ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಮೇಲ್ ಸ್ಟೋರೆಜ್ ಫುಲ್‌ ಆಗಿದೆಯೇ?, ಮೇಲ್ ಕ್ಲಿಯರ್ ಮಾಡಲು ಸರಳ ವಿಧಾನ ಇಲ್ಲಿದೆ

|
Google Oneindia Kannada News

ಇಮೇಲ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಅಪ್ಲಿಕೇಶನ್‌ಗಳಲ್ಲಿ ಜಿಮೇಲ್ ಒಂದಾಗಿದೆ. ಇದನ್ನು ವೈಯಕ್ತಿಕ ಮತ್ತು ವೃತ್ತಿಪರ ಕೆಲಸಕ್ಕಾಗಿ ಬಳಸಲಾಗುತ್ತದೆ. ಈಗ ಸಾಮಾನ್ಯವಾಗಿ ಎಲ್ಲಾ ವೃತ್ತಿಪರ ಕಾರ್ಯಗಳಿಗೆ ಇಮೇಲ್ ಅನ್ನು ಬಳಕೆ ಮಾಡಲಾಗುತ್ತದೆ. ನೀವು ಹಲವಾರು ಸೇವೆಗಳಿಗೆ ಚಂದಾದಾರರಾಗಿದ್ದರೆ ಮತ್ತು ಅಧಿಕೃತ ಉದ್ದೇಶಗಳಿಗಾಗಿ ಅದೇ ಇಮೇಲ್ ಐಡಿಯನ್ನು ಬಳಸಿದರೆ, ನಿಮ್ಮ ಇನ್‌ಬಾಕ್ಸ್ ಗೆ ಸಾವಿರಾರು ಇಮೇಲ್‌ಗಳು ಬರುತ್ತಲಿರುತ್ತದೆ ಎಂಬುವುದನ್ನು ನೀವು ಗಮನಿಸಿರಬಹುದು.

ಹಲವಾರು ಬಾರಿ ಇಮೇಲ್‌ ಗಳು ಬಂದು ನಿಮ್ಮ ಜಿಮೇಲ್ ಇನ್ ಬಾಕ್ಸ್ ಸ್ಟೋರೇಜ್ ಫುಲ್ ಆಗಿ ಬೇರೆ ಯಾವುದೇ ಹೊಸ ಇಮೇಲ್ ಬರದೆ ತೊಂದರೆ ಉಂಟಾಗಬಹುದು. ಅಗತ್ಯವಾದ ಇಮೇಲ್ ಗಾಗಿ ಕಾಯುವ ಸಂದರ್ಭದಲ್ಲಿ ಇಂತಹ ಇಕ್ಕಟ್ಟಿನಲ್ಲಿ ಒದ್ದಾಡಿದವರು ಅದೇಷ್ಟೋ ಮಂದಿ ಇರಬಹುದು. ನಿಮಗೂ ಕೂಡಾ ಈ ಸಮಸ್ಯೆ ಉಂಟಾಗಿದೆಯೇ?

ಎಫ್‌ಬಿಐ ಇಮೇಲ್ ಸರ್ವರ್ ಮೇಲೆ ಹ್ಯಾಕರ್ಸ್ ದಾಳಿ!ಎಫ್‌ಬಿಐ ಇಮೇಲ್ ಸರ್ವರ್ ಮೇಲೆ ಹ್ಯಾಕರ್ಸ್ ದಾಳಿ!

ಅನಗತ್ಯ ಇಮೇಲ್‌ಗಳನ್ನು ಅಳಿಸಲು ಹಲವಾರು ಮಾರ್ಗಗಳಿವೆ. ಆದರೆ ಅದಕ್ಕಾಗಿ ನೀವು ಕಷ್ಟಪಡಬೇಕಾಗಿಲ್ಲ. ಇಲ್ಲಿ ನಾವು ನಿಮ್ಮ ಅಮೂಲ್ಯ ಸಮಯವನ್ನು ಉಳಿಸಲು ಸಹಾಯ ಮಾಡುವ ಅತ್ಯುತ್ತಮ ಮತ್ತು ಸುಲಭವಾದ ಮಾರ್ಗವನ್ನು ತಿಳಿಸುತ್ತೇವೆ. ಈ ಬಗ್ಗೆ ಅಧಿಕ ಮಾಹಿತಿಗಾಗಿ ಮುಂದೆ ಓದಿ...

Gmail storage full: How to Free Up Space in Gmail; Check Steps in kannada

ಜಿಮೇಲ್ ಸ್ಟೋರೆಜ್ ಸ್ಪೇಸ್ ಶೀಘ್ರ ಹೆಚ್ಚಿಸುವುದು ಹೇಗೆ?

ನೀವು ಜಿಮೇಲ್‌ನಲ್ಲಿ ಫಿಲ್ಟರ್ ಫೀಚರ್ ಅನ್ನು ಸರಳವಾಗಿ ಬಳಸಬಹುದು ಮತ್ತು ಯಾವುದೇ ಪ್ರಮುಖವಾದ ಇಮೇಲ್, ಮಾಹಿತಿಗಳು ನಷ್ಟವಾಗದಂತೆ ಒಂದೇ ಬಾರಿಗೆ ಸಾವಿರಾರು ಇಮೇಲ್‌ಗಳನ್ನು ನೀವು ಡಿಲೀಟ್ ಮಾಡಬಹುದು. ಅದಕ್ಕಾಗಿ ನೀವು ಫಿಲ್ಟರ್ ಐಕಾನ್ ಅನ್ನು ಕ್ಲಿಕ್ ಮಾಡಬೇಕು. ಆ ಬಳಿಕ ಯಾವ ವಿಧಾನ ಪಾಲಿಸಬೇಕು ಎಂಬುವುದು ಈ ಕೆಳಗಿದೆ...

* ನಿಮ್ಮ ಕಂಪ್ಯೂಟರ್‌ನಲ್ಲಿ ಜಿಮೇಲ್‌ನ ಮೇಲ್ಭಾಗದಲ್ಲಿ ಸರ್ಚ್ ಮೇಲ್‌ ಎಂದು ಬರೆದಿರುವುದನ್ನು ಗಮನಿಸಿ. ಇಲ್ಲಿ ನಿಮಗೆ ನೂರಾರು ಇಮೇಲ್‌ಗಳನ್ನು ಕಳುಹಿಸಿರುವ ಯಾವುದೇ ಸೇವೆಯ ಹೆಸರು ಅಥವಾ ಇಮೇಲ್ ವಿಳಾಸವನ್ನು ಟೈಪ್ ಮಾಡಿ. ಆ ಬಳಿಕ ಸರ್ಚ್ ಬಟನ್ ಅನ್ನು ಕ್ಲಿಕ್ ಮಾಡಿ. ಆ ಜಿಮೇಲ್ ಐಡಿಯಿಂದ ಅಥವಾ ಇಮೇಲ್ ಐಡಿಯಿಂದ ಬಂದಿರುವ ಎಲ್ಲಾ ಇಮೇಲ್‌ಗಳು ನಿಮಗೆ ಕಾಣಲಿದೆ. ನೀವು ಎಲ್ಲವನ್ನೂ ಒಂದೇ ಬಾರಿಗೆ ಅಳಿಸಬಹುದು. ಮೇಲಿನ ಎಡ ಮೂಲೆಯಲ್ಲಿ ಸಣ್ಣ ಚೌಕದ ಬಾಕ್ಸ್ ಇದೆ, ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ಇಮೇಲ್‌ಗಳು ಆಯ್ಕೆಯಾಗುತ್ತವೆ.

Gmail storage full: How to Free Up Space in Gmail; Check Steps in kannada

* ಉದಾಹರಣೆಗೆ ನೀವು ಜೋಮ್ಯಾಟೋ ಎಂದು ಟೈಪ್ ಮಾಡಬಹುದು, ಹುಡುಕಾಟ ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ಎಲ್ಲಾ ಜೋಮಾಟೋ ಇಮೇಲ್‌ಗಳನ್ನು ಒಂದೇ ಬಾರಿಗೆ ಅಳಿಸಬಹುದು.

ಮೊಬೈಲ್‌ನಲ್ಲಿ ಹೇಗೆ ಸ್ಟೋರೆಜ್ ಕ್ಲಿಯರ್ ಮಾಡುವುದು?

ಇನ್ನು ಮೊಬೈಲ್‌ನಲ್ಲೂ ನೀವು ಇದೇ ರೀತಿಯಲ್ಲಿ ಮಾಡಬಹುದು. ನೀವು ಸರಳವಾಗಿ ಸರ್ಚ್ ಪಟ್ಟಿಯ ಮೇಲೆ ಟ್ಯಾಪ್ ಮಾಡಬಹುದು ಮತ್ತು ನಂತರ ಇಮೇಲ್ ಅಥವಾ ಜಿಮೇಲ್ ಹಾಕಬಹುದು. ನೀವು ಆ ಜಿಮೇಲ್ ಅಥವಾ ಇಮೇಲ್ ಐಡಿಯಿಂದ ಬಂದ ಎಲ್ಲಾ ಇಮೇಲ್ ಗಳ ಪಟ್ಟಿಯನ್ನು ಕಾಣಲಿದ್ದೀರಿ. ಇದರ ನಂತರ, ಅವುಗಳನ್ನು ಅಳಿಸಲು ನೀವು ಎಲ್ಲಾ ಇಮೇಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊಬೈಲ್‌ನಲ್ಲಿ ಮಾತ್ರ ನೀವು ಎಲ್ಲವನ್ನು ಒಂದೇ ಬಾರಿಗೆ ಕ್ಲಿಕ್ ಮಾಡಲು ಆಗುವುದಿಲ್ಲ. ಒಂದೊಂದೇ ಇಮೇಲ್ ಕ್ಲಿಕ್ ಮಾಡಬೇಕಾಗುತ್ತದೆ. ಇದು ಕೊಂಚ ಕಿರಿಕಿರಿ ಅನಿಸಬಹುದು. ಆದ್ದರಿಂದ ಲಾಪ್‌ಟಾಪ್, ಡೆಸ್ಕ್‌ಟಾಪ್, ವೆಬ್ ಆವೃತ್ತಿಯು ಎಲ್ಲಾ ಇಮೇಲ್‌ಗಳನ್ನು ಒಂದೇ ಬಾರಿಗೆ ಅಳಿಸಲು ನೇರ ಆಯ್ಕೆಯನ್ನು ನೀಡುವುದರಿಂದ ಕಂಪ್ಯೂಟರ್ ಅನ್ನು ಬಳಸುವುದು ಉತ್ತಮ.

English summary
Gmail storage full: Here's how to quickly fix issue and regain free space . Check step by step in kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X