• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನುಷ್ಯನನ್ನು ಉಳಿಸುವ ಕೋವಿಡ್ ಲಸಿಕೆಗಾಗಿ ಶಾರ್ಕ್‌ಗಳ ಮಾರಣಹೋಮ?

|

ನವದೆಹಲಿ, ಸೆಪ್ಟೆಂಬರ್ 30: ಇಡೀ ಜಗತ್ತಿಗೆ ಕೋವಿಡ್-19 ಲಸಿಕೆಯ ಮೂಲಕ ಪ್ರತಿರಕ್ಷೆ ನೀಡಲು ಐದಾರು ಲಕ್ಷ ಶಾರ್ಕ್‌ಗಳನ್ನು ಕೊಲ್ಲಬೇಕಾಗಬಹುದು ಎಂದು ಶಾರ್ಕ್ ಸಂರಕ್ಷಣೆಯ ಬೆಂಬಲದ ಗುಂಪೊಂದು ಆತಂಕ ವ್ಯಕ್ತಪಡಿಸಿದೆ.

ಶಾರ್ಕ್‌ಗಳಲ್ಲಿ ನೈಸರ್ಗಿಕ ತೈಲ ಇರುವುದರಿಂದ ಕೋವಿಡ್ ಲಸಿಕೆಗಳ ತಯಾರಿಕೆಗೆ ಅವುಗಳನ್ನು ಕೊಲ್ಲಲಾಗುತ್ತಿದೆ. ಸ್ಕ್ವಾಲೆನ್ ಎಂದು ಕರೆಯಲಾಗುವ ನೈಸರ್ಗಿಕ ತೈಲವನ್ನು ಔಷಧಗಳಲ್ಲಿ ಸಹಾಯಕ ಪದಾರ್ಥವಾಗಿ ಪ್ರಸ್ತುತ ಬಳಸಲಾಗುತ್ತಿದೆ. ಇದು ಪ್ರತಿರಕ್ಷಣಾ ಸ್ಪಂದನೆಯನ್ನು ಸೃಷ್ಟಿಸುವ ಮೂಲಕ ಲಸಿಕೆಗಳ ಪರಿಣಾಮವನ್ನು ಹೆಚ್ಚಿಸಲಿದೆ. ಒಂದು ಟನ್ ಸ್ಕ್ವಾಲೆನ್ ತೆಗೆಯಲು ಸುಮಾರು 3,000 ಶಾರ್ಕ್‌ಗಳು ಬೇಕಾಗುತ್ತವೆ.

ಕರ್ನಾಟಕದಲ್ಲಿ ಹೆಚ್ಚಾದ ಕೊರೊನಾ: ಲಾಕ್‌ಡೌನ್ ಜಾರಿಯಿಲ್ಲ ಆದರೆ ಗಮನಿಸಿ!

ಸ್ಕ್ವಾಲೆನ್ ತೈಲ ಹೊಂದಿರುವ ಕೋವಿಡ್- 19 ಲಸಿಕೆಯ ಒಂದು ಡೋಸ್ ಮೂಲಕ ಜಗತ್ತಿನಲ್ಲಿ ಪ್ರತಿಯೊಬ್ಬರಲ್ಲಿಯೂ ಪ್ರತಿರಕ್ಷಕ ಸಾಮರ್ಥ್ಯವನ್ನು ಹೆಚ್ಚಿಸಲು ಸುಮಾರು 2,50,000 ಶಾರ್ಕ್‌ಗಳನ್ನು ಹತ್ಯೆ ಮಾಡಬೇಕಾಗುತ್ತದೆ. ಇದು ಕೋವಿಡ್ ಲಸಿಕೆಯಲ್ಲಿ ಬಳಸುವ ಸ್ಕ್ವಾಲೆನ್‌ನ ಪ್ರಮಾಣವನ್ನು ಅವಲಂಬಿಸಿದೆ. ಎರಡು ಡೋಸ್‌ಗಳಷ್ಟು ಲಸಿಕೆ ನೀಡಬೇಕಾದರೆ ಶಾರ್ಕ್ ಹತ್ಯೆ ಪ್ರಮಾಣ ದುಪ್ಪಟ್ಟಾಗಬೇಕಾಗುತ್ತದೆ ಎಂದು ಕ್ಯಾಲಿಫೋರ್ನಿಯಾ ಮೂಲದ ಶಾರ್ಕ್ ಅಲೀಸ್ ಗುಂಪು ತಿಳಿಸಿದೆ. ಮುಂದೆ ಓದಿ...

ನಾಶವಾಗುವ ಭೀತಿ

ನಾಶವಾಗುವ ಭೀತಿ

ಸ್ಕ್ವಾಲೆನ್ ಪ್ರಮಾಣ ಅತ್ಯಧಿಕವಾಗಿರುವ ಗುಲ್ಪರ್ ಶಾರ್ಕ್ ಮತ್ತು ಬಾಸ್ಕಿಂಗ್ ಶಾರ್ಕ್‌ ತಳಿಗಳನ್ನು ಲಸಿಕೆ ತಯಾರಿಕೆಗೆ ಪ್ರಮುಖವಾಗಿ ಗುರಿಯನ್ನಾಗಿರಿಸಲಾಗುತ್ತದೆ. ಆದರೆ ಈ ತಳಿಗಳು ಸಂಕಷ್ಟದಲ್ಲಿವೆ. ಅಂದರೆ ಅವುಗಳ ಸಂಖ್ಯೆ ಈಗಾಗಲೇ ಕಡಿಮೆಯಾಗುತ್ತಿದೆ. ಹೀಗಿರುವಾಗ ಲಸಿಕೆಗಾಗಿ ಅವುಗಳನ್ನು ಬೇಟೆಯಾಡಿದರೆ ಭವಿಷ್ಯದಲ್ಲಿ ಅವುಗಳ ಅಸ್ತಿತ್ವವೇ ನಾಶವಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತವಾಗಿದೆ.

ಸಂತತಿ ವಿಸ್ತರಣೆ ಕಡಿಮೆ

ಸಂತತಿ ವಿಸ್ತರಣೆ ಕಡಿಮೆ

ಕ್ರೂರ ಪ್ರಾಣಿಯಿಂದ ಏನನ್ನಾದರೂ ಅಂಶವನ್ನು ಕಿತ್ತುಕೊಳ್ಳುವುದು ಎಂದಿಗೂ ಸಮರ್ಥನೀಯವಲ್ಲ. ಅದರಲ್ಲಿಯೂ ಅವು ಪ್ರಮುಖ ಪರಭಕ್ಷಕ ಜೀವಿಗಳಾಗಿದ್ದರೆ, ಅವು ಸಂತತಿಯನ್ನೂ ಭಾರಿ ಸಂಖ್ಯೆಯಲ್ಲಿ ಉತ್ಪಾದಿಸುವುದಿಲ್ಲ. ಈ ಪಿಡುಗು ಇನ್ನೂ ಎಷ್ಟು ದೊಡ್ಡದಾಗಬಹುದು ಮತ್ತು ಎಷ್ಟು ಕಾಲ ಇರಬಹುದು ಎನ್ನುವುದರ ಬಗ್ಗೆ ಯಾರಿಗೂ ತಿಳಿದಿಲ್ಲ.

ಚಳಿಗಾಲದಲ್ಲಿ ಮತ್ತಷ್ಟು ಉಲ್ಬಣಗೊಳ್ಳಲಿದೆ ಕೊರೊನಾ ಸೋಂಕು: ಎಚ್ಚರಿಕೆ

ಶಾರ್ಕ್ ಹತ್ಯೆ ಹೆಚ್ಚಲಿದೆ

ಶಾರ್ಕ್ ಹತ್ಯೆ ಹೆಚ್ಚಲಿದೆ

ನಾವು ಶಾರ್ಕ್‌ಗಳನ್ನು ಬಳಸುವುದನ್ನು ಮುಂದುವರಿಸಿದರೆ, ಈ ಉತ್ಪನ್ನದ ತಯಾರಿಕೆಗೆ ಬಳಸುವ ಶಾರ್ಕ್‌ಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ. ವರ್ಷದಿಂದ ವರ್ಷಕ್ಕೆ ಮತ್ತಷ್ಟು ಶಾರ್ಕ್‌ಗಳು ಬೇಕಾಗುತ್ತವೆ ಎಂದು ಶಾರ್ಕ್ ಅಲೀಸ್‌ನ ಸಂಸ್ಥಾಪಕಿ ಸ್ಟೀಫನಿ ಬ್ರೆಂಡಲ್ ಹೇಳಿದ್ದಾರೆ.

ಕಬ್ಬಿನ ಮೂಲಕ ಸ್ಕ್ವಾಲೆನ್

ಕಬ್ಬಿನ ಮೂಲಕ ಸ್ಕ್ವಾಲೆನ್

ಶಾರ್ಕ್ ಸಂಖ್ಯೆಗಳಿಗೆ ಅಪಾಯ ಬಾರದಂತೆ ಸ್ಕ್ವಾಲೆನ್‌ಗಳ ಸಂಗ್ರಹಕ್ಕೆ ವಿಜ್ಞಾನಿಗಳು ಪರ್ಯಾಯ ಮಾರ್ಗವೊಂದನ್ನು ಪರೀಕ್ಷಿಸುತ್ತಿದ್ದಾರೆ. ಕಬ್ಬಿನ ಕಿಣ್ವಗಳ ಮೂಲಕ ಸಿಂಥೆಟಿಕ್ ಸ್ಕ್ವಾಲೆನ್ ತಯಾರಿಕೆಯ ಪ್ರಯತ್ನ ನಡೆಯುತ್ತಿದೆ.

  BSYediyurappa ನಾನು ಕೂಡ ಬಾಬ್ರಿ Masjid ಹೋರಾಟದಲ್ಲಿ ಭಾಗಿಯಾಗಿದ್ದೆ | Oneindia Kannada
  ಕಾಸ್ಮೆಟಿಕ್‌ಗೂ ಬಳಕೆ

  ಕಾಸ್ಮೆಟಿಕ್‌ಗೂ ಬಳಕೆ

  ಸ್ಕ್ವಾಲೆನ್‌ಗಾಗಿ ಈಗಾಗಲೇ ಪ್ರತಿ ವರ್ಷ ಸುಮಾರು ಮೂರು ಮಿಲಿಯನ್ ಶಾರ್ಕ್‌ಗಳನ್ನು ಕೊಲ್ಲಲಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಸ್ಕ್ವಾಲೆನ್ ಅನ್ನು ಕಾಸ್ಮೆಟಿಕ್ ಮತ್ತು ಮೆಷಿನ್ ಆಯಿಲ್‌ಗಳಿಗೆ ಕೂಡ ಬಳಸಲಾಗುತ್ತಿದೆ. ಶಾರ್ಕ್‌ಗಳ ಲಿವರ್ ಆಯಿಲ್‌ಗೆ ಇರುವ ಬೇಡಿಕೆ ಏಕಾಏಕಿ ಹೆಚ್ಚಳವಾಗಿ ತಳಿಗಳ ಅಸ್ತಿತ್ವಕ್ಕೆ ಸಂಚಕಾರ ಬರುವ ಆತಂಕ ಉಂಟಾಗಿದೆ.

  English summary
  Half a million sharks may have to be klled for Squalene Oil to produce Covid-19 vaccine to immunise entire world.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X