ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Holidays List 2023 : ಹೊಸ ವರ್ಷದಲ್ಲಿ ಯಾವಾಗ ರಜೆ ತಿಳಿಯಿರಿ

|
Google Oneindia Kannada News

ಬೆಂಗಳೂರು, ನವೆಂಬರ್ 13; 2022ನೇ ವರ್ಷ ಮುಗಿಯಲು ಸುಮಾರು ಒಂದೂವರೆ ತಿಂಗಳು ಬಾಕಿ ಇದೆ. ಜನರು ಈಗಾಗಲೇ 2023ರ ಬಗ್ಗೆ ಚಿಂತನೆ ಆರಂಭಿಸಿದ್ದಾರೆ. ಹೊಸ ವರ್ಷದಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ಯೋಜನೆ ತಯಾರು ಮಾಡುತ್ತಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಉದ್ಯೋಗಿಗಳು 2023ರಲ್ಲಿ ರಜೆ ಯಾವಾಗ ಸಿಗುತ್ತದೆ? ಎಂದು ಹುಡುಕಾಟ ನಡೆಸುತ್ತಿರುತ್ತಾರೆ. ಈ ರಜೆಗಳ ಆಧಾರದ ಮೇಲೆ ಅವರು ಪ್ರವಾಸ ಸೇರಿದಂತೆ ಮತ್ತಿತ್ತರ ಯೋಜನೆ ರೂಪಿಸಲು ಸಹಾಯಕವಾಗುತ್ತದೆ.

Bank Holidays in November 2022 : ನವೆಂಬರ್ ತಿಂಗಳಿನಲ್ಲಿ 10 ದಿನ ಬ್ಯಾಂಕ್‌ಗಳಿಗೆ ರಜೆ Bank Holidays in November 2022 : ನವೆಂಬರ್ ತಿಂಗಳಿನಲ್ಲಿ 10 ದಿನ ಬ್ಯಾಂಕ್‌ಗಳಿಗೆ ರಜೆ

ಸಾಮಾನ್ಯವಾಗಿ ಹೊಸ ವರ್ಷದ ಸರ್ಕಾರಿ ರಜೆ ಸಂಕ್ರಾಂತಿಯ ಮೂಲಕ ಆರಂಭವಾಗುತ್ತದೆ. 2022ರಲ್ಲಿ ಹಲವು ಹಬ್ಬಗಳು ಭಾನುವಾರ ಬರುವ ಮೂಲಕ ರಜೆಗೆ ಕತ್ತರಿ ಹಾಕದ್ದವು. ಆದರೆ 2023ರಲ್ಲಿ ಹಾಗೆ ಆಗಿಲ್ಲ ಎಂಬುದೇ ಸಂತಸದ ಸಂಗತಿಯಾಗಿದೆ.

Bangalore Printing & Publishing Company Ltd 2023ನೇ ಸಾಲಿನ ರಜೆದಿನ ಪಟ್ಟಿಯನ್ನು ಪ್ರಕಟಿಸಿದೆ. ಇವುಗಳಲ್ಲಿ ಸಾಮಾನ್ಯ ರಜೆ ದಿನಗಳು ಮತ್ತು restricted holidays ಎಂದು ಎರಡು ಪಟ್ಟಿಯನ್ನು ಮಾಡಲಾಗಿದೆ. ಮುಂದಿನ ವರ್ಷದಲ್ಲಿ ಎಷ್ಟು ರಜೆಗಳು ಸಿಗಲಿವೆ ಎಂದು ಈ ಪಟ್ಟಿಯನ್ನು ನೋಡಿ...

ಜನವರಿಯಿಂದ ಏಪ್ರಿಲ್ ತನಕ

ಜನವರಿಯಿಂದ ಏಪ್ರಿಲ್ ತನಕ

ಸಾಮಾನ್ಯ ರಜೆಗಳ ಪಟ್ಟಿ ಜನವರಿ 15 (ಭಾನುವಾರ) ಮಕರ ಸಂಕ್ರಾಂತಿ ಮೂಲಕ ಆರಂಭವಾಗುತ್ತದೆ. ಜನವರಿಯಲ್ಲಿ ಎರಡು ರಜೆಗಳಿವೆ ಜನವರಿ 15 ಮಕರ ಸಂಕ್ರಾಂತಿ ಮತ್ತು ಜನವರಿ 26 (ಗುರುವಾರ) ಗಣರಾಜ್ಯೋತ್ಸವ.

ಫೆಬ್ರವರಿ 18ರಂದು ಮಹಾಶಿವರಾತ್ರಿ ಶನಿವಾರ ಇದ್ದು, ಅಂದು ಸಾಮಾನ್ಯ ರಜೆ ದಿನವಾಗಿದೆ. ಮಾರ್ಚ್‌ನಲ್ಲಿ ಸಹ ಕೇವಲ ಒಂದು ರಜೆ ಸಿಗಲಿದೆ. ಮಾರ್ಚ್ 22ರ ಬುಧವಾರ ಚಂದ್ರಮಾನ ಯುಗಾದಿ ಇದೆ. (ಈ ಪಟ್ಟಿಯಲ್ಲಿ 2 & 4ನೇ ಶನಿವಾರದ ಬ್ಯಾಂಕ್‌ ರಜೆಗಳು ಸೇರಿಲ್ಲ)

ಏಪ್ರಿಲ್ ತಿಂಗಳಿನಲ್ಲಿ 4 (ಮಂಗಳವಾರ) ಮಹಾವೀರ ಜಯಂತಿ, 7 (ಶುಕ್ರವಾರ) ಗುಡ್‌ಫ್ರೈಡೇ, 14 (ಶುಕ್ರವಾರ) ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ, 22 (ಶನಿವಾರ) ರಂಜಾನ್, 23 (ಭಾನುವಾರ) ಬಸವಜಯಂತಿ.

ಮೇ, ಜೂನ್, ಜುಲೈ ತಿಂಗಳ ರಜೆ ಪಟ್ಟಿ

ಮೇ, ಜೂನ್, ಜುಲೈ ತಿಂಗಳ ರಜೆ ಪಟ್ಟಿ

ಮೇ, ಜೂನ್ ಮತ್ತು ಜುಲೈ ತಿಂಗಳಿನಲ್ಲಿ ವಾರದ ರಜೆ ಭಾನುವಾರ ಹೊರತುಪಡಿಸಿ ಕೇವಲ ಒದೊಂದು ರಜೆ ಸಿಗಲಿದೆ.

ಮೇ ತಿಂಗಳಿನಲ್ಲಿ ಕೇವಲ ಒಂದು ರಜೆ ಇದೆ. ಮೇ 1 ಕಾರ್ಮಿಕ ದಿನ (ಸೋಮವಾರ). ಜೂನ್ ತಿಂಗಳಿನಲ್ಲಿ 29ರ (ಗುರುವಾರ) ಬಕ್ರೀದ್ ರಜೆ ಇದೆ. ಜುಲೈ ತಿಂಗಳಿನಲ್ಲಿ 29 (ಶನಿವಾರ) ಮೊಹರಂ ರಜೆ ಇದೆ.

ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್

ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್

ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ (ಮಂಗಳವಾರ). ಸೆಪ್ಟೆಂಬರ್ 18 ಗಣೇಶ ಚತುರ್ಥಿ (ಸೋಮವಾರ). 28 (ಗುರುವಾರ) ಈದ್ ಮಿಲಾದ್ ಸಾಮಾನ್ಯ ರಜೆಗಳ ಪಟ್ಟಿಯಲ್ಲಿದೆ.

ಅಕ್ಟೋಬರ್‌ ತಿಂಗಳಿನಲ್ಲಿ 2 (ಸೋಮವಾರ) ಗಾಂಧಿ ಜಯಂತಿ. 14 (ಶನಿವಾರ) ಮಹಾಲಯ ಅಮಾವಾಸ್ಯೆ, 23 (ಸೋಮವಾರ) ಆಯುಧ ಪೂಜೆ/ಮಹಾನವಮಿ, 24 (ಮಂಗಳವಾರ) ವಿಜಯದಶಮಿ, 28 (ಶನಿವಾರ) ವಾಲ್ಮೀಕಿ ಜಯಂತಿ ರಜೆ ಇದೆ.

ನವೆಂಬರ್ ಮತ್ತು ಡಿಸೆಂಬರ್ ತಿಂಗಳು

ನವೆಂಬರ್ ಮತ್ತು ಡಿಸೆಂಬರ್ ತಿಂಗಳು

ನವೆಂಬರ್‌ 1 (ಬುಧವಾರ) ಕನ್ನಡ ರಾಜ್ಯೋತ್ಸವ. 12 (ಭಾನುವಾರ) ನಕರ ಚರ್ತುದಶಿ. 14 (ಮಂಗಳವಾರ) ಬಲಿಪಾಡ್ಯಮಿ. 30 (ಗುರುವಾರ) ಕನಕದಾಸ ಜಯಂತಿ ಸಾಮಾನ್ಯ ರಜೆಗಳಿವೆ. ಡಿಸೆಂಬರ್ ತಿಂಗಳಿನಲ್ಲಿ 25 (ಸೋಮವಾರ) ಕ್ರಿಸ್‌ಮಸ್ ರಜೆ ಇದೆ.

2023ರ restricted holidays ಪಟ್ಟಿಯಲ್ಲಿ ಜನವರಿ 1 (ಭಾನುವಾರ) ಹೊಸ ವರ್ಷ. 30 (ಸೋಮವಾರ) ಮಾಧವ ನವಮಿ ರಜೆ ಇದೆ. ಮಾರ್ಚ್ ತಿಂಗಳಿನಲ್ಲಿ 8 (ಬುಧವಾರ) ಹೋಳಿ ಹಬ್ಬ, 26 (ಭಾನುವಾರ) ದೇವರ ದಾಸಿಮಯ್ಯ ಜಯಂತಿ, 30 (ಗುರುವಾರ) ಚಂದ್ರ ಶ್ರೀ ರಾಮನವಮಿ ರಜೆ ಇದೆ.

restricted holidays ಪಟ್ಟಿ ಹೀಗಿದೆ

restricted holidays ಪಟ್ಟಿ ಹೀಗಿದೆ

Restricted holidays ಪಟ್ಟಿಯಲ್ಲಿ ಏಪ್ರಿಲ್ ತಿಂಗಳಿನಲ್ಲಿ 8 (ಶನಿವಾರ) ಹೋಲಿ ಸರ್ಟಡೇ, 14 (ಶುಕ್ರವಾರ) ಸೌರ ಯುಗಾದಿ. 21 (ಶುಕ್ರವಾರ) ಜಮಾತ್-ಉಲ್-ವಿದಾ, 25 (ಮಂಗಳವಾರ) ಶ್ರೀ ರಾಮಾನುಜಾಚಾರ್ಯ ಜಯಂತಿ, ಆದಿ ಶಂಕರಾಚಾರ್ಯ ಜಯಂತಿ.

ಮೇ 5 (ಶುಕ್ರವಾರ) ಬುದ್ಧ ಪೂರ್ಣಿಮಾ ರಜೆ ಇದೆ. ಆಗಸ್ಟ್‌ನಲ್ಲಿ 25 (ಶುಕ್ರವಾರ) ವರಮಹಾಲಕ್ಷ್ಮೀ ವೃತ, 29 (ಮಂಗಳವಾರ) ಋಗ್ ಉಪಾಕರ್ಮ, 29 (ಮಂಗಳವಾರ) ತಿರು ಓಣಂ, 30 (ಬುಧವಾರ) ನಾರಾಯಣ ಗುರು ಜಯಂತಿ ರಜೆ ಇದೆ.

ಈ ರಜೆಗಳು ಕೆಲವರಿಗೆ ಸಿಗಬಹುದಾಗಿದೆ

ಈ ರಜೆಗಳು ಕೆಲವರಿಗೆ ಸಿಗಬಹುದಾಗಿದೆ

restricted holidays ಪಟ್ಟಿಯಲ್ಲಿ ಸೆಪ್ಟೆಂಬರ್‌ 6 (ಬುಧವಾರ) ಜನ್ಮಾಷ್ಠಮಿ. 17 (ಭಾನುವಾರ) ವಿಶ್ವಕರ್ಮ ಜಯಂತಿ. 18 (ಸೋಮವಾರ) ಸ್ವರ್ಣಗೌರಿ ವೃತ. 28 (ಗುರುವಾರ) ಅನಂತ ಪದ್ಮನಾಭ ವೃತ.

ಅಕ್ಟೋಬರ್‌ನಲ್ಲಿ 18 (ಬುಧವಾರ) ತುಳು ಸಂಕ್ರಮಣ. ನವೆಂಬರ್ ತಿಂಗಳಿನಲ್ಲಿ 27 (ಸೋಮವಾರ) ಗುರುನಾನಕ್ ಜಯಂತಿ, ಹುತ್ತರಿ ಹಬ್ಬ. ಡಿಸೆಂಬರ್ ತಿಂಗಳಿನಲ್ಲಿ 24 (ಭಾನುವಾರ) ಕ್ರಿಸ್‌ಮಸ್ ಈವ್.

English summary
Bangalore Printing & Publishing Company Ltd released the list of general and restricted holidays for the year 2023. Here are the details of holidays.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X