ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಸೋಂಕಿತರು ಟೆಲಿಮೆಡಿಸಿನ್ ಸೇವೆ ಪಡೆಯುವುದು ಹೇಗೆ?

|
Google Oneindia Kannada News

ಬೆಂಗಳೂರು, ಜನವರಿ 18; ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸೋಂಕಿತರ ಆರೋಗ್ಯದ ಮೇಲೆ ಸರ್ಕಾರ ಕಣ್ಗಾವಲು ಇಟ್ಟಿದೆ. ಅನೇಕ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿಯೇ ಇರುತ್ತಾರೆ. ಆರೋಗ್ಯ ಇಲಾಖೆಯಿಂದ ಕೋವಿಡ್ ಸೋಂಕಿತರಿಗೆ ಇ-ಸಂಜೀವಿನಿ ಟೆಲಿಮೆಡಿಸಿನ್ ಸೇವೆ ನೀಡಲಾಗುತ್ತಿದೆ.

ಕೋವಿಡ್ ಸೋಂಕಿತರು ಮನೆಯಲ್ಲಿ ಪ್ರತ್ಯೇಕವಾಗಿ ಕ್ವಾರೆಂಟೈನ್‍ನಲ್ಲಿ ಇರುವವರು ಇ-ಸಂಜೀವಿನಿ ಹೊರರೋಗಿ ಚಿಕಿತ್ಸೆ ಮೂಲಕ ಟೆಲಿಕನ್ಸಲ್ಟೇಷನ್ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ.

ಜ.17: ಜಗತ್ತಿನ ಯಾವ ರಾಷ್ಟ್ರದಲ್ಲಿ ಎಷ್ಟು ಕೊರೊನಾ ರೋಗಿಗಳು ಗುಣಮುಖ? ಜ.17: ಜಗತ್ತಿನ ಯಾವ ರಾಷ್ಟ್ರದಲ್ಲಿ ಎಷ್ಟು ಕೊರೊನಾ ರೋಗಿಗಳು ಗುಣಮುಖ?

ಇ-ಸಂಜೀವಿನಿ ಸೇವೆ ಪಡೆಯುವುದು ಹೇಗೆ ಎಂಬ ಮಾರ್ಗದರ್ಶಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ. ರೋಗಿಗಳು ಈ ಸೇವೆ ಬಳಕೆ ಮಾಡಿಕೊಳ್ಳುವ ಮೂಲಕ ವೈದ್ಯರ ಸಲಹೆ ಪಡೆಯಬಹುದಾಗಿದೆ.

ಕೊರೊನಾ ಕಾಲದಲ್ಲಿ ದಾಖಲೆ ಬರೆದ ಡೋಲೋ 650 ಮಾತ್ರೆಕೊರೊನಾ ಕಾಲದಲ್ಲಿ ದಾಖಲೆ ಬರೆದ ಡೋಲೋ 650 ಮಾತ್ರೆ

Covid Patients How To Get ESanjeevani Service

ಇ-ಸಂಜೀವಿನಿ ಸೇವೆ

* ಇ-ಸಂಜೀವಿನಿಟೆಲಿ ಮೆಡಿಸಿನ್ ಸೇವೆ ಪಡೆಯುವವರು ಮೊದಲು ಗೂಗಲ್ ಪ್ಲೇ ಸ್ಟೋರ್‌ನಿಂದ ಇ-ಸಂಜೀವಿನಿ ಓಪಿಡಿ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ನಂತರ ನೋಂದಣಿ ಮತ್ತು ಟೋಕನ್ ಜನರೇಷನ್ ಮಾಡಬೇಕು. ಓಟಿಪಿ ಬಳಸಿಕೊಂಡು ನಿಮ್ಮ (ಸೋಂಕಿತರು) ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಬೇಕು.

ಕೋವಿಡ್ 3ನೇ ಅಲೆ ಎದುರಿಸಲು ಸರ್ಕಾರ ಸರ್ವಸನ್ನದ್ಧ: ಡಾ.ಕೆ.ಸುಧಾಕರ್ ಕೋವಿಡ್ 3ನೇ ಅಲೆ ಎದುರಿಸಲು ಸರ್ಕಾರ ಸರ್ವಸನ್ನದ್ಧ: ಡಾ.ಕೆ.ಸುಧಾಕರ್

* ಇ-ಸಂಜೀವಿನಿಯಲ್ಲಿ ರೋಗಿಯ ನೋಂದಣಿಯ ಫಾರಂ ಭರ್ತಿ ಮಾಡಿ, ಆರೋಗ್ಯ ಸಂಬಂಧಿತ ದಾಖಲೆಗಳಿದ್ದರೆ ಅಪ್‍ಲೋಡ್ ಮಾಡಬೇಕು. ನಂತರ ಬರುವ ಎಸ್‍ಎಂಎಸ್‍ನಲ್ಲಿ ರೋಗಿಯ ಐಡಿ ಮತ್ತು ಟೋಕನ್ ಸ್ವೀಕರಿಸಬೇಕು.

* ಮೊಬೈಲ್‌ಗೆ ಬರುವ ಲಾಗಿನ್ ಐಡಿಯ ಮೂಲಕ ರೋಗಿಯ ಲಾಗಿನ್ ಆಗಬೇಕು. ವರ್ಚುವಲ್ ಕರೆ ಬಟನ್ ಒತ್ತಿದಾಗ, ಸಕ್ರಿಯಗೊಳ್ಳುತ್ತದೆ. ಆಗ ರೋಗಿಯು ವಿಡಿಯೋ ಕರೆಯನ್ನು ಆರಂಭಿಸಬಹುದು.

* ವಿಡಿಯೋ ಕರೆ ಮಾಡಿದಾಗ ರೋಗಿಯು ವೈದ್ಯರನ್ನು ಸಂಪರ್ಕಿಸಿ, ಅವರಿಂದ ತಕ್ಷಣ ಇ-ಪ್ರಿಸ್ಕ್ರಿಪ್ಷನ್, ಆನ್‍ಲೈನ್ ಓಪಿಡಿ, ರಿಯಲ್ ಟೈಮ್ ಟೆಲಿಮೆಡಿಸನ್ ಹಾಗೂ ರಾಜ್ಯ ಸೇವೆಗಳ ವೈದ್ಯರಿಂದ ಅಗತ್ಯ ಮಾಹಿತಿ, ಸಲಹೆ ಪಡೆಯಬಹುದು.
* ವಿಡಿಯೋ ಸಮಾಲೋಚನೆಗಳು, ಚಾಟ್‍ಮಾಡಿ ಆರೋಗ್ಯ ಕುರಿತ ಆಪ್ತಸಮಾಲೋಚನೆಯಲ್ಲಿ ಭಾಗಿಯಾಗಬಹುದು.

* ರೋಗಿಯು ರಾಜ್ಯ ಸೇವೆಗಳ ವೈದ್ಯರಲ್ಲಿ ತಮ್ಮ ಖಾಯಿಲೆಯ ಬಗ್ಗೆ ಚರ್ಚಿಸಿ ಸೂಕ್ತ ಚಿಕಿತ್ಸೆ, ಮಾರ್ಗದರ್ಶನವನ್ನು ಆಪ್ತ ಸಮಾಲೋಚನೆ ಮೂಲಕ ಪಡೆದು, ಇ-ಪ್ರಿಸ್ಕ್ರಿಪ್ಷನ್ ಡೌನ್‍ಲೋಡ್ ಮಾಡಿಕೊಂಡು ಔಷಧಿ ಪಡೆಯಬಹುದಾಗಿದೆ.
* ಇ-ಸಂಜೀವಿನಿಗಾಗಿ ಸಹಾಯವಾಣಿ ಸಂಖ್ಯೆ + 91-11-23978046, ಟೋಲ್ ಫ್ರೀ ಸಂಖ್ಯೆ 1075, ಸಹಾಯವಾಣಿ ಇ-ಮೇಲ್: [email protected].

ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ https://esanjeevaniopd.in/ ಭೇಟಿ ನೀಡಬಹುದಾಗಿದೆ.

ಇ- ಸಂಜೀವಿನಿ ಕುರಿತು; ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಹಾಯಕವಾಗಲು ಕೇಂದ್ರ ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯ ಇ-ಸಂಜೀವಿನಿ ಸೇವೆಯನ್ನು ಆರಂಭಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿತ್ತು. ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಸಾಮಾನ್ಯ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡದಂತೆ ಸೂಚಿಸಲಾಗಿತ್ತು. ಆಗ ಅನೇಕರು ಇ-ಸಂಜೀವಿನಿ ಬಳಕೆ ಮಾಡಿಕೊಂಡು ಚಿಕಿತ್ಸೆ ಪಡೆದಿದ್ದರು.

ಈ ಸೇವೆಯನ್ನು ಎರಡು ವಿಧಾನಗಳ ಮೂಲಕ ಜಾರಿಗೊಳಿಸಲಾಗುತ್ತದೆ. ಇ-ಸಂಜೀವಿನಿ ಎಬಿ-ಚ್ ಡಬ್ಲ್ಯೂಸಿ (ವೈದ್ಯರಿಂದ ಟೆಲಿ ಮೆಡಿಸನ್ ಸೇವೆ) ಇದು ಹಬ್ ಮತ್ತು ಸ್ಪೋಕ್ ಮಾದರಿ. ಮತ್ತೊಂದು ಮಾದರಿ ಇ-ಜೀವಿನಿ ಒಪಿಡಿ (ರೋಗಿಗಳಿಂದ ವೈದ್ಯರ ಟೆಲಿಮೆಡಿಸಿನ್ ಸಂಪರ್ಕ ವೇದಿಕೆ). ಇದರಲ್ಲಿ ನಾಗರಿಕರಿಗೆ ಹೊರರೋಗಿಗಳ ಸೇವೆಯು ಅವರ ಮನೆಗಳಿಗೆ ಸೀಮಿತವಾಗಿರುತ್ತದೆ.

2021ರ ಸೆಪ್ಟೆಂಬರ್‌ನಲ್ಲಿನ ಮಾಹಿತಿಯಂತೆ ಇ-ಸಂಜೀವಿನಿಗೆ 1.20 ಕೋಟಿ ಜನರು ಭೇಟಿ ನೀಡಿ ವೈದ್ಯರಿಂದ ಅಗತ್ಯ ಸಹಕಾರ ಪಡೆದಿದ್ದರು. ದೇಶದ ಅತ್ಯಂತ ಜನಪ್ರಿಯ ಟೆಲಿ ಮೆಡಿಸಿನ್‌ ಸೇವೆ ಇದಾಗಿದೆ. ಪ್ರತಿದಿನ ಸುಮಾರು 90 ಸಾವಿರ ರೋಗಿಗಳು ಈ ಮೂಲಕ ವೈದ್ಯರನ್ನು ಸಂಪರ್ಕಿಸುತ್ತಾರೆ. ಸಾಮಾನ್ಯ ವೈದ್ಯರು, ತಜ್ಞ ವೈದ್ಯರು ಈ ಸೇವೆ ಮೂಲಕ ಲಭ್ಯವಿರುತ್ತಾರೆ.

ಕೋವಿಡ್ ನಿಯಂತ್ರಣಕ್ಕೆ ಮೊದಲ ಲಾಕ್‌ಡೌನ್ ಘೋಷಣೆ ಮಾಡಿದ ವೇಳೆ 2020ರ ಏಪ್ರಿಲ್ 13ರಂದು ಈ ಸೇವೆಗೆ ಚಾಲನೆ ನೀಡಲಾಗಿತ್ತು. ಈ ಸೇವೆಯನ್ನು ಮೊಹಾಲಿಯ ಸೆಂಟರ್ ಫಾರ್ ಡೆವಲಪ್ ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಸಿ-ಡಾಕ್) ಅಭಿವೃದ್ಧಿಪಡಿಸಿದೆ.

English summary
Health department will give telemedicine service to Covid 19 patients. How to get E-Sanjeevani service here are the steps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X