ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋರಿಸ್ ಜಾನ್ಸನ್ ಪತನಕ್ಕೆ ಕಾರಣವಾಗಿದ್ದು ಈ ನಾಲ್ಕು ಹಗರಣಗಳು

|
Google Oneindia Kannada News

ಲಂಡನ್, ಜುಲೈ 7: ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುರುವಾರ ದೇಶವನ್ನುದ್ದೇಶಿಸಿ ಮಾತನಾಡಿದ ಬೋರಿಸ್, ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ.

Recommended Video

ಸುಧಾ ಮೂರ್ತಿ ಅಳಿಯ ರಿಷಿ ಸುನಕ್ ಗೆ ಒಲಿಯುತ್ತಾ ಬ್ರಿಟನ್ ಪ್ರಧಾನಿ ಸ್ಥಾನ?? | *World | OneIndia Kannada

ತಾನು ಬ್ರಿಟನ್ ಪ್ರಧಾನಿಯಾಗಿ ಯಶಸ್ವಿಯಾಗಲಿಲ್ಲ ಎಂದು ಅವರು ತಮ್ಮ ಬಾಷಣದಲ್ಲಿ ವಿಷಾದಿಸಿದ್ದಾರೆ. ಬ್ರಿಟನ್‌ನ ಮುಂದಿನ ನಾಯಕನಿಗೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆ

ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವುದು ಅನಿವಾರ್ಯವೂ ಆಗಿತ್ತು. ಬೋರಿಸ್ ಜಾನ್ಸನ್ ನಾಯಕತ್ವದ ಮೇಲೆ ನಂಬಿಕೆ ಕಳೆದುಕೊಂಡಿರುವವರ ಸಂಖ್ಯೆ ಕನ್ಸರ್ವೇಟಿವ್ ಪಕ್ಷದೊಳಗೆ ಹೆಚ್ಚಾಗಿದೆ. ಹೀಗಾಗಿ, ಬೋರಿಸ್ ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆಗಳಿರಲಿಲ್ಲ.

ಬೋರಿಸ್ ಜಾನ್ಸನ್ ನಾಯಕತ್ವದ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸಿ 40ಕ್ಕೂ ಹೆಚ್ಚು ಸಚಿವರು, ಸಹಾಯಕರು ರಾಜೀನಾಮೆ ನೀಡಿದ್ದರು. ಹಲವರು ಬೋರಿಸ್ ನಾಯಕತ್ವದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಭಾರತ ಮೂಲದ ರಿಷಿ ಸುನಕ್ ಮುಂದಿನ ಬ್ರಿಟನ್ ಪ್ರಧಾನಿ? ನಡೀತಿದೆ ಭರ್ಜರಿ ಬೆಟ್ಟಿಂಗ್ಭಾರತ ಮೂಲದ ರಿಷಿ ಸುನಕ್ ಮುಂದಿನ ಬ್ರಿಟನ್ ಪ್ರಧಾನಿ? ನಡೀತಿದೆ ಭರ್ಜರಿ ಬೆಟ್ಟಿಂಗ್

ನಿನ್ನೆ ಬುಧವಾರವಷ್ಟೇ ಹಣಕಾಸು ಸಚಿವ ಸ್ಥಾನಕ್ಕೆ ಏರಿದ್ದ ಇರಾಕ್ ಮೂಲದ ನದೀಂ ಜಹಾವಿ ಕೂಡ ಬೋರಿಸ್ ಜಾನ್ಸನ್ ರಾಜೀನಾಮೆಗೆ ಒತ್ತಾಯಿಸಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವುದು ಸೂಕ್ತ. ಅವರ ಹಿತ, ಪಕ್ಷದ ಹಿತ ಮತ್ತು ದೇಶದ ಹಿತದ ದೃಷ್ಟಿಯಿಂದ ಅವರು ರಾಜೀನಾಮೆ ನೀಡಬೇಕೆಂದು ಸಲಹೆ ನೀಡಿ ಟ್ವೀಟ್ ಮಾಡಿದ್ದರು.

ಅಷ್ಟಕ್ಕೂ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬೋರಿಸ್ ಜಾನ್ಸನ್ 2-3 ವರ್ಷದಲ್ಲೇ ಇಂಥ ಪರಿಸ್ಥಿತಿಗೆ ಬಂದದ್ದು ಅಚ್ಚರಿಯೇ. ಅವರ ಪತನಕ್ಕೆ ಪ್ರಮುಖ ಕಾರಣಗಳು ಇಲ್ಲದಿಲ್ಲ. ಕೆಲ ಪ್ರಮುಖ ಕಾರಣಗಳು ಇಲ್ಲಿವೆ.

ಕೋವಿಡ್ ನಿಯಮಗಳ ಉಲ್ಲಂಘನೆ

ಕೋವಿಡ್ ನಿಯಮಗಳ ಉಲ್ಲಂಘನೆ

ಎರಡು ವರ್ಷಗಳ ಹಿಂದೆ ಕೋವಿಡ್-19 ಆರ್ಭಟ ವಿಪರೀತವಾಗಿದ್ದ ಅವಧಿಯಲ್ಲಿ ಬ್ರಿಟನ್ ಪ್ರಧಾನಿ ಹಾಗೂ ಸರಕಾರದ ಇನ್ನೂ ಅನೇಕರು ಭರ್ಜರಿ ಪಾರ್ಟಿ ಮಾಡಿದ್ದರು. ಕೋವಿಡ್ ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿದ್ದರು.
ವಿಪರ್ಯಾಸ ಎಂದರೆ ರಾಣಿ ಎಲಿಜಬೆತ್‌ನ ಪತಿ ಫಿಲಿಪ್‌ರ ಅಂತ್ಯಕ್ರಿಯೆ ವೇಳೆ ಪ್ರಧಾನಿ ಹಾಗೂ ಅವರ ಆಪ್ತರು ಬರ್ತ್‌ಡೇ ಪಾರ್ಟಿ ಮಾಡುತ್ತಿದ್ದರು. ಅದೂ ಅಂತ್ಯಕ್ರಿಯೆ ನಡೆಯುವ ಸ್ಥಳದ ಬಳಿಯೇ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಿದ್ದ ರಾಣಿ ಲಾಕ್ ಡೌನ್ ನಿಯಮಗಳಿಗೆ ಓಗೊಟ್ಟು ಎಲ್ಲೋ ಮೂಲೆಯಲ್ಲಿ ಕೂತಿದ್ದರೆ ಪ್ರಧಾನಿ ಮತ್ತಿತರರು ಭರ್ಜರಿ ಪಾರ್ಟಿ ಮಾಡಿದ್ದರು.
ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪೊಲೀಸರು ಪ್ರಧಾನಿ ಬೋರಿಸ್ ಜಾನ್ಸನ್‌ಗೆ ದಂಡ ವಿಧಿಸಿದ್ದರು. ಜೊತೆಗೆ ರಾಣಿ ಎಲಿಜಬೆತ್ ಬಳಿ ಪ್ರಧಾನಿ ಬೋರಿಸ್ ಕ್ಷಮೆ ಕೂಡ ಕೇಳಬೇಕಾಯಿತು.

ಪಿಂಚರ್ ಲೈಂಗಿಕ ಹಲ್ಲೆ

ಪಿಂಚರ್ ಲೈಂಗಿಕ ಹಲ್ಲೆ

ಕನ್ಸರ್ವೇಟಿವ್ ಪಕ್ಷದ ಮುಖಂಡ ಮತ್ತು ಡೆಪ್ಯುಟಿ ಚೀಫ್ ವಿಪ್ ಆಗಿದ್ದ ಕ್ರಿಸ್ಟೋಫರ್ ಪಿಂಚರ್ ವಿರುದ್ಧ ಹಲವು ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದವು.
ಕಳೆದ ವಾರ ನೈಟ್ ಪಾರ್ಟಿಯೊಂದರಲ್ಲಿ ಪಿಂಚರ್ ಕುಡಿತದ ಅಮಲಿನಲ್ಲಿ ಹುಚ್ಚಾಟ ಮೆರೆದಿದ್ದರು. ಆ ಘಟನೆ ಬಳಿಕ ಅವರನ್ನು ಪಕ್ಷದಿಂದ ಅಮಾನತು ಮಾಡಲಾಯಿತು.
ಅದಾದ ಬಳಿಕ ಕ್ರಿಸ್ಟೋಫರ್ ಪಿಂಚರ್ ಈ ಹಿಂದೆಯೂ ಲೈಂಗಿಕ ಕಿರುಕುಳದ ಆರೋಪಗಳನ್ನು ಎದುರಿಸುತ್ತಿದ್ದುದು ಬೆಳಕಿಗೆ ಬಂದಿತು. ಈ ಪ್ರಕರಣಗಳು ಬೆಳಕಿಗೆ ಬಂದರೂ ಪ್ರಧಾನಿ ಕಾರ್ಯಾಲಯ ಏನೂ ಗೊತ್ತಿಲ್ಲದಂತೆ ಸುಮ್ಮನಿದ್ದುದು ಸಚಿವ ಸಹೋದ್ಯೋಗಿಗಳನ್ನು ಕೆರಳಿಸಿತು. ಹೀಗಾಗಿ, ಸಾಲು ಸಾಲಾಗಿ ರಾಜೀನಾಮೆಗಳನ್ನು ನೀಡಿದರೆನ್ನಲಾಗಿದೆ.

ಇನ್ನಿಬ್ಬರ ಮೇಲೆ ಲೈಂಗಿಕ ಹಗರಣ

ಇನ್ನಿಬ್ಬರ ಮೇಲೆ ಲೈಂಗಿಕ ಹಗರಣ

ಕ್ರಿಸ್ಟೋಫರ್ ಪಿಂಚರ್ ಮಾತ್ರವಲ್ಲ ಕನ್ಸರ್ವೇಟಿವ್ ಪಕ್ಷದ ಇನ್ನೂ ಇಬ್ಬರು ಸಂಸದರು ಲೈಂಗಿಕ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದರು. ಇಮ್ರಾನ್ ಅಹ್ಮದ್ ಖಾನ್ 15 ವರ್ಷದ ಬಾಲಕನೊಬ್ಬನ ಮೇಲೆ ಲೈಂಗಿಕ ಹಲ್ಲೆ ಎಸಗಿದ್ದು ಸಾಬೀತಾಗಿತ್ತು.
ನೀಲ್ ಪಾರಿಶ್ ಎಂಬ ಮತ್ತೊಬ್ಬ ಕನ್ಸರ್ವೇಟಿವ್ ಸಂಸದ ರಾಷ್ಟ್ರೀಯ ಅಧಿವೇಶನ ನಡೆಯುವ ವೇಳೆ ಎರಡು ಬಾರಿ ತಾನು ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸಿದ್ದಾಗಿ ತಪ್ಪೊಪ್ಪಿಕೊಂಡರು. ಈ ಇಬ್ಬರೂ ಕೂಡ ರಾಜೀನಾಮೆ ನೀಡಿದರು.
ಇವರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಗಳು ಸೋತು ಹೋದರು.

ಹಣ ಪಡೆದು ಲಾಬಿ

ಹಣ ಪಡೆದು ಲಾಬಿ

ಬೋರಿಸ್ ಜಾನ್ಸನ್ ಸಂಪುಟದಲ್ಲಿ ಮಂತ್ರಿಯಾಗಿದ್ದ ಓವನ್ ಪ್ಯಾಟರ್ಸನ್ ಕಂಪನಿಗಳಿಂದ ಹಣ ಪಡೆದು ಸರಕಾರದೊಳಗೆ ಅವುಗಳ ಪರ ಲಾಬಿ ಮಾಡುತ್ತಿದ್ದ ಕೆಲಸ ಬೆಳಕಿಗೆ ಬಂದಿತ್ತು. ಸಂಸತ್‌ನ ಸ್ಟಾಂಡರ್ಡ್ಸ್ ಕಮಿಟಿ ಓವನ್ ಪ್ಯಾಟರ್ಸನ್‌ರನ್ನು ಅಮಾನತುಗೊಳಿಸಲು ಶಿಫಾರಸು ಮಾಡಿತು.
ಇವುಗಳ ಜೊತೆಗೆ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಮನೆಯ ನವೀಕರಣ ಕಾರ್ಯಕ್ಕೆ ದೇಣಿಗೆಗಳು ಬಂದಿತ್ತು. ಆದರೆ ಈ ಬಗ್ಗೆ ಸರಿಯಾದ ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕೆ ಬ್ರಿಟನ್‌ನ ಚುನಾವಣಾ ಆಯೋಗವು ಕನ್ಸರ್‌ವೇಟಿವ್ ಪಕ್ಷಕ್ಕೆ 17,800 ಪೌಂಡ್ ಹಣ ದಂಡ ವಿಧಿಸಿತ್ತು.
ಹೀಗೆ ಇನ್ನೂ ಕೆಲವಾರು ಆರೋಪ, ಹಗರಣಗಳು ಬೋರಿಸ್ ಜಾನ್ಸನ್ ಸರಕಾರವನ್ನು ಬಾಧಿಸಿದ್ದವು.

(ಒನ್ಇಂಡಿಯಾ ಸುದ್ದಿ)

English summary
Boris Johnson who ascended to Prime Minister throne has resigned due to pressure inside party over lots of scandals and scams. Here are four important things that made him resign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X