ಬೆಂಗಳೂರಿಗರಿಗೆ ಬಾಧೆ: ಲಾಕ್‍ಡೌನ್ ಅವಧಿಯಲ್ಲಿ ಹೆಚ್ಚಿದ ಒತ್ತಡ ಮತ್ತು ಆತಂಕ
ಕೋವಿಡ್ -19 ಹರಡುವಿಕೆಯನ್ನು ನಿಭಾಯಿಸಲು ಪದೇ ಪದೇ ಲಾಕ್‍ಡೌನ್ ವಿಧಿಸಲಾಗಿದೆ. ಮಾನವ ಮತ್ತು ಆರ್ಥಿಕ ಬಿಕ್ಕಟ್ಟಿನ ಹೊರತಾಗಿ, ಕರೋನ ವೈರಸ್ ರೋಗವು ಸಾಮಾಜಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಒಂಟಿತನ ಮತ್ತು ಆತಂಕಕ್ಕೆ ಕಾರಣವಾಗುವ ಸಾಮಾಜಿಕ ಪ್ರತ್ಯೇಕತೆಯು ಸಮಾಜಗಳ ಮೇಲೆ ದಾಳಿ ಮಾಡಿದೆ. ಅಂಥ ಸಮಯದಲ್ಲಿ, ನಾವು ಬೆಂಬಲಕ್ಕಾಗಿ ನಮ್ಮ ಅತ್ಯಂತ ವಿಶ್ವಾಸಾರ್ಹ ಸಂಬಂಧಗಳ ವಲಯವನ್ನು ಅವಲಂಬಿಸುತ್ತೇವೆ. ವ್ಯಕ್ತಿಯ 'ಟ್ರಸ್ಟ್ ಸರ್ಕಲ್' ಮೇಲೆ ಈ ಬದಲಾವಣೆಗಳ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಮೈಗೇಟ್ ರಾಷ್ಟ್ರೀಯ 'ಟ್ರಸ್ಟ್ ಸರ್ಕಲ್' ಸಮೀಕ್ಷೆಯನ್ನು ನಡೆಸಿತು. 99% ಬೆಂಗಳೂರಿಗರು ಒತ್ತಡ ಮತ್ತು ಆತಂಕವನ್ನು ಎದುರಿಸಲು ನೈಜ ಸಂಬಂಧಗಳನ್ನು (ಅಂತರ್-ವೈಯಕ್ತಿಕ ಸಂಪರ್ಕ) ಸ್ಥಾಪಿಸುವ ಅಗತ್ಯತೆಯನ್ನು ಒಪ್ಪಿಕೊಂಡರು ಆದರೆ ಚೆನ್ನೈನಲ್ಲಿ ಕೇವಲ 60% ಮತ್ತು ಕೊಚ್ಚಿಯಲ್ಲಿ 74.55% ಮಾತ್ರ ಹಾಗೆ ಭಾವಿಸಿದರು.
ಈ ವರದಿ ಬಗ್ಗೆ ಪ್ರತಿಕ್ರಿಯಿಸಿದ ಮೈಗೇಟ್ ಸಿಒಒ ಮತ್ತು ಸಹ ಸಂಸ್ಥಾಪಕ ಅಭಿಷೇಕ್ ಕುಮಾರ್, "ನಾವು ಇದೀಗ ಕಠಿಣ ಕಾಲಘಟ್ಟದಲ್ಲಿದ್ದು, "ವಿಶ್ವಾಸ ವರ್ತುಲ" ಮತ್ತು "ನೈಜ ಸಂಬಂಧಗಳ" ಮಹತ್ವ ಹಿಂದೆಂದಿಗಿಂತಲೂ ಹೆಚ್ಚಾಗಿ ಮುನ್ನಲೆಗೆ ಬಂದಿದೆ. ಬಹುತೇಕ ಅಂದರೆ ಶೇಕಡ 100ರಷ್ಟು ಅಧಿಕ ತಂತ್ರಜ್ಞಾನ ಪರಿಣತಿ ಪಡೆದಿರುವವರು ಮತ್ತು ಸಾಮಾಜಿಕವಾಗಿ ಒಲವು ಹೊಂದಿರುವವರು / ಸಂಪರ್ಕಿತ ಬೆಂಗಳೂರಿಗರು ತಮ್ಮ ಒತ್ತಡದ ವಿರುದ್ಧದ ಹೋರಾಟಕ್ಕೆ "ನೈಜ ಸಂಬಂಧಗಳ" ಅಗತ್ಯತೆಯನ್ನು ಮನಗಂಡಿದ್ದಾರೆ.

ಮಾನಸಿಕ ಪರಿಣಾಮ
ಮಾನಸಿಕ ಪರಿಣಾಮವು ರಾಷ್ಟ್ರೀಯವಾಗಿ (80%ಕ್ಕಿಂತ ಹೆಚ್ಚು) ಎಲ್ಲ ವಯೋಮಿತಿಯವರಲ್ಲಿ ವಿನಾಶಕಾರಿಯಾಗಿದೆ. ಆದಾಗ್ಯೂ, ಇದು ಜೆನ್ ಝೆಡ್ (90%) ಮತ್ತು ಮಹಿಳೆಯರ (90%) ಮೇಲೆ ಹೆಚ್ಚು ಪರಿಣಾಮ ಬೀರಿದೆ. ಕುತೂಹಲಕಾರಿ ಅಂಶವೆಂದರೆ ಕೋವಿಡ್ ಪೂರ್ವದ ಸಮಯಕ್ಕೆ ಹೋಲಿಸಿದರೆ, 80.65% ಬೆಂಗಳೂರಿಗರು ಈಗ ತಮ್ಮ ನೆರೆಹೊರೆಯವರ "ವಿಶ್ವಾಸ ವರ್ತುಲ" ವನ್ನು ಅವಲಂಬಿತರಾಗುವ ಸಾಧ್ಯತೆಯಿದೆ ಮತ್ತು ಶೇಕಡ 98.79 ರಷ್ಟು ಮಂದಿ ಒಪ್ಪಿಕೊಂಡಂತೆ, ಸ್ಥಳೀಯ ಮಾರಾಟಗಾರರು ಮತ್ತು ಬೆಂಬಲ ಸಿಬ್ಬಂದಿ (ವಾಚ್‍ಮನ್, ಡೆಲಿವರಿ ಬಾಯ್ ಮತ್ತು ಸಹಾಯಕರು) ಸೇರಿದಂತೆ ನೆರೆಹೊರೆಯವರ ಜತೆಗಿನ ಅವರ ಸಂಬಂಧ ಮತ್ತು ಅವಲಂಬನೆ ಈ ಹಂತದಲ್ಲಿ ಗಣನೀಯವಾಗಿ ಸುಧಾರಿಸಿದೆ. ಬೆಂಗಳೂರಿನಲ್ಲಿ ಸಮೀಕ್ಷೆಗೆ ಒಳಪಡಿಸಿದ ಶೇಕಡ 90.73 ಪ್ರತಿಕ್ರಿಯಿಸಿರುವಂತೆ 'ನನ್ನ' ಟ್ರಸ್ಟ್ ಸರ್ಕಲ್ ಇದೀಗ ವರ್ಗಾವಣೆಯಾಗಿದ್ದು, ಇದು ನಾನು ಪ್ರತಿದಿನ ಸಂವಾದ ನಡೆಸುವ ನೆರೆಯವರನ್ನು ಹೆಚ್ಚಾಗಿ ಸೇರಿಸಿಕೊಂಡಿದೆ.

ಬೆಂಗಳೂರ ಪೈಕಿ 90.73% ರಷ್ಟು ಮಂದಿ ಸುಧಾರಿತ ಸಂಪರ್ಕ
ಬೆಂಗಳೂರಿಗರು ತಮ್ಮ ದಕ್ಷಿಣದ ಸಹವರ್ತಿಗಳಾದ ಚೆನ್ನೈ (59.44%) ಮತ್ತು ಕೊಚ್ಚಿ (74.55%) ಅಥವಾ ಪೂರ್ವ (ಕೋಲ್ಕತಾ 73.39%) ಸಹವರ್ತಿಗಳಿಗೆ ಹೋಲಿಸಿದರೆ ಒತ್ತಡವನ್ನು ಎದುರಿಸಲು 'ನೈಜ ಸಂಬಂಧ'ಗಳ ಅಗತ್ಯತೆಯನ್ನು ಮನಗಂಡಿದ್ದಾರೆ. ಸಮೀಕ್ಷೆಗೆ ಒಳಪಡಿಸಿದವರ ಬೆಂಗಳೂರ ಪೈಕಿ 90.73% ರಷ್ಟು ಮಂದಿ ಸುಧಾರಿತ ಸಂಪರ್ಕ ಮತ್ತು ನೆರೆಹೊರೆಯವರ ಜತೆಗಿನ ಅವಲಂಬನೆಯನ್ನು ಪ್ರತಿಪಾದಿಸಿದ್ದಾರೆ. ತಾವು ಯಾವ ಪರಿಸ್ಥಿತಿಯಲ್ಲಿದ್ದೇವೆ ಎನ್ನುವುದನ್ನು ಮತ್ತು ಬದಲಾಗುತ್ತಿರುವ ಆದ್ಯತೆಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದಾರೆ. ಸಂತಸದ ವಿಚಾರವೆಂದರೆ ತಂತ್ರಜ್ಞಾನ ಅವರ ನೆರವಿಗೆ ಬಂದಿದೆ. ಅದು ಪರಸ್ಪರ ಸಂಪರ್ಕದಲ್ಲಿರಲು, ಸಮುದಾಯದ ಅಗತ್ಯತೆಗಳನ್ನು ಪರಿಹರಿಸಲು, ಅಗತ್ಯವಿರುವ ದೊಡ್ಡ ವಲಯಕ್ಕೆ ಸಹಾಯ ಮಾಡಲು ಮೈಗೇಟ್‍ನಂಥ ಪರಿಹಾರಗಳು ವಿಕಾಸಗೊಂಡಿದ್ದು, ಇವು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ" ಎಂದು ಅಭಿಪ್ರಾಯಪಟ್ಟರು.

ಮಾಹಿತಿಗಾಗಿ ಆದ್ಯತೆಯ ಪಟ್ಟಿ
ಇನ್ನಷ್ಟು ಆಳಕ್ಕೆ ಇಳಿದರೆ, ಸ್ಥಳೀಯವಾಗಿ ಯಾವುದೇ ಸಹಾಯ ಅಥವಾ ಮಾಹಿತಿಗಾಗಿ ಆದ್ಯತೆಯ ಪಟ್ಟಿಯಲ್ಲಿ ನೆರೆಹೊರೆಯ ಜನರಿಗೆ (40%) ಅಗ್ರ ರ್ಯಾಕಿಂಗ್ ನೀಡಲಾಗಿದೆ. ತಂತ್ರಜ್ಞಾನ (22.18%), ಸಂಬಂಧಿಗಳು (18.95%) ಮತ್ತು ನಿಕಟ ಸ್ನೇಹಿತರು (16.94%) ನಂತರದ ಸ್ಥಾನಗಳಲ್ಲಿದ್ದಾರೆ ಎನ್ನುವುದನ್ನು ವರದಿ ಹೈಲೈಟ್ ಮಾಡಿದೆ. ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ಕಡೆಗೆ ಹೆಚ್ಚು ಒಲವು ಹೊಂದಿರುವ ಚೆನ್ನೈ ಮತ್ತು ಹೈದರಾಬಾದ್‍ನಂತಹ ಇತರ ದಕ್ಷಿಣ ನಗರಗಳಿಗಿಂತ ಭಿನ್ನವಾಗಿ, ಬೆಂಗಳೂರು ಮಹಾನಗರ ನಿವಾಸಿಗಳು ಹೊಸ ಸಮಾಜಕ್ಕೆ ಆರಾಮವಾಗಿ ವರ್ಗಾಂತರ ಹೊಂದಲು ನೆರೆಹೊರೆಯ ಜನರನ್ನು ಒಂದು ಆದ್ಯತೆಯ ಸ್ಥಾನದಲ್ಲಿ (30.45%) ಗುರುತಿಸಿದ್ದಾರೆ.

ಆಪ್ತ ಸ್ನೇಹಿತರನ್ನು ಅನುಸರಿಸುತ್ತಾರೆ
ಉಳಿದಂತೆ ಆಪ್ತ ಸ್ನೇಹಿತರನ್ನು ಅನುಸರಿಸುತ್ತಾರೆ (25%) ಎನ್ನುವುದನ್ನು ವರದಿ ಹೇಳಿದೆ. ಪ್ರಪಂಚವು 200 ಮಿಲಿಯನ್ ಕರೋನಾ ಪ್ರಕರಣಗಳು ಮತ್ತು ಸಹೋದ್ಯೋಗಿಗಳಿಂದ ಹಿಡಿದು, ಸ್ನೇಹಿತರು ಮತ್ತು ಕುಟುಂಬದವರವರೆಗೆ 4.26 ದಶಲಕ್ಷಕ್ಕೂ ಹೆಚ್ಚು ಜನರ ಸಾವುಗಳನ್ನು ಕಂಡಿದ್ದು, ಭಾರತೀಯರು ಮೂರನೇ ಅಲೆಯತ್ತ ಹೆಜ್ಜೆ ಹಾಕುತ್ತಿರುವ ಕಾಲಘಟ್ಟದಲ್ಲಿ ಜತೆಯಾಗಿ ಸಂಪರ್ಕದಲ್ಲಿರುವುದು ಮಹತ್ವದ್ದಾಗಿದೆ.
ಒಂದು ಆಳವಾದ ಸಂಶೋಧನೆಯಲ್ಲಿ ಮೈಗೇಟ್ ಟ್ರಸ್ಟ್ ಸರ್ಕಲ್, ಶ್ರೇಣಿ -1 ಮತ್ತು ಶ್ರೇಣಿ -2 ನಗರಗಳಲ್ಲಿ ಎಲ್ಲ ವಯಸ್ಸಿನ 2,867 ಭಾರತೀಯರನ್ನು ಸಮೀಕ್ಷೆಗೆ ಒಳಪಡಿಸಿದೆ. ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಹೈದರಾಬಾದ್, ಇಂದೋರ್, ಜೈಪುರ, ಕೊಚ್ಚಿ, ಕೋಲ್ಕತಾ, ಮುಂಬೈ, ಪುಣೆ ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಮೈಗೇಟ್ ನಡೆಸಿದ ಈ ಅಧ್ಯಯನವು ಸಾಂಕ್ರಾಮಿಕ ರೋಗ ಜನರ ತಕ್ಷಣದ ವರ್ತುಲದ ಮೇಲೆ ಮತ್ತು ಅವರ ಮನೋಭಾವದ ಮೇಲೆ ಬೀರಿದ ಪರಿಣಾಮವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವಾಗಿದೆ.
Recommended Video

ಮೈಗೇಟ್ ಬಗ್ಗೆ
ಮೈಗೇಟ್ ಬಗ್ಗೆ: 2016ರಲ್ಲಿ ಸ್ಥಾಪನೆಯಾದ ಮೈಗೇಟ್ ದೇಶದ ಅತಿದೊಡ್ಡ ಸಮುದಾಯ ಅಪ್ಲಿಕೇಶನ್ ಆಗಿದ್ದು, 20,000+ ಹೌಸಿಂಗ್ ಸೊಸೈಟಿಗಳಲ್ಲಿ 3.5 ಮಿಲಿಯನ್ ಮನೆಗಳ ನಗರ ಜೀವನವನ್ನು ಸರಳಗೊಳಿಸುತ್ತದೆ. ಈ ಕ್ರಾಂತಿಕಾರಕ ಸ್ಟಾರ್ಟ್ ಅಪ್ 2019ರಲ್ಲಿ ಯುವರ್ ಸ್ಟೋರೀಸ್ ಲಿಸ್ಟ್‍ನಲ್ಲಿ 4ನೇ ರ್ಯಾಂಕಿಂಗ್ ಪಡೆದಿದೆ. ಜತೆಗೆ 2019ರಲ್ಲಿ ಬ್ಯುಸಿನೆಸ್ ಟುಡೇ ಪ್ರಕಾರ ಭಾರತದ ಅತ್ಯಂತ ಆಷರ್ಕಕ ಸ್ಟಾರ್ಟ್‍ಅಪ್‍ಗಳಲ್ಲೊಂದಾಗಿದೆ. ಮೈಗೇಟ್ ಅನ್ನು ಮಾಜಿ ಐಎಎಫ್ ಪೈಲಟ್ (ಶೌರ್ಯ ಚಕ್ರ ಪ್ರಶಸ್ತಿ ವಿಜೇತ) ವಿಜಯ್ ಅರಿಸೆಟ್ಟಿ ಮತ್ತು ಗೋಲ್ಡ್ಮನ್ ಸ್ಯಾಚ್ಸ್ ಮಾಜಿ ವಿಪಿ ಅಭಿಶೇಕ್ ಕೆ ಮತ್ತು ಒರಾಕಲ್ ಮತ್ತು ಡಿಜಿಟ್‍ನ ಮಾಜಿ ಪ್ರಾಜೆಕ್ಟ್ ಹೆಡ್ ಶ್ರೇಯನ್ಸ್ ಡಾಗಾ ಆರಂಭಿಸಿದರು.












Click it and Unblock the Notifications