Weight Loss: ತೂಕ ನಷ್ಟಕ್ಕೆ ಈ ಡಯಟ್ ಪ್ಲ್ಯಾನ್ ಫಾಲೋ ಮಾಡುವುದು ಬೆಸ್ಟ್
ಸದ್ಯ ವಿಶ್ವದಲ್ಲಿ ಬೊಜ್ಜು ಸಾಂಕ್ರಾಮಿಕ ಕಾಯಿಲೆಯಂತೆ ಹಬ್ಬುತ್ತಿದೆ. ಇದರಿಂದ ಬಚಾವ್ ಆಗಲು ಜನ, ತರಹೇವಾರಿ ಸರ್ಕಸ್ ಮಾಡುತ್ತಾರೆ. ಶಿಸ್ತು ಬದ್ಧ ಡಯಟ್ ಫಾಲೋ ಮಾಡ್ತಾರೆ. ಗೂಗಲ್ ಗುರು, ಯೂಟ್ಯುಬ್‌ಗಳಲ್ಲಿ ಬರುವ ಕ್ರಮಗಳನ್ನು ಅನುಸರಿಸಿ, ಸಣ್ಣ ಆಗುವತ್ತ ಚಿತ್ತ ನೆಡುತ್ತಾರೆ. ಇದರಲ್ಲಿ ಹಲವರು ವಾಕಿಂಗ್, ಜಿಮ್, ಯೋಗಾಸನ ಮಾಡಿ ತೂಕ ನಷ್ಟದತ್ತ ಮುಖ ಮಾಡುತ್ತಾರೆ.
ಕೀಟೋ ಡಯಟ್, ಪ್ಯಾಲಿಯೋ ಡಯಟ್, ಫ್ಯಾಡ್ ಡಯಟ್, ಮೆಟಾ ಡಯಟ್ ಹೀಗೆ ಹತ್ತು ಹಲವು ಡಯಟ್ ಕ್ರಮಗಳು ಇವೆ. ಈ ಎಲ್ಲದರ ಮಧ್ಯೆ ತೂಕ ನಷ್ಟಕ್ಕೆ ಯಾವುದು ಸೂಕ್ತ ಎಂಬುದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಡಯಟ್ ವೇಳೆ ಯಾವ ಆಹಾರವನ್ನು ಅನುಸರಿಸಬೇಕು ಎಂಬ ಗೊಂದಲಕ್ಕೂ ಬಿದ್ದಿರುತ್ತಾರೆ. ಇದೇ ವಿಚಾರಕ್ಕೆ ಸಂಬಂಧಿಸಿದ ಒಂದು ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಡಯೆಟಿಷಿಯನ್ ಶಿಖಾ ಖುಮಾರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಹಾರ ಕ್ರಮ ಹೇಗಿರಬೇಕು?
ಹಲವು ಡಯಟ್ ಕ್ರಮಗಳಲ್ಲಿ ಇಂಟರ್ಮಿಟೆಂಟ್ ಫಾಸ್ಟಿಂಗ್ ಉತ್ತಮ ಎಂದು ಶಿಖಾ ಹೇಳಿದ್ದಾರೆ. ಇದು ತೂಕ ನಷ್ಟಕ್ಕೂ ಸಹಾಯಕ. ಇದು ತಿನ್ನುವ ಒಂದು ಪದ್ಧತಿ ಆಗಿದೆ. ಈ ಡಯಟ್‌ನಲ್ಲಿ 8 ಗಂಟೆ ತಿನ್ನುತ್ತಿರಿ. ಮತ್ತೆ 14 ರಿಂದ 16 ಗಂಟೆ ಉಪವಾಸ. ಯವಾ ತರಹದ ಆಹಾರವನ್ನು ತಿನ್ನಬೇಕು ಎಂಬುದಕ್ಕೆ ಈ ಡಯಟ್‌ನಲ್ಲಿ ಒತ್ತು ನೀಡುವುದಕ್ಕೂ ಹೆಚ್ಚು ಯಾವಾಗ ತಿನ್ನಬೇಕು ಎಂಬುದಕ್ಕೆ ಒತ್ತು ನೀಡಲಾಗುತ್ತದೆ. ಇದರಿಂದ ತೂಕ ಹೆಚ್ಚಾಗದಂತೆ ತಡೆಯಲು ಸಾಹಯಕವಾಗುತ್ತದೆ ಎಂದು ಅವರ ನಂಬಿಕೆ.
ಇನ್ಸುಲಿನ್: ಉಪವಾಸದ ಸಮಯದಲ್ಲಿ ಈ ಹಾರ್ಮೋನ್ ಕಡಿಮೆಯಾಗುತ್ತದೆ ಮತ್ತು ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ಹೀಗೆ ಮಾಡುವುದರಿಂದ ಹಾರ್ಮೋನ್ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬು ಕರಗಲು ಸಹಾಯಕವಲ್ಲದೆ, ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ನೀವು ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡಿದಾಗ, ನಿಮ್ಮ ಆಹಾರದ ಅವಧಿಯು ತುಂಬಾ ಚಿಕ್ಕದಾಗಿರುತ್ತದೆ. ಇದು ಹೆಚ್ಚುವರಿ ಕ್ಯಾಲೊರಿಗಳನ್ನು ಸೇವಿಸುವುದನ್ನು ತಡೆಯುತ್ತದೆ. ಇದರಿಂದ ಚಯಾಪಚಯ ಕ್ರೀಯೆ ವೇಗಗೊಳಿಸುತ್ತದೆ ಮತ್ತು ಕ್ಯಾಲೊರಿಗಳನ್ನು ವೇಗವಾಗಿ ಸುಡುವಲ್ಲಿ ಸಹಾಯ ಮಾಡುತ್ತದೆ.

ಡಯಟ್ ಜನಪ್ರಿಯ ವಿಧಾನಗಳು
16 ಗಂಟೆಗಳ ಕಾಲ ಉಪವಾಸ ಮಾಡಿ, 8 ಗಂಟೆಗಳ ಅವಧಿಯಲ್ಲಿ ತಿನ್ನಿರಿ.
12 ಗಂಟೆಗಳ ಕಾಲ ಉಪವಾಸ ಮಾಡಿ, 12 ಗಂಟೆಗಳ ಅವಧಿಯಲ್ಲಿ ತಿನ್ನಿರಿ.
5 ದಿನಗಳವರೆಗೆ ಸಾಮಾನ್ಯವಾಗಿ ತಿನ್ನಿರಿ, ಇನ್ನು 2 ದಿನಗಳವರೆಗೆ ನೀವು ಸೇವಿಸು ಆಹಾರದ ಕ್ಯಾಲೊರಿಗಳನ್ನು (500-600) ನಿರ್ಬಂಧಿಸಿ.
ವಾರಕ್ಕೆ ಒಂದು ಅಥವಾ ಎರಡು ಬಾರಿ 24 ಗಂಟೆಗಳ ಕಾಲ ಉಪವಾಸ ಮಾಡಿ. ಹಗಲಿನಲ್ಲಿ ಹಸಿ ಹಣ್ಣುಗಳು/ತರಕಾರಿಗಳ ಸಣ್ಣ ಊಟ ಮತ್ತು ರಾತ್ರಿ ಒಂದು ಊಟದ ದೊಡ್ಡ ಊಟವನ್ನು ಸೇವಿಸಿ.
ಇಂಟರ್ಮಿಟೆಂಟ್ ಫಾಸ್ಟಿಂಗ್ ಪ್ರಯೋಜನಗಳು
ತೂಕ ಇಳಿಕೆಗೆ ಸಹಕಾರಿ ಆಗಿದ್ದು, ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ ಮಾಡಿ, ಕೊಲೆಸ್ಟ್ರಾಲ್ ಮತ್ತು ಬಿಪಿಯನ್ನು ನಿಯಂತ್ರಿಸುತ್ತದೆ.












Click it and Unblock the Notifications