ಭರ್ಜರಿ ಬ್ಯಾಟಿಂಗ್ ಮಾಡಿದ ಬಾಲೆ: ಮನಸೋತ ಸಚಿನ್, ಜಯ್ ಶಾ..!
ರಾಜಸ್ಥಾನದ ಬಾಲಕಿಯೊಬ್ಬಳು ಅದ್ಭುತವಾಗಿ ಬ್ಯಾಟಿಂಗ್ ಮಾಡುವ ಮೂಲಕ ನೋಡುಗರ ಗಮನ ಸೆಳೆದಿದ್ದಾಳೆ. ಈಕೆ ಬ್ಯಾಟಿಂಗ್ ಮಾಡುವ ವಿಡಿಯೋ ವೈರಲ್ ಆಗಿದೆ.
ಕ್ರೀಡೆ ದೈಹಿಕ ಶಕ್ತಿ ಮತ್ತು ಆತ್ಮ ಸ್ಥೈರ್ಯದ ಸಂಕೇತ. ಗ್ರಾಮೀಣ ಭಾಗದಲ್ಲಿ ಕ್ರೀಡಾ ಪ್ರತಿಭೆಗಳು ನಮಗೆ ಹೆಚ್ಚು ಕಾಣ ಸಿಗುತ್ತಾರೆ. ಇದಕ್ಕೆ ಸಾಕ್ಷಿ ಅಂದರೆ ಇತ್ತೀಚಿಗಷ್ಟೆ ವೈರಲ್ ಆದ ವಿಡಿಯೋ. ವಿಡಿಯೋದಲ್ಲಿ ರಾಜಸ್ಥಾನದ ಬಾಲಕಿಯೊಬ್ಬಳು ಅದ್ಭುತವಾಗಿ ಬ್ಯಾಟಿಂಗ್ ಮಾಡುವ ಮೂಲಕ ನೋಡುಗರ ಗಮನ ಸೆಳೆದಿದ್ದಾಳೆ. ಆಕೆ ಬ್ಯಾಟಿಂಗ್ ಮಾಡುವ ವಿಡಿಯೋ ವೈರಲ್ ಆಗಿದ್ದು ಭಾರತದ ಮಾಜಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರತಿಕ್ರಿಯೆ ನೀಡಿದ್ದಾರೆ.
ಮೊನ್ನೆಯಷ್ಟೇ ಮಹಿಳಾ ಪ್ರೀಮಿಯರ್ ಲೀಗ್ 2023ರ ಹರಾಜು ಪ್ರಕ್ರಿಯೆ ನಡೆದಿದೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ವೈಭವ್ ಗಹ್ಲೋಟ್ ಅವರನ್ನು ಟ್ಯಾಗ್ ಮಾಡುವ ಮೂಲಕ ವಿಡಿಯೋವನ್ನು ನೆಟ್ಟಿಗರು ಮರು ಪೋಸ್ಟ್ ಮಾಡಿದ್ದಾರೆ.
Amazed by the young girl's cricket skills & passion for the game! I'm glad to see that the future of Women's Cricket is in good hands. Let us work together to empower our young athletes so that they can become future game changers! #GirlsInCricket #FutureStars @wplt20 @BCCIWomen pic.twitter.com/Bw5yv151wI
— Jay Shah (@JayShah) February 14, 2023
ಯುವತಿ ಅದ್ಭುತ ಬ್ಯಾಟಿಂಗ್‌ನೊಂದಿಗೆ ಹುಡುಗರೊಂದಿಗೆ ಕ್ರಿಕೆಟ್ ಆಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ವಿಡಿಯೋ ಜಯ್ ಶಾಗೆ ಟ್ಯಾಗ್ ಮಾಡಲಾಗಿದೆ. 'ಮಹಿಳಾ ಕ್ರಿಕೆಟ್‌ನ ಭವಿಷ್ಯ ಉತ್ತಮ ಕೈಯಲ್ಲಿದೆ' ಎಂದು ಹೇಳುವ ಮೂಲಕ ಹುಡುಗಿಯನ್ನು ಶ್ಲಾಘಿಸುವ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ.

ಅವರು ವಿಡಿಯೊಗೆ ಶೀರ್ಷಿಕೆ ನೀಡಿದ್ದಾರೆ, "ಚಿಕ್ಕ ಹುಡುಗಿಯ ಕ್ರಿಕೆಟ್ ಕೌಶಲ್ಯ ಮತ್ತು ಆಟದ ಮೇಲಿನ ಉತ್ಸಾಹ ನೋಡುಗರನ್ನು ಆಶ್ಚರ್ಯ ಮೂಡಿಸಿದೆ. ಮಹಿಳಾ ಕ್ರಿಕೆಟ್‌ನ ಭವಿಷ್ಯ ಉತ್ತಮ ಕೈಯಲ್ಲಿದೆ ಎಂದು ನೋಡಲು ನನಗೆ ಸಂತೋಷವಾಗಿದೆ. ನಮ್ಮ ಯುವ ಅಥ್ಲೀಟ್‌ಗಳನ್ನು ಸಬಲೀಕರಣಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ, ಇದರಿಂದ ಅವರ ಭವಿಷ್ಯದ ಬದಲಾಯಿಸಬಹುದು'' ಎಂದು ಅವರು ಬರೆದಿದ್ದಾರೆ.
Kal hi toh auction hua.. aur aaj match bhi shuru? Kya baat hai. Really enjoyed your batting. 🏏👧🏼#CricketTwitter #WPL @wplt20
— Sachin Tendulkar (@sachin_rt) February 14, 2023
(Via Whatsapp) pic.twitter.com/pxWcj1I6t6
ಭಾರತದ ಮಾಜಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಕೂಡ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ, "ನಿಮ್ಮ ಬ್ಯಾಟಿಂಗ್ ಅನ್ನು ನಿಜವಾಗಿಯೂ ಆನಂದಿಸಿದೆ" ಎಂದು ಬರೆದಿದ್ದಾರೆ.











Click it and Unblock the Notifications