ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲಾನ್ ಮಸ್ಕ್ ವಿರುದ್ಧ 20 ಲಕ್ಷ ಕೋಟಿ ರೂ ಮೊಕದ್ದಮೆ; ಇದು ದಗಾ ಕಾಯಿನ್ನಾ?

|
Google Oneindia Kannada News

ಕ್ರಿಪ್ಟೋಕರೆನ್ಸಿ ಎಂಬ ಮಾಯಾವಿ ಹೇಗೆ ಜಗತ್ತನ್ನು ಅವರಿಸಿಕೊಂಡು ಮೋಡಿ ಮಾಡಿ, ಜನರಿಗೆ ಆಸೆ ಹುಟ್ಟಿಸಿ ಕಂಡೂಕಾಣದಂತೆ ಮಾಯವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇಡೀ ವಿಶ್ವಕ್ಕೆ ವಿಶ್ವವೇ ಯಾವುದೋ ಅದ್ಭುತ ಕಂಪನಿಯ ಷೇರುಗಳನ್ನು ಕೊಳ್ಳುವಂತೆ ಬಿಟ್ ಕಾಯಿನ್ ಇತ್ಯಾದಿ ಕ್ರಿಪ್ಟೋಕರೆನ್ಸಿಗಳತ್ತ ಮುಗಿದುಬಿದ್ದಿದ್ದೇ ಬಂತು. ಎಲಾನ್ ಮಸ್ಕ್ ಅವರಂಥ ದೊಡ್ಡ ದೊಡ್ಡ ಉದ್ಯಮಿಗಳು ಕ್ರಿಪ್ಟೋಕರೆನ್ಸಿಯ ಬಲೂನನ್ನು ಊದಿದ್ದರು. ಬಲೂನು ಊದಿ ಊದಿ ಈಗ ಠುಸ್ ಆಗುತ್ತಿರುವಂತೆ ಕಾಣುತ್ತಿದೆ.

ಸಾವಿರಾರು ಜನರು ಕೋಟಿ ಕೋಟಿ ಬಾಚಿಕೊಂಡರೆ, ಲಕ್ಷಾಂತರ ಜನರು ಲಕ್ಷಾಂತರ ಕೋಟಿ ರೂ ಕಳೆದುಕೊಂಡಿದ್ದಾರೆ. ಇದೇ ವೇಳೆ, ಡೋಜೆಕಾಯಿನ್‌ನಿಂದ ಹಣ ಕಳೆದುಕೊಂಡ ಕೆಲವರು ಕಾನೂನು ಮೊರೆ ಹೋಗಿದ್ದಾರೆ. ಡೋಜೆಕಾಯಿನ್ ಅನ್ನು ಬೆಂಬಲಿಸಿದ ಎಲಾನ್ ಮಸ್ಕ್ ಮತ್ತಿತರರ ವಿರುದ್ಧ 258 ಬಿಲಿಯನ್ ಡಾಲರ್ (ಸುಮಾರು 20 ಲಕ್ಷ ಕೋಟಿ ರೂ) ಕಾನೂನು ಮೊಕದ್ದಮೆಯನ್ನು ಜೂನ್ ತಿಂಗಳಲ್ಲಿ ಹೂಡಲಾಗಿತ್ತು. ಇದೀಗ ಆರೋಪ ಪಟ್ಟಿಗೆ ಇನ್ನಷ್ಟು ಆರು ಮಂದಿಯನ್ನು ಸೇರಿಸಲಾಗಿದೆ. ಏಳು ಹೊಸ ದೂರುದಾರರು ಸೇರ್ಪಡೆಯಾಗಿದ್ದಾರೆ.

ಐಪೋನ್‌ 12ಗೆ ನಿಷೇಧ ಹೇರಿ ಆಪಲ್‌ ಕಂಪೆನಿಗೆ ದಂಡ, ಯಾಕೆ?ಐಪೋನ್‌ 12ಗೆ ನಿಷೇಧ ಹೇರಿ ಆಪಲ್‌ ಕಂಪೆನಿಗೆ ದಂಡ, ಯಾಕೆ?

ಅಮೆರಿಕದ ನ್ಯೂಯಾರ್ಕ್‌ನ ಮನ್ಹಟನ್ ಫೆಡರಲ್ ಕೋರ್ಟ್‌ನಲ್ಲಿ ಮಂಗಳವಾರ ಪರಿಷ್ಕೃತ ದೂರನ್ನು ಸಲ್ಲಿಸಲಾಗಿದ್ದು, ಎಲಾನ್ ಮಸ್ಕ್ ಅವರ ಸುರಂಗ ನಿರ್ಮಾಣ ಸಂಸ್ಥೆ ಬೋರಿಂಗ್ ಕೋ ಮೊದಲಾದವನ್ನು ಆರೋಪಿ ಸ್ಥಾನದಲ್ಲಿ ಹೊಸದಾಗಿ ಸೇರಿಸಲಾಗಿದೆ.

ಎತ್ತರಕ್ಕೇರಿ ಬಿದ್ದ ಡೋಜೆ

ಎತ್ತರಕ್ಕೇರಿ ಬಿದ್ದ ಡೋಜೆ

ಡೋಜೆಕಾಯಿನ್ ಫೌಂಡೇಶನ್, ಎಲಾನ್ ಮಸ್ಕ್ ಮತ್ತವರ ಟೆಸ್ಲಾ, ಸ್ಪೇಸ್‌ಎಕ್ಸ್, ಬೋರಿಂಗ್ ಇತ್ಯಾದಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಈ ಮೊಕದ್ದಮೆಯಲ್ಲಿ ಡಿಫೆಂಡೆಂಟ್ ಆಗಿವೆ. ದೂರು ನೀಡಿದವರ ಪ್ರಕಾರ, ಎಲಾನ್ ಮಸ್ಕ್ ಹಾಗೂ ಅವರ ಕಂಪನಿಗಳು ಮತ್ತಿತರರು ಸೇರಿ ಕಳೆದ ಎರಡು ವರ್ಷಗಳಿಂದ ಡೋಜೆಕಾಯಿನ್‌ನ ದರವನ್ನು ಉದ್ದೇಶಪೂರ್ವಕವಾಗಿ ಹಿಗ್ಗಿಸಿದ್ದಾರೆ. ಎರಡು ವರ್ಷದಲ್ಲಿ ಡೋಜೆಕಾಯಿನ್ ಬೆಲೆ ಶೇ. 36 ಸಾವಿರದಷ್ಟು ಏರಿಕೆಯಾಗುವಂತೆ ಮಾಡಿ ನಂತರ ಬೆಲೆ ದಿಢೀರ್ ಕುಸಿದುಹೋಗುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಂದರೆ 10 ರೂ ಇದ್ದ ಬೆಲೆಯನ್ನು 3.6 ಲಕ್ಷ ರೂಗೆ ಏರಿಸಿದಂತೆ ಲೆಕ್ಕ.

ಡೋಜೆಕರೆನ್ಸಿಗೆ ಅಷ್ಟು ಮೌಲ್ಯ ಇಲ್ಲ ಎಂದು ಗೊತ್ತಿದ್ದರೂ ಮಾರ್ಕೆಟಿಂಗ್ ತಂತ್ರಗಳ ಮೂಲಕ ಬೆಲೆ ಹಿಗ್ಗಿಸುವ ಮೂಲಕ ಎಲಾನ್ ಮಸ್ಕ್ ಮತ್ತಿತರರು ಲಕ್ಷಾಂತರ ಕೋಟಿ ಲಾಭ ಮಾಡಿಕೊಂಡಿದ್ದಾರೆ. ಇತರ ಹೂಡಿಕೆದಾರರು ನಷ್ಟ ಮಾಡಿಕೊಂಡಿದ್ದಾರೆ ಎಂಬುದು ದೂರುದಾರರು ಮಾಡಿರುವ ಪ್ರಮುಖ ಆರೋಪ.

2021 ಮೇ ನಂತರ ಡೋಜೆಕಾಯಿನ್‌ನ ಮಾರುಕಟ್ಟೆ ಮೌಲ್ಯ ಎಷ್ಟು ಕುಸಿತ ಆಗಿದೆಯೋ ಅದಕ್ಕೆ ಮೂರು ಪಟ್ಟು ನಷ್ಟವನ್ನು ಭರಿಸುವಂತೆ ಈಗ ಮೊಕದ್ದಮೆ ಹಾಕಲಾಗಿದೆ.

ಎಲಾನ್ ಮಸ್ಕ್ ಬಹಿರಂಗವಾಗಿ ಡೋಜೆಕಾಯಿನ್‌ಗೆ ಪ್ರಚಾರ ಮಾಡುತ್ತಿದ್ದುದು ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಗೊತ್ತಿರುವ ವಿಚಾರ. ಅವರು ಡೋಜೆಕಾಯಿನ್ ಪರ ಒಂದು ಟ್ವೀಟ್ ಹಾಕಿದರೂ ಆ ಕ್ರಿಪ್ಟೋಕರೆನ್ಸಿಯ ಬೆಲೆ ಏರಿಕೆಯಾಗುತ್ತಿತ್ತು. ಅಷ್ಟರಮಟ್ಟಿಗೆ ಮಸ್ಕ್ ಪ್ರಭಾವಶಾಲಿ ಎನಿಸಿದ್ದರು. ಫೆಡರಲ್ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ ಬಳಿಕವೂ ಎಲಾನ್ ಮಸ್ಕ್ ಡೋಜೆಕಾಯಿನ್ ಪರ ಮಾತನಾಡಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ಡೋಜೆಕಾಯಿನ್ 74 ಸೆಂಟ್ ಬೆಲೆ ಹೊಂದಿತ್ತು. ಈಗ ಅದು ಕೇವಲ 6 ಸೆಂಟ್‌ಗೆ ಇಳಿದಿದೆ.

ಗೂಗಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ: ಸುಂದರ್‌ ಪಿಚ್ಚೈ ಸುಳಿವುಗೂಗಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ: ಸುಂದರ್‌ ಪಿಚ್ಚೈ ಸುಳಿವು

ಬಿಟ್‌ಕಾಯಿನ್ ಕುಸಿತ

ಬಿಟ್‌ಕಾಯಿನ್ ಕುಸಿತ

ವಿಶ್ವಾದ್ಯಂತ ಬಹುತೇಕ ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಕುಸಿತ ಮುಂದುವರಿದಿದೆ. ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ 19 ಸಾವಿರ ಡಾಲರ್ ಮಟ್ಟಕ್ಕಿಂತ ಕೆಳಗೆ ಕುಸಿದಿದೆ. 19000 ಡಾಲರ್ ಎಂದರೆ ಸುಮಾರು 15 ಲಕ್ಷ ರೂ. ಕಳೆದ ಎರಡು ವರ್ಷದಲ್ಲಿ ಬಿಟ್‌ಕಾಯಿನ್ ಮೌಲ್ಯ ಇಷ್ಟು ಕಡಿಮೆಯಾಗಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

ಪ್ರಮುಖ ಕ್ರಿಪ್ಟೋಕರೆನ್ಸಿಗಳ ಇಂದಿನ ಮೌಲ್ಯ

ಪ್ರಮುಖ ಕ್ರಿಪ್ಟೋಕರೆನ್ಸಿಗಳ ಇಂದಿನ ಮೌಲ್ಯ

ಬಿಟ್‌ಕಾಯಿನ್: 18,715.94 ಡಾಲರ್
ಎತಿರಿಯಂ (ಇಟಿಎಚ್): 1,506 ಡಾಲರ್
ಬೈನಾನೇಸ್ ಕಾಯಿನ್ (ಬಿಎನ್‌ಬಿ): 262.66
ಕಾರ್ಡನೋ (ಎಡಿಎ): 0.4597 ಡಾಲರ್ (45 ಸೆಂಟ್)
ಡೋಜೆಕಾಯಿನ್ (ಡೋಜೆ): 0.05845 ಡಾಲರ್ (6 ಸೆಂಟ್)
ಶಿಬಾ ಇನು (ಶಿಬ್): 0.00001197 ಡಾಲರ್
ಡೋಗೆಲಾನ್ ಮಾರ್ಸ್ (ಎಲಾನ್): 0.0000002655

ಕ್ರಿಪ್ಟೋ ಮಾರುಕಟ್ಟೆ ಎಷ್ಟಿದೆ?

ಕ್ರಿಪ್ಟೋ ಮಾರುಕಟ್ಟೆ ಎಷ್ಟಿದೆ?

ಸದ್ಯ ಸಾಕಷ್ಟು ಕುಸಿತ ಕಂಡಿದ್ದರೂ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ 935.84 ಬಿಲಿಯನ್ ಡಾಲರ್‌ನಷ್ಟು ಇದೆ. ಅಂದರೆ ಸುಮಾರು 75 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆಯಷ್ಟು ಅಗಾಧವಾಗಿದೆ ಕ್ರಿಪ್ಟೋಕರೆನ್ಸಿ. ಎರಡು ಮೂರು ವರ್ಷಗಳ ಹಿಂದಂತೂ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಊಹಿಸಲೂ ಅಸಾಧ್ಯ ಎಂಬಂತಿತ್ತು. ರಾಷ್ಟ್ರಗಳ ಕರೆನ್ಸಿಗಳ ಕಾಲ ಮುಗಿಯಿತು. ಇನ್ನೇನಿದ್ದರೂ ಡಿಜಿಟಲ್ ಕರೆನ್ಸಿ ಎಂದು ಹೇಳುವವರು ಈಗಲೂ ಕಡಿಮೆ ಇಲ್ಲ. ಆದರೆ, ಭವಿಷ್ಯದಲ್ಲಿ ಡಿಜಿಟಲ್ ಕರೆನ್ಸಿ ಪ್ರಾಧಾನ್ಯಕ್ಕೆ ಬರಬಹುದಾದರೂ ಕೂಸು ಹುಟ್ಟುವ ಮುಂಚೆಯೇ ಕುಲಾವಿ ತೊಡಿಸಿದರು ಎಂಬಂತೆ ಕ್ರಿಪ್ಟೋಕರೆನ್ಸಿಯನ್ನು ಜನರು ಬಹಳ ಬೇಗ ನಂಬಿ ಕೆಟ್ಟರು ಎಂದು ತಜ್ಞರು ಹೇಳುತ್ತಾರೆ.

ಒಂದು ಅಂದಾಜು ಪ್ರಕಾರ, ವಿಶ್ವಾದ್ಯಂತ 20 ಸಾವಿರಕ್ಕೂ ಹೆಚ್ಚು ರೀತಿಯ ಕ್ರಿಪ್ಟೋಕರೆನ್ಸಿಗಳು ಚಾಲನೆಯಲ್ಲಿವೆ. ಅದರಲ್ಲಿ ಬಿಟ್‌ಕಾಯಿನ್ ಪ್ರಾಬಲ್ಯ ಬಹಳ ಹೆಚ್ಚು. ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ಸಂಪೂರ್ಣ ಸ್ವಾಮ್ಯತೆ ಹೊಂದಿದ್ದ ಬಿಟ್‌ಕಾಯಿನ್‌ನ ಹಿಡಿತ ಈಗ ಶೇ. 40ಕ್ಕಿಂತ ಕಡಿಮೆಗೆ ಇಳಿದಿದೆ.

(ಒನ್ಇಂಡಿಯಾ ಸುದ್ದಿ)

English summary
Lawsuit of 258 Billion USD against Elon Musk and others was filed in US court on June month. Now many more plaintiffs have joined the lawsuit and more defendants are added. This is regarding Dogecoin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X