ವಿಚಿತ್ರ ಫ್ಯಾಷನ್; ಶೂ ಒಳಗೆ ಬಿಯರ್ ಹಾಕಿ ಮಾರಾಟ..

ಇಂದಿನ ಜನರೇಷನ್ ತುಂಬಾ ವಿಚಿತ್ರ ಫ್ಯಾಷನ್‌ ಮಾಡಲು ಮುಂದಾಗುತ್ತಿದ್ದಾರೆ, ಇದಕ್ಕೆ ಪೂರಕವಾಗಿ ಉಡುಗೆ ತೊಡುಗೆಗಳ ಕಂಪನಿಗಳು ಕೂಡ ವಿಚಿತ್ರ ಫಾಷನ್‌ವುಳ್ಳ ಪ್ರಾಡಕ್ಟ್‌ಗಳನ್ನು ನೀಡುವಲ್ಲಿ ಹೆಸರು ಮಾಡುತ್ತಿವೆ. ಹೌದು, ಇಲ್ಲೂಂದು ಕಂಪನಿಯು ನೀವೂ ಮದ್ಯಪಾನವನ್ನು ಇಷ್ಟಪಡುವವರಾಗಿದ್ದರೆ ಈ ಸುದ್ದಿ ನಿಮಗೆ ತುಂಬಾ ಕಿಕ್ ಕೊಡುತ್ತದೆ.

ನಿಮಗೆ ಅನೇಕ ಬ್ರಾಂಡ್ ಮದ್ಯದ ಬಗ್ಗೆ ತಿಳಿದಿರುತ್ತದೆ, ಅವುಗಳ ವಿಚಿತ್ರ ಪ್ಯಾಕಿಂಗ್ ಬಗ್ಗೆಯೂ ನಿಮಗೆ ತಿಳಿದಿರುತ್ತದೆ, ಆದರೆ ಈ ಕಂಪನಿಯೊಂದು ಶೂಗಳಲ್ಲಿ ಮದ್ಯವನ್ನು ಮಾರಾಟ ಮಾಡುತ್ತದೆ! ಎಂದು ನಿಮಗೆ ತಿಳಿದಿದೆಯೇ? ಅಷ್ಟೇ ಅಲ್ಲ ಜನ ಕೂಡ ಆಸಕ್ತಿಯಿಂದ ಖರೀದಿಸುತ್ತಿದ್ದಾರೆ.

ಹೌದು, ನಿಮಗೂ ಆಲ್ಕೋಹಾಲ್ ಕುಡಿಯುವುದು ಇಷ್ಟವಾಗಿದ್ದರೆ, ನೀವು ಪ್ರಸಿದ್ಧ ಬಿಯರ್ ಕಂಪನಿ "ಹೈನೆಕೆನ್" ಹೆಸರನ್ನು ಕೇಳಿರಬೇಕು. ಇಲ್ಲದಿದ್ದರೆ, ಈ ಕಂಪನಿಯು ಬಿಯರ್ ತಯಾರಿಸುತ್ತದೆ ಮತ್ತು ಅದರ ಬಿಯರ್ ಖರೀದಿಸಲು ಜನರಲ್ಲಿ ಪೈಪೋಟಿ ಇದೆ. ವಿಶೇಷವೆಂದರೆ ಈ ಕಂಪನಿಯು ತನ್ನ ಬಿಯರ್ ಅನ್ನು ಶೂಗಳಲ್ಲಿ ಹಾಕುವ ಮೂಲಕ ಮಾರಾಟ ಮಾಡುತ್ತಿದೆ. ಹೀಗಿದ್ದರೂ ಜನರು ಈ ಮದ್ಯವನ್ನು ಮನಬಂದಂತೆ ಖರೀದಿಸುತ್ತಿದ್ದಾರೆ. ಸ್ನಿಕರ್ಸ್ ಉತ್ಸಾಹಿಗಳು ಸಾವಿರಾರು ರೂಪಾಯಿ ಖರ್ಚು ಮಾಡಲು ಸಿದ್ಧರಾಗಿದ್ದಾರೆ. ಜನರು ಇದನ್ನು ಹೈನೆಕಿಕ್ಸ್ ಎಂದು ಕರೆಯುತ್ತಾರೆ, ಹೈನೆಕೆನ್ ಅಲ್ಲ!

 ಬಿಯರ್ ಬ್ರ್ಯಾಂಡ್ ಹೈನೆಕೆನ್‌ನ ಚಮತ್ಕಾರಿ ಶೂಗಳು

ಬಿಯರ್ ಬ್ರ್ಯಾಂಡ್ ಹೈನೆಕೆನ್‌ನ ಚಮತ್ಕಾರಿ ಶೂಗಳು

ಈ ಚಮತ್ಕಾರಿ ಶೂಗಳನ್ನು ಬಿಯರ್ ಬ್ರ್ಯಾಂಡ್ ಹೈನೆಕೆನ್ ಬಿಡುಗಡೆ ಮಾಡಿದೆ ಮತ್ತು ಇದನ್ನು ಹೈನೆಕಿಕ್ಸ್ ಎಂದು ಕರೆಯಲಾಗುತ್ತದೆ. ಈಗ ಈ ಶೂಗಳು ಪ್ರಪಂಚದಾದ್ಯಂತ ಚರ್ಚೆಯನ್ನು ಸೃಷ್ಟಿಸುತ್ತಿವೆ. ಖ್ಯಾತ ಡಿಸೈನರ್ ಡೊಮಿನಿಕ್ ಸಿಯಾಂಬ್ರೋನ್ ಅಕಾ ಶೂ ಸರ್ಜನ್ ಅವರ ಸಹಾಯದಿಂದ ಕಸ್ಟಮೈಸ್ ಮಾಡಿದ ಶೂಗಳನ್ನು ಬಿಯರ್ ಬ್ರಾಂಡ್ ಬಿಡುಗಡೆ ಮಾಡಿದೆ.

 ಸ್ಮಾರ್ಟ್ ಜೋಡಿ ಶೂಗಳನ್ನು ತಯಾರಿಸಿದೆ

ಸ್ಮಾರ್ಟ್ ಜೋಡಿ ಶೂಗಳನ್ನು ತಯಾರಿಸಿದೆ

ಬಿಯರ್ ಕಂಪನಿಯು ಸ್ಮಾರ್ಟ್ ಜೋಡಿ ಶೂಗಳ ಮೊದಲ ನೋಟವನ್ನು ಟ್ವೀಟ್ ಮೂಲಕ ಹಂಚಿಕೊಂಡಿದೆ. ಕಂಪನಿಯು ಹೀಗೆ ಬರೆದಿದೆ- 'ಹೈನೆಕೆನ್ ಸಿಲ್ವರ್‍‌ನ್ನು ಸೋಲ್‌ನಲ್ಲಿ ನಿಮಗಾಗಿ ವಿನ್ಯಾಸಗೊಳಿಸಲಾಗಿದೆ, ಅದರ ಮೃದುತ್ವವನ್ನು ಈಗ ಹತ್ತಿರದಿಂದ ನೋಡಬಹುದು.

ಇದನ್ನು ಖ್ಯಾತ ಡಿಸೈನರ್ ಡೊಮಿನಿಕ್ ಸಿಯಾಂಬ್ರಾನ್ ಅವರ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಹೈನೆಕಿಕ್ಸ್ ನಿಮ್ಮ ದೈನಂದಿನ ಶೂ ಅಲ್ಲ, ಆದರೆ ನೀವು ಈ ರೀತಿ ಪ್ರತಿದಿನ ಬಿಯರ್‌ನಲ್ಲಿ ಕೂಡಿರುವ ಶೂ ಆಗಿದೆ.

 ಮಾರುಕಟ್ಟೆಗೆ ಸೀಮಿತ ಆವೃತ್ತಿ

ಮಾರುಕಟ್ಟೆಗೆ ಸೀಮಿತ ಆವೃತ್ತಿ

ಕಂಪನಿಯು ತನ್ನ ಸೀಮಿತ ಆವೃತ್ತಿಯ ಮೂಲಕ ಮಾತ್ರ ಅಂತಹ ಶೂಗಳನ್ನು ಬಿಡುಗಡೆ ಮಾಡುತ್ತದೆ. ಈ ಶೂಗಳು ಹಸಿರು ಮತ್ತು ಕೆಂಪು ಎರಡು ಬಣ್ಣಗಳಲ್ಲಿ ಲಭ್ಯವಿದೆ. ಇದರೊಂದಿಗೆ ಅವುಗಳಲ್ಲಿ ಬಿಳಿ ಬಣ್ಣದ ಹೊಂದಾಣಿಕೆಯನ್ನು ಮಾಡಲಾಗಿದೆ. ಆದರೆ ಈ ಶೂಗಳನ್ನು ಮಾರುಕಟ್ಟೆಗೆ ಮಾರಾಟ ಮಾಡಲು ಸೀಮಿತ ಆವೃತ್ತಿಯೊಂದಿಗೆ ಮಾತ್ರ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.

 ಸಾಮಾಜಿಕ ಜಾಲತಾಣದಲ್ಲಿ ಸಕತ್‌ ಸದ್ದು

ಸಾಮಾಜಿಕ ಜಾಲತಾಣದಲ್ಲಿ ಸಕತ್‌ ಸದ್ದು

ಏಜೆನ್ಸಿಗಳ ಪ್ರಕಾರ, ವಿಶೇಷ ಶಸ್ತ್ರಚಿಕಿತ್ಸಾ ಚುಚ್ಚುಮದ್ದನ್ನು ಬಳಸಿ ಚುಚ್ಚುಮದ್ದಿನ ಮೂಲಕ ಬಿಯರ್ ತುಂಬಿಸಲಾಗಿದೆ ಸ್ನೀಕರ್ಸ್ ಲೋಹದ ಬಾಟಲ್ ಓಪನರ್‍‌ನ್ನು ಸಹ ಹೊಂದಿದೆ. ಎಂದಿನಂತೆ ವಿಚಿತ್ರ ಜೋಡಿ ಶೂಗಳು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಇನ್ನು ಈ ಶೂಗಳನ್ನು ಹಾಕಿಕೊಂಡರೆ ಸಾಕು ನಾವು ನಶೆಯಿಂದ ತೆಲಾಡುತ್ತೇವೆ ಎಂಬ ಟ್ರೋಲ್‌ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ಸದ್ದುಮಾಡುತ್ತಿವೆ.

Recommended Video

      ಮುಖ್ಯಮಂತ್ರಿ ಬೊಮ್ಮಾಯಿಗೆ ಕೊರೋನಾ ಮೋದಿ ಮೀಟಿಂಗ್ ಕ್ಯಾನ್ಸಲ್ | *Politics | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+