ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ವೈಪರಿತ್ಯ: ಭಾರತದಲ್ಲಿ 38 ಲಕ್ಷ ಜನ ಆಂತರಿಕವಾಗಿ ಸ್ಥಳ ಬದಲಾವಣೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 3: ಪ್ರಪಂಚದಾದ್ಯಂತದ ಹಲವಾರು ದೇಶಗಳು ಬರದಿಂದ ಹಠಾತ್ ಪ್ರವಾಹದವರೆಗೆ ತೀವ್ರ ಹವಾಮಾನ ವೈಪರಿತ್ಯಗಳನ್ನು ಎದುರಿಸುತ್ತಿರುವ ಕಾರಣ, 2020ರಲ್ಲಿ ಭಾರತದಲ್ಲಿ 3.8 ದಶಲಕ್ಷಕ್ಕೂ ಹೆಚ್ಚು ಜನ ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಿಶೇಷ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹವಾಮಾನ ಸಂಬಂಧಿಯ ವಿಪತ್ತುಗಳಿಂದಾಗಿ ಚೀನಾದಲ್ಲಿ 5 ಮಿಲಿಯನ್‌ಗಿಂತಲೂ ಹೆಚ್ಚು ಮತ್ತು ಅಮೆರಿಕದಲ್ಲಿ 1.7 ಮಿಲಿಯನ್‌ಗಿಂತಲು ಹೆಚ್ಚಿನ ಜನ ಅನಿವಾರ್ಯವಾಗಿ ಸ್ಥಳಾಂತರ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಮಳೆ ನೀರಿನ ಸೆಳೆತಕ್ಕೆ ಕೊಚ್ಚಿಹೋದ ಸೇತುವೆ, ಕಣ್ವ ಜಲಾಶಯದ ಸಂಪರ್ಕ ಕಡಿತಮಳೆ ನೀರಿನ ಸೆಳೆತಕ್ಕೆ ಕೊಚ್ಚಿಹೋದ ಸೇತುವೆ, ಕಣ್ವ ಜಲಾಶಯದ ಸಂಪರ್ಕ ಕಡಿತ

ಈ ತಿಂಗಳು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಯುಎನ್ ಜನರಲ್ ಅಸೆಂಬ್ಲಿ ಅಧಿವೇಶನದ ಮೊದಲು, ಮಾನವ ಹಕ್ಕುಗಳು ಮತ್ತು ಹವಾಮಾನ ಬದಲಾವಣೆಯ ಕುರಿತ ಯುಎನ್ ವಿಶೇಷ ವರದಿಗಾರ ಇಯಾನ್ ಫ್ರೈ ನೀಡಿರುವ ವರದಿಯ ಪ್ರಕಾರ, ಹವಾಮಾನದ ಬದಲಾವಣೆ ಇಡೀ ಜಗತ್ತಿನ ನಾಗರಿಕರ ಮೇಳೆ ಋಣಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ವಾರ್ಷಿಕ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾಗವಹಿಸಲು ಮತ್ತು ಭಾಷಣ ಮಾಡಲು ನ್ಯೂಯಾರ್ಕ್‌ಗೆ ತೆರಳಲಿದ್ದಾರೆ ಮತ್ತು ಹವಾಮಾನ ಬದಲಾವಣೆಯು ಈ ವರ್ಷ ಭಾರತ ಆದ್ಯತೆ ನೀಡುವ ವಿಷಯಗಳಲ್ಲಿ ಒಂದಾಗಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಉಂಟಾದ ನಷ್ಟವೆಷ್ಟು?ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಉಂಟಾದ ನಷ್ಟವೆಷ್ಟು?

 ವಾಯುಮಾಲಿನ್ಯ ನಿಯಂತ್ರಿಸದ ರಾಷ್ಟ್ರಗಳು

ವಾಯುಮಾಲಿನ್ಯ ನಿಯಂತ್ರಿಸದ ರಾಷ್ಟ್ರಗಳು

20ರ ಗುಂಪಿನ ಸದಸ್ಯ ರಾಷ್ಟ್ರಗಳು ತಾವು ಈ ಮೊದಲು ನಿರ್ಧರಿಸಿದಂತೆ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ.

"20ರ ಗುಂಪಿನ ಐದು ಸದಸ್ಯ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ರಿಪಬ್ಲಿಕ್ ಆಫ್ ಕೊರಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ವಾಯುಮಾಲಿನ್ಯ ನಿಯಂತ್ರಿಸಲು ಕ್ರಮ ತೆಗೆದಯಕೊಳ್ಳಲು ವಿಫಲಾರಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ವಿಶ್ವದ 55 ಅತ್ಯಂತ ದುರ್ಬಲ ಆರ್ಥಿಕತೆಗಳು ಹವಾಮಾನ ಬಿಕ್ಕಟ್ಟಿನ ಪರಿಣಾಮಗಳಿಂದಾಗಿ ಅರ್ಧದಷ್ಟು ಆರ್ಥಿಕ ಬೆಳವಣಿಗೆಯ ಸಾಮರ್ಥ್ಯವನ್ನು ಕಳೆದುಕೊಂಡಿವೆ," ಎಂದು ಅದು ಹೇಳಿದೆ.

 20 ರಾಷ್ಟ್ರಗಳಿಂದ ಶೇಕಡ 78ರಷ್ಟು ಇಂಗಾಲ ಉತ್ಪಾದನೆ

20 ರಾಷ್ಟ್ರಗಳಿಂದ ಶೇಕಡ 78ರಷ್ಟು ಇಂಗಾಲ ಉತ್ಪಾದನೆ

ಚೀನಾ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಭಾರತ, ಯುರೋಪಿಯನ್ ಯೂನಿಯನ್, ಯುನೈಟೆಡ್ ಕಿಂಗ್‌ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್, ರಷ್ಯನ್ ಫೆಡರೇಶನ್ ಮತ್ತು ಜಪಾನ್ 2019 ರಲ್ಲಿ ವಿಶ್ವದ ಪ್ರಮುಖ ಇಂಗಾಲದ ಡೈಆಕ್ಸೈಡ್ ಹೊರಸೂಸುವ ರಾಷ್ಟ್ರಗಳಾಗಿವೆ.

ಈ ಎಲ್ಲಾ ರಾಷ್ಟ್ರಗಳು ಶೇಕಡಾ 67ರಷ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣವನ್ನು ಹೊಂದಿವೆ. 20 ರಾಷ್ಟ್ರಗಳ ಗುಂಪಿನ ಸದಸ್ಯ ರಾಷ್ಟ್ರಗಳು ಳೆದ ದಶಕದಲ್ಲಿ 78 ಪ್ರತಿಶತದಷ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣವನ್ನು ಹೊಂದಿವೆ.

 ಭಾರತಕ್ಕೆ ಶಾಖದ ಅಲೆಗಳು, ಪ್ರವಾಹದಿಂದ ಸಮಸ್ಯೆ

ಭಾರತಕ್ಕೆ ಶಾಖದ ಅಲೆಗಳು, ಪ್ರವಾಹದಿಂದ ಸಮಸ್ಯೆ

ಹವಾಮಾನ ಬದಲಾವಣೆಯ ಆರ್ಥಿಕ ಮತ್ತು ಆರ್ಥಿಕೇತರ ವೆಚ್ಚಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚಿನ ತೀವ್ರ ಹವಾಮಾನ ಘಟನೆಗಳ ಬಗ್ಗೆ ದಾಖಲಿಸಲಾಗಿದೆ. ಭಾರತದಲ್ಲಿ ಬ್ರಹ್ಮಪುತ್ರ ನದಿಯ ಉದ್ದಕ್ಕೂ 5 ಲಕ್ಷ ಜನರ ಮೇಲೆ ಪರಿಣಾಮ ಬೀರುವ ಬೃಹತ್ ಪ್ರವಾಹಗಳು, ಒಡಿಶಾದಲ್ಲಿ ಅನೇಕ ಚಂಡಮಾರುತಗಳು ಮತ್ತು ಭಾರತದಲ್ಲಿ ಈ ವರ್ಷದ ಬೇಸಿಗೆಯಲ್ಲಿ ಅಭೂತಪೂರ್ವ ಶಾಖದ ಅಲೆಗಳಿಂದ ಸಾವುಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಹವಾಮಾನ ವೈಪರಿತ್ಯದಿಂದಾಗಿ ಭಾರತದ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದ್ದರೆ ಮತ್ತೆ ಕೆಲವು ಭಾಗಗಳಲ್ಲಿ ಮಳೆ ಕೊರತೆ ಎದುರಾಗಿದೆ.

 ಪರಿಹಾರ ನಿಧಿ ಸ್ಥಾಪನೆ ಮನವಿ ತಿರಸ್ಕೃತ

ಪರಿಹಾರ ನಿಧಿ ಸ್ಥಾಪನೆ ಮನವಿ ತಿರಸ್ಕೃತ

ಹವಾಮಾನ ವೈಪರಿತ್ಯದಿಂದ ಉಂಟಾಗುವ ಹಾನಿಗೆ ಪರಿಹಾರ ಒದಗಿಸಲು ಅಂತಾರಾಷ್ಟ್ರೀಯ ನಿಧಿಯನ್ನು ಸ್ಥಾಪಿಸಬೇಕು ಎಂದು ಫ್ರೈ ವರದಿಯಲ್ಲಿ ಮನವಿ ಮಾಡಿದ್ದರು. 77 ರಾಷ್ಟ್ರಗಳು ಮತ್ತು ಚೀನಾ ಗ್ಲಾಸ್ಗೋದಲ್ಲಿ ನಡೆದ ಸಮಾವೇಶದಲ್ಲಿ ಈ ಮನವಿಯನ್ನು ತಿರಸ್ಕರಿಸಿದ್ದವು.

"ಕೊನೆಯಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲದೆ, ನಷ್ಟ ಮತ್ತು ಹಾನಿಗಾಗಿ ನಿಧಿಯ ವ್ಯವಸ್ಥೆಯಲ್ಲಿ ಮೂರು ವರ್ಷಗಳ ಮಾತುಕತೆಗೆ ಇತ್ಯರ್ಥಗೊಳ್ಳುವಂತೆ ಶ್ರೀಮಂತ ರಾಷ್ಟ್ರಗಳಿಂದ ಒತ್ತಡ ಹೇರಲ್ಪಟ್ಟವು. ಪರಿಣಾಮಕಾರಿಯಾಗಿ,ಇಂಗಾಲದ ಡೈ ಆಕ್ಸೈಡ್ ಹೊರಸೂಸುವ ದೇಶಗಳು ಅಂತರರಾಷ್ಟ್ರೀಯ ಸಹಕಾರದ ತತ್ವಗಳಿಗೆ ಅನುಗುಣವಾಗಿ ಸಹಕರಿಸುವ ತಮ್ಮ ಕರ್ತವ್ಯವನ್ನು ಕೈಬಿಟ್ಟಿವೆ," ಎಂದು ವರದಿಯಲ್ಲಿ ತಿಳಿಸಲಾಗಿದೆ.

English summary
As several countries around the globe are facing extreme weather conditions from drought to flash floods, a special report to the United Nations General assembly mentions that more than 3.8 million people were internally displaced in 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X