ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋಟೋವುಳ್ಳ ಆಧಾರ್ ಕಾರ್ಡ್ ಹಂಚಿಕೊಳ್ಳದಿರಲು ಕೇಂದ್ರ ಸರ್ಕಾರದ ಸಲಹೆ

|
Google Oneindia Kannada News

ನವದೆಹಲಿ, ಮೇ 29: ಭಾರತದಲ್ಲಿ ಆಧಾರ್ ಕಾರ್ಡ್ ದುರುಪಯೋಗವನ್ನು ತಪ್ಪಿಸುವುದಕ್ಕಾಗಿ ನಾಗರಿಕರು ಮುಚ್ಚಿದ ಆವೃತ್ತಿಯನ್ನು ಹಂಚಿಕೊಳ್ಳುವಂತೆ ಕೇಂದ್ರ ಸರ್ಕಾರ ಕೋರಿದೆ. ಈ ಕುರಿತು ಸರ್ಕಾರವು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ.

"ಫೋಟೋಪ್ರತಿಯುಳ್ಳ ಆಧಾರ್ ಕಾರ್ಡ್ ಅನ್ನು ಯಾವುದೇ ಸಂಸ್ಥೆ ಮತ್ತು ಕಂಪನಿಗಳೊಂದಿಗೆ ಹಂಚಿಕೊಳ್ಳಬೇಡಿ. ಅದರ ದುರುಪಯೋಗ ಆಗುವ ಅಪಾಯವಿರುತ್ತದೆ. ಅದಕ್ಕೆ ಪರ್ಯಾಯವಾಗಿ ದಯವಿಟ್ಟು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಮಾತ್ರ ಪ್ರದರ್ಶಿಸುವ ಆಧಾರ್ ಅನ್ನು ಮಾತ್ರ ಬಳಸಬೇಕು," ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೀಲಿ ಆಧಾರ್ ಕಾರ್ಡ್ ಎಂದರೇನು, ಆನ್‌ಲೈನ್‌ ಅರ್ಜಿ ಸಲ್ಲಿಸುವುದು ಹೇಗೆ?ನೀಲಿ ಆಧಾರ್ ಕಾರ್ಡ್ ಎಂದರೇನು, ಆನ್‌ಲೈನ್‌ ಅರ್ಜಿ ಸಲ್ಲಿಸುವುದು ಹೇಗೆ?

ಆಧಾರ್ ಕಾರ್ಡ್ ದುರುಪಯೋಗ ಆಗುವುದು ಹೇಗೆ?, ಮುಚ್ಚಿದ ಈ ಹೊಸ ಆವೃತ್ತಿಯ ಆಧಾರ್ ಕಾರ್ಡ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ? ಇದರ ಮಧ್ಯೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಅವಧಿಗೆ ಇನ್ನೆಷ್ಟು ದಿನ ಬಾಕಿ ಉಳಿದಿದೆ ಎನ್ನುವುದರ ಕುರಿತು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಪ್ರಾಧಿಕಾರದಿಂದ ಪರವಾನಗಿ ಪಡೆದವರಿಗೆ ಮಾತ್ರ ಅನುಮತಿ

ಪ್ರಾಧಿಕಾರದಿಂದ ಪರವಾನಗಿ ಪಡೆದವರಿಗೆ ಮಾತ್ರ ಅನುಮತಿ

"ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ಬಳಕೆದಾರರ ಪರವಾನಗಿ ಪಡೆದ ಸಂಸ್ಥೆಗಳು ಮಾತ್ರ ವ್ಯಕ್ತಿಯ ಗುರುತನ್ನು ಸ್ಥಾಪಿಸಲು ಆಧಾರ್ ಅನ್ನು ಬಳಸಬಹುದು" ಎಂದು ಸರ್ಕಾರ ಹೇಳಿದೆ. ಸಂಸ್ಥೆಯು ತಮ್ಮ ಆಧಾರ್ ಕಾರ್ಡ್‌ಗಳನ್ನು ಹಂಚಿಕೊಳ್ಳುವ ಮೊದಲು UIDAI ನಿಂದ ಮಾನ್ಯವಾದ ಬಳಕೆದಾರ ಪರವಾನಗಿಯನ್ನು ಹೊಂದಿದೆಯೇ ಎಂದು ಪರಿಶೀಲಿಸಲು ಸರ್ಕಾರವು ನಾಗರಿಕರಿಗೆ ಸೂಚಿಸಲಾಗಿದೆ.

ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ

ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ

ದೇಶದಲ್ಲಿ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೂ ಪೂರ್ವದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಇಂಟರ್ನೆಟ್ ಕೆಫೆಗಳಲ್ಲಿ ಮತ್ತು ಸಾರ್ವಜನಿಕ ಕಂಪ್ಯೂಟರ್‌ಗಳನ್ನು ಬಳಸಿಕೊಂಡು ಯಾವುದೇ ಕಾರಣಕ್ಕೂ ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಡಿ. "ನೀವು ಹಾಗೆ ಮಾಡಿದರೆ, ಆ ಕಂಪ್ಯೂಟರ್‌ನಿಂದ ಡೌನ್‌ಲೋಡ್ ಮಾಡಿದ ಎಲ್ಲಾ ಇ-ಆಧಾರ್ ಪ್ರತಿಗಳನ್ನು ನೀವು ಶಾಶ್ವತವಾಗಿ ಡಿಲೀಟ್ ಮಾಡಿದ್ದೀರಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು," ಎಂದು ಸರ್ಕಾರದ ಸಲಹೆಯಲ್ಲಿ ಉಲ್ಲೇಖಿಸಲಾಗಿದೆ.

ಹೊಸ ಆವೃತ್ತಿಯ ಆಧಾರ್ ಡೌನ್‌ಲೋಡ್ ಮಾಡುವುದು ಹೇಗೆ?

ಹೊಸ ಆವೃತ್ತಿಯ ಆಧಾರ್ ಡೌನ್‌ಲೋಡ್ ಮಾಡುವುದು ಹೇಗೆ?

ಸಾರ್ವಜನಿಕವಾಗಿ ಮೂಲ ಆಧಾರ್ ಕಾರ್ಡ್ ಅನ್ನು ಹಂಚಿಕೊಳ್ಳುವುದಕ್ಕೂ ಪೂರ್ವದಲ್ಲಿ ಮುಚ್ಚಿದ ಆವೃತ್ತಿಯನ್ನು ನೀಡಲು ಸಲಹೆ ನೀಡಿದೆ. ಹಾಗಾದರೆ ಹೊಸ ಆವೃತ್ತಿಯ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನ ಹೇಗೆ ಎಂಬುದನ್ನು ಈ ಕೆಳಗೆ ಉಲ್ಲೇಖಿಸಲಾಗಿದೆ.

* ಮುಚ್ಚಿದ(ಮಾಸ್ಕಡ್) ಆಧಾರ್ ಕಾರ್ಡ್ ಅನ್ನು ಅಧಿಕೃತ UIDAI ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು.

* ನಿಮ್ಮ 12-ಅಂಕಿಯ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ

* ನಿಮಗೆ ಮುಚ್ಚಿದ ಆಧಾರ್ ಬೇಕೇ ಎಂಬ ಆಯ್ಕೆಯನ್ನು ಆರಿಸಿ

* ಮುಚ್ಚಿದ ಆಧಾರ್ ಪ್ರತಿಯನ್ನು ಡೌನ್‌ಲೋಡ್ ಮಾಡಿ

ಇನ್ನೂ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡಿಲ್ಲವೇ?

ಇನ್ನೂ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡಿಲ್ಲವೇ?

ನಮ್ಮ ದೇಶದ ನಾಗರಿಕರಿಗೆ ನೀಡಲಾಗುವ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮಹತ್ವದ ದಾಖಲೆಗಳಾಗಿವೆ. ಈ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಹಲವು ಬಾರಿ ಗಡುವು ವಿಧಿಸಲಾಗಿದೆ. ಈ ಹಿಂದೆ ಮಾರ್ಚ್ 31ರ ಗಡುವನ್ನು 2023ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೋಡಿಸಲು ಡೆಡ್‌ಲೈನ್ ಕೊಡಲಾಗಿದೆ. ಆದರೆ, ಈ ಅವಧಿಯೊಳಗೆ ಲಿಂಕ್ ಮಾಡದಿದ್ದರೆ, ಒಂದು ಸಾವಿರದವರೆಗೂ ದಂಡ ಪಾವತಿಸಬೇಕಾಗುತ್ತದೆ. ಆ ಮಿತಿಯು ಮೀರಿ ಹೋದರೆ ಕೇಂದ್ರ ಸರ್ಕಾರದಿಂದ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಕ್ಕೂ ಅವಕಾಶವಿರುತ್ತದೆ.

English summary
India Govt advisory to Avoid sharing Aadhaar, share only masked version.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X