ನಾಯಿಗೂ ಸೇಫ್ಟಿ ಬೇಕು: ನಿತ್ಯ ಮಹಿಳೆಯರ ಪ್ರತ್ಯೇಕ ರೈಲು ಬೋಗಿಯಲ್ಲಿ ಪ್ರಯಾಣಿಸುವ ಶ್ವಾನ- ವಿಡಿಯೋ

ಸ್ಥಳೀಯ ರೈಲುಗಳನ್ನು ಮುಂಬೈನ ಜೀವನಾಡಿ ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಪ್ರಯಾಣಿಸುವುದು ತುಂಬಾ ಕಷ್ಟಕರವಾದ ಕೆಲಸ. ಲೋಕಲ್ ಟ್ರೈನ್ ಯಾವಾಗಲೂ ಕಿಕ್ಕಿರಿದು ತುಂಬಿರುತ್ತದೆ. ಹೀಗಾಗಿ ಸಮಯಕ್ಕೆ ರೈಲನ್ನು ಹಿಡಿಯುವುದು ಹರಸಾಹಸವೇ ಸರಿ. ಆದರೆ ಈ ನಾಯಿಗೆ ಮುಂಬೈ ಲೋಕಲ್ ರೈಲು ಹತ್ತೋದು ಅಂದ್ರೆ ತುಂಬಾನೇ ಸುಲಭ.

ನಿಮಗೆ ಗೊತ್ತಿರಲಿ ಮುಂಬೈನ ಲೋಕಲ್ ರೈಲಿನಲ್ಲಿ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಜನಸಂದಣಿ ಯಾವಾಗಲೂ ಹೆಚ್ಚಾಗಿರುತ್ತದೆ. ಆದರೆ ಈ ನಾಯಿಗೆ ಮುಂಬೈನಲ್ಲಿ ಪ್ರಯಾಣಿಸುವುದು ಅಂದರೆ ತುಂಬಾನೇ ಸುಲಭ ಮತ್ತು ಅಗ್ಗದ ಮಾರ್ಗವೂ ಹೌದು. ಅದರಲ್ಲೂ ಈ ನಾಯಿ ಮಹಿಳೆಯರ ಬೋಗಿಯಲ್ಲೇ ಪ್ರಯಾಣ ಮಾಡುತ್ತದೆ.

dog traveling in womens separate coach

ಮುಂಬೈನ ಸ್ಥಳೀಯರಲ್ಲಿ ಸಾಮಾನ್ಯ ಪ್ರಯಾಣಿಕರಂತೆ ನಾಯಿ ಕೂಡ ಪ್ರತಿದಿನ ಪ್ರಯಾಣಿಸುತ್ತದೆ. ಹೌದು! ಈ ಶ್ವಾನ ಪ್ರತಿನಿತ್ಯ ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಸಂಚರಿಸಿ ಸಂಜೆಯ ವೇಳೆಗೆ ಮತ್ತೊಂದು ರೈಲು ಹತ್ತಿ ಬರುತ್ತಿರುವುದು ಅತ್ಯಂತ ಅಚ್ಚರಿ ಮೂಡಿಸಿದೆ.

ಈ ನಾಯಿ ರೈಲಿನಲ್ಲಿ ಪ್ರಯಾಣಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಾಯಿಯೊಂದು ಸಾಮಾನ್ಯ ಮನುಷ್ಯನಂತೆ ದಿನನಿತ್ಯ ಲೋಕಲ್ ರೈಲಿನಲ್ಲಿ ಹೇಗೆ ಪ್ರಯಾಣಿಸುತ್ತಿದೆ ಎಂದು ಈ ವಿಡಿಯೋ ಜನರಲ್ಲಿ ಅಚ್ಚರಿ ಮೂಡಿಸುತ್ತಿದೆ.

ಈ ನಾಯಿ ಮುಂಬೈನ ಬೊರಿವಲಿ ನಿಲ್ದಾಣದಲ್ಲಿ ಪ್ರತಿದಿನ ರೈಲು ಹತ್ತುತ್ತದೆ ಮತ್ತು ಅಂಧೇರಿ ನಿಲ್ದಾಣದಲ್ಲಿ ಇಳಿಯುತ್ತದೆ ಎಂದು ಹೇಳಲಾಗುತ್ತಿದೆ. ಇದಾದ ನಂತರ ಮತ್ತೆ ಅಂಧೇರಿಯಲ್ಲಿ ಲೋಕಲ್ ಟ್ರೈನ್ ಹಿಡಿದು ಸಂಜೆ ಬೋರಿವಲಿ ನಿಲ್ದಾಣಕ್ಕೆ ಬರುತ್ತದೆ. ಈ ಮಧ್ಯೆ ಯಾರಿಗೂ ಹಾನಿ ಮಾಡುವುದಿಲ್ಲ.

ಹೀಗಿರುವಾಗ ಈ ರೈಲಿನಲ್ಲಿ ದಿನನಿತ್ಯ ಸಂಚರಿಸುವ ಪ್ರಯಾಣಿಕರ ನೆಚ್ಚಿನ ನಾಯಿ ಕೂಡ ಇದಾಗಿದೆ. ಈ ಪ್ರಯಾಣವು ನಾಯಿಗೆ ಅಪಾಯಕಾರಿ. ಆದರೆ ಈ ಶ್ವಾನದ ಪ್ರಯಾಣ ನೋಡಿ ಕೆಲವರು ಈಗ ಖುಷಿಯಾಗಿದ್ದಾರೆ. ಇದನ್ನು ಯಾರೋ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ.

ರೈಲಿನಲ್ಲಿ ನಾಯಿ ಪ್ರಯಾಣಿಸುವ ವಿಡಿಯೋವನ್ನು ಇದುವರೆಗೆ 8 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಈ ವೀಡಿಯೋಗೆ ವ್ಯಕ್ತಿಯೊಬ್ಬರು, "ಈ ಜಗತ್ತು ಎಲ್ಲರಿಗಾಗಿದೆ. ಇದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು "ಅದು ಒಂದು ಬುದ್ಧಿವಂತ ನಾಯಿ" ಎಂದು ಕರೆದಿದ್ದಾರೆ.

ಮತ್ತೊಬ್ಬ ವ್ಯಕ್ತಿ, "ನಾಯಿಯನ್ನು ನಾನು ಪ್ರತಿದಿನ ಅಂಧೇರಿ ರೈಲು ನಿಲ್ದಾಣದಲ್ಲಿ ಹತ್ತುವುದನ್ನು ನಾನು ನೋಡುತ್ತೇನೆ" ಎಂದು ಹೇಳಿದ್ದಾರೆ.

ಈ ನಾಯಿಯನ್ನು ನೋಡಲು ನಾನು ಬೋರಿವಲಿ ನಿಲ್ದಾಣದಲ್ಲಿ ಕಾಯುತ್ತೇನೆ ಎಂದು ಇನ್ನೊಬ್ಬ ವ್ಯಕ್ತಿ ಹೇಳಿದರು.

ಇದೀಗ ಈ ನಾಯಿ ಸಾರ್ವಜನಿಕರ ಕಣ್ಣಿಗೆ ಬಿದ್ದಿದೆ. ನಾಯಿಗಳ ನಡವಳಿಕೆಯು ಕೆಲವೊಮ್ಮೆ ತುಂಬಾ ವಿಭಿನ್ನ ಮತ್ತು ವಿಚಿತ್ರವಾಗಿರುತ್ತವೆ. ಒಮ್ಮೆ ಆಟೊದ ಮೇಲೆ ನಿಂತು ನಾಯಿಯೊಂದು ಪ್ರಯಾಣಿಸುತ್ತಿದ್ದರೆ, ಹಲವು ಬಾರಿ ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವ ನಾಯಿಗಳು ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+