
'ದೈತ್ಯ ಮೀನು': ಅರ್ಧ ದೇಹ ಹಾವು ಮತ್ತರ್ಧ ಡೈನೋಸಾರ್ ಶಾರ್ಕ್
ಸಮುದ್ರದಲ್ಲಿ ಕಣ್ಣಿಗೆ ಕಾಣದ ಜೀವಿಗಳಿಂದ ಹಿಡಿದು ದೈತ್ಯ ಜೀವಿಗಳು ವಾಸಿಸುತ್ತವೆ. ಕೆಲವೊಮ್ಮೆ ತುಂಬಾ ವಿಚಿತ್ರ ಹಾಗೂ ಭಯಾನಕವಾಗಿರುವ ಸಮುದ್ರ ಜೀವಿಗಳು ನಮಗೆ ನೋಡಲು ಸಿಗುತ್ತವೆ. ಆದರೀಗ ಅಂತಹದ್ದೇ ಒಂದು ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವೈರಲ್ ವಿಡಿಯೋದಲ್ಲಿ ಸಮುದ್ರ ಜೀವಿ ಆರಾಮವಾಗಿ ಈಜುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಅದು ನೋಡಲು ತುಂಬಾ ಭಯವಾಗಿದೆ. ಇದರ ಆಕಾರ ಜನರ ಗಮನ ಸೆಳೆಯುತ್ತಿದೆ. ಏಕೆಂದರೆ ಅದರ ದೇಹದ ಅರ್ಧ ಭಾಗ ಮೀನಿನಂತಿದೆ, ಉಳಿದರ್ಧ ಭಾಗ ಹಾವಿನಂತಿದೆ. ಅದರ ಇನ್ನೂ ಕೆಲ ಭಾಗ ಸಮುದ್ರದ ಡೈನೋಸಾರ್‌ಗಳಂತೆ ಕಂಡುಬರುತ್ತದೆ. ಇದನ್ನು ಕಂಡು ಜನ ಅಚ್ಚರಿಗೊಂಡಿದ್ದಾರೆ.

80 ಮಿಲಿಯನ್ ವರ್ಷದ ಶಾರ್ಕ್
ಈ ವಿಡಿಯೊ ಕೆಲವು ವರ್ಷಗಳಷ್ಟು ಹಳೆಯದಾದರೂ ಇದು ಸದ್ಯ ಹೆಚ್ಚು ವೈರಲ್ ಆಗುತ್ತಿದೆ. ಕೆಲವು ವಿಜ್ಞಾನಿಗಳು ಇದನ್ನು ಹಳೆಯ ಜಾತಿಯ ಶಾರ್ಕ್ ಎಂದು ಗುರುತಿಸಿದ್ದಾರೆ. ಇದು 80 ಮಿಲಿಯನ್ ವರ್ಷಗಳಿಂದ ಭೂಮಿಯ ಮೇಲೆ ಇದೆ ಎಂದು ಹೇಳಿದ್ದಾರೆ. ಈ ವಿಡಿಯೋ ನೋಡುತ್ತಿದ್ದಂತೆ ಹಲವಾರು ಪ್ರಶ್ನೆಗಳನ್ನು ನೆಟ್ಟಿಗರು ಮಾಡಿದ್ದಾರೆ. ಜೀವಿ ಇಷ್ಟು ದಿನ ಬದುಕಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮಾಡಿದ್ದಾರೆ.
|
ರಾಕ್ಷಸ ಶಾರ್ಕ್
ಈ ನಿಗೂಢ ಜೀವಿ ಬಗ್ಗೆ ಜೀವಶಾಸ್ತ್ರಜ್ಞರು ಇದು ಶಾರ್ಕ್ (ಫ್ರಿಲ್ಡ್ ಶಾರ್ಕ್) ಜಾತಿಯದ್ದಾಗಿದೆ ಎಂದು ಹೇಳಿದರು. ಇದು ಲಕ್ಷಾಂತರ ವರ್ಷಗಳಿಂದ ಭೂಮಿಯ ಮೇಲೆ ಇದೆ. ಅದನ್ನು ರಾಕ್ಷಸ ಶಾರ್ಕ್ ಎಂದು ಕರೆಯಲಾಗುತ್ತದೆ. ಅದರ ಬಾಲವು ಹಾವಿನ ಆಕಾರದಲ್ಲಿದ್ದು ಈಜಲು ಬಾಲದ ಸಹಾಯವನ್ನು ಇದು ಪಡೆಯತ್ತದೆ. ಉಳಿದ ಹೆಚ್ಚಿನ ಭಾಗ ಶಾರ್ಕ್ನಂತೆಯೇ ಇದೆ. ಇದು ತನ್ನ ಬೇಟೆಯನ್ನು ಸುಲಭವಾಗಿ ಕೊಲ್ಲುತ್ತದೆ.

ಇದರ ವಯಸ್ಸು ಎಷ್ಟು?
ಅಂದಹಾಗೆ, ಈ ವಿಡಿಯೋ 2007ರದ್ದು, ಇದೀಗ ಮತ್ತೆ ವೈರಲ್ ಆಗುತ್ತಿದೆ. ಆ ಸಮಯದಲ್ಲಿ ಇದು ಜಪಾನ್‌ನ ಅವಾಶಿಮಾ ಮೆರೈನ್ ಪಾರ್ಕ್‌ನಲ್ಲಿ ಕಂಡುಬಂದಿದೆ. ವಿಜ್ಞಾನಿಗಳು ಈ ಜಾತಿಯು ಡೈನೋಸಾರ್ ಯುಗದಿಂದ ಅಂದರೆ 80 ಮಿಲಿಯನ್ ವರ್ಷಗಳಿಂದ ಭೂಮಿಯ ಮೇಲೆ ಇದೆ. ವಿಡಿಯೊದಲ್ಲಿ ಕಂಡುಬಂದಿರುವುದು ಮೀನು ಅಲ್ಲ ಎಂದು ಹೇಳಿದರು. ಸಾಮಾನ್ಯವಾಗಿ ಅದರ ವಯಸ್ಸು ಸುಮಾರು 25 ವರ್ಷಗಳು. ಆದರೆ ಇಷ್ಟು ಸಮಯ ಕಳೆದರೂ ಅವು ಅಳಿದು ಹೋಗಲಿಲ್ಲ.

ವಿಜ್ಞಾನಿಗಳ ಸ್ಪಷ್ಟನೆ
ಈ ವಿಡಿಯೋ ವೈರಲ್ ಆದಂದಿನಿಂದ ಜನರು ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ. ಯಾವುದೇ ಜೀವಿಯು ಇಷ್ಟು ಬದುಕಲು ಸಾಧ್ಯವಿಲ್ಲ. ಹೀಗಾಗಿ ವಿಜ್ಞಾನಿಗಳು ತಪ್ಪಾಗಿ ಹೇಳುತ್ತಿದ್ದಾರೆ ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು ಇದನ್ನು ಗ್ರಾಫಿಕ್ಸ್ ವಿಡಿಯೋ ಎಂದು ಕರೆದಿದ್ದಾರೆ. ಈ ಕಾರಣಕ್ಕಾಗಿ, ವಿಜ್ಞಾನಿಗಳು ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಈ ಮೀನು 80 ಮಿಲಿಯನ್ ವರ್ಷಗಳಷ್ಟು ಹಳೆಯದಲ್ಲ, ಆದರೆ ಅದರ ಪ್ರಭೇದವು ತುಂಬಾ ಹಳೆಯದು ಎಂದು ಸ್ಪಷ್ಟಪಡಿಸಿದ್ದಾರೆ.