Health Tips: ಮಕ್ಕಳ ಕೆಮ್ಮು-ನೆಗಡಿಗೆ ಈ ಐದು ಮನೆಮದ್ದು ರಾಮಬಾಣ
ಬೆಳಗ್ಗೆ ಚಳಿ, ಮಧ್ಯಾಹ್ನ ರಣ ಬಿಸಿಲು, ಸಂಜೆ ಮಳೆ ಹೀಗಾಗಿದೆ ಸದ್ಯದ ವಾತಾವರಣದ ಪರಿಸ್ಥಿತಿ. ಹೀಗಾಗಿ ನೆಗಡಿ, ಕೆಮ್ಮು, ಜ್ವರದಂತಹ ಕಾಯಿಲೆಗಳು ಹೆಚ್ಚಾಗುತ್ತಿದೆ. ಜ್ವರ ಕಡಿಮೆಯಾದರೂ ಕೂಡ ನೆಗಡಿ, ಕೆಮ್ಮು ಕಾಡುತ್ತಲೇ ಇರುತ್ತದೆ. ಇನ್ನು ಇತ್ತಿಚಿನ ದಿನಗಳಲ್ಲಿ ಮಕ್ಕಳಲ್ಲಿ ನೆಗಡಿ, ಕೆಮ್ಮು ಇಲ್ಲದ ದಿನಗಳು ಇಲ್ಲ ಎನ್ನುವಂತಾಗಿದೆ.
ಹವಾಮಾನ ಬದಲಾವಣೆಯಿಂದ ಬರುವ ಕಾಯಿಲೆಗಳು ಅಷ್ಟು ಸುಲಭವಾಗಿ ಹೋಗುವುದಿಲ್ಲ. ಮಕ್ಕಳಿಗೆ ಸಾಂಕ್ರಾಮಿಕವಾಗಿ ಹರಡಿ ಬಂದ ಜ್ವರದಂತಹ ರೋಗಗಳು ಅಪಾಯಕಾರಿ. ವೈದ್ಯರ ಚಿಕಿತ್ಸೆಯಿಂದ ಜ್ವರ ಕಡಿಮೆಯಾದರೂ ಕೆಮ್ಮು ನೆಗಡಿ ಕಡಿಮೆಯಾಗುವುದೇ ಇಲ್ಲ. ಧೂಳಿನಲ್ಲಿ ಆಡುವುದು, ತಣ್ಣೀರು ಕುಡಿಯುವುದು, ಐಸ್‌ಕ್ರೀಮ್ ಜ್ಯೂಸ್ ಸೇವಿಸುವುದು ಇವುಗಳಿಂದ ಮಕ್ಕಳನ್ನು ದೂರವಿಡುವುದು ಕಷ್ಟ. ಹೀಗಾಗಿ ಮಕ್ಕಳ ಬೆನ್ನತ್ತಿದ ಕೆಮ್ಮು-ನೆಗಡಿ ಕಡಿಮೆಯಾವುದೇ ಇಲ್ಲ.
ವೈದ್ಯರು ನೀಡುವ ಮಾತ್ರೆ, ಸಿರಪ್‌ಗಳಿಂದ ಕೆಮ್ಮು ಹತೋಟಿಗೆ ಬರಬಹುದು. ಜೊತೆಗೆ ಅವುಗಳ ಅಡ್ಡಪರಿಣಾಮಗಳು ಕೂಡ ಆರಂಭವಾಗುತ್ತದೆ. ಹೀಗಾಗಿ ನೆಗಡಿ, ಕೆಮ್ಮುವಿನಂತಹ ರೋಗಗಳಿಗೆ ಮನೆಮದ್ದು ಬಳಸುವುದು ಉತ್ತಮ. ನಮ್ಮ ಅಡುಗೆ ಮನೆಯಲ್ಲಿ ಹಾಗೂ ಮನೆಯ ಸುತ್ತಮುತ್ತ ಸಿಗುವ ಗಿಡಗಳ ಎಲೆಯಿಂದ ತಯಾರಿಸಿದ ಔಷಧಿಗಳೇ ಕೆಮ್ಮುವಿಗೆ ರಾಮಬಾಣ. ಹಾಗಾದರೆ ಮಕ್ಕಳ ಕೆಮ್ಮು ನಿವಾರಣೆಗೆ ಏನು ಮಾಡಬೇಕು..? ಇಲ್ಲಿದೆ ಸರಳ ವಿಧಾನಗಳು.
ಶುಂಠಿ
ಕೆಮ್ಮು-ನೆಗಡಿಗೆ ಶುಂಠಿ ರಾಮಬಾಣ. ಬಹುತೇಕ ಎಲ್ಲಾ ಕಷಾಯಗಳಿಗೂ ಶುಂಠಿ ಬಳಸಲಾಗುತ್ತದೆ. ಬೇರೆ ಎಲ್ಲಾ ಮನೆಮದ್ದಿನ ವಸ್ತುಗಳ ಜೊತೆ ಶುಂಠಿಯನ್ನು ಬಳಸಲಾಗುತ್ತದೆ. ಆದರೆ ಶುಂಠಿ ಮಾತ್ರ ಬಳಸಿ ಕೆಮ್ಮುವನ್ನು ಓಡಿಸಬಹುದು. ಮೊದಲು ಒಂದು ಸಣ್ಣ ಗಾತ್ರದ ಶುಂಠಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಬಳಿಕ ಒಂದು ತೆಂಗಿನ ಚಿಪ್ಪನ್ನು ತೆಗೆದುಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ಶುಂಠಿಯನ್ನು ಚೆನ್ನಾಗಿ ಜಜ್ಜಿ ರಸವನ್ನು ತೆಂಗಿನ ಚಿಪ್ಪಿನಲ್ಲಿ ಇಡಿ.
ಸುಮಾರು ಐದರಿಂದ ಆರು ಗಂಟೆಯ ಬಳಿಕ ಆ ತೆಂಗಿನ ಚಿಪ್ಪಿನಲ್ಲಿದ್ದ ಶುಂಠಿ ರಸವನ್ನು ಗಮನಿಸಿ. ಎರಡು ಪದರದ ರೀತಿ ಶುಂಠಿ ರಸವು ಕಂಡುಬರುತ್ತದೆ. ಮೇಲಿನ ನೀರಿನಂತಹ ರಸವನ್ನು ತೆಗೆದು ಮಕ್ಕಳಿಗೆ ಕುಡಿಸಬೇಕು. ಈ ರಸವನ್ನು ತೆಗೆಯುವಾಗ ಎಚ್ಚರವಿರಲಿ. ಯಾವುದೇ ಕಾರಣಕ್ಕೂ ಮೇಲಿನ ನೀರಿನಂತಹ ರಸ ಹಾಗೂ ಕೆಳಗಿನ ಗಟ್ಟಿ ರಸ ಮಿಶ್ರಣವಾಗಬಾರದು. ಗಟ್ಟಿ ರಸವನ್ನು ಬಳಿಕ ಎಸೆಯಬೇಕು. ಮುಖ್ಯವಾಗಿ ಈ ಔಷಧಿಯನ್ನು ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗಷ್ಟೇ ನೀಡಬೇಕು.

ಓಂ ಕಾಳು ಮತ್ತು ಬೆಳ್ಳುಳ್ಳಿ
ಅಜ್ವಾನ ಕಾಳು ಅಥವಾ ಓಂ ಕಾಳು ಬಹುಪಯೋಗಿ. ಕೆಮ್ಮು, ಕಫಕ್ಕೆ ಕೂಡ ಉತ್ತಮ ಔಷಧಿ. ಮೊದಲು ಎರಡು ಚಮಚ ಓಂ ಕಾಳುಗಳನ್ನು ಹಾಗೂ ಎರಡರಿಂದ ಮೂರು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಸಣ್ಣ ಉರಿಯ ಬೆಂಕಿಯಲ್ಲಿ ತವದ ಮೇಲೆ ಹಾಕಿ ಬಿಸಿ ಮಾಡಿಕೊಳ್ಳಿ. ಬಳಿಕ ಶುಭ್ರವಾದ ಬಟ್ಟೆಯಿಂದ ಅವುಗಳನ್ನು ಸುತ್ತಿ. ಬೆಚ್ಚಗಿನ ಬಿಸಿಯಲ್ಲಿ ಮಗುವಿನ ಎದೆ ಭಾಗ, ಕುತ್ತಿಗೆ, ಕೈಯ ಕೆಳ ಭಾಗ, ಬೆನ್ನಿನ ಮೇಲೆ ಇರಿಸಿ. ಬೆಳ್ಳುಳ್ಳಿ, ಓಂ ಕಾಳಿನ ಬೆಚ್ಚಗಿನಿ ಬಿಸಿ ಮಗುವಿಗೆ ತಾಕುವರೆಗೂ ಒಂದು ಎರಡರಿಂದ ಮೂರು ನಿಮಿಷಗಳ ಕಾಲ ಇರಿಸಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಕಫ ಕರಗುತ್ತದೆ. ಇದನ್ನು ಮೂರು ತಿಂಗಳ ಮಗುವಿನಿಂದ ಎಲ್ಲಾ ಪ್ರಾಯದ ಮಕ್ಕಳಿಗೂ ಮಾಡಬಹುದು.
ದೊಡ್ಡ ಪತ್ರೆ
ಮನೆಯಂಗಳದಿ ಬೆಳೆಯುವ ಗಿಡ ದೊಡ್ಡ ಪತ್ರೆ. ಈ ಗಿಡವು ಹೆಚ್ಚಿನ ಆರೈಕೆ ಇಲ್ಲದೇ ಸುಲಭವಾಗಿ ಬೆಳೆಯುತ್ತದೆ. ಹೀಗಾಗಿ ಮನೆಯಲ್ಲಿ ದೊಡ್ಡ ಪತ್ರೆಯ ಗಿಡಗಳನ್ನು ಬೆಳೆಸುವುದು ಉತ್ತಮ. ಕೆಮ್ಮು ಹಾಗೂ ಕಫದಿಂದ ಬಳಲುತ್ತಿರುವ ಮಕ್ಕಳಿಗೆ ದೊಡ್ಡ ಪತ್ರೆಯ ರಸ ಕುಡಿಸಬಹುದು. ಗಿಡದಿಂದ ಕಿತ್ತುತಂದ ದೊಡ್ಡ ಪತ್ರೆಯ ಎಲೆಗಳನ್ನು ಚೆನ್ನಾಗಿ ತೊಳೆದು ನೀರು ಆರಿದ ಮೇಲೆ, ಅವುಗಳನ್ನು ಬಿಸಿ ಮಾಡಿ ರಸ ತೆಗೆಯ ಬೇಕು. ಬಳಿಕ ದೊಡ್ಡ ಪತ್ರೆಯ ರಸಕ್ಕೆ ಜೇನುತುಪ್ಪ ಸೇರಿಸಿ ಮಕ್ಕಳಿಗೆ ನೀಡಬೇಕು.

ಈರುಳ್ಳಿ
ಕೆಮ್ಮು-ಕಫಕ್ಕೆ ಈರುಳ್ಳಿ ರಾಮಬಾಣ. ಈರುಳ್ಳಿಯನ್ನು ಹಸಿಯಾಗಿ ತಿನ್ನುವುದರಿಂದಲೂ ಕೆಮ್ಮು ಕಡಿಮೆಯಾಗುತ್ತದೆ. ಬದಲಿಗೆ ಈರುಳ್ಳಿಯನ್ನು ಚೆನ್ನಾಗಿ ತೊಳೆದು, ಕೆಂಡದಲ್ಲಿ ಸುಟ್ಟು ಅರೆಬೆಂದ ನಂತರ ತಣಿಸಿ ಬೆಲ್ಲದೊಂದಿಗೆ ಮಕ್ಕಳಿಗೆ ನೀಡಿದರೆ ಕೆಮ್ಮು ಕಡಿಮೆಯಾಗುತ್ತದೆ. ಇಲ್ಲವಾದರೆ ಹಸಿ ಈರುಳ್ಳಿಗೆ ಸಹ ಬೆಲ್ಲವನ್ನು ಬೆರೆಸಿ ತಿಂದರೆ ಕಫ ಕರಗಿ ಕೆಮ್ಮು ಕಡಿಮೆಯಾಗುತ್ತದೆ.

ತುಂಬೆ ಗಿಡ
ಯಾವುದೇ ಆರೈಕೆ ಇಲ್ಲದೆ ಬೆಳೆಯುವ ಗಿಡ ತುಂಬೆ ಸೊಪ್ಪು. ಶಿವನಿಗೆ ಪ್ರಿಯವಾದ ಈ ಸೊಪ್ಪು ಅತ್ಯುತ್ತಮ ಮನೆಮದ್ದು ಕೂಡ ಹೌದು. ಹಲವು ಕಾಯಿಲೆಗಳಿಗೆ ಈ ತುಂಬೆ ಗಿಡ ರಾಮಬಾಣ. ಗದ್ದೆ ಹಾಗೂ ತಂಪಿನ ಪ್ರದೇಶದಲ್ಲಿ ತುಂಬೆ ಗಿಡ ಬೆಳೆಯುತ್ತದೆ. ತುಂಬೆ ಗಿಡ ಸರಿಯಾಗಿ ಆಯ್ದು ತಂದು ತುಂಬೆ ಗಿಡದ ಸೊಪ್ಪುಗಳನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಸಿದರೆ ಮಕ್ಕಳಿಗೆ ಕೆಮ್ಮು ಕಡಿಮೆಯಾಗುತ್ತದೆ.
-
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ












Click it and Unblock the Notifications