Get Updates
Get notified of breaking news, exclusive insights, and must-see stories!

ಡೆಲ್ಟಾ ಉಲ್ಬಣ: ಚೀನಾ ಸೇರಿ ವಿದೇಶಗಳಲ್ಲಿ ಹೇಗಿದೆ ಕೋವಿಡ್‌ ಪರಿಸ್ಥಿತಿ?

ನವದೆಹಲಿ, ಆ.06: ಪ್ರಪಂಚದಾದ್ಯಂತದ ದೇಶಗಳಲ್ಲಿ ಡೆಲ್ಟಾ ರೂಪಾಂತರದ ಹೆಚ್ಚಿನ ಪ್ರಕರಣಗಳು ವರದಿಯಾಗಿರುವುದರಿಂದ, ಕೋವಿಡ್‌ ಸೋಂಕು ಹರಡುವುದನ್ನು ತಡೆಯಲು ರಾಷ್ಟ್ರಗಳು ಪ್ರಯಾಣವನ್ನು ನಿರ್ಬಂಧಿಸುತ್ತಿವೆ. ಸಾಮೂಹಿಕ ದೇಶೀಯ ಪ್ರಯಾಣ ನಿರ್ಬಂಧವನ್ನು ಜಾರಿಗೆ ತಂದ ಇತ್ತೀಚಿನ ದೇಶಗಳಲ್ಲಿ ಚೀನಾ ಒಂದಾಗಿದೆ. ಎಲ್ಲಾ ಇಂಟರ್ ಸಿಟಿ ಕೋಚ್, ಟ್ಯಾಕ್ಸಿ ಮತ್ತು ಆನ್‌ಲೈನ್ ಕಾರ್ ಹೇಲಿಂಗ್ ಸೇವೆಗಳನ್ನು ಮಧ್ಯಮ ಮತ್ತು ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಸ್ಥಗಿತಗೊಳಿಸಲಾಗಿದೆ.

ಹಿಂದಿನ ರೂಪಾಂತರಗಳು, ರೋಗದ ತಳಿಗಳಿಗೆ ಹೋಲಿಸಿದರೆ ಭಾರತದಲ್ಲಿ ಮೊದಲು ಹುಟ್ಟಿಕೊಂಡ ಈ ಕೋವಿಡ್‌ನ ಡೆಲ್ಟಾ ರೂಪಾಂತರವು ಹೆಚ್ಚು ಪ್ರಸರಣವನ್ನು ಹೊಂದಿದೆ ಮತ್ತು ಕೋವಿಡ್ -19 ರ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ಕೋವಿಡ್‌ ಸೋಂಕಿನ ಹರಡುವಿಕೆಯನ್ನು ಮಿತಿಗೊಳಿಸಲು, ರೋಗದ ಹಿಂದಿನ ಅಲೆಗಳಂತೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧವನ್ನು ಅವಲಂಭಿಸಬೇಕಾಗಿದೆ. ಪ್ರಪಂಚದಾದ್ಯಂತ ಈ ಡೆಲ್ಟಾ ರೂಪಾಂತರ ಎಚ್ಚರಿಕೆಯ ಗಂಟೆಗಳನ್ನು ಬಾರಿಸಿದೆ.

ಕೊರೊನಾ ವೈರಸ್‌ ಸೋಂಕು ಮೊದಲು ಚೀನಾದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಕೊರೊನಾ ಸೋಂಕು ದೇಶದಲ್ಲಿ ಕಡಿಮೆಯಾಗುತ್ತಿದ್ದಂತೆ ಅಲ್ಲಿನ ಆರ್ಥಿಕ ಚಟುವಟಿಕೆಗಳೂ ಪ್ರಗತಿ ಸಾಧಿಸಲಾರಂಭಿಸಿತು. ಹೆಚ್ಚು ಕಡಿಮೆ ಸಾಮಾನ್ಯ ಸ್ಥಿತಿಗೆ ಚೀನಾ ಮರಳಿತ್ತು. ಆದರೆ ಈಗ ಕೋವಿಡ್‌ನ ಈ ಡೆಲ್ಟಾ ರೂಪಾಂತರವು ಚೀನಾಕ್ಕೂ ಕಟ್ಟೆಚ್ಚರವನ್ನು ನೀಡಿದೆ. ನಿರ್ಬಂಧ ಕೊಂಚ ಸಡಿಲಿಕೆ ಮಾಡಿದ್ದ ಚೀನಾ ಈಗ ನಿರ್ಬಂಧವನ್ನು ಬಿಗಿಗೊಳಿಸಿದೆ. ಹಾಗೆಯೇ ಒಂದು ಪ್ರದೇಶದಲ್ಲಿ ಕೊರೊನಾ ಪ್ರಕರಣ ವರದಿಯಾದರೆ, ಆ ಪ್ರದೇಶವನ್ನು ಸಂಪೂರ್ಣ ಸೀಲ್‌ ಡೌನ್‌ ಮಾಡಿ, ಎಲ್ಲಾ ನಾಗರಿಕರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸುತ್ತಿದೆ.

 ಚೀನಾದಲ್ಲಿ ಪ್ರಯಾಣ ನಿರ್ಬಂಧ ಬಿಗಿ

ಚೀನಾದಲ್ಲಿ ಪ್ರಯಾಣ ನಿರ್ಬಂಧ ಬಿಗಿ

ಚೀನಾ ಬುಧವಾರ ತನ್ನ ನಾಗರಿಕರಿಗೆ ವಿದೇಶಿ ಪ್ರಯಾಣ ನಿರ್ಬಂಧಗಳನ್ನು ಬಿಗಿಗೊಳಿಸಿದೆ. ಚೀನಾದೊಳಗೆ ಜನರ ಸಂಚಾರವು ಹೆಚ್ಚು ನಿರ್ಬಂಧದ ಅಡಿಯಲ್ಲಿ ಬರುತ್ತಿದೆ. ಸ್ಥಳೀಯ ಸಾರಿಗೆ ಬಂದ್‌ ಮತ್ತು ಕೆಲವು ನಗರಗಳಲ್ಲಿ ಸ್ಥಳಗಳಲ್ಲಿ ಮನೆಯಲ್ಲಿಯೇ ಇರುವ ಆದೇಶಗಳನ್ನು ನೀಡಲಾಗಿದೆ. ಚೀನಾ ಈ ಹಿಂದೆ ಕೋವಿಡ್ -19 ಅನ್ನು ಹತ್ತಿಕ್ಕುವಲ್ಲಿ ತನ್ನ ಯಶಸ್ಸಿನ ಬಗ್ಗೆ ಹೆಗ್ಗಳಿಕೆ ಹೊಂದಿತ್ತು. ಆರಂಭಿಕ ಹಂತಗಳಲ್ಲಿ ಕಠಿಣವಾದ ಲಾಕ್‌ಡೌನ್‌ಗಳು ಅದರ ಗಡಿಗಳ ಬಿಗಿಯಾದ ನಿಯಂತ್ರಣಗಳನ್ನು ಮಾಡಲಾಗಿತ್ತು. ಆದರೆ ಸಾಮೂಹಿಕ ಪರೀಕ್ಷಾ ಅಭಿಯಾನಗಳು ದೇಶಾದ್ಯಂತ ಡೆಲ್ಟಾ ಭಿನ್ನ ಸೋಂಕುಗಳನ್ನು ಪತ್ತೆ ಮಾಡಿವೆ. ಸ್ಥಳೀಯ ಸರ್ಕಾರಗಳು ಸಂಪೂರ್ಣ ನಗರಗಳನ್ನು ಪರೀಕ್ಷಿಸಿವೆ ಮತ್ತು ಲಕ್ಷಾಂತರ ಜನರು ಈಗ ಮನೆಯಲ್ಲಿ ಉಳಿಯಬೇಕಾಗಿದೆ. ಬುಧವಾರ ಅಧಿಕೃತ ಅಂಕಿಅಂಶಗಳು 71 ಹೊಸ ಕೊರೊನಾ ಸೋಂಕುಗಳನ್ನು ಪತ್ತೆಯಾಗಿದೆ. ಜನವರಿಯಿಂದ ಹೆಚ್ಚಿನ ಪ್ರಕರಣ ಇದಾಗಿದೆ. ಆದರೆ ಏಕಾಏಕಿ ಡಜನ್‌ಗಟ್ಟಲೆ ನಗರಗಳಿಗೆ ಹರಡಿದರೂ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ.

ಮಾಸ್ಕೋದಿಂದ ಬಂದ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿದ್ದ ಸೋಂಕು ಜಿಯಾಂಗ್ಸು ಪ್ರಾಂತ್ಯದ ನಾನ್ಜಿಂಗ್‌ನಲ್ಲಿರುವ ವಿಮಾನ ನಿಲ್ದಾಣ ಕ್ಲೀನರ್‌ಗಳಿಗೆ ಹರಡಿದಾಗ ಆತಂಕ ಆರಂಭವಾಗಿದೆ. ಈ ದೇಶದ ಈಗಾಗಲೇ ಗಡಿ ನಿಯಂತ್ರಣ ಕ್ರಮಗಳಲ್ಲಿನ ದೌರ್ಬಲ್ಯಗಳನ್ನು ಬಹಿರಂಗಪಡಿಸಿದೆ. ಚೀನಾದ ವಲಸೆ ಪ್ರಾಧಿಕಾರವು ಬುಧವಾರ "ಅನಿವಾರ್ಯವಲ್ಲದ ಮತ್ತು ತುರ್ತು-ಅಲ್ಲದ" ಪ್ರಕರಣಗಳಲ್ಲಿ ದೇಶದಿಂದ ನಿರ್ಗಮಿಸಲು ಅಗತ್ಯವಾದ ಸಾಮಾನ್ಯ ಪಾಸ್‌ಪೋರ್ಟ್‌ಗಳು ಮತ್ತು ಇತರ ದಾಖಲೆಗಳನ್ನು ನೀಡುವುದನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಇದು ಇನ್ನು ಚೀನಾದ ಸಾರ್ವಜನಿಕರಿಗೆ ವಿದೇಶಿ ಪ್ರಯಾಣ ನಿಷೇಧ ಎಂದು ಅರ್ಥವಲ್ಲ ಎಂದು ಕೂಡಾ ಹೇಳಿದೆ. ವಲಸೆ ಅಧಿಕಾರಿ ಲಿಯು ಹೈಟಾವೊ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ "ವಿದೇಶದಲ್ಲಿ ಅಧ್ಯಯನ, ಉದ್ಯೋಗ ಮತ್ತು ವ್ಯಾಪಾರಕ್ಕಾಗಿ ನಿಜವಾದ ಅಗತ್ಯತೆ ಹೊಂದಿರುವವರಿಗೆ" ತಮ್ಮ ದಾಖಲೆಗಳನ್ನು ಇನ್ನು ಪರಿಶೀಲಿಸಿದ ನಂತರ ನೀಡಲಾಗುವುದು. ನೂರಾರು ಹಡಗುಗಳಲ್ಲಿರುವ ವಿದೇಶಿ ಸಿಬ್ಬಂದಿಯನ್ನು ಚೀನಾದ ಬಂದರುಗಳಲ್ಲಿ ಇಳಿಯುವುದನ್ನು ನಿಲ್ಲಿಸಲಾಗಿದೆ. ಏಕಾಏಕಿ ಕೋವಿಡ್‌ ಪೀಡಿತ ಪ್ರದೇಶಗಳಲ್ಲಿ ಮತ್ತು ಹೊರಗೆ ಸಾರ್ವಜನಿಕ ಸಾರಿಗೆ ಮತ್ತು ಟ್ಯಾಕ್ಸಿಗಳನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರವು ಸ್ಥಳೀಯರಿಗೆ ಆದೇಶಿಸಿದೆ ಎಂದು ಸಾರಿಗೆ ಸಚಿವಾಲಯವು ಅದೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.

 ಯುಎಸ್‌, ಯುಕೆಯಲ್ಲಿ ಡೆಲ್ಟಾ ದಾಳಿ

ಯುಎಸ್‌, ಯುಕೆಯಲ್ಲಿ ಡೆಲ್ಟಾ ದಾಳಿ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗಗಳ ಮೂಲವಾಗಿ ಹೆಚ್ಚು ಸಾಂಕ್ರಾಮಿಕ ಡೆಲ್ಟಾ ರೂಪವನ್ನು ಉಲ್ಲೇಖಿಸಿ, ಮುಖ್ಯವಾಗಿ ಲಸಿಕೆ ಹಾಕದವರಲ್ಲಿ ಇಸ್ರೇಲ್ ಮತ್ತು ಹಲವಾರು ಯುರೋಪಿಯನ್ ರಾಷ್ಟ್ರಗಳಿಗೆ ಯುಎಸ್ ಪ್ರಯಾಣ ಎಚ್ಚರಿಕೆ ನೀಡಿದೆ. ರಾಜ್ಯ ಇಲಾಖೆ ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಇಸ್ರೇಲ್, ಸೈಪ್ರಸ್, ಪೋರ್ಚುಗಲ್ ಮತ್ತು ಸ್ಪೇನ್, ಹಾಗೂ ಕಿರ್ಗಿಸ್ತಾನ್‌ಗೆ ಸೋಮವಾರ ಎಲ್ಲಾ ಐದು ದೇಶಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಉಲ್ಲೇಖಿಸಿ ಹೊಸ ಪ್ರಯಾಣ ಎಚ್ಚರಿಕೆಗಳನ್ನು ನೀಡಿವೆ.

ಯುನೈಟೆಡ್ ಕಿಂಗ್‌ಡಮ್, ಷೆಂಗೆನ್ ದೇಶಗಳು ಮತ್ತು ಬ್ರೆಜಿಲ್, ಚೀನಾ, ಭಾರತ ಮತ್ತು ದಕ್ಷಿಣ ಆಫ್ರಿಕಾದಂತಹ ಇತರ ದೇಶಗಳ ಪ್ರವಾಸಿಗರಿಗೆ ಪ್ರಯಾಣ ನಿರ್ಬಂಧಗಳನ್ನು ಸರಾಗಗೊಳಿಸುವ ಯಾವುದೇ ಉದ್ದೇಶವಿಲ್ಲ ಎಂದು ಶ್ವೇತಭವನವು ಹೇಳಿದ ಬೆನ್ನಲ್ಲೇ ಈ ಎಚ್ಚರಿಕೆಗಳು ಬಂದಿದೆ. ಸ್ಪೇನ್ ಮತ್ತು ಪೋರ್ಚುಗಲ್ ಈಗಾಗಲೇ ಅಮೇರಿಕನ್ ಪ್ರಯಾಣಿಕರಿಗೆ ಮತ್ತೆ ತೆರೆದಿದ್ದು, ಕೆನಡಾ ಮುಂದಿನ ತಿಂಗಳು ಆರಂಭಗೊಂಡು ಲಸಿಕೆ ಹಾಕಿದ ಅಮೆರಿಕನ್ನರಿಗೆ ಪ್ರವೇಶವನ್ನು ಅನುಮತಿಸುವುದಾಗಿ ಘೋಷಿಸಿದೆ. ಆದಾಗ್ಯೂ, "ನಾವು ಇಂದು ಎಲ್ಲಿದ್ದೇವೆ. ಡೆಲ್ಟಾ ರೂಪಾಂತರದೊಂದಿಗೆ" ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಸೋಮವಾರ ಹೇಳಿದರು, "ಈ ಸಮಯದಲ್ಲಿ ನಾವು ಅಸ್ತಿತ್ವದಲ್ಲಿರುವ ಪ್ರಯಾಣ ನಿರ್ಬಂಧಗಳನ್ನು ಮುಂದುವರಿಸುತ್ತೇವೆ," ಎಂದೂ ತಿಳಿಸಿದ್ದಾರೆ.

 ಫಿಲಿಪೈನ್ಸ್‌ನಲ್ಲಿ ವಿದೇಶಿ ಪ್ರಯಾಣ ನಿರ್ಬಂಧ

ಫಿಲಿಪೈನ್ಸ್‌ನಲ್ಲಿ ವಿದೇಶಿ ಪ್ರಯಾಣ ನಿರ್ಬಂಧ

ಕೋವಿಡ್‌ನ ಡೆಲ್ಟಾ ರೂಪಾಂತರದ ಹರಡುವಿಕೆಯನ್ನು ಎದುರಿಸಲು, ಫಿಲಿಪೈನ್ಸ್ ಭಾರತ ಮತ್ತು ಇತರ ಒಂಬತ್ತು ದೇಶಗಳ ಪ್ರಯಾಣಿಕರ ಮೇಲಿನ ನಿಷೇಧವನ್ನು ಆಗಸ್ಟ್ 15 ರವರೆಗೆ ವಿಸ್ತರಿಸಿದೆ. ಭಾರತವನ್ನು ಹೊರತುಪಡಿಸಿ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಓಮನ್, ಯುನೈಟೆಡ್ ಅರಬ್ ಎಮಿರೇಟ್ಸ್, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನ ಪ್ರಯಾಣಿಕರು ಪ್ರಯಾಣ ನಿರ್ಬಂಧಗಳಿಗೆ ಒಳಪಟ್ಟಿರುತ್ತಾರೆ, ಇದು ಜುಲೈ 31 ರವರೆಗೆ ಜಾರಿಯಲ್ಲಿರುತ್ತದೆ. ಅಧ್ಯಕ್ಷ ರೊಡ್ರಿಗೋ ಡುಟರ್ಟೆ ದೇಶದ ಆಂಟಿ-ವೈರಸ್ ಟಾಸ್ಕ್ ತಂಡದ ಸಲಹೆಯನ್ನು ಅನುಮೋದಿಸಿದ್ದಾರೆ ಎಂದು ಅಧ್ಯಕ್ಷೀಯ ವಕ್ತಾರ ಹ್ಯಾರಿ ರೋಕ್ ಹೇಳಿದ್ದಾರೆ.

ಆಗ್ನೇಯ ಏಷ್ಯಾದ ದೇಶದಲ್ಲಿ, ಡೆಲ್ಟಾ ರೂಪದ 216, ಮತ್ತು 27,577 ಸಾವುಗಳು ಸೇರಿದಂತೆ 1.57 ದಶಲಕ್ಷಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಕನಿಷ್ಠ 7.27 ಮಿಲಿಯನ್ ಜನರು, ಅಥವಾ ದೇಶದ 109 ಮಿಲಿಯನ್ ಜನರಲ್ಲಿ 6.66 ಪ್ರತಿಶತದಷ್ಟು ಜನರು ಸಂಪೂರ್ಣ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ.

 ಡೆಲ್ಟಾ ಹಿನ್ನೆಲೆ ಇಟಲಿ ಗ್ರೀನ್ ಪಾಸ್ ನಿಯಮ ಬದಲಾಯಿಸುವ ಸಾಧ್ಯತೆ

ಡೆಲ್ಟಾ ಹಿನ್ನೆಲೆ ಇಟಲಿ ಗ್ರೀನ್ ಪಾಸ್ ನಿಯಮ ಬದಲಾಯಿಸುವ ಸಾಧ್ಯತೆ

ಡೆಪ್ಯುಟಿ ಹೆಲ್ತ್ ಮಿನಿಸ್ಟರ್ ಪೆರ್ಪೊಲೊ ಸಿಲೆರಿ ಪ್ರಕಾರ, ಮುಂದಿನ ವಾರಗಳಲ್ಲಿ ಇಟಲಿ ತನ್ನ ಆರೋಗ್ಯ ಪಾಸ್‌ಗಾಗಿ ನಿಯಮಾವಳಿಗಳನ್ನು ಬದಲಾಯಿಸಲಿದೆ. ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ. ಇಟಲಿಯ ಉಪ ಆರೋಗ್ಯ ಸಚಿವರು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, "ಡೆಲ್ಟಾ ರೂಪಾಂತರವು ಹಸಿರು ಪಾಸ್ ಅನ್ನು ಮರುರೂಪಿಸಲು ನಮ್ಮನ್ನು ಒತ್ತಾಯಿಸುವ ಸಾಧ್ಯತೆಯಿದೆ, ಲಸಿಕೆಯ ಎರಡನೇ ಡೋಸ್ ನಂತರ ಈ ಡೆಲ್ಟಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ," ಎಂದು ಹೇಳಿದ್ದಾರೆ. ಅದೇನೇ ಇದ್ದರೂ, ಯಾವುದೇ ಸಂಭಾವ್ಯ ಆಡಳಿತ ಹೊಂದಾಣಿಕೆಗಳನ್ನು ದೃಢೀಕರಿಸುವ ಸಮಯ ಇದಲ್ಲ. ಏಕೆಂದರೆ ಒಂದೆರಡು ವಾರಗಳವರೆಗೆ ಡೇಟಾಕ್ಕಾಗಿ ಕಾಯಬೇಕಾಗುತ್ತದದೆ ಎಂದು ಹೇಳಿದರು.

ದೇಶದೊಳಗೆ ಮತ್ತು ಬ್ಲಾಕ್‌ನಾದ್ಯಂತ ಪ್ರಯಾಣಿಸಲು ಸುಲಭವಾಗಿಸುವ ಆರೋಗ್ಯ ಪ್ರಮಾಣಪತ್ರವನ್ನು ಜೂನ್ 17 ರಂದು, ಇಟಲಿ ಬಿಡುಗಡೆ ಮಾಡುವುದಾಗಿ ಘೋಷಿಸಿತು. ದೇಶದ ನಾಗರಿಕರು ಈಗ ಎಲೆಕ್ಟ್ರಾನಿಕ್ ಡಿಜಿಟಲ್ ಆರೋಗ್ಯ ಪ್ರಮಾಣಪತ್ರವನ್ನು ಪಡೆಯಬಹುದು. ಈ ಪ್ರಮಾಣ ಪತ್ರವು ಜನರು ಕೋವಿಡ್ -19 ವಿರುದ್ಧ ಲಸಿಕೆ ಪಡೆದಿದ್ದಾರೆ, ಕೋವಿಡ್‌ ನೆಗೆಟಿವ್‌ ವರದಿ ಹೊಂದಿದ್ದಾರೆ ಅಥವಾ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ ಎಂದು ಸೂಚಿಸುತ್ತದೆ. ಇಲ್ಲಿಯವರೆಗೆ 50 ದಶಲಕ್ಷಕ್ಕೂ ಹೆಚ್ಚು ಕೋವಿಡ್ -19 ಲಸಿಕೆಗಳನ್ನು ನೀಡಿದ ನಂತರ, ಇಟಲಿಯನ್ನು ಸೋಮವಾರ ಕಡಿಮೆ ಅಪಾಯದ ದೇಶವೆಂದು ಗೊತ್ತುಪಡಿಸಲಾಯಿತು ಮತ್ತು ಹೊರಗೆ ಇರುವಾಗ ಮಾಸ್ಕ್‌ ಧರಿಸುವ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.

 ಸ್ಪೇನ್, ಪೋರ್ಚುಗಲ್‌ಗೆ ಪ್ರಯಾಣಿಸುವವರಿಗೆ ಫ್ರಾನ್ಸ್ ಎಚ್ಚರಿಕೆ

ಸ್ಪೇನ್, ಪೋರ್ಚುಗಲ್‌ಗೆ ಪ್ರಯಾಣಿಸುವವರಿಗೆ ಫ್ರಾನ್ಸ್ ಎಚ್ಚರಿಕೆ

ಡೆಲ್ಟಾದಿಂದ ಉಂಟಾದ ಕೋವಿಡ್ -19 ಪ್ರಕರಣಗಳ ಹೆಚ್ಚಳದಿಂದಾಗಿ ಸ್ಪೇನ್ ಅಥವಾ ಪೋರ್ಚುಗಲ್‌ಗೆ ರಜೆಯ ಮೇಲೆ ಪ್ರಯಾಣಿಸದಂತೆ ಫ್ರಾನ್ಸ್ ಇತ್ತೀಚೆಗೆ ತನ್ನ ಪ್ರಜೆಗಳಿಗೆ ಗುರುವಾರ ಎಚ್ಚರಿಕೆ ನೀಡಿತ್ತು. ಜನರು ಪ್ರಸ್ತುತ ಯಾವುದೇ ಇತರ ಇಯು ದೇಶಕ್ಕೆ ಪ್ರಯಾಣಿಸಬಹುದು. ಜನರು ಸಂಪೂರ್ಣವಾಗಿ ಲಸಿಕೆ ಹಾಕಿದ್ದರೆ ಅಥವಾ ಆ ದೇಶದಿಂದ ಹಿಂದಿರುಗಿದಾಗ ನೆಗೆಟಿವ್‌ ಪಿಸಿಆರ್‌ ಹೊಂದುವುದಾದರೆ ಅಥವಾ ಪ್ರತಿಜನಕ ಪರೀಕ್ಷೆಯನ್ನು ಮಾಡಿಸುವುದಾದರೆ ಮಾತ್ರ ಇಯು ದೇಶಕ್ಕೆ ಪ್ರಯಾಣಿಸಬಹುದು. ಆದಾಗ್ಯೂ, ಯುರೋಪಿನ ಫ್ರೆಂಚ್ ಮಂತ್ರಿ ಕ್ಲೆಮೆಂಟ್ ಬೌನ್, ಪೈರಿನೀಸ್ ಪರ್ವತಗಳನ್ನು ಸ್ಪೇನ್ ಅಥವಾ ಪೋರ್ಚುಗಲ್‌ಗೆ ದಾಟದಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದರು.

"ಇನ್ನೂ ತಮ್ಮ ರಜಾದಿನಗಳನ್ನು ಕಾಯ್ದಿರಿಸದವರಿಗೆ, ಸ್ಪೇನ್ ಮತ್ತು ಪೋರ್ಚುಗಲ್‌ಗೆ ಹೋಗಬೇಡಿ," ಎಂದು ಬೌನ್‌, ಫ್ರಾನ್ಸ್ ದೂರದರ್ಶನಕ್ಕೆ ಹೇಳಿದರು. "ಫ್ರಾನ್ಸ್ ನಲ್ಲಿ ಉಳಿಯುವುದು ಅಥವಾ ಬೇರೆ ದೇಶಗಳಿಗೆ ಹೋಗುವುದು ಉತ್ತಮ," ಎಂದು ಅಭಿಪ್ರಾಯಿಸಿದರು. ಈ ಬೇಸಿಗೆಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕದ ನಾಲ್ಕನೇ ಅಲೆಯನ್ನು ನಿರೀಕ್ಷಿಸಿರುವ ಫ್ರಾನ್ಸ್, ಅತ್ಯಂತ ಭೀಕರವಾದ ಡೆಲ್ಟಾ ರೂಪಾಂತರದ ಹರಡುವಿಕೆಯನ್ನು ತಡೆಗಟ್ಟಲು ಯುರೋಪಿನಾದ್ಯಂತ ಪ್ರಯಾಣ ನಿರ್ಬಂಧಗಳನ್ನು ವಿಧಿಸಲು ಮುಂದಾಗಿದೆ ಎಂದು ಬ್ಯೂನ್

(ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+