ವರಮಹಾಲಕ್ಷ್ಮಿ ಹಬ್ಬ 2025: ಯಾವುದೇ ಕಾರಣಕ್ಕೂ ಈ 5 ತಪ್ಪುಗಳನ್ನು ಮಾಡಬೇಡಿ! ಅದೃಷ್ಟ ಕೈತಪ್ಪುತ್ತದೆ..
ಲಕ್ಷ್ಮಿ ಪೂಜೆ ಹಬ್ಬಕ್ಕೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಬಾರಿ ಲಕ್ಷ್ಮಿ ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಅಲ್ಲದೇ ಈ ಬಾರಿ ಉತ್ತಮ ಮಳೆ - ಬೆಳೆ ಬಂದಿರುವುದರಿಂದ ರೈತರಲ್ಲೂ ಮಂದಹಾಸ ಮೂಡಿದೆ. ಈ ಬಾರಿಯ ಲಕ್ಷ್ಮಿಯಲ್ಲಿ ಏನು ಮಾಡಬೇಕು ಹಾಗೂ ಎನು ಮಾಡಬಾರದು ಎನ್ನುವ ಪ್ರಮುಖ ವಿಷಯಗಳು ಇಲ್ಲಿವೆ. ಈ ವಿಷಯಗಳನ್ನು ಗಮನದಲ್ಲಿ ಇರಿಸಿಕೊಂಡು ಲಕ್ಷ್ಮಿ ಪೂಜೆ ಮಾಡಿದರೆ ಇನ್ನಷ್ಟು ಒಳ್ಳೆಯದಾಗಲಿದೆ.
ಸನಾತನ ಧರ್ಮದಲ್ಲಿ ಶುಕ್ರವಾರಕ್ಕೆ ವಿಶೇಷವಾದ ಸ್ಥಾನವಿದ್ದು, ಈ ದಿನವನ್ನು ಲಕ್ಷ್ಮಿ ದೇವಿಗೆ ಅರ್ಪಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಮತ್ತು ಉಪವಾಸ ಮಾಡುವುದರಿಂದ ಜೀವನದಲ್ಲಿ ಸಂಪತ್ತು, ಸಂತೋಷ ಹಾಗೂ ಸಮೃದ್ಧಿ ತುಂಬಿರುತ್ತದೆ ಎನ್ನುವ ನಂಬಿಕೆ ಇದೆ. ಶುಕ್ರವಾರದ ದಿನ ಹೊಸದಾಗಿ ಪ್ರಾರಂಭ ಮಾಡುವುದು ಹಾಗೂ ಶುಭ ಕಾರ್ಯಗಳನ್ನು ಮಾಡಿದರೆ ಲಾಭವಾಗಲಿದೆ ಎನ್ನುವುದು ವಾಡಿಕೆ. ಇನ್ನು ಕೆಲವೊಂದು ಕೆಲಸಗಳನ್ನು ಮಾಡಬಾರದು ಎನ್ನುವ ಮಾತೂ ಇದೆ. ಈ ದಿನ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎನ್ನುವ ವಿವರ ಇಲ್ಲಿದೆ.

ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿ ಮುನಿಸಿಕೊಳ್ಳುವ ಸಾಧ್ಯತೆಯೂ ಎನ್ನುವ ನಂಬಿಕೆ ಇದೆ. ಹೀಗಾಗಿ ಹೆಚ್ಚು ಎಚ್ಚರಿಕೆಯಿಂದ ಲಕ್ಷ್ಮಿ ದೇವಿಯ ಪೂಜೆ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕು. ಶುಕ್ರವಾರದ ದಿನ ಯಾವ ಕೆಲಸ ಮಾಡಬಾರದು ಎನ್ನುವ ವಿವರವನ್ನು ನೋಡೋಣ.
ಕಬ್ಬಿಣ ಬಳಕೆ ಮಾಡಬೇಡಿ: ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ಹಾಗೂ ಹಬ್ಬದ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕಬ್ಬಿಣದ ಪಾತ್ರೆಗಳನ್ನು ಬಳಸಬೇಡಿ. ಜಗಳ ಹಾಗೂ ಮನಸ್ತಾಪಗಳು ಬರದಂತೆ ನೋಡಿಕೊಳ್ಳಿ. ಇನ್ನು ಯಾವುದೇ ಕಾರಣಕ್ಕೂ ಬೆಳ್ಳಿ ಲೇಪನದಂತಹ ವಸ್ತುಗಳನ್ನು ಬಳಸಬೇಡಿ. ಪೂರ್ಣ ಬೆಳ್ಳಿ ಅಥವಾ ತಾಮ್ರದ ವಸ್ತುಗಳನ್ನು ದೇವರ ಪೂಜೆಗೆ ಬಳಸಿ. ಲೇಪನದಂತಹ ವಸ್ತುಗಳನ್ನು ಬಳಸುವುದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ.
ಲಕ್ಷ್ಮಿ ದೇವಿ ಮುಂದೆ ದುಡ್ಡು ಇರಿಸುವುದು ಬೇಡ: ಲಕ್ಷ್ಮಿ ದೇವಿ ಪೂಜೆಯ ದಿನ ಎಲ್ಲರೂ ಮಾಡುವ ಬಹುದೊಡ್ಡ ತಪ್ಪು ಎಂದರೆ ದೇವಿಯ ಮುಂದೆ ದುಡ್ಡು ಇರಿಸುವುದು. ಕೆಲವರಿಗೆ ದುಡ್ಡು ಇರಿಸುವುದು ಸಂತೋಷವನ್ನುಂಟು ಮಾಡಬಹುದು. ಆದರೆ ಈ ರೀತಿ ದುಡ್ಡು ಇರಿಸುವುದು ಲಕ್ಷ್ಮಿ ದೇವಿಗೇ ನಾವು ಸಂಪತ್ತು ತೋರಿಸಿದಂತೆ ಆಗುತ್ತದೆ ಎನ್ನುವ ನಂಬಿಕೆ ಇದೆ. ದೇವರ ಮುಂದೆ ದುಡ್ಡು ಇರಿಸುವುದನ್ನು ತಪ್ಪಿಸಿ. ಆಡಂಬರವಲ್ಲದ ಹಾಗೂ ಶ್ರದ್ಧಾ ಮತ್ತು ಭಕ್ತಿಯಿಂದ ಪೂಜೆ ಮಾಡಿ.
ಅವಮಾನಿಸುವುದು & ಕೆಟ್ಟ ಮಾತು: ಶುಕ್ರವಾರ ಮನೆಗೆ ಲಕ್ಷ್ಮಿ ಬರುವ ದಿನ. ಮನೆಯನ್ನೆಲ್ಲಾ ಸ್ವಚ್ಛ ಮಾಡಿ ಸಂಜೆ ದೀಪ ಬೆಳಗಿಸಿ, ಮನೆ - ಮನಸ್ಸು ಸ್ವಚ್ಛವಾಗಿದ್ದರೆ ಲಕ್ಷ್ಮಿ ದೇವಿ ಒಲಿಯುತ್ತಾಳೆ ಎನ್ನುವ ನಂಬಿಕೆ ಇದೆ. ಇನ್ನು ಲಕ್ಷ್ಮಿ ಪೂಜೆಯ ದಿನ ಯಾವುದೇ ಕಾರಣಕ್ಕೂ ಯಾರನ್ನೂ ಅವಮಾನಿಸಬೇಡಿ ಮತ್ತು ಕೆಟ್ಟ ಪದಗಳನ್ನು ಬಳಕೆ ಮಾಡಬೇಡಿ.
ಮಾಂಸಾಹಾರ ಮತ್ತು ಮದ್ಯ ಸೇವನೆ ಬೇಡ: ಶುಕ್ರವಾರದಂದು ನೀವು ಯಾವುದೇ ಕಾರಣಕ್ಕೂ ಮಾಂಸಾಹಾರ ಹಾಗೂ ಮದ್ಯ ಸೇವನೆಯನ್ನು ಮಾಡಬೇಡಿ. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಶುಕ್ರವಾರ ಅದರಲ್ಲೂ ಹಬ್ಬದ ದಿನಗಳಲ್ಲಿ ಯಾರೊಂದಿಗೂ ಕೆಟ್ಟ ಪದಗಳನ್ನು ಬಳಕೆ ಮಾಡಬೇಡಿ. ಜಗಳವಾಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ.
ದಾನ ಮಾಡಬೇಡಿ: ಅನವಶ್ಯಕ ಅಥವಾ ಮುಂದೂಡಲು ಸಾಧ್ಯವಿದ್ದರೆ ದುಡ್ಡನ್ನು ಸಾಧ್ಯವಾದಷ್ಟು ಶುಕ್ರವಾರ ಬಿಟ್ಟು ಬೇರೆಯ ದಿನ ಕೊಡಿ. ವಿಶೇಷವಾಗಿ ಈ ದಿನ ಬೆಳ್ಳಿ ಹಾಗೂ ಸಕ್ಕರೆ ಸೇರಿದಂತೆ ಕೆಲವೊಂದು ನಿರ್ದಿಷ್ಟ ವಸ್ತುಗಳನ್ನು ದಾನ ಮಾಡಬೇಡಿ. ಈ ರೀತಿ ದಾನ ಮಾಡುವುದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಶುಕ್ರ ಗ್ರಹ ದುರ್ಬಲವಾಗಲಿದೆ ಎನ್ನುವ ನಂಬಿಕೆ ಇದೆ.
ಶುಕ್ರವಾರ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ
ಇನ್ನು ಶುಕ್ರವಾರದಂದು ಕೆಲವೊಂದು ತಪ್ಪುಗಳನ್ನು ಮಾಡಬೇಡಿ. ಯಾರಿಂದಾದರೂ ಸಾಲ ಪಡೆಯುವುದು ಅಥವಾ ದುಡ್ಡು ಕೊಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಶುಕ್ರವಾರದಂದು ಪೂಜೆ ಮತ್ತು ಅಡಿಗೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿ ಮಾಡಬೇಡಿ. ಸಾಧ್ಯವಾದಷ್ಟು ಮುಂದಿನ ದಿನವೇ ಖರೀದಿ ಮಾಡಿ ಇರಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ಮನೆಗೆ ಐಶ್ವರ್ಯ ಬರುವುದಿಲ್ಲ ಎಂದು ವಾಡಿಕೆ ಇದೆ. ಕೊಳಕು ಮತ್ತು ಹರಿದ ಬಟ್ಟೆಗಳನ್ನು ಧರಿಸಬೇಡಿ ಇದು ರಾಹು ನಿಮ್ಮನ್ನು ದುರ್ಬಲಗೊಳಿಸುತ್ತಾನೆ ಎನ್ನಲಾಗುತ್ತದೆ.
ಈ ಬಾರಿಯ ವರಮಹಾಲಕ್ಷ್ಮಿ ಹಬ್ಬದ ದಿನ ಈ ವಿಷಯಗಳನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.












Click it and Unblock the Notifications