ಚಂದನ್ ಶೆಟ್ಟಿ ಬಳಿಕ ಯುವ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನ ಹೆಚ್ಚಲು ಪ್ರಮುಖ ಕಾರಣಗಳಿವು
ಚಂದನವನದಲ್ಲಿ ಕಳೆದ ಒಂದು ವಾರದಿಂದ ಸಿನಿಮಾಗಳಿಗಿಂತ ನಟ-ನಟಿಯರ ವಿಚ್ಛೇದನದ ಸದ್ದು ಜೋರಾಗಿದೆ. ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡಿದ್ದರು. ಅದರ ಬೆನ್ನಲ್ಲೇ ಈಗ ಕನ್ನಡ ಚಿತ್ರರಂಗದ ದೊಡ್ಮನೆ ಎಂದೇ ಹೆಸರಾಗಿರುವ ರಾಜ್ ಕುಟುಂಬದಲ್ಲಿ ವಿಚ್ಛೇದನ ಸುದ್ದಿ ಸದ್ದು ಮಾಡುತ್ತಿದೆ.
ಪುನೀತ್ ರಾಜ್‌ಕುಮಾರ್ ಅವರ ಉತ್ತರಾಧಿಕಾರಿ ಎಂದೇ ಹೇಳಲಾಗುವ ಯುವ ರಾಜ್‌ಕುಮಾರ್ ಅವರ ದಾಂಪತ್ಯದಲ್ಲಿ ಬಿರುಕು ಬಿಟ್ಟ ಸುದ್ದಿ ಸದ್ಯ ರಾಜ್ ಕುಟುಂಬದ ಅಭಿಮಾನಿಗಳಿಗೆ ಆಘಾತ ತಂದಿದೆ.

ರಾಜ್‌ಕುಮಾರ್ ಕುಟುಂಬ ಎಂದರೆ ಬರೀ ನಟನೆಗೆ ಮಾತ್ರವಲ್ಲ ನಟರ ಸಾಮಾಜಿಕ ಕಳಕಳಿ, ಆದರ್ಶಪ್ರಾಯ ಜೀವನ, ಅವರ ನಡವಳಿಕೆ ಅಭಿಮಾನಿಗಳ ಮೇಲೆ ವಿಶೇಷ ಪ್ರಭಾವ ಬೀರಿದೆ.
ಮದುವೆ ಎಂದರೆ ಭಾರತದಲ್ಲಿ ಅದರದ್ದೇ ಆದ ಮಹತ್ವ ಇದೆ. ಭಾರತವು ಜಾಗತಿಕವಾಗಿ ಕಡಿಮೆ ವಿಚ್ಛೇದನ ಪ್ರಮಾಣವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ, ಅಂದಾಜು 1.1% ಎಂದು ಅಂದಾಜಿಸಲಾಗಿದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ, ಭಾರತವು ವಿಚ್ಛೇದನ ದರಗಳಲ್ಲಿ 50% ರಿಂದ 60% ರಷ್ಟು ಏರಿಕೆಯನ್ನು ಕಂಡಿದೆ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ. ಹಾಗಾದರೆ ವಿಚ್ಛೇದನಕ್ಕೆ ಪ್ರಮುಖ ಕಾರಣಗಳೇನು ಗೊತ್ತಾ?
ಮಹಿಳಾ ಸಬಲೀಕರಣ
ಕಳೆದ ಹಲವು ವರ್ಷಗಳಿಂದ ಭಾರತೀಯ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ಬೆಳವಣಿಗೆ ಕಂಡಿದ್ದಾರೆ. ಮೊದಲಿನಂತೆ ಜೀವನಕ್ಕಾಗಿ ಗಂಡಿನ ಮೇಲೆ ಅವಲಂಬನೆ ಕಡಿಮೆಯಾಗಿದೆ. ಶಿಕ್ಷಣ, ಉದ್ಯೋಗ ಪ್ರಮಾಣ ಹೆಚ್ಚಾದಂತೆ, ಎಲ್ಲವನ್ನೂ ಸಹಿಸಿಕೊಂಡು ಬದುಕಬೇಕು ಎನ್ನುವ ಮನೋಭಾವ ಕಡಿಮೆಯಾಗುತ್ತಿದೆ. ದಾಂಪತ್ಯದಿಂದ ಹೊರಬಂದು ಸಮಾಜದಲ್ಲಿ ಬದುಕುವ ಧೈರ್ಯ ಮಹಿಳೆಯರಲ್ಲಿ ಹೆಚ್ಚುತ್ತಿದೆ.
ಪರಸ್ಪರ ನಂಬಿಕೆ ಕೊರತೆ
ಯಾವುದೇ ಸಂಬಂಧದ ಅಡಿಪಾಯ ನಂಬಿಕೆ ಎನ್ನುತ್ತೇವೆ. ಒಮ್ಮೆ ನಂಬಿಕೆಯ ಎಳೆ ಮುರಿದರೆ, ಅದು ಎಂದಿಗೂ ಸಾಮಾನ್ಯ ಸ್ಥಿತಿಗೆ ಬರುವುದಿಲ್ಲ. ಭಾರತದಲ್ಲಿ ದಾಂಪತ್ಯದಲ್ಲಿ ದ್ರೋಹ ಪ್ರಕರಣಗಳು ಹೆಚ್ಚುತ್ತಿವೆ. ಜನರು ಬೇಗನೆ ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ನಿರಾಸಕ್ತಿ ಹೊಂದುತ್ತಾರೆ. ಅನೇಕ ಘಟನೆಗಳಲ್ಲಿ ಗಂಡ ಅಥವಾ ಹೆಂಡತಿ ಬೇರೊಬ್ಬರ ಜೊತೆ ಸಂಬಂಧ ಹೊಂದುವುದು ವಿಚ್ಛೇದನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಅನ್ಯೋನ್ಯತೆಯ ಕೊರತೆ
ಗಂಡ ಹೆಂಡತಿಯ ಸಂಬಂಧ ದೀರ್ಘಕಾಲದವರೆಗೆ ಉಳಿಯಬೇಕಾದರೆ ಅನ್ಯೋನ್ಯತೆ ಪ್ರಮುಖವಾಗುತ್ತದೆ. ಅನ್ಯೋನ್ಯತೆ ಎನ್ನುವುದು ಕೇವಲ ಲೈಂಗಿಕ ತೃಪ್ತಿಯಲ್ಲ, ಪರಸ್ಪರ ಅರ್ಥ ಮಾಡಿಕೊಳ್ಳುವ ಗುಣ, ಒಬ್ಬರ ಮಾತುಗಳನ್ನು ಮತ್ತೊಬ್ಬರು ಕೇಳುವುದು, ಜೊತೆಯಾಗಿ ನಿಲ್ಲುವುದು ಕೂಡ ಮುಖ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಸಮಯ ಕೊಡುವುದು ಕಡಿಮೆಯಾಗುತ್ತಿದೆ. ಅನ್ಯೋನ್ಯತೆ ಕಡಿಮೆಯಾಗುವುದು ಕೂಡ ವಿಚ್ಛೇದನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಹಗುರವಾಗಿ ಪರಿಗಣಿಸುವುದು
ಸಂಬಂಧದ ಆರಂಭಿಕ ಹಂತದಲ್ಲಿ ಅವನು/ಅವಳು ಪರಸ್ಪರ ಹೆಚ್ಚು ಸಮಯ ನೀಡುತ್ತಾರೆ. ಆದರೆ ಬಳಿಕ ನನಗೆ ಸಮಯ ಕೊಡುತ್ತಿಲ್ಲ ಎನ್ನುವ ದೂರುಗಳು ಇತ್ತೀಚಿನ ದಿನಗಳಗಲ್ಲಿ ದಂಪತಿಗಳಲ್ಲಿ ಹೆಚ್ಚುತ್ತಿದೆ. ತನಗೆ ಅವನು/ಅವಳು ಮೊದಲಿನಷ್ಟು ಪ್ರಾಮುಖ್ಯತೆ ಕೊಡುತ್ತಿಲ್ಲ ಎನ್ನುವುದು ಗಮನಕ್ಕೆ ಬಂದಂತೆ ಇಬ್ಬರ ನಡುವಿನ ಅಂತರ ಹೆಚ್ಚುತ್ತದೆ. ಕೆಲವೊಮ್ಮೆ ಅದು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತದೆ.
ಕುಟುಂಬಗಳು ಅಥವಾ ಸ್ನೇಹಿತರ ಹಸ್ತಕ್ಷೇಪ
ಇಂದು ಮಹಿಳೆಯರು ಮತ್ತು ಪುರುಷರು ಹಳೆಯ-ಶೈಲಿಯ ಜೀವನಶೈಲಿ ಅಥವಾ ಆಲೋಚನೆಗಳೊಂದಿಗೆ ಬದುಕುತ್ತಿಲ್ಲ. ಆದರೆ, ನಾವು ಇನ್ನೂ ಪ್ರಾಯೋಗಿಕ ಸಮಾಜದಲ್ಲಿ ವಾಸಿಸುತ್ತಿದ್ದೇವೆ ಎಂಬ ಅಂಶವನ್ನು ನಾವು ಇನ್ನೂ ಒಪ್ಪುವುದಿಲ್ಲ, ಮದುವೆಯು ಒಂದು ನಿರ್ದಿಷ್ಟ ರೀತಿಯಲ್ಲಿ ಇರಬೇಕು. ಅಲ್ಲಿ ದಂಪತಿಗಳು ತಮ್ಮ ಮಿತಿಗಳನ್ನು ತಿಳಿದಿರಬೇಕು. ಮತ್ತು ಮಹಿಳೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ಇರುವುದಿಲ್ಲ. ಈ ಸಮಸ್ಯೆಯನ್ನು ಸರಿಪಡಿಸಲು ನಾವು ಬಹಳ ದೂರ ಹೋಗಬೇಕಾಗಿದೆ. ಇದರೊಂದಿಗೆ, ಹೊಸ ಪೀಳಿಗೆಯಲ್ಲಿ ಇನ್ನೂ ಒಂದು ಸಮಸ್ಯೆ ಇದೆ, ತಾಳ್ಮೆ ಕಡಿಮೆ, ಕೋಪ ಜಾಸ್ತಿ. ಸಣ್ಣ ಪುಟ್ಟ ಜಗಳಗಳೂ ವಿಕೋಪಕ್ಕೆ ತಿರುಗಿ ಸಂಬಂಧಗಳು ಹಾಳಾಗುವುದನ್ನು ನೋಡಬಹುದಾಗಿದೆ.
-
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Live-in Couples: 2027ರ ಜನಗಣತಿ: ಲಿವ್-ಇನ್ ಸಂಬಂಧದಲ್ಲಿರುವವರಿಗೂ ವಿವಾಹಿತ ದಂಪತಿ ಸ್ಥಾನಮಾನ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ












Click it and Unblock the Notifications