ಅಮೇಥಿಯಲ್ಲಿ ಎಕೆ 203 ಉತ್ಪಾದನೆ, ಜನಪ್ರಿಯ ಆಯುಧದ ಬಗ್ಗೆ ತಿಳಿಯಿರಿ
ಅತ್ಯಂತ ಜನಪ್ರಿಯ ಆಯುಧ ಎಕೆ -203 ಉತ್ಪಾದನಾ ಘಟಕವು ಉತ್ತರಪ್ರದೇಶದ ಅಮೇಥಿಯಲ್ಲಿ ನಿರ್ಮಾಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 03ರಂದು ಈ ಹೊಸ ಘಟಕಕ್ಕೆ ಚಾಲನೆ ನೀಡಿದರು. ರಷ್ಯಾದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತವು ಸುಮಾರು 7,50,000 ರೈಫಲ್ ಗಳನ್ನು ಉತ್ಪಾದಿಸಿ ಭಾರತೀಯ ಭದ್ರತಾ ಪಡೆಗಳ ಬಳಕೆಗೆ ನೀಡಲು ಮುಂದಾಗಿದೆ.
ಭಾರತೀಯ ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆ ಬಳಸುತ್ತಿರುವ INSAS ರೈಫಲ್ ಗಳನ್ನು ಬದಲಾಯಿಸಿ ಎಕೆ 203ಗಳನ್ನು ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ಪ್ಯಾರಾ ಮಿಲಿಟರಿ ಹಾಗೂ ರಾಜ್ಯದ ಪೊಲೀಸ್ ಪಡೆಗಳಿಗೂ ನೀಡಲಾಗುತ್ತದೆ.
ಮುಂಬರುವ 15 ರಿಂದ 20 ವರ್ಷಗಳಲ್ಲಿ ಭಾರತದ ಎಲ್ಲಾ ಭದ್ರತಾ ಪಡೆಗಳ ಕೈಲಿ ಎಕೆ 203 ರೈಫಲ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದಲ್ಲದೆ, ಅಮೆರಿಕದ ಸಿಗ್ ಸಾರ್ ಜತೆ ಒಪ್ಪಂದ ಮಾಡಿಕೊಂಡಿದ್ದು, 7.69 ಎಂಎಂ 59 ಕ್ಯಾಲಿಬೆರ್ ಅಸಾಲ್ಟ್ ರೈಫಲ್ ಗಳನ್ನು ಖರೀದಿಸಲಾಗುತ್ತಿದೆ.
ಅಮೇಥಿಯಲ್ಲಿ ಎಕೆ 203 ಉತ್ಪಾದನೆ, ಜನಪ್ರಿಯ ಆಯುಧದ ಬಗ್ಗೆ ತಿಳಿಯಿರಿ
ಎಂದಿನಿಂದ ಉತ್ಪಾದನೆ ಆರಂಭ?: ಅತ್ಯಾಧುನಿಕ ರೈಫಲ್ ಗಳಲ್ಲಿ ಒಂದೆನಿಸಿರುವ ಎಕೆ 203 ಉತ್ಪಾದನೆಯು ಮುಂದಿನ 3 ರಿಂದ 6 ತಿಂಗಳೊಳಗೆ ಆರಂಭವಾಗಲಿದ್ದು, 1.2 ಲಕ್ಷ ರೈಫಲ್ ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಉತ್ಪಾದಿಸುವ ಗುರಿ ಹೊಂದಿದೆ.

ಎಂದಿನಿಂದ ಉತ್ಪಾದನೆ ಆರಂಭ?
ಎಂದಿನಿಂದ ಉತ್ಪಾದನೆ ಆರಂಭ?: ಅತ್ಯಾಧುನಿಕ ರೈಫಲ್ ಗಳಲ್ಲಿ ಒಂದೆನಿಸಿರುವ ಎಕೆ 203 ಉತ್ಪಾದನೆಯು ಮುಂದಿನ 3 ರಿಂದ 6 ತಿಂಗಳೊಳಗೆ ಆರಂಭವಾಗಲಿದ್ದು, 1.2 ಲಕ್ಷ ರೈಫಲ್ ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಉತ್ಪಾದಿಸುವ ಗುರಿ ಹೊಂದಿದೆ.

ಎಷ್ಟು ರೇಂಜ್?
ಎಷ್ಟು ರೇಂಜ್?: ಎಕೆ 203 ಮ್ಯಾಗಜೀನ್ ನಲ್ಲಿ ಒಟ್ಟು 30 ಬುಲೆಟ್ ಗಳನ್ನು ಹೊಂದಬಹುದಾಗಿದ್ದು, ಸರಿ ಸುಮಾರು 400 ಮೀಟರ್ ತನಕ ಸಮರ್ಥವಾಗಿ ಗುರಿಯನ್ನು ಮುಟ್ಟಬಲ್ಲದಾಗಿದೆ. ಶೇ 100ರಷ್ಟು ನಿಖರವಾಗಿದ್ದು,INSASಗೆ ಹೋಲಿಸಿದರೆ ಲಘು ಹಾಗೂ ಹಗುರ ರೈಫಲ್ ಆಗಿರುವುದರಿಂದ ಸೇನಾ ಸಿಬ್ಬಂದಿಗಳಿಗೆ ಅನುಕೂಲಕರ.

ವಿವಿಧ ರೀತಿಯಲ್ಲಿ ಉಪಯೋಗ
ಇದಲ್ಲದೆ, ಬ್ಯಾರೆಲ್ ಗ್ರೇನೈಡ್ ಲಾಂಚರ್ ಅಥವಾ ಬಯೋನೆಟ್ ಆಗಿ ಕೂಡಾ ಎಕೆ 203ಗಳನ್ನು ಬಳಸಬಹುದು. ನ್ಯಾಟೋ ಗ್ರೆಡ್ ಆಯುಧ ಪ್ರತಿ ಸೆಕೆಂಡಿಗೆ 10 ಬುಲೆಟ್ ನಂತೆ ನಿಮಿಷವೊಂದಕ್ಕೆ 600 ಬುಲೆಟ್ ಗಳನ್ನು ಫೈರ್ ಮಾಡಬಲ್ಲುದು. ಇದು ಸ್ವಯಂಚಾಲಿತ ಹಾಗೂ ಸೆಮಿ ಅಟೋಮ್ಯಾಟಿಕ್ ಮಾದರಿಯನ್ನು ಹೊಂದಿದೆ.

ಯಾವುದೇ ವಾತಾವರಣದಲ್ಲೂ ಕಾರ್ಯ ನಿರ್ವಹಣೆ
ಮೈನಸ್ ಡಿಗ್ರಿ ಸೆಲ್ಸಿಯಸ್ ನಿಂದ ಅತಿ ಉಷ್ಣ ಪ್ರದೇಶಗಳಲ್ಲೂ, ಮರಳುಗಾಡು, ನದಿ, ಸಮುದ್ರ, ಮಣ್ಣಿನಲ್ಲಿ ಹೂತರೂ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲುದು. ಅಲ್ಲದೆ, ಜಾಮ್ ಆಗದೆ ನಿರಂತರವಾಗಿ ಬುಲೆಟ್ ಫೈರ್ ಮಾಡುವ ಯಂತ್ರಗಾರಿಕೆಯನ್ನು ಇದು ಹೊಂದಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications