ಇಂಡಿಯಾ ಟಿವಿ - ಸಿಎನ್ಎಕ್ಸ್ ರಾಜ್ಯವಾರು ಸಮೀಕ್ಷೆಯಲ್ಲಿ ಬಿಜೆಪಿಗೆ ಜಯ

ಲಕ್ನೋ, ಏಪ್ರಿಲ್ 03: 2019ರ ಲೋಕಸಭೆ ಚುನಾವಣೆಗಾಗಿ ವಿವಿಧ ಸಂಸ್ಥೆಗಳು ರಾಜ್ಯವಾರು ಸಮೀಕ್ಷೆಗಳನ್ನು ನಡೆಸುತ್ತಿವೆ. ಮುಂದಿನ ಪ್ರಧಾನಿಯಾಗಬೇಕು? ದೇಶದ ಪ್ರಮುಖ ಸಮಸ್ಯೆಗಳೇನು? ಯಾವ ಪಕ್ಷದ ಆಡಳಿತ ಹೇಗಿದೆ? ಎಂಬ ಮುಖ್ಯ ಪ್ರಶ್ನೆಗಳ ಜೊತೆಗೆ ರಾಜ್ಯವಾರು ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ.

ಇಂಡಿಯಾ ಟಿವಿ - ಸಿಎನ್ಎಕ್ಸ್ ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಉತ್ತರಪ್ರದೇಶದಲ್ಲಿ ಎನ್ಡಿಎ ಮತ್ತೊಮ್ಮೆ ಹೆಚ್ಚಿನ ಸ್ಥಾನ ಗಳಿಸಲಿದ್ದು, ಯುಪಿಎ ಅಥವಾ ಮಹಾಘಟಬಂದನ್ ಕೂಟವು ಹಿಂದೆ ಉಳಿಯಲಿದೆ.

ಈ ಹಿಂದೆ ಒಟ್ಟು 193 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾರ್ಚ್ 1ರಿಂದ ಮಾರ್ಚ್ 7ರ ಮಧ್ಯೆ ಸಮೀಕ್ಷೆ ನಡೆಸಿ ನೀಡಿದ್ದ ಫಲಿತಾಂಶದಂತೆ ಒಟ್ಟ 543 ಸ್ಥಾನಗಳ ಪೈಕಿ ಬಿಜೆಪಿ 238, ಕಾಂಗ್ರೆಸ್ ಗೆ 82 ಸ್ಥಾನ ಗಳಿಸಲಿವೆ. ಎನ್ಡಿಎಗೆ ಮ್ಯಾಜಿಕ್ ನಂಬರ್ 272 ದಾಟಲು ಮಿತ್ರಪಕ್ಷಗಳ ನೆರವು ಅಗತ್ಯ ಎಂದು ಸಮೀಕ್ಷೆ ಹೇಳಿತ್ತು.

Elections 2019: India TV-CNX Opinion Poll : 46 Lok Sabha seats for NDA in Uttar Pradesh

ಈಗ ಉತ್ತರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಯಾವ ಪಕ್ಷ ಗೆಲುವು ಸಾಧಿಸಬಹುದು ಎಂಬುದನ್ನು ಇಂಡಿಯಾ ಟಿವಿ ಹಾಗೂ ಸಿಎನ್ಎಕ್ಸ್ ಸಮೀಕ್ಷಾ ವರದಿ ತಿಳಿಸಿದೆ.

ಮಾರ್ಚ್ ತಿಂಗಳ ಸಮೀಕ್ಷೆಯಂತೆ ಉತ್ತರಪ್ರದೇಶ: ಬಿಜೆಪಿ 40, ಬಿಎಸ್ ಪಿ 16, ಎಸ್ ಪಿ 18, ಕಾಂಗ್ರೆಸ್ 4, ಆರ್ ಎಲ್ ಡಿ 1, ಅಪ್ನಾ ದಳ್ 1, ಒಟ್ಟು 80

ಏಪ್ರಿಲ್ ತಿಂಗಳಿನ ಸಮೀಕ್ಷೆಯಂತೆ : ಎನ್ಡಿಎ 46, ಮಹಾಘಟಬಂದನ್ 30 ಹಾಗೂ ಕಾಂಗ್ರೆಸ್ 4 ಸ್ಥಾನಗಳು

**
ಪಶ್ಚಿಮ ಬಂಗಾಳ : ತೃಣಮೂಲ ಕಾಂಗ್ರೆಸ್ 28, ಬಿಜೆಪಿ 12, ಎಡ ಪಕ್ಷ ಹಾಗೂ ಕಾಂಗ್ರೆಸ್ ತಲಾ 1
****
ಒಡಿಶಾದಲ್ಲಿ ಬಿಜೆಡಿ 14, ಬಿಜೆಪಿ ಪ್ಲಸ್ 6, ಕಾಂಗ್ರೆಸ್ 1

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+