ಸರ್ಕಾರಿ ನೌಕರರಿಗೆ ನೆಮ್ಮದಿಯ ಸುದ್ದಿ, ಕೊನೆಗೂ ತುಟ್ಟಿಭತ್ಯೆ ಹೆಚ್ಚಳ!

ನವದೆಹಲಿ,

ಅಕ್ಟೋಬರ್
21:
ಕೇಂದ್ರ
ಸರ್ಕಾರಿ
ನೌಕರರಿಗೆ
7ನೇ
ವೇತನ
ಆಯೋಗದ
ಶಿಫಾರಸ್ಸಿನಂತೆ
ತುಟ್ಟಿಭತ್ಯೆ
ಹೆಚ್ಚಳ
ಮಾಡಲು
ಕೇಂದ್ರ
ಸರ್ಕಾರ
ಮುಂದಾಗಿದೆ.
ಕುರಿತಂತೆ
ಕೇಂದ್ರ
ಸಚಿವ
ಸಂಪುಟ
ಒಪ್ಪಿಗೆ
ಸೂಚಿಸಿದೆ.
ಸರ್ಕಾರಿ
ನೌಕರರಿಗೆ
ಶೇ
3ರಷ್ಟು
ಡಿಎ
ಹೆಚ್ಚಳಕ್ಕೆ
ಮೋದಿ
ನೇತೃತ್ವದ
ಕೇಂದ್ರ
ಸಚಿವ
ಸಂಪುಟ
ಒಪ್ಪಿಗೆ
ನೀಡಲಾಗಿದ್ದು,
ಸದ್ಯದ
ಮಾಹಿತಿಯಂತೆ
ಡಿಎ
ಶೇ
17ರಿಂದ
ಶೇ
31ಕ್ಕೇರಿಕೆಯಾಗಲಿದೆ.
ಕುರಿತಂತೆ
ಅಧಿಕೃತ
ಆದೇಶವನ್ನು
ನಿರೀಕ್ಷಿಸಲಾಗಿದೆ.
ಶೇ
4ರಷ್ಟು
ಡಿಎ
ಹೆಚ್ಚಳವಾಗಿ
ಶೇ
28ರಷ್ಟು
ಏರಿಕೆಯಾಗಬಹುದು
ಎಂದು
ನಿರೀಕ್ಷಿಸಲಾಗಿತ್ತು.
ಆದರೆ,
ಹೆಚ್ಚಿನ
ಬದಲಾವಣೆ
ಕಂಡು
ಬಂದಿಲ್ಲ,
ತುಟ್ಟಿಭತ್ಯೆ
ಪರಿಹಾರ(ಡಿಆರ್)
ಕೂಡಾ
ಶೇ
3ರಷ್ಟಿದೆ.

id="toptextpromo">
id='are-slot-1'
class='oiad
oi-axt
oiadv'>

ಜುಲೈ

1ರಿಂದಲೇ
ಅನ್ವಯವಾಗುವಂತೆ
ಡಿಎ
ಲಭಿಸಲಿದೆ.
ಕುರಿತಂತೆ
ಅಧಿಕೃತ
ಆದೇಶ
ಶೀಘ್ರದಲ್ಲೇ
ಪ್ರಕಟವಾಗಲಿದೆ.
ಕಳೆದ
ಒಂದೂವರೆ
ವರ್ಷಗಳಿಂದ
ಡಿಎ
ಹೆಚ್ಚಳ
ಮಾಡಲಾಗಿಲ್ಲ.
ಜನವರಿ
1
(4%),
ಜುಲೈ
1
2020(3%)
ಹಾಗೂ
ಜನವರಿ
1,
2021
(4%)
ಗೆ
ಮೂರು
ಬಾರಿ
ಏರಿಕೆಯಾಗಿ
ಶೇ
25ಕ್ಕೇರಿದೆ.
ಜುಲೈ
1,
2021ಕ್ಕೆ
ಪರಿಷ್ಕರಣೆಗೊಳ್ಳಲಿದ್ದು,
ಶೇ
31ಕ್ಕೇರಲಿದೆ.
ಆದರೆ,
18
ತಿಂಗಳ
ಬಾಕಿ
ಮೊತ್ತ
ಸಿಗುವುದಿಲ್ಲ.

id='are-slot-2'
class='oiad
oi-axt
oiadv'>

ಕೇಂದ್ರ ಬೊಕ್ಕಸಕ್ಕೆ ವಾರ್ಷಿಕ ಎಷ್ಟು ಹೊರೆ

ಕೇಂದ್ರ ಬೊಕ್ಕಸಕ್ಕೆ ವಾರ್ಷಿಕ ಎಷ್ಟು ಹೊರೆ

ಡಿಎ ಹೆಚ್ಚಳ ಘೋಷಣೆ ಮಾಡಿದರೆ, ಕೇಂದ್ರ ಬೊಕ್ಕಸಕ್ಕೆ ವಾರ್ಷಿಕ 9,488.70ಕೋಟಿ ರು ಹೆಚ್ಚುವರಿ ಹೊರೆ ಬೀಳಲಿದೆ, ಕಳೆದ ಆರ್ಥಿಕ ವರ್ಷ 2020-21ರಲ್ಲಿ 14,595 ಕೋಟಿ ರು ನಷ್ಟಿತ್ತು. ಡಿಎ ಹೆಚ್ಚಳದಿಂದಾಗಿ 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 68.62 ಲಕ್ಷ ಪಿಂಚಣಿದಾರರಿಗೆ ನೆರವು ಲಭಿಸಲಿದೆ.ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಉದ್ಭವಿಸಿದ ಅಸಾಧಾರಣ ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಹೆಚ್ಚುವರಿ ಕಂತುಗಳ ತುಟ್ಟಿ ಭತ್ಯೆ [ಡಿಎ] ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು ಸ್ಥಗಿತಗೊಳಿಸಲಾಗಿತ್ತು.

ದಿನಕ್ಕೆ 9 ಗಂಟೆಗಳ ಕಾಲ ಕೆಲಸ

ದಿನಕ್ಕೆ 9 ಗಂಟೆಗಳ ಕಾಲ ಕೆಲಸ

ವೇತನ ಸಂಹಿತೆಯ ಕರಡು ಪ್ರತಿಯಂತೆ ಉದ್ಯೋಗಿಗಳು ದಿನಕ್ಕೆ 9 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ವೇತನವನ್ನು ನಿರ್ಧರಿಸಲು ಮೂರು ಭೌಗೋಳಿಕ ವರ್ಗೀಕರಣಗಳನ್ನು ಸೂಚಿಸಲಾಗಿತ್ತು. ಗೃಹಭತ್ಯೆಯನ್ನು ನಗರಕ್ಕೆ ಅನುಗುಣವಾಗಿ ವಿಂಗಡಿಸುವುದರ ಬಗ್ಗೆ ಇನ್ನೂ ಯಾವುದೇ ಸೂಚನೆ ಇಲ್ಲಿ ತನಕ ಬಂದಿಲ್ಲ. ರೈಲ್ವೆ ಇಲಾಖೆಯಲ್ಲಿ ಮಾತ್ರ ಎರಡು ಪಾಳಿಯಲ್ಲಿ ಕೆಲಸ ಮಾಡಲು ಹೊಸ ಸಚಿವರು ಕೆಲವು ವಿಭಾಗಕ್ಕೆ ಅನ್ವಯವಾಗುವಂತೆ ಆದೇಶ ನೀಡಿದ್ದರು. ಇನ್ನು ವಾರದಲ್ಲಿ ಎರಡು ದಿನ ರಜೆ ಬದಲಿಗೆ ಮೂರು ದಿನ ರಜೆ ಅಥವಾ ವಾರಕ್ಕೆ 4 ದಿನಗಳು ಮಾತ್ರ ಕಾರ್ಯ ನಿರ್ವಹಿಸುವ ಬಗ್ಗೆ ಚಿಂತನೆ ನಡೆದಿತ್ತು. ಆದರೆ, ಇದು ಸದ್ಯಕ್ಕೆ ಕಾರ್ಯಸಾಧುವಲ್ಲ ಎಂದು ಕೈಬಿಡಲಾಗಿದೆ.

ಗ್ರಾಹಕ ದರ ಸೂಚಿ ಪ್ರಮಾಣದ ಮೇಲೆ ಭತ್ಯೆ

ಗ್ರಾಹಕ ದರ ಸೂಚಿ ಪ್ರಮಾಣದ ಮೇಲೆ ಭತ್ಯೆ

ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ. ಈ ಏರಿಕೆಯ ಅನುಕೂಲವನ್ನು 48.34 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.26 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ. ಡಿಸೆಂಬರ್ ತಿಂಗಳಿನ ಗ್ರಾಹಕ ದರ ಸೂಚಿ (consumer price index) ಶೇ4.59 ರಷ್ಟಾದರೆ, ತುಟ್ಟಿಭತ್ಯೆ ಪ್ರಮಾಣ ಕೂಡಾ ಶೇ 3ರ ಬದಲಿಗೆ ಶೇ 4ಕ್ಕಿಂತ ಅಧಿಕವಾಗುವ ನಿರೀಕ್ಷೆಯಿತ್ತು. ಆದರೆ, ಇದೆಲ್ಲವನ್ನು ಮೀರಿ ಮುಂದಿನ ಅವಧಿ ಜನವರಿ 2020ಕ್ಕೆ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಲಾಗುತ್ತದೆ. ಜುಲೈ 2021ಕ್ಕೆ ಹೊಂದಾಣಿಕೆ ರಹಿತ ಸಿಪಿಐ ಶೇ 5.4ರಷ್ಟಿತ್ತು. ಸೆಪ್ಟೆಂಬರ್ 2021ರಲ್ಲಿ ಶೇ 5.3ರಷ್ಟಿದೆ. ರೀಟೈಲ್ ಹಣದುಬ್ಬರ ಶೇ 4.35ರಷ್ಟಿದೆ.

ಕನಿಷ್ಠ ವೇತನ ಏರಿಕೆ ಮಾಡಲು ಬೇಡಿಕೆ

ಕನಿಷ್ಠ ವೇತನ ಏರಿಕೆ ಮಾಡಲು ಬೇಡಿಕೆ

ಕೇಂದ್ರದ ಕಾರ್ಮಿಕ ಸಚಿವಾಲಯದ ಆಂತರಿಕ ಸಮಿತಿಯು ಕಳೆದ ವರ್ಷ ಜನವರಿಯಲ್ಲಿ ಬಿಡುಗಡೆ ಮಾಡಿದ ವರದಿಯಂತೆ, ಪ್ರಕಾರ ಕನಿಷ್ಠ ವೇತನ 375 ರೂ., ಕನಿಷ್ಠ ಮಾಸಿಕ ವೇತನ 9,750 ರೂ ಹಾಗೂ ನಗರ ಮೂಲದ ಕಾರ್ಮಿಕರಿಗೆ 1,430 ರೂ. ವಸತಿ ಭತ್ಯೆಯನ್ನು ನೀಡಬೇಕೆಂದು ಸೂಚಿಸಲಾಗಿದೆ. ಕನಿಷ್ಠ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆ ಇನ್ನೂ ಈಡೇರಿಲ್ಲ. ಕನಿಷ್ಠ ವೇತನ 21 ಸಾವಿರ ರು ನಿಂದ 26 ಸಾವಿರ ರು ತನಕ ಏರಿಕೆ ಮಾಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿದ್ದರೂ ಈ ಬಾರಿ ಬಜೆಟ್ ನಲ್ಲಿ ಘೋಷಣೆಯಾಗುವುದಿಲ್ಲ.

ತುಟ್ಟಿಭತ್ಯೆ ಹೆಚ್ಚಳ ಲೆಕ್ಕಾಚಾರ ಹೇಗೆ?

ತುಟ್ಟಿಭತ್ಯೆ ಹೆಚ್ಚಳ ಲೆಕ್ಕಾಚಾರ ಹೇಗೆ?

ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.

ತುಟ್ಟಿಭತ್ಯೆ ಹೆಚ್ಚಳ ಮಾಡುವುದು ಹೇಗೆ? ಕೇಂದ್ರ ಸರ್ಕಾರಿ ನೌಕರರ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕಳೆದ 12 ತಿಂಗಳಿಗೆ 115.76/115.76‍‍X100. ಸಾರ್ವಜನಿಕ ವಲಯದ ಸಿಬ್ಬಂದಿ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕೊನೆ 3 ತಿಂಗಳಿಗೆ 126.33/126.33‍‍X100.

ತುಟ್ಟಿಭತ್ಯೆ ಇತಿಹಾಸ: 2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. ಅಂದಿನ ಇಂದಿನವರೆಗೂ(ಈಗ ದರ ಶೇ 31ಕ್ಕೇರಿದೆ) ಬೇಡಿಕೆ ಮುಂದಿಡಲಾಗುತ್ತಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ ಎಂದು ವಾದಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+