ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾಗೆ ಗೆಲುವು: ಸಮೀಕ್ಷೆ ವರದಿ

|
Google Oneindia Kannada News

Recommended Video

Lok Sabha Elections 2019 :ಪ್ರಖ್ಯಾತ ರಾಜಕೀಯ ತಜ್ಞ ಚಿಂತಾಮಣಿಯಿಂದ ಸಮೀಕ್ಷೆ

ಲೋಕಸಭೆ ಚುನಾವಣೆ 2019 ಸಂದರ್ಭದಲ್ಲಿ ಜನಪ್ರಿಯ ರಾಜಕೀಯ ತಜ್ಞ ಚಿಂತಾಮಣಿ ಅವರು ಎಲೆಕ್ಷನ್. ಇನ್ ವೆಬ್ ತಾಣಕ್ಕಾಗಿ ಸಂಗ್ರಹಿಸಿರುವ ಜನಾಭಿಪ್ರಾಯ ಸಮೀಕ್ಷಾ ವರದಿ ಇಲ್ಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚಿಂತಾಮಣಿ 5 ಡಾಟ್ಸ್ ಸಮೀಕ್ಷಾ ವರದಿಯಂತೆ ಬಿಜೆಪಿ 271 ಗಳಿಸಲಿದ್ದು, ಎನ್ಡಿಎ 335 ಸ್ಕೋರ್ ಮಾಡಲಿದೆ. ಯುಪಿಎ 100 ಸ್ಥಾನ ಮುಟ್ಟಲು ಕಷ್ಟಪಡಲಿದೆ.

ಮಂಡ್ಯದ ಸಾಕ್ಷಾತ್ ಸಮೀಕ್ಷೆ ಸಾಮಾಜಿಕ ಜಾಲತಾಣದಲ್ಲಿ ವೈರಲ್! ಮಂಡ್ಯದ ಸಾಕ್ಷಾತ್ ಸಮೀಕ್ಷೆ ಸಾಮಾಜಿಕ ಜಾಲತಾಣದಲ್ಲಿ ವೈರಲ್!

Elections 2019: Chintamani-5Dots opinion poll BJP Sumalatha win in Mandya


ದಕ್ಷಿಣ ಭಾರತದಲ್ಲಿ ಮಾತ್ರ ಎನ್ಡಿಎ ವಿರುದ್ಧ ಯುಪಿಎ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಲಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಮುರಿಯಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಸಾಧ್ಯವಾಗಿಲ್ಲ. 2009ರಂತೆ 2019ರಲ್ಲೂ ಉತ್ತಮ ಫಲಿತಾಂಶ ನೀಡಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

ಚಿಂತಾಮಣಿ ಸಮೀಕ್ಷೆ: ದಕ್ಷಿಣದಲ್ಲಿ ಎನ್ಡಿಎ ವಿರುದ್ಧ ಯುಪಿಎಗೆ ಜಯ

ಕೇಂದ್ರ ಬಜೆಟ್, ಪುಲ್ವಾಮಾ ದಾಳಿ ನಂತರ ಬಾಲಕೋಟ್, ಮುಜಾಫರಬಾದ್ ಹಾಗೂ ಚಕೋತಿ ಮೇಲೆ ದಾಳಿ ನಡೆಸಿ, ಉಗ್ರರನ್ನು ಸದೆಬಡಿದ್ದು, ಮೇಲ್ವರ್ಗದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಮೀಸಲಾತಿ ಕಲ್ಪಿಸುವ ಸರ್ಕಾರದ ಘೋಷಣೆ ಬಳಿಕ ಮೋದಿ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಹೆಚ್ಚಿದೆ.

ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ

ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿ 19 ಸ್ಥಾನ ಗಳಿಸಲಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾಗೆ ಗೆಲುವು ಸಿಗಲಿದೆ ಎಂದು ಸಮೀಕ್ಷೆ ಹೇಳಿದೆ. ಮಂಡ್ಯದಲ್ಲಿ ಆಡಳಿತರೂಢ ಪಕ್ಷದ ಒಮ್ಮತದ ಅಭ್ಯರ್ಥಿ, ಮುಖ್ಯಮಂತ್ರಿಗಳ ಪುತ್ರನಿಗೆ ಸೋಲುಂಟಾಗಲು ಮೈತ್ರಿ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಮುಖ್ಯ ಕಾರಣವಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಸೋಲು: ಚಿಂತಾಮಣಿ ಸಮೀಕ್ಷೆಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಸೋಲು: ಚಿಂತಾಮಣಿ ಸಮೀಕ್ಷೆ

ಉಳಿದಂತೆ, ಜೆಡಿಎಸ್ ಏಕೈಕ ಸ್ಥಾನ ಗಳಿಸಲಿದ್ದು, ಕಾಂಗ್ರೆಸ್ 7ಕ್ಕೆ ಕುಸಿಯಲಿದೆ. ಬಿಜೆಪಿ 19(2014ರಲ್ಲಿ 17), ಕಾಂಗ್ರೆಸ್ 7(9), ಜೆಡಿಎಸ್ 1(2), ಇತರೆ 1(0) ಫಲಿತಾಂಶ ಬರುವ ನಿರೀಕ್ಷೆಯಿದೆ.

English summary
Elections 2019 : Political analyzer Mr. Chintamani carried out an intensive opinion poll for Elections.in website. According to the Chintamain-5 Dots opinion poll survey, the BJP supported candidate A Sumalatha will secure victory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X