ಮಗ ವಿಶ್ವದ ಶ್ರೀಮಂತನಾದರೂ ತಾಯಿ ಮಲಗೋದು ಗ್ಯಾರೇಜ್‌ನಲ್ಲೇ

ಎಲಾನ್ ಮಸ್ಕ್ ವಿಶ್ವದ ಅತಿದೊಡ್ಡ ಶ್ರೀಮಂತರಲ್ಲಿ ಒಬ್ಬರು. ಮಂಗಳ ಗ್ರಹದಲ್ಲಿ ಮನುಷ್ಯರ ಕಾಲೊನಿ ನಿರ್ಮಿಸಲು ಹೊರಟಿರುವ ಸಾಹಸಿ. ಕಾರುಗಳಿಂದ ಹಿಡಿದು ರಾಕೆಟ್‌ವರೆಗೆ ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿರುವ ವಿಶೇಷ ವ್ಯಕ್ತಿ.

ಆದರೆ, ಇವರ ತಾಯಿ ಮಯೆ ಮಸ್ಕ್ ಗ್ಯಾರೇಜ್‌ನಲ್ಲಿ ಮಲಗಬೇಕಾದ ಪರಿಸ್ಥಿತಿ ಎದುರಾಗಿದೆ. ತನ್ನ ಮಗನನ್ನು ನೋಡಲು ಆತನ ಮನೆಗೆ ಬಂದರೆ ಮಯೆ ಮಸ್ಕ್‌ಗೆ ಗ್ಯಾರೇಜ್‌ನಲ್ಲಿ ಮಲಗೋದು ಅನಿವಾರ್ಯವಂತೆ.

ಇದೇನಪ್ಪಾ ಎಂದು ಅಚ್ಚರಿ ಎನಿಸಬಹುದು. ಶ್ರೀಮಂತರಲ್ಲೇ ಶ್ರೀಮಂತ ಎನಿಸಿದ ಎಲಾನ್ ಮಸ್ಕ್ ಇಷ್ಟು ನಿಷ್ಕರುಣಿಯಾ ಎನಿಸಬಹುದು. ಆದರೆ, ವಾಸ್ತವ ಹಾಗಿಲ್ಲ. ಮಯೆ ಮಸ್ಕ್ ತಮ್ಮ ಮಗನನ್ನು ನೋಡಲು ಹೋದಾಗ ಆತನ ಮನೆಯ ಗ್ಯಾರೇಜ್‌ನಲ್ಲಿ ಮಲಗೋದು ನಿಜ. ಅದಕ್ಕೆ ಕಾರಣ ಮಗನ ನಿಷ್ಕರಣೆ ಅಲ್ಲ, ಬದಲಾಗಿ ಮಗನ ಬಳಿ ಐಷಾರಾಮಿ ಮನೆಯೇ ಇಲ್ಲದಿರುವುದು.

Elon Musks Mother Sleeps in Garage at Sons Home, Know Why

ಈಗಲೂ ಕೆಲವರಿಗೆ ಅಚ್ಚರಿ ಎನಿಸಬಹುದು. 20 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡೆ ಎನಿಸಿರುವ ಎಲಾನ್ ಮಸ್ಕ್‌ಗೆ ಒಂದು ಒಳ್ಳೆಯ ಮನೆ ಇಲ್ಲವಾ ಎಂದರೆ ಯಾರಿಗಾದರೂ ಅಚ್ಚರಿ ಎನಿಸುತ್ತದೆ.

"ಮಗನ ಬಳಿಕ ಯಾವ ಐಷಾರಾಮಿ ಮನೆ ಇಲ್ಲ" ಎಂದು ೭೧ ವರ್ಷದ ಮಯೆ ಮಸ್ಕ್ ಹೇಳಿದ್ದಾರೆ. ಟೆಕ್ಸಾಸ್‌ನಲ್ಲಿರುವ ಎಲಾನ್ ಮಸ್ಕ್ ಅವರ SpaceX ಕಂಪನಿಯ ಕಚೇರಿ ಬಳಿ ಒಂದು ಪುಟ್ಟ ಮನೆ ಇದೆ. ಮಸ್ಕ್ ನೋಡಲು ತಾಯಿ ಟೆಕ್ಸಾಸ್‌ಗೆ ಹೋದರೆ ಆ ಮನೆಯಲ್ಲೇ ಉಳಿದುಕೊಳ್ಳುತ್ತಾರೆ. ಅಲ್ಲಿ ಬೆಡ್ ರೂಂ ಎಲ್ಲಾ ಗ್ಯಾರೇಜೇ. ಹೀಗಾಗಿ, ಆಕೆ ಗ್ಯಾರೇಜ್‌ನಲ್ಲಿ ಮಲಗೋದು ಅನಿವಾರ್ಯ.

Elon Musks Mother Sleeps in Garage at Sons Home, Know Why

"ರಾಕೆಟ್ ತಯಾರಿಸುವ ಸ್ಥಳದಲ್ಲಿ ಐಷಾರಾಮಿ ಮನೆ ಇರಿಸಲಾದೀತೆ?" ಎಂದು ಎಲಾನ್ ಮಸ್ಕ್ ತಾಯಿ ಕೇಳುತ್ತಾರೆ.

ಎಲಾನ್ ಮಸ್ಕ್ ಬಳಿ 20 ಲಕ್ಷ ಕೋಟಿ ರೂನಷ್ಟು ಆಸ್ತಿ ಇದ್ದರೂ ಅವರು ಮನೆಯಂತಹ ಭೌತಿಕ ಆಸ್ತಿಗಳನ್ನು ತೀರಾ ಕಡಿಮೆ ಹೊಂದಿದ್ದಾರೆ. ಸ್ಪೇಸ್‌ಎಕ್ಸ್ ಕಚೇರಿ ಇರುವ ಬೋಕಾ ಚಿಕಾ ಸ್ಥಳದಲ್ಲಿ ಇರುವ ಇವರ ಮನೆಯ ಮೌಲ್ಯ 45 ಸಾವಿರ ಡಾಲರ್ ಮಾತ್ರ.

ತನ್ನಲ್ಲಿರುವ ಬಹುತೇಕ ಭೌತಿಕ ಆಸ್ತಿಗಳನ್ನು ಮಾರಿಬಿಡುತ್ತೇನೆ. ಯಾವ ಮನೆಯನ್ನೂ ಸ್ವಂತವಾಗಿ ಇಟ್ಟುಕೊಳ್ಳುವುದಿಲ್ಲ ಎಂದು ಎರಡು ವರ್ಷಗಳ ಹಿಂದೆ ಎಲಾನ್ ಮಸ್ಕ್ ಹೇಳಿದ್ದರು. ಮಯೆ ಮಸ್ಕ್ ಕೂಡ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಮಗ ಎಲಾನ್ ಮಸ್ಕ್‌ಗೆ ಭೌತಿಕ ಆಸ್ತಿಗಳಲ್ಲಿ ಆಸಕ್ತಿಯೇ ಇಲ್ಲ ಎಂದು ತಿಳಿಸಿದ್ದುಂಟು.

ಸೂಪರ್‌ಮಾಡೆಲ್ ಆಗಿದ್ದ ತಾಯಿ:
ಎಲಾನ್ ಮಸ್ಕ್ ಅವರ ತಂದೆ ಸೌತ್ ಆಫ್ರಿಕಾದ ಉದ್ಯಮಿ ಎರೋಲ್ ಮಸ್ಕ್. ಎಲಾನ್ ಮಸ್ಕ್ ತಾಯಿ ಮಾಜಿ ಸೂಪರ್‌ಮಾಡಲ್ ಮಯೆ ಹಾಲ್ಡೆಮ್ಯಾನ್. ಎರೋಲ್ ಮಸ್ಕ್ ಮತ್ತು ಮಯೆ ಹಾಲ್ಡೆಮ್ಯಾನ್ 1979ರಲ್ಲಿ ವಿಚ್ಛೇದನ ಹೊಂದುತ್ತಾರೆ. ಆಗ ಮಯೆ ಅವರು ಮಕ್ಕಲಾದ ಎಲಾನ್, ಕಿಂಬಲ್ ಮತ್ತು ಟೋಸ್ಕಾ ಜೊತೆ ಕೆನಡಾಗೆ ಹೋಗುತ್ತಾರೆ.

ಆ ಸಂದರ್ಭದಲ್ಲಿ ಮಯೆ ಮಸ್ಕ್‌ಗೆ ಹಣಕಾಸು ಸಂಕಷ್ಟ ಸ್ಥಿತಿ ಎದುರಾಗಿ ಮನೆ ನಿರ್ವಹಿಸುವುದೇ ಬಹಳ ಕಷ್ಟವಾಗುತ್ತದೆ. ಮಕ್ಕಳಿಗೆ ಊಟ ಸಿಕ್ಕದೇ ಹೋದರೆ ಏನಪ್ಪಾ ಗತಿ ಎಂಬ ಚಿಂತೆ ಈಕೆಯನ್ನು ಸದಾ ಕಾಡುತ್ತಿತ್ತಂತೆ.

"ಬಹಳ ಕಷ್ಟದ ದಿನಗಳಿದ್ದವು. ಒಂದು ಬೆಡ್‌ರೂಂನ ಅಪಾರ್ಟ್ಮೆಂಟ್‌ನಲ್ಲಿ ನಾಲ್ವರು ಬದುಕುತ್ತಿದ್ದರು. ಹೊಸ ಬಟ್ಟೆ ಕೊಳ್ಳಲೂ ಆಗುತ್ತಿರಲಿಲ್ಲ" ಎಂದು ಮಯೆ ಮಸ್ಕ್ ಹಿಂದೊಮ್ಮೆ ಹೇಳಿಕೊಂಡಿದ್ದುಂಟು. ಎಲಾನ್ ಮಸ್ಕ್ ಪೂರ್ವಿಕರು ಮೊದಲಿಂದಲೂ ಉದ್ಯಮಿಗಳೇ ಆಗಿದ್ದವರು. ಸೌತ್ ಆಫ್ರಿಕಾದ ಪ್ರಮುಖ ಉದ್ಯಮಿಗಳಲ್ಲಿ ಮಸ್ಕ್ ಮನೆತನದವರು ಬಹಳ ಇದ್ದಾರೆ. ಹಲವು ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಎಲಾನ್ ಮಸ್ಕ್ ಅದೇ ಪರಂಪರೆಯನ್ನು ಹೊಸ ಸ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಉದ್ಯಮದಲ್ಲಿ ಎತ್ತರಕ್ಕೆ ಬೆಳೆದರೂ ವೈಯಕ್ತಿಕವಾಗಿ ಅವರು ಬಹಳ ಸರಳ ಜೀವನ ನಡೆಸುತ್ತಿರುವುದು ಗಮನಾರ್ಹ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+