Maha Kumbh Mela 2025: ಕೊನೇ ಅಮೃತ ಸ್ನಾನದಲ್ಲಿ ಪಾಲ್ಗೊಂಡ ಭಕ್ತರಿಗೆ ಆಗಸದಿಂದ ಹೂಮಳೆ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಇಂದು ವಸಂತ ಪಂಚಮಿ ಹಾಗೂ ಕೊನೆಯ ಅಮೃತ ಸ್ನಾನದ ದಿನದ ಹಿನ್ನೆಲೆ ಕೋಟ್ಯಂತರ ಮಂದಿ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದಾರೆ. ವಸಂತ ಪಂಚಮಿಯ ಸಂದರ್ಭದಲ್ಲಿ ಸಂತರು ಮತ್ತು ಭಕ್ತರು ತ್ರಿವೇಣಿ ಸಂಗಮದಲ್ಲಿ ಭಾರಿ ಸಂಖ್ಯೆಯಲ್ಲಿ ಆಗಮಿಸಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ವೇಳೆ ಚಾಪರ್‌ನಿಂದ ಹೂವಿನ ದಳಗಳನ್ನು ಸುರಿಸಲಾಗಿದೆ. ಮಹಾಕುಂಭ ಮೇಳದ ಕೊನೆಯ ಅಮೃತ ಸ್ನಾನ ಇಂದು ನಡೆಯುತ್ತಿದೆ.

ಇಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಗ್‌ರಾಜ್‌ಗೆ ಬಂದು ಪುಣ್ಯಸ್ನಾನ ಮಾಡುತ್ತಿದ್ದಾರೆ. ಸರ್ಕಾರದ ಆದೇಶದ ಮೇರೆಗೆ ಐರಾವತ ಘಾಟ್, ಆರೈಲ್ ಘಾಟ್, ಸರಸ್ವತಿ ಘಾಟ್ ಮತ್ತು ನಾಗವಾಸುಕಿ ದೇವಸ್ಥಾನದ ಪ್ರದೇಶಗಳಲ್ಲಿ ಭಕ್ತರ ಮೇಲೆ ಹೂವಿನ ದಳಗಳನ್ನು ಸುರಿಸಲಾಯಿತು. ಸಂಗಮ್ ಘಾಟ್‌ನಲ್ಲಿ ಅಮೃತ ಸ್ನಾನದಲ್ಲಿ ಭಾಗವಹಿಸುವ ಅಖಾರಾಗಳ ಮೇಲೆಯೂ ಹೂವುಗಳನ್ನು ಸುರಿಸಲಾಯಿತು ಎಂದು ಮಹಾಕುಂಭ ಎಡಿಎಂ ಚಂದ್ರಪಾಲ್ ತಿವಾರಿ ಹೇಳಿದ್ದಾರೆ.

Flowers Showered From Chopper On Maha Kumbh Mela Devotees On Vasant Panchami

ವಸಂತ ಪಂಚಮಿಯ ಸಂದರ್ಭದಲ್ಲಿ ಅಮೃತ ಸ್ನಾನಕ್ಕಾಗಿ ಎಲ್ಲ ಅಖಾರಾಗಳು ಇಂದು ತ್ರಿವೇಣಿ ಸಂಗಮಕ್ಕೆ ಪ್ರವೇಶಿಸಿವೆ. ಉತ್ತರ ಪ್ರದೇಶದ ವಾರ್ತಾ ಇಲಾಖೆ ಪ್ರಕಾರ ಇಂದು 62.25 ಲಕ್ಷಕ್ಕೂ ಹೆಚ್ಚು ಭಕ್ತರು ಬೆಳಿಗ್ಗೆ 8 ಗಂಟೆಯಿಂದ ಪವಿತ್ರ ಸ್ನಾನ ಮಾಡಿದ್ದಾರೆ. ಫೆಬ್ರವರಿ 2 ರವರೆಗೆ ಸುಮಾರು 34.97 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ.

ಎಲ್ಲ 13 ಅಖಾಡಾಗಳು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ನಾವು ಗಂಗಾ ಮಾತೆ, ಭಗವಾನ್ ಶಿವನಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ. ಎಲ್ಲ ನಾಗಾಗಳು ತುಂಬಾ ಉತ್ಸುಕರಾಗಿದ್ದಾರೆ. ಇದು ನಮ್ಮ ಮೂರನೇ ಅಮೃತ ಸ್ನಾನವಾಗಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಉತ್ತಮ ವ್ಯವಸ್ಥೆಗಳನ್ನು ಮಾಡಿದ್ದಾರೆ. ಅವರಿಗೆ ನಾನು ಅಭಿನಂದಿಸುತ್ತೇನೆ ಎಂದು ಆಧ್ಯಾತ್ಮಿಕ ನಾಯಕ ಸ್ವಾಮಿ ಕೈಲಾಶಾನಂದ ಗಿರಿ ಹೇಳಿದ್ದಾರೆ.

Flowers Showered From Chopper On Maha Kumbh Mela Devotees On Vasant Panchami

ಸನಾತನ ಧರ್ಮವನ್ನು ಅನುಸರಿಸದ ಜನರು ಇದರಿಂದ ಪಾಠ ಕಲಿಯಬೇಕು. 13 ಅಖಾಡಗಳು ಇಂದು ಸಹ ಸನಾತನವು ಸಾಧುಗಳ ಜೊತೆಯಲ್ಲಿದೆ. ಸಾಧುಗಳು ಸನಾತನ ಸಂಸ್ಥೆಯೊಂದಿಗಿದ್ದಾರೆ ಎಂದು ಸ್ವಾಮಿ ಕೈಲಾಶಾನಂದ ಗಿರಿ ತಿಳಿಸಿದ್ದಾರೆ. ವಸಂತ ಪಂಚಮಿ, ಶ್ರೀ ಪಂಚಮಿ ಮತ್ತು ಸರಸ್ವತಿ ಪಂಚಮಿ ಎಂದೂ ಕರೆಯಲ್ಪಡುವ ಹಿಂದೂ ಹಬ್ಬವಾದ ಬಸಂತ್ ಪಂಚಮಿಯನ್ನು ಮಾಘ ಮಾಸದ ಐದನೇ ದಿನದಂದು ಆಚರಿಸಲಾಗುತ್ತದೆ. ಇದು ವಸಂತಕಾಲದ ಆರಂಭ ಸೂಚಕ ಎಂದು ನಂಬಲಾಗಿದೆ.

ವಸಂತ್ ಪಂಚಮಿಯಂದು ಅಮೃತ ಸ್ನಾನದ ಸಮಯದಲ್ಲಿ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಭದ್ರತಾ ಕ್ರಮಗಳನ್ನು ಮಾಡಲಾಗಿದೆ. ಇದಕ್ಕಾಗಿ ನಿಯೋಜಿಸಿರುವ ನಿಗಾ ಕೇಂದ್ರವು 25 ವಲಯಗಳು, 30 ಸೇತುವೆಗಳು ಮತ್ತು ಸೂಕ್ಷ್ಮ ಬ್ಯಾರಿಕೇಡ್‌ಗಳ ಪ್ರದೇಶಗಳ ಬಳಿ ಕಣ್ಣಿಟ್ಟಿದೆ. ಪ್ರಯಾಗ್‌ರಾಜ್‌ ನಗರ ಮತ್ತು ಮಹಾ ಕುಂಭಮೇಳ ನಡೆಯುವ ಪ್ರದೇಶ ಎರಡನ್ನೂ ಒಳಗೊಳ್ಳಲು 3,000 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ನಿಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+