ್‌ನ ಕ್ರೆಟಾ SUV ಮೇ 2024 ರಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ತಿಂಗಳು 14662 ಕಾರ್‌ಗಳನ್ನು ಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಟಾಪ್‌ ಮೂರು ಸ್ಥಾನದಲ್ಲಿರುವ ಕಾರ್ ಯಾವವು?

ಮಾರುತಿ ಸುಜುಕಿ ಡಿಜೈರ್ ಕಳೆದ ಮೇ ತಿಂಗಳಲ್ಲಿ ಮೂರನೇ ಅತಿ ಹೆಚ್ಚು ಮಾರಾಟವಾದ ಕಾರು ಮತ್ತು ಇದನ್ನು 16,061 ಗ್ರಾಹಕರು ಖರೀದಿಸಿದ್ದಾರೆ. ಮಾರುತಿ ಡಿಜೈರ್ ಮಾರಾಟವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 42 ಪ್ರತಿಶತದಷ್ಟು ಹೆಚ್ಚಾಗಿದೆ.

Here is the list of Top 5 cars created Treand in the market last month

ದೇಶದ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಟಾಟಾ ಪಂಚ್ ಸ್ಥಾನ ಪಡೆದಿದೆ. ಟಾಟಾ ಪಂಚ್ ಅನ್ನು ಕಳೆದ ತಿಂಗಳು 18,949 ಗ್ರಾಹಕರು ಖರೀದಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಿಗೆ ಹೋಲಿಸಿದರೆ ಈ ವರ್ಷ ಮೇ ತಿಂಗಳಲ್ಲಿ ಟಾಟಾ ಪಂಚ್ ಮಾರಾಟದಲ್ಲಿ ವಾರ್ಷಿಕ ಶೇ.70 ರಷ್ಟು ಹೆಚ್ಚಳವಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರ್‌ ಮೇ ನಲ್ಲಿ19393 ಕಾರ್‌ಗಳು ಸೇಲ್ ಆಗಿವೆ. ಕಳೆದ ವರ್ಷ ಇದೇ ತಿಂಗಳು ಕಂಪನಿ 17,346 ಯೂನಿಟ್‌ಗಳ ಸ್ವಿಫ್ಟ್‌ಗಳು ಮಾರಾಟ ಮಾಡಿತ್ತು. ನೂತನ ಹಿಚ್‌ ಬ್ಯಾಕ್‌ ಕಾರು ಮಾರಾಟದಿಂದ ಕಂಪನಿಗೆ ಶೇಕಡಾ 12 ರಷ್ಟು ಹೆಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+