ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕವೇ ಅತಿಹೆಚ್ಚು ಸಾಲಗಾರ; ಭಾರತ, ರಷ್ಯಾ ಸೇರಿ ಪ್ರಮುಖ ದೇಶಗಳ ಸಾಲ ಎಷ್ಟೆಷ್ಟು?

|
Google Oneindia Kannada News

ಬೆಂಗಳೂರು, ಏ. 15: ದೇಶಗಳು ಸಾಲ ಮಾಡಿಕೊಂಡು ಯಡವಟ್ಟು ಮಾಡಿಕೊಳ್ಳುತ್ತವೆ ಎಂಬುದನ್ನು ಶ್ರೀಲಂಕಾ ಮತ್ತು ಪಾಕಿಸ್ತಾನದ ಉದಾಹರಣೆ ನೋಡಿ ತಿಳಿದುಕೊಳ್ಳುತ್ತೇವೆ. ಅಮೆರಿಕ, ಚೀನಾ ಮೊದಲಾದ ದೇಶಗಳಿಗೆ ಸಾಲವೇ ಇಲ್ಲ, ಅವೇನಿದ್ದರೂ ಬೇರೆ ದೇಶಗಳಿಗೆ ಸಾಲ ಕೊಡುತ್ತವೆ ಎಂದು ಅನೇಕರು ಭಾವಿಸಿರಬಹುದು. ಅದು ಸುಳ್ಳು. ಜಗತ್ತಿನಲ್ಲಿ ಅತಿಹೆಚ್ಚು ಸಾಲಗಾರ ದೇಶ ಎಂದರೆ ಅದು ಅಮೆರಿಕವೇ.

ಈ ವಿಶ್ವದ ದೊಡ್ಡಣ್ಣ ಮಾಡಿರುವ ವಿದೇಶೀ ಸಾಲದ ಪ್ರಮಾಣ 30 ಟ್ರಿಲಿಯನ್ ಡಾಲರ್ ಇದೆಯಂತೆ. ಒಂದು ಟ್ರಿಲಿಯನ್ ಎಂದರೆ 1 ಲಕ್ಷ ಕೋಟಿ. ಅಂದರೆ 30 ಲಕ್ಷ ಕೋಟಿ ಡಾಲರ್ ಸಾಲ ಇದೆ ಅಮೆರಿಕಕ್ಕೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದು 22.9 ಕೋಟಿ ಕೋಟಿ ಆಗುತ್ತದೆ. ಅಂದರೆ 2289 ಲಕ್ಷ ಕೋಟಿ ರೂಪಾಯಿ ಇದೆ.

ಸಾಲದ ಸುಳಿಯಲ್ಲಿ ಲಂಕಾ, ಪಾಕ್; ಸಹಾಯಕ್ಕೆ ಚೀನಾ ಯಾಕೆ ಹಿಂದೇಟು? ಸಾಲದ ಸುಳಿಯಲ್ಲಿ ಲಂಕಾ, ಪಾಕ್; ಸಹಾಯಕ್ಕೆ ಚೀನಾ ಯಾಕೆ ಹಿಂದೇಟು?

ಅತಿ ಹೆಚ್ಚು ಸಾಲ ಹೊಂದಿರುವ ಅಗ್ರ 5 ದೇಶಗಳು:
1) ಅಮೆರಿಕ: 30 ಟ್ರಿಲಿಯನ್ ಡಾಲರ್
2) ಜಪಾನ್: 9.1 ಟ್ರಿಲಿಯನ್ ಡಾಲರ್
3) ಫ್ರಾನ್ಸ್: 732 ಟ್ರಿಲಿಯನ್ ಡಾಲರ್
4) ಜರ್ಮನಿ: 5.74 ಟ್ರಿಲಿಯನ್ ಡಾಲರ್
5) ಬ್ರಿಟನ್: 3 ಟ್ರಿಲಿಯನ್ ಡಾಲರ್

Countries with most debt, India, China, US, Japan, Russia, Pakistan details

ಅತಿ ಕಡಿಮೆ ಸಾಲ ಹೊಂದಿರುವ ಪ್ರಮುಖ ದೇಶಗಳು:
ಇರಾನ್: 712 ಬಿಲಿಯನ್ ಡಾಲರ್
ಮಾಲ್ಡೀವ್ಸ್ 742 ಮಿಲಿಯನ್ ಡಾಲರ್
ಫಿಜಿ: 833 ಮಿಲಿಯನ್ ಡಾಲರ್
ಭೂತಾನ್: 2.26 ಬಿಲಿಯನ್ ಡಾಲರ್
ನೇಪಾಳ: 3.45 ಬಿಲಿಯನ್ ಡಾಲರ್

ಭಾರತ ಸೇರಿ ಇತರ ಕೆಲ ದೇಶಗಳ ಸಾಲದ ಪ್ರಮಾಣ:
ಭಾರತ: 614,9 ಬಿಲಿಯನ್ ಡಾಲರ್
ರಷ್ಯಾ: 489 ಬಿಲಿಯನ್ ಡಾಲರ್'
ಚೀನಾ: 2.7 ಟ್ರಿಲಿಯನ್ ಡಾಲರ್
ಪಾಕಿಸ್ತಾನ: 139 ಬಿಲಿಯನ್ ಡಾಲರ್
ಶ್ರೀಲಂಕಾ: 50 ಬಿಲಿಯನ್ ಡಾಲರ್

Countries with most debt, India, China, US, Japan, Russia, Pakistan details

ಅಮೆರಿಕದ ಸಾಲ ಅಷ್ಟೊಂದು ಯಾಕೆ?
ಅಮೆರಿಕ ದೇಶದ ಆರ್ಥಿಕತೆ ಮತ್ತು ಅದರ ಜನರ ಮನಸ್ಥಿತಿಯೇ ಭೋಗ ಸಂಸ್ಕೃತಿ ಆಧಾರಿತವಾದದ್ದು. ಸಾಲ ಮಾಡಿ ವೆಚ್ಚ ಮಾಡಬೇಕು ಎಂಬುದು ಅದರ ಪಾಲಿಸಿ. ಹೀಗಾಗಿ, ಸಾಲ ಇಲ್ಲದ ಅಮೆರಿಕನ್ ವ್ಯಕ್ತಿಯೇ ಇಲ್ಲ. ಅಮೆರಿಕ ಕೂಡ ತನ್ನ ಆರ್ಥಿಕತೆಯನ್ನ ಮುನ್ನಡೆಸಲು ಹೊರಗಿನಿಂದ ಸಾಲ ಮಾಡುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಆದಾಯವೂ ಇರುವುದರಿಂದ ಹೇಗೋ ಸರಿದೂಗಿಸಿಕೊಂಡು ಹೋಗುತ್ತಿದೆ.

ವಿಚಿತ್ರ ಎಂದರೆ ಅಮೆರಿಕದ ಆರ್ಥಿಕತೆ ಮೇಲೆ ಇತರ ಅನೇಕ ದೇಶಗಳು ಅವಲಂಬಿತವಾಗಿವೆ. ಅಮೆರಿಕ ಆರ್ಥಿಕವಾಗಿ ಹಿನ್ನಡೆ ಕಂಡರೆ ಅದರ ಪರಿಣಾಮವನ್ನು ಜಾಗತಿಕವಾಗಿ ಕಾಣಬಹುದು. ಅದು ಅಮೆರಿಕದ ಬಲ ಮತ್ತು ದೌರ್ಬಲ್ಯ ಎರಡೂ.

ಜಪಾನ್ ಭಾರೀ ಸಾಲಗಾರ:
ಜಿಡಿಪಿ ಮತ್ತು ಸಾಲ ತುಲನೆ ಮಾಡಿದರೆ ಜಪಾನ್ ಸಾಲ ತೀವ್ರ ಮಟ್ಟದಲ್ಲಿದೆ. ಜಿಡಿಪಿಯ ಎರಡು ಅಥವಾ ಮೂರು ಪಟ್ಟು ಪ್ರಮಾಣದಷ್ಟು ಸಾಲವನ್ನು ಜಪಾನ್ ಹೊಂದಿದೆ. ಇತ್ತೀಚಿನ ಆರ್ಥಿಕ ಹಿಂಜರಿತವು ಜಪಾನ್ ಸಾಲದ ಪ್ರಮಾಣ ಗಣನೀಯವಾಗಿ ಏರುವಂತೆ ಮಾಡಿದೆ. ದಿವಾಳಿಯಂಚಿನಲ್ಲಿದ್ದ ಜಪಾನೀ ಹಣಕಾಸು ಸಂಸ್ಥೆಗಳಿಗೆ ಸರಕಾರವೇ ಸಾಲಸೋಲ ಮಾಡಿ ಚೇತರಿಕೆ ಮಾಡಿತ್ತು. ಹೀಗಾಗಿ, ಇತ್ತೀಚಿನ ಕೆಲ ತಿಂಗಳಲ್ಲಿ ಜಪಾನ್ ಸಾಲ ಅಗಾಧವಾಗಿ ಬೆಳೆದಿದೆ. ಜಿಡಿಪಿ ಲೆಕ್ಕಾಚಾರದಲ್ಲಿ ಅತಿ ಹೆಚ್ಚು ಸಾಲಗಾರ ಎಂಬ ದಾಖಲೆ ಜಪಾನ್ ದೇಶದ್ದಾಗಿದೆ.

ರಷ್ಯಾ ಅತಿ ಕಡಿಮೆ ಸಾಲಗಾರ:
ರಷ್ಯಾ ದೇಶ 489 ಬಿಲಿಯನ್ ಡಾಲರ್, ಅಂದರೆ ಅರ್ಧ ಟ್ರಿಲಿಯನ್ ಡಾಲರ್ ಹಣದ ಸಾಲ ಹೊಂದಿದ್ದರೂ ಅದರ ಜಿಡಿಪಿಗೆ ಹೋಲಿಸಿದರೆ ಸಾಲದ ಪ್ರಮಾಣ ಶೇ. 18 ಕೂಡ ಇಲ್ಲ.

ಭಾರತದ ಸಾಲ:
ಸದ್ಯ ಭಾರತದ ಸಾಲ 614.9 ಬಿಲಿಯನ್ ಡಾಲರ್, ಅಂದರೆ 47 ಲಕ್ಷ ಕೋಟಿ ರೂಪಾಯಿಯಷ್ಟು ಬೆಳೆದು ನಿಂತಿದೆ. ಇದು ಜಿಡಿಪಿಯ ಶೇ. 60ಕ್ಕಿಂತ ಹೆಚ್ಚಿದೆ. ಭಾರತದ ಜಿಡಿಪಿ ಸದ್ಯ 3 ಟ್ರಿಲಿಯನ್ ಡಾಲರ್ ಇದೆ. ಈ ವರ್ಷಾಂತ್ಯಕ್ಕೆ ಭಾರತದ ಸಾಲದ ಪ್ರಮಾಣ ಜಿಡಿಪಿಯ ಶೇ. 90 ಭಾಗಕ್ಕೆ ಹೋಗಿ ಮುಟ್ಟುವ ನಿರೀಕ್ಷೆ ಇದೆ.

(ಒನ್ಇಂಡಿಯಾ ಸುದ್ದಿ)

English summary
America tops the list of countries with most debt. Japan is in dire straits. Debt of India and many of the countries have increased drastically. Russia is among the lowest debt per GDP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X