Maha Kumbh Mela 2025: ಮಹಾಕುಂಭ ಮೇಳದಲ್ಲಿ ಮಿಂಚುತ್ತಿರೋ ಈ ಬ್ಯೂಟಿಫುಲ್ ಸಾಧ್ವಿಯ ಹಿಂದಿದೆ ರೋಚಕ ಕಥೆ
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ-2025 ಅದ್ಧೂರಿಯಾಗಿ ನೆರವೇರುತ್ತಿದೆ. ಕೋಟ್ಯಂತರ ಮಂದಿ ಭಕ್ತಾದಿಗಳು ಪ್ರಯಾಗ್‌ರಾಜ್‌ನಲ್ಲಿ ಬೀಡುಬಿಟ್ಟಿದ್ದಾರೆ. ಇದೇ ಮಹಾಕುಂಭಮೇಳದಲ್ಲಿ ಸಾಧ್ವಿಯಾಗಿ ಕಾಣಿಸಿಕೊಂಡಿರುವ ಚೆಲುವೆಯೊಬ್ಬರ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಬೆಡಗಿ ಸಾದ್ವಿಯಾಗಿದ್ದೇಕೆ? ಎಂಬ ಕುತೂಹಲ ಕೂಡ ಹಲವರಲ್ಲಿ ಮೂಡಿದೆ.
ಸದ್ಯ ಎಲ್ಲರೂ ಮಹಾಕುಂಭ ಮೇಳದತ್ತ ಹುಬ್ಬೇರಿಸಿ ನೋಡುತ್ತಿದ್ದಾರೆ. ಮತ್ತೊಂದೆಡೆ ಮಹಾಕುಂಭ ಮೇಳದಲ್ಲಿ ಬ್ಯೂಟಿಫುಲ್ ಸಾಧ್ವಿಯೊಬ್ಬರು ಎಲ್ಲರ ಕಣ್ಣಿಗೆ ಬಿದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಇವರ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಈ ವೈರಲ್ ವಿಡಿಯೋದಲ್ಲಿ ಹರ್ಷಾ ರಿಚರಿಯಾ (Harsha Richhariya) ಹೆಸರಿನ ಸಾಧ್ವಿಯೊಬ್ಬರು ಭಾರಿ ಚರ್ಚೆಯಲ್ಲಿದ್ದಾರೆ. ಇಂತಹ ಅಂದಗಾತಿ ಏಕೆ ಸಾಧ್ವಿಯಾಗಿದ್ದಾರೆ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಂತೂ ಇವರ ಫೋಟೋಗಳು ಹಂಚಿಕೊಂಡು ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇವರು ಸದ್ಯ ಮಹಾಕುಂಭಮೇಳ ಅಟ್ರಾಕ್ಷನ್ ಆಗಿಯೂ ಸದ್ದು ಮಾಡುತ್ತಿದ್ದಾರೆ. ಯೂಟ್ಯೂಬರ್‌ಗಳು ಹಾಗೂ ಮಾಧ್ಯಮಗಳು ಇವರ ಬೆನ್ನತ್ತಿ ಇವರ ಜೀವನಗಾಥೆಯನ್ನು ಕೂಡ ಪತ್ತೆ ಹಚ್ಚಿದ್ದಾರೆ. ಈ ವೇಳೆ ಹರ್ಷಾ ರಿಚರಿಯಾ ಅವರ ಕಲರ್‌ಫುಲ್ ಲೈಫ್ ಅನಾವರಣಗೊಂಡಿದೆ. ತನ್ನ ಆಕರ್ಷಕ ಸೌಂದರ್ಯದ ಹೊರತಾಗಿಯೂ ಹರ್ಷಾ ರಿಚರಿಯಾ ಅವರು ಸಾಧ್ವಿ ಜೀವನವನ್ನು ಆರಿಸಿಕೊಂಡಿದ್ದೇಕೆ? ಎಂಬುದು ಕೂಡ ಬೆಳಕಿಗೆ ಬಂದಿದೆ.
ಜನ ಹರ್ಷಾ ರಿಚರಿಯಾ ಅವರನ್ನು ಹಿಂಬಾಲಿಸಿದಾಗ ಅವರು ಮೂಲತಃ ಉತ್ತರಾಖಂಡದವರು ಎಂದು ತಿಳಿದುಬಂದಿದೆ. ಅಲ್ಲದೆ ಆಚಾರ್ಯ ಮಹಾಮಂಡಲೇಶ್ವರರ ಶಿಷ್ಯೆ ಎಂದು ರಿಚರಿಯಾ ಪರಿಚಯ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಹಾದಿಗೆ ಬರಲು ಕಾರಣವನ್ನೂ ಬಿಚ್ಚಿಟ್ಟಿದ್ದಾರೆ. ನಾನು ಇರುವುದೆಲ್ಲವನ್ನು ಬಿಟ್ಟು ಈ ಹಾದಿಯನ್ನು ಅಪ್ಪಿಕೊಂಡಿದ್ದೇನೆ. ನಾನು ಆಂತರಿಕ ಶಾಂತಿಗಾಗಿ ಸಾಧ್ವಿಯ ಜೀವನವನ್ನು ಆರಿಸಿದೆ ಎಂದು ವಿವರಿಸಿದ್ದಾರೆ. ನನಗೆ 30 ವರ್ಷ ವಯಸ್ಸಾಗಿದ್ದು, ಕಳೆದ ಎರಡು ವರ್ಷಗಳಿಂದ ಸಾಧ್ವಿಯಾಗಿ ಬದುಕುತ್ತಿದ್ದೇನೆ ಎಂದಿದ್ದಾರೆ.

ನಾನು ಈ ಹಿಂದೆ ನಟಿಯಾಗಿದ್ದೆ ಎಂದು ಬಹಿರಂಗಪಡಿಸುವ ಮೂಲಕ ಹರ್ಷಾ ರಿಚರಿಯಾ ಶಾಕ್ ನೀಡಿದ್ದಾರೆ. ನಟಿಯಾಗಿ, ಮಾಡೆಲ್ ಆಗಿ, ಜಾಲಿಯಾಗಿನ ಪ್ರಪಂಚ ಸುತ್ತಾಡಿಕೊಂಡು, ನಿರೂಪಕಿಯಾಗಿ ಮಿಂಚಿದ್ದ ಆಕೆಯ ಬದುಕು ತಿರುವು ಪಡೆದುಕೊಂಡ ಬಗ್ಗೆಯೂ ಅವರು ವಿವರಿಸಿದ್ದಾರೆ. ನಟನೆ, ನಿರೂಪಣೆ, ಪ್ರಪಂಚವನ್ನು ಸುತ್ತುವಾಗ, ನಾವು ಜೀವನದಲ್ಲಿ ತುಂಬಾ ಸಾಧನೆ ಮಾಡಿದಾಗ ಯಾವುದೂ ನಿಜವಾದ ಶಾಂತಿಯನ್ನು ತರುವುದಿಲ್ಲ ಎಂಬುದನ್ನು ಅರಿತುಕೊಂಡೆ. ನಮಗೆ ಖ್ಯಾತಿ ಮತ್ತು ಮನ್ನಣೆ ಇರಬಹುದು, ಆದರೆ ಸಮಾಧಾನವಿಲ್ಲ. ಆಗ ಭಕ್ತಿ ನಮ್ಮನ್ನು ಸೆಳೆಯಲು ಪ್ರಾರಂಭಿಸುತ್ತದೆ. ನಾವು ಲೌಕಿಕ ಸಂಪರ್ಕಗಳಿಂದ ದೂರವಿರಬೇಕು. ಪ್ರಾರ್ಥನೆ, ಸ್ತೋತ್ರಗಳು ಮತ್ತು ದೇವರ ಭಕ್ತಿಯಲ್ಲಿ ಮುಳುಗಬಹುದು ಎಂದು ರಿಚಾ ಹೇಳಿಕೊಂಡಿದ್ದಾರೆ.
ಕಂಟೆಂಟ್ ಕ್ರಿಯೇಟರ್ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿಯೂ ಮಿಂಚಿದ್ದ ಹರ್ಷ ರಿಚಾರಿಯಾ ಅವರು ಇಂದು ಆಧ್ಯಾತ್ಮದ ಕಡೆಗೆ ವಾಲಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿರುವುದಂತೂ ಸತ್ಯ. ಇನ್‌ಸ್ಟಾಗ್ರಾಂನಲ್ಲಿ ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿದ್ದ ಹರ್ಷ ಇಂದು ಮಹಾಕುಂಭ ಮೇಳ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳ ಪರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹರ್ಷಾ ರಿಚರಿಯಾ ಅವರಿಗೆ ಭಗವಂತ ಅಂದ ಕೊಟ್ಟನೆಂದು ಭಗವಂತನ ಸೇವೆಗೆ ಬದುಕನ್ನು ಮುಡಿಪಿಟ್ಟಿದ್ದಾರೆ. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಿಲ್ಲ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.












Click it and Unblock the Notifications