ಪ್ರತಿನಿತ್ಯ ಯಾವ ಆಹಾರ ಸೇವಿಸಿದರೆ ಕೊರೊನಾ ಸೋಂಕನ್ನು ದೂರವಿಡಬಹುದು; ಅಧ್ಯಯನ ವರದಿ
ನಮ್ಮ ಆಹಾರದ ಆಯ್ಕೆಗೂ ನಮ್ಮ ಆರೋಗ್ಯ ಹಾಗೂ ದೇಹದ ಕಾರ್ಯವೈಖರಿಗೂ ನೇರಾನೇರ ಸಂಬಂಧವಿದೆ. ಹಾಗೆಯೇ ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಗೂ ಆಹಾರವೇ ಕಾರಣವಲ್ಲವೇ? "ರೋಗನಿರೋಧಕ ಶಕ್ತಿ" ಎಂಬ ಪದ ಹೆಚ್ಚು ಬಳಕೆಗೆ ಬಂದಿರುವುದು ಈಚೆಗೆ. ಕೊರೊನಾ ಸೋಂಕಿನ ಪ್ರಕರಣ ವ್ಯಾಪಕವಾಗುತ್ತಿದ್ದಂತೆ ಸೋಂಕು ದೂರವಿಡಲು ರೋಗನಿರೋಧಕ ಶಕ್ತಿ ಎಷ್ಟು ಅವಶ್ಯಕ ಎಂಬುದೂ ತಿಳಿಯಿತು.
ಕೊರೊನಾ ಸೋಂಕು ಪ್ರಸ್ತುತ ಹಲವು ರೂಪಾಂತರಗಳನ್ನು ತಾಳುತ್ತಿದೆ. ಈ ಸಮಯದಲ್ಲಿ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು, ಸೋಂಕಿನಿಂದ ತಪ್ಪಿಸಿಕೊಳ್ಳಲು ಯಾವೆಲ್ಲಾ ಆಹಾರ ಸೇವಿಸಿದರೆ ಒಳ್ಳೆಯದು ಎಂಬ ಕುರಿತು ಜನರು ಆಲೋಚಿಸುತ್ತಿದ್ದಾರೆ. ಇದಕ್ಕೆ ಸಿದ್ಧ ಉತ್ತರವೆಂದರೆ, ಉತ್ತಮ ಪೌಷ್ಟಿಕಾಂಶಗಳನ್ನೊಳಗೊಂಡ ಆಹಾರ ಸೇವನೆ ಎಂಬುದು. ಆದರೆ ಆ ಆಹಾರ ಪದಾರ್ಥಗಳು ಯಾವ್ಯಾವು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಆಹಾರ ಕ್ರಮಕ್ಕೂ ಕೊರೊನಾ ಸೋಂಕಿಗೂ ನಡುವಿನ ಸಂಬಂಧವನ್ನು ವಿಜ್ಞಾನಿಗಳು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ಸಂಬಂಧ ಅಧ್ಯಯನವೂ ನಡೆದಿದೆ. ಅದು ಏನು ಹೇಳುತ್ತಿದೆ? ಮುಂದೆ ಓದಿ...

ಸಸ್ಯಾಹಾರ ಸೋಂಕು ತಡೆಗೆ ಉತ್ತಮ ಎಂದ ಅಧ್ಯಯನ
ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್, ಬ್ರಿಟನ್, ಅಮೆರಿಕದಲ್ಲಿ 2884 ಆರೋಗ್ಯ ಕಾರ್ಯಕರ್ತರ ಮೇಲೆ ಆಹಾರ ಕ್ರಮ ಸಂಬಂಧ ಅಧ್ಯಯನ ನಡೆಸಲಾಗಿತ್ತು. ಬಿಎಂಜೆ ಮೆಡಿಕಲ್ ಜರ್ನಲ್‌ನಲ್ಲಿ ಈ ಅಧ್ಯಯನ ಪ್ರಕಟಗೊಂಡಿದ್ದು, ಸಸ್ಯಾಹಾರ ಹಾಗೂ ಸಸ್ಯಾವಲಂಬಿತ ಸಮುದ್ರಾಹಾರ (Sea food) ಕೊರೊನಾ ಸೋಂಕಿನ ತಡೆಗೆ ಸಹಕಾರಿಯಾಗಬಲ್ಲದು ಎಂದು ತಿಳಿಸಿದೆ. ಮಾಂಸಾಹಾರಿಗಳಿಗೆ ಹೋಲಿಸಿದರೆ ಸಸ್ಯಾಹಾರಿಗಳಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಿರುತ್ತದೆ ಎಂದು ತಿಳಿಸಿದೆ.
"ಆದರೆ, ಪೌಷ್ಟಿಕಾಂಶವೊಂದೇ ಕೊರೊನಾದಿಂದ ರಕ್ಷಣೆ ಪಡೆಯಲು ಮ್ಯಾಜಿಕ್ ಬುಲೆಟ್‌ನಂತೆ ವರ್ತಿಸಲು ಸಾಧ್ಯವಿಲ್ಲ," ಎಂದು ಬ್ರಿಟನ್‌ನ ಯೂನಿವರ್ಸಿಟಿ ಆಫ್ ಸೌತಂಪ್ಟನ್ ವೈದ್ಯ ಫಿಲಿಪ್ ಕಾಲ್ಡರ್ ಹೇಳಿದ್ದಾರೆ.

ಸೋಂಕು ತಗುಲುವ ಸಾಧ್ಯತೆ 73%ರಷ್ಟು ಕಡಿಮೆ
ಸಸ್ಯಾಹಾರಿ ಆಹಾರ ಕ್ರಮ ಅನುಸರಿಸುವವರಲ್ಲಿ ಸೋಂಕು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ 73%ರಷ್ಟು ಕಡಿಮೆ ಇರುತ್ತದೆ. ಸಸ್ಯಾವಲಂಬಿತ ಸೀ ಫುಡ್ ಸೇವನೆ ಮಾಡುವವರಲ್ಲಿ (ಪೆಸೆಟೇರಿಯನ್ ಡಯಟ್) ಈ ಸಾಧ್ಯತೆ 59% ಇರುತ್ತದೆ ಎಂದು ಅಧ್ಯಯನ ತಿಳಿಸಿದೆ. ಕಡಿಮೆ ಕಾರ್ಬೊಹೈಡ್ರೇಟ್, ಹೆಚ್ಚಿನ ಪ್ರೊಟೀನ್ ಆಹಾರ ಕ್ರಮ ಅನುಸರಿಸುವವರಿಗೆ ಸಸ್ಯಾಹಾರಿಗಳಿಗಿಂತ ಸೋಂಕು ತಗುಲುವ ಸಾಧ್ಯತೆ ಮೂರು ಪಟ್ಟು ಹೆಚ್ಚಿರುತ್ತದೆ ಎಂದು ಹೇಳಿದೆ. 568 ಕೊರೊನಾ ಪ್ರಕರಣಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, 298 ಮಂದಿ ಮಾತ್ರ ಆ್ಯಂಟಿಬಾಡಿ ಹೊಂದಿದ್ದರು. ಅದರಲ್ಲಿ ಹೆಚ್ಚಿನವರು ಅಧಿಕ ಮಟ್ಟದಲ್ಲಿ ಸಸ್ಯಾಹಾರ ಸೇವನೆ ಮಾಡುತ್ತಿದ್ದವರು ಎಂದು ತಿಳಿಸಿದೆ.

ಪ್ರತಿನಿತ್ಯ 400 ಗ್ರಾಂ ಹಣ್ಣು ಸೇವನೆ ಮಾಡಬೇಕು
ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೆಲವು ಆರೋಗ್ಯ ಕ್ರಮಗಳ ಕುರಿತು ಸಲಹೆ ನೀಡಿದೆ. ಅದರಂತೆ ಮನುಷ್ಯರಿಗೆ ಮೈಕ್ರೋ ನ್ಯೂಟ್ರಿಯಂಟ್ ಹಾಗೂ ಮ್ಯಾಕ್ರೋ ನ್ಯೂಟ್ರಿಯಂಟ್‌ಗಳ ಅವಶ್ಯಕತೆಯಿದೆ. ಮೈಕ್ರೊ ನ್ಯೂಟ್ರಿಯಂಟ್‌ನಲ್ಲಿ ವಿಟಮಿನ್, ಮಿನರಲ್‌ಗಳಿದ್ದು, ರೋಗನಿರೋಧಕ ಶಕ್ತಿ ಕಾಪಾಡಲು ಸಹಕಾರಿಯಾಗಿವೆ. ಮ್ಯಾಕ್ರೋ ನ್ಯೂಟ್ರಿಯಂಟ್‌ಗಳು ನಮ್ಮ ದೇಹ ಸೂಕ್ತವಾಗಿ ಕಾರ್ಯನಿರ್ವಹಿಸಲು ಶಕ್ತಿ ನೀಡುವುದಾಗಿದ್ದು, ಅದನ್ನು ಕಾರ್ಬೊಹೈಡ್ರೇಟ್, ಪ್ರೊಟೀನ್ ಹಾಗೂ ಕೊಬ್ಬು ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
ಎಲ್ಲಾ ಹಣ್ಣು, ತರಕಾರಿಗಳು ಹಾಗೂ ಕಾಳುಗಳು (ಬೀನ್ಸ್, ಕಡಲೆ ಕಾಳು, ಬಟಾಣಿ), ಧಾನ್ಯಗಳು (ಕೆಂಪಕ್ಕಿ, ಓಟ್ಸ್, ಜೋಳ) ಇವುಗಳ ಸೇವನೆ ಸೋಂಕಿನಿಂದ ದೂರವಿರಲು ಉತ್ತಮ ಆಹಾರ. ಪ್ರತಿ ದಿನ ಕನಿಷ್ಠ 400 ಗ್ರಾಂ ಹಣ್ಣು, ತರಕಾರಿಗಳ ಸೇವನೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ.

ಮೀನು ಸೇವನೆ ತುಂಬಾ ಒಳ್ಳೆಯದು
ಸಕ್ಕರೆಯನ್ನು ಹೆಚ್ಚಿನ ಮಟ್ಟದಲ್ಲಿ ಸೇವಿಸಬಾರದು. ಜ್ಯೂಸ್, ಆಹಾರದಲ್ಲಿನ ಸಕ್ಕರೆ ಅಂಶವನ್ನು ಒಳಗೊಂಡು ದಿನಕ್ಕೆ 12 ಚಮಚಗಳಿಗೆ ಹೆಚ್ಚಿಗೆ ಮೀರಬಾರದು. ಆದರೆ ಹಣ್ಣುಗಳಲ್ಲಿನ ಸಕ್ಕರೆ ಅಂಶವನ್ನು ಇದು ಒಳಗೊಳ್ಳುವುದಿಲ್ಲ. ಉಪ್ಪಿನ ಅಂಶದ ಸೇವನೆಯೂ ಅತಿಯಾಗಿರಬಾರದು ಎಂದು ಸಲಹೆ ನೀಡಲಾಗಿದೆ.
ಒಮೆಗಾ 3 ಆಸಿಡ್ ಸೇವನೆ ಆರೋಗ್ಯಕ್ಕೆ, ರೋಗನಿರೋಧಕ ಶಕ್ತಿಯ ಹೆಚ್ಚಳಕ್ಕೆ ಅತ್ಯುತ್ತಮ ಎನ್ನಲಾಗಿದೆ. ಇದು ಮೀನಿನಲ್ಲಿ ಅಧಿಕ ಮಟ್ಟದಲ್ಲಿದ್ದು, ಮೀನು ಸೇವನೆ ಸೋಂಕು ದೂರವಿಡಲು ಕೂಡ ಪರಿಣಾಮಕಾರಿಯಾಗಬಲ್ಲದು ಎಂದು ಅಧ್ಯಯನ ತಿಳಿಸಿದೆ.
ವಯಸ್ಸು, ಲಿಂಗ, ವೈದ್ಯಕೀಯ ಸೌಲಭ್ಯ, ದೇಹದ ತೂಕ, ಎತ್ತರ ಹಾಗೂ ಜೀವನಶೈಲಿ ಅಂಶಗಳನ್ನು ಈ ಅಧ್ಯಯನದಲ್ಲಿ ಪರಿಗಣಿಸಿಲ್ಲ. ಅಧ್ಯಯನವು 70% ಪುರುಷರನ್ನು ಒಳಗೊಂಡಿದ್ದು, 95% ವೈದ್ಯರಿದ್ದಾರೆ. ಇದು ಅಧ್ಯಯನದ ಕೊರತೆಯೂ ಎನ್ನಬಹುದು. ಜೊತೆಗೆ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುವ ಹಲವು ಅಂಶಗಳಿವೆ. ಆಹಾರ ಕ್ರಮ ಒಂದು ಅಂಶವಷ್ಟೆ ಎಂದು ಕಾಲ್ಡರ್ ಹೇಳಿದ್ದಾರೆ.
-
Vastu Tips: ವಾಸ್ತು ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ವಿನ್ಯಾಸ ಹೇಗಿರಬೇಕು -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications