ಅಮೆರಿಕ ಚುನಾವಣೆಗೆ ಕೌಂಟ್‌ಡೌನ್‌, ಮತದಾನಕ್ಕೆ ಸಕಲ ಸಿದ್ಧತೆ..!

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಸಾರ್ವತ್ರಿಕ ಮತದಾನ ನವೆಂಬರ್ 3ರಂದು ನಡೆಯಲಿದೆ. 45ನೇ ಅಧ್ಯಕ್ಷ (ಟ್ರಂಪ್) ಮತ್ತೊಂದು ಅವಧಿಗೆ ಮುಂದುವರಿಯುತ್ತಾರಾ, ಇಲ್ಲ 46ನೇ ಅಧ್ಯಕ್ಷರಾಗಿ (ಬಿಡೆನ್) ಆಯ್ಕೆಯಾಗುತ್ತಾರಾ ಎಂಬುದು ಟ್ರಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಅಂದಹಾಗೆ ಅಮೆರಿಕದಲ್ಲಿ ಈಗಾಗಲೇ ಮತದಾನ ಆರಂಭವಾಗಿದೆ. ಕೊರೊನಾ ಸೋಂಕು ಆವರಿಸಿರುವ ಕಾರಣ ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರಿ ಬದಲಾವಣೆಗಳು ನಡೆದಿವೆ. ಪ್ರಮುಖವಾಗಿ ಅಂಚೆ ಮತದಾನದ ಮೊರೆ ಹೋಗಲಾಗಿದ್ದು, ಈ ಬಾರಿ ಅಮೆರಿಕನ್ನರು ಅಂಚೆ ಮತದಾನದ ಮೂಲಕವೇ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈಗಾಗಲೇ 90 ಮಿಲಿಯನ್ ಅಂದರೆ 9 ಕೋಟಿಗೂ ಹೆಚ್ಚು ಅಮೆರಿಕನ್ನರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಹೀಗೆ ಕೊರೊನಾ ಕಾರಣಕ್ಕೆ ಭಾರಿ ಪ್ರಮಾಣದಲ್ಲಿ ಅಮೆರಿಕನ್ನರು ಅವಧಿ ಪೂರ್ವ ಮತದಾನಕ್ಕೆ ಮುಂದಾಗಿದ್ದಾರೆ. ನವೆಂಬರ್ 3ರಂದು ಸಾರ್ವತ್ರಿಕ ಮತದಾನ ನಡೆಯಲಿದ್ದು, ಚುನಾವಣೆಗೆ ಅಂತಿಮ ಮುದ್ರೆ ಬೀಳಲಿದೆ. ಹೀಗಾಗಿ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನವೆಂಬರ್ 3 ಫೈನಲ್ ಡೇ. ಇದಾದ ಬಳಿಕ ಬಳಿಕ ಉಳಿಯುವುದು ಒಂದೇ, ಫಲಿತಾಂಶ.. ಫಲಿತಾಂಶ.. ಫಲಿತಾಂಶ..

ಭಾರತ ಹಾಗೂ ಅಮೆರಿಕ ಚುನಾವಣೆ..!

ಭಾರತ ಹಾಗೂ ಅಮೆರಿಕ ಚುನಾವಣೆ..!

ಅಷ್ಟಕ್ಕೂ ಭಾರತಕ್ಕೂ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಅವಿನಾಭಾವ ಸಂಬಂಧವಿದೆ. ಈ ಬಾರಿ ಅಧ್ಯಕ್ಷೀಯ ಚುನಾವಣೆ ಭಾರತೀಯರಿಗೆ ಸಿಕ್ಕಾಪಟ್ಟೆ ಇಂಪಾರ್ಟೆಂಟ್. ಒಂದೆಡೆ ಕೊರೊನಾ, ಮತ್ತೊಂದೆಡೆ ಗಡಿಯಲ್ಲಿ ಕುತಂತ್ರಿ ಚೀನಾ.

ಇವೆರಡೂ ಸಂಕಷ್ಟಗಳನ್ನು ಎದುರಿಸಲು ಜಗದ ಪಾಲಿನ ದೊಡ್ಡಣ್ಣ ಅಮೆರಿಕದ ಸಹಾಯ ಭಾರತಕ್ಕೆ ಬೇಕೆ ಬೇಕು. ಹೀಗಾಗಿ ಕೋಟ್ಯಂತರ ಭಾರತೀಯರು ಕೂಡ ಅಮೆರಿಕ ಚುನಾವಣೆಯ ಹಾಗುಹೋಗು ತಿಳಿಯಲು ಕಾತುರದಿಂದ ಕಾದು ಕುಳಿತಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಇದು ಭಾರತದ ಚುನಾವಣೆಯೂ ಆಗಲಿದೆ. ಏಕೆಂದರೆ ಅಮೆರಿಕದಲ್ಲಿ ಭಾರತ ಮೂಲದ ಕೋಟ್ಯಂತರ ಮತದಾರರು ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಅಮೆರಿಕ ಚುನಾವಣೆ ಮತ್ತು ಭಾರತೀಯ ಕಾಲಮಾನ

ಅಮೆರಿಕ ಚುನಾವಣೆ ಮತ್ತು ಭಾರತೀಯ ಕಾಲಮಾನ

ನವೆಂಬರ್ 3ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಾರ್ವತ್ರಿಕ ಮತದಾನ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ. ಅಮೆರಿಕ ಭೂಪ್ರದೇಶ ಸಾಕಷ್ಟು ವಿಸ್ತಾರವಾಗಿದ್ದು ಒಂದೊಂದು ರಾಜ್ಯದಲ್ಲಿ ಒಂದೊಂದು ಸಮಯಕ್ಕೆ ಚುನಾವಣೆ ಆರಂಭವಾಗಲಿದೆ. ಈ ಪೈಕಿ ಮೊದಲಿಗೆ ವೆರ್ಮೊಂಟ್ ರಾಜ್ಯ ಮತದಾನ ಪ್ರಕ್ರಿಯೆಯನ್ನು ಮಧ್ಯಾಹ್ನ 2.30ಕ್ಕೆ ಆರಂಭಿಸಲಿದೆ. ಇದಾದ ಬಳಿಕ ಆಯಾ ರಾಜ್ಯಗಳ ಸಮಯಕ್ಕೆ ತಕ್ಕಂತೆ ಮತದಾನ ಆರಂಭವಾಗಲಿದೆ.

ಭಾರತದ ಚುನಾವಣೆಗಳಿಗೆ ಹೋಲಿಕೆ ಮಾಡುವುದಾದರೆ, ಅಮೆರಿಕದ ಬಹುಪಾಲು ರಾಜ್ಯಗಳಲ್ಲೂ ಬೆಳಗ್ಗೆ 6 ರಿಂದ 7 ಗಂಟೆ ಸುಮಾರಿಗೆ ಮತದಾನ ಆರಂಭವಾಗಲಿದೆ. ವೋಟಿಂಗ್ ಕೊನೆಗೊಳ್ಳುವ ಸಮಯ ಮಾತ್ರ ರಾತ್ರಿ ತಲುಪುತ್ತದೆ. ಅಂದರೆ ಅಮೆರಿಕದಲ್ಲಿ ಮತದಾನವನ್ನು ಕೊನೆಯದಾಗಿ ಮುಗಿಸುವ ರಾಜ್ಯ ನ್ಯೂಯಾರ್ಕ್ ಮತ್ತು ನಾರ್ಥ್ ಡಕೋಟ ಆಗಿರಲಿದ್ದು, ಇಲ್ಲಿ ಅಮೆರಿಕ ಕಾಲಮಾನದಂತೆ ರಾತ್ರಿ 9ಕ್ಕೆ ಮತದಾನ ಮುಗಿಯಲಿದೆ. ಅಷ್ಟೊತ್ತಿಗೆ ಭಾರತದಲ್ಲಿ ದಿನಾಂಕ ನವೆಂಬರ್ 4ನ್ನು ತಲುಪಿ, ಸಮಯ ಬೆಳಗ್ಗೆ 6.30ರ ಆಸುಪಾಸಿನಲ್ಲಿ ಇರಲಿದೆ.

ಮತದಾನ ನೇರಪ್ರಸಾರ ವೀಕ್ಷಣೆ ಹೇಗೆ..?

ಮತದಾನ ನೇರಪ್ರಸಾರ ವೀಕ್ಷಣೆ ಹೇಗೆ..?

ಅಮೆರಿಕ ಚುನಾವಣೆಯನ್ನು ಭಾರತೀಯರು ಕೂಡ ನೇರ ವೀಕ್ಷಣೆ ಮಾಡಬಹುದು. ಅಂತಾರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ (ಉದಾ: ಬಿಬಿಸಿ, ಸಿಎನ್‌ಎನ್, ಸಿಬಿಎಸ್ ಇತ್ಯಾದಿ) ನೇರ ಪ್ರಸಾರ ಲಭ್ಯವಾಗಲಿದೆ. ಈ ಬಾರಿ ಸುಮಾರು 240 ಮಿಲಿಯನ್ ಅಮೆರಿಕನ್ನರು ಮತ ಚಲಾಯಿಸಲಿದ್ದು, ಇಷ್ಟು ಮತದಾರರ ಪೈಕಿ ಈಗಾಗಲೇ 90 ಮಿಲಿಯನ್‌ಗೂ ಹೆಚ್ಚು ವೋಟರ್ಸ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನು ಮಿಕ್ಕವರು ಕಡೇ ದಿನವಾದ ನವೆಂಬರ್ 3ರಂದು ಮತ ಹಾಕಲಿದ್ದು, ಅಧ್ಯಕ್ಷರ ಆಯ್ಕೆಗೆ ತಮ್ಮ ಹಕ್ಕು ಮಂಡಿಸಲಿದ್ದಾರೆ.

ಫಲಿತಾಂಶ ಮತ್ತು ಅಧಿಕಾರ ಹಸ್ತಾಂತರ

ಫಲಿತಾಂಶ ಮತ್ತು ಅಧಿಕಾರ ಹಸ್ತಾಂತರ

ಅಮೆರಿಕ ಅಧ್ಯಕ್ಷೀಯ ಚುನಾವಣೆ ಒಂದು ಸುದೀರ್ಘ ಪ್ರಕ್ರಿಯೆ. ಇದಕ್ಕೆ ಪ್ರಮುಖ ಕಾರಣ ಅಲ್ಲಿ ರಾಜ್ಯಗಳಿಗೆ ನೀಡಿರುವ ಪರಮಾಧಿಕಾರ. ಅಮೆರಿಕದಲ್ಲಿ ಕೇಂದ್ರ ಸರ್ಕಾರದಷ್ಟೇ ರಾಜ್ಯಗಳು ಕೂಡ ಪ್ರಬಲವಾಗಿವೆ. ತಮಗೆ ಬೇಕಾದ ಕಾನೂನನ್ನು ಧೈರ್ಯವಾಗಿ ರೂಪಿಸಿಕೊಳ್ಳುವ ಹಕ್ಕು ಅಮೆರಿಕದ ರಾಜ್ಯಗಳಿಗೆ ಇದೆ. ಈ ಕಾರಣಕ್ಕೆ ಅಮೆರಿಕ ಗಣರಾಜ್ಯವಾಗಿದ್ದು, ಅಲ್ಲಿನ ರಾಜ್ಯಗಳಲ್ಲಿ ಒಂದೇ ಬಾರಿಗೆ ಮತ ಎಣಿಕೆ ಆರಂಭವಾಗುವುದಿಲ್ಲ. ಅಲ್ಲಿನ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಮತ ಎಣಿಕೆ ಆರಂಭವಾಗುತ್ತದೆ. ಅದರಲ್ಲೂ ಈ ಬಾರಿ ಕೊರೊನಾ ಕಾಟ ಕೊಡುತ್ತಿರುವ ಹಿನ್ನೆಲೆ ಫಲಿತಾಂಶ ಮತ್ತಷ್ಟು ತಡವಾಗಬಹುದು. ಇದಕ್ಕೆ ಹಲವು ದಿನಗಳ ಸಮಯ ಅಗತ್ಯ. ಆದರೆ ಫಲಿತಾಂಶ ಎಷ್ಟೇ ಬೇಗ ಬಂದರೂ ಅಧ್ಯಕ್ಷರ ಅಧಿಕಾರ ಹಸ್ತಾಂತರ ನಡೆಯುವುದು ಮಾತ್ರ 2021ರ ಜನವರಿ 20ರಂದು. ಅಲ್ಲಿವರೆಗೆ ಹಾಲಿ ಅಧ್ಯಕ್ಷರೇ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರದಲ್ಲಿ ಇರುತ್ತಾರೆ. ಅಕಸ್ಮಾತ್ ಟ್ರಂಪ್ ಸೋತರೂ 2021ರ ಜನವರಿ 20ರವರೆಗೂ ಅವರೇ ಅಧ್ಯಕ್ಷರಾಗಿ ಉಳಿಯಲಿದ್ದಾರೆ.

244 ವರ್ಷಗಳ ಇತಿಹಾಸ..!

244 ವರ್ಷಗಳ ಇತಿಹಾಸ..!

ಜಗತ್ತಿಗೆ ಪ್ರಜಾಪ್ರಭುತ್ವದ ಪಾಠ ಹೇಳಿಕೊಟ್ಟಿದ್ದು ಯುರೋಪಿಯನ್ನರು. ಆದರೆ ಅದೇ ಪ್ರಜಾಪ್ರಭುತ್ವವನ್ನು ಆಧುನಿಕ ಜಗತ್ತಿನಲ್ಲಿ ಎತ್ತಿಹಿಡಿದಿದ್ದು ಅಮೆರಿಕ. ಜಾರ್ಜ್ ವಾಷಿಂಗ್‌ಟನ್, ಅಬ್ರಹಾಂ ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಒಬಾಮಾ ಹೀಗೆ ಡೊನಾಲ್ಡ್ ಟ್ರಂಪ್ ಅಧಿಕಾರ ಹಿಡಿಯುವವರೆಗೂ 45 ಅಧ್ಯಕ್ಷರನ್ನ ಅಮೆರಿಕ ಕಂಡಿದೆ. ಅಮೆರಿಕ ಪ್ರಜಾಪ್ರಭುತ್ವ ಇತಿಹಾಸಕ್ಕೆ 244 ವರ್ಷ ಇತಿಹಾಸವಿದೆ. ಆಧುನಿಕ ಜಗತ್ತಿನಲ್ಲಿ ಯಾವುದೇ ರಾಷ್ಟ್ರ ಕೂಡ ಈ ವಿಚಾರದಲ್ಲಿ ಅಮೆರಿಕವನ್ನು ಹಿಂದೆ ಹಾಕಲು ಸಾಧ್ಯವಾಗಿಲ್ಲ.

ಅಧ್ಯಕ್ಷನಾಗಲು ಇರಬೇಕಾದ ಅರ್ಹತೆ ಏನು..?

ಅಧ್ಯಕ್ಷನಾಗಲು ಇರಬೇಕಾದ ಅರ್ಹತೆ ಏನು..?

ಅಮೆರಿಕ ಸಂವಿಧಾನದ ಪ್ರಕಾರ ಅಧ್ಯಕ್ಷೀಯ ಅಭ್ಯರ್ಥಿಯಾಗುವವರು ಅಲ್ಲೇ ಹುಟ್ಟಿರಬೇಕು, ಅಮೆರಿಕದ ಪ್ರಜೆಯಾಗಿರಬೇಕು. ಅಲ್ಲದೆ ಅಭ್ಯರ್ಥಿಯಾಗಲು ಕನಿಷ್ಠ 35 ವರ್ಷ ವಯಸ್ಸಾಗಿರಬೇಕು. ಅಮೆರಿಕ ಅಧ್ಯಕ್ಷರ ಆಯ್ಕೆ ಸುಲಭದ ವಿಚಾರವಲ್ಲ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಸುದೀರ್ಘವಾಗಿದ್ದು, ನವೆಂಬರ್‌ನಲ್ಲೇ ಮತದಾನ ನಡೆದರೂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹಾಗೂ ಅಧಿಕಾರ ಹಸ್ತಾಂತರ ಶುರುವಾಗುವುದು ಜನವರಿಯಲ್ಲಿ. ಹೀಗೆ ಅಮೆರಿಕ ಅಧ್ಯಕ್ಷರನ್ನು ಆಯ್ಕೆ ಮಾಡಲು ಹಲವು ತಿಂಗಳ ಸಮಯ ಬೇಕಾಗುತ್ತದೆ.

4 ವರ್ಷಕ್ಕೊಮ್ಮೆ ಅಧ್ಯಕ್ಷರು ಬದಲಾಗುತ್ತಾರೆ

4 ವರ್ಷಕ್ಕೊಮ್ಮೆ ಅಧ್ಯಕ್ಷರು ಬದಲಾಗುತ್ತಾರೆ

ಅಮೆರಿಕ ಅಧ್ಯಕ್ಷರನ್ನು ಪ್ರತಿ 4 ವರ್ಷಕ್ಕೊಮ್ಮೆ ಬದಲಾಯಿಸಲಾಗುತ್ತದೆ ಅಥವಾ ಮರು ಆಯ್ಕೆ ಮಾಡುತ್ತಾರೆ. 2020ರಲ್ಲಿ ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದೆ. 18 ವರ್ಷ ಮೇಲ್ಪಟ್ಟ ಅಮೆರಿಕನ್ನರು ಮತದಾನ ಮಾಡಲಿದ್ದಾರೆ. ಆದರೆ ಕೊರೊನಾ ಹಿನ್ನೆಲೆ ಈ ಬಾರಿ ಅಂಚೆ ಮತದಾನ ಪದ್ಧತಿಯ ಮೊರೆ ಹೋಗಲಾಗಿದೆ.

ಪರೋಕ್ಷ ಚುನಾವಣೆ ಮೂಲಕ ಆಯ್ಕೆ

ಪರೋಕ್ಷ ಚುನಾವಣೆ ಮೂಲಕ ಆಯ್ಕೆ

ಭಾರತದಲ್ಲಿ ಇರುವಂತೆ ಅಮೆರಿಕದಲ್ಲಿ ಹತ್ತಾರು ಪಕ್ಷಗಳು ಅಸ್ತಿತ್ವದಲ್ಲಿ ಇಲ್ಲ. ಅಮೆರಿಕದಲ್ಲಿ 2 ರಾಜಕೀಯ ಪಕ್ಷಗಳಿದ್ದು, ಅಧ್ಯಕ್ಷರನ್ನು 'ಎಲೆಕ್ಟೊರೋಲ್ ಕಾಲೇಜು' ಮೂಲಕ ಆಯ್ಕೆಮಾಡಲಾಗುತ್ತದೆ. ಸಾರ್ವಜನಿಕರು 'ಎಲೆಕ್ಟೊರೋಲ್ ಕಾಲೇಜು'ಗಳ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಮತ ಹಾಕುತ್ತಾರೆ. ಹೀಗೆ ಜನರ ಮತ ಪಡೆದು ಆಯ್ಕೆಯಾಗುವ ಪ್ರತಿನಿಧಿಗಳು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಪಡೆಯುತ್ತಾರೆ. ಈ ಬಾರಿ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡೆನ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ. ಪ್ರತಿ ರಾಜ್ಯದಲ್ಲಿ ಎಲೇಕ್ಟರ್‌ಗಳ ಸಂಖ್ಯೆ ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಆ ರಾಜ್ಯದ ಪಾಲು ಆಧರಿಸಿ ನಿರ್ಧರಿಸಲಾಗುತ್ತಿದೆ. ಈ ಪ್ರಕ್ರಿಯೆಗೆ ಇತ್ತೀಚಿನ ಜನಸಂಖ್ಯಾ ವರದಿ ಆಧಾರವಾಗಿರುತ್ತದೆ.

ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟು..?

ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟು..?

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ 50 ರಾಜ್ಯಗಳಿದ್ದು, ವಾಶಿಂಗ್‌ಟನ್ ಡಿಸಿ ಅಮೆರಿಕದ ರಾಜಧಾನಿಯಾಗಿದೆ. ಹೀಗೆ ವಾಶಿಂಗ್‌ಟನ್ ಡಿಸಿ ಸೇರಿದಂತೆ 51 ರಾಜ್ಯಗಳ ಪ್ರಜೆಗಳು ಅಮೆರಿಕ ಅಧ್ಯಕ್ಷರ ಆಯ್ಕೆಗೆ ಮತದಾನ ಮಾಡುತ್ತಾರೆ. ಒಟ್ಟು 538 ಚುನಾಯಿತ ಪ್ರತಿನಿಧಿಗಳಿರುತ್ತಾರೆ. 538 ಪ್ರತಿನಿಧಿಗಳ ಪೈಕಿ ಪ್ರತಿ ರಾಜ್ಯವನ್ನೂ ಪ್ರತಿನಿಧಿಸಲು ಇಬ್ಬರು ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ಒಟ್ಟು 100 ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ವಾಷಿಂಗ್ಟನ್ ಡಿಸಿ ಸೇರಿದಂತೆ ಒಟ್ಟು 51 ಎಲೆಕ್ಟೊರಾಲ್ ಕಾಲೇಜುಗಳಿವೆ. ಪ್ರತಿ ರಾಜ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬಹುಮತ ದೊರೆಯುತ್ತದೆಯೋ ಆ ಅಭ್ಯರ್ಥಿಗೆ ರಾಜ್ಯದ ಇತರ ಎಲ್ಲ ಮತಗಳು ಒಗ್ಗೂಡುತ್ತವೆ.

ಅಧ್ಯಕ್ಷರಾಗಲು ಎಷ್ಟು ಬಹುಮತ ಅಗತ್ಯ..?

ಅಧ್ಯಕ್ಷರಾಗಲು ಎಷ್ಟು ಬಹುಮತ ಅಗತ್ಯ..?

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನ ಅಲಂಕರಿಸಬೇಕಾದರೆ ಕನಿಷ್ಠ 270 ಮತ ಅಗತ್ಯವಾಗಿರುತ್ತದೆ. ಅಂದರೆ ಒಟ್ಟು 538 ಚುನಾಯಿತ ಪ್ರತಿನಿಧಿಗಳ ಪೈಕಿ 270 ಚುನಾಯಿತ ಅಭ್ಯರ್ಥಿಗಳ ಬೆಂಬಲ ಅತ್ಯಗತ್ಯವಾಗಿರುತ್ತದೆ. ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗೂ 2 ಮತಗಳನ್ನು ಹಾಕುವ ಹಕ್ಕು ಇರುತ್ತದೆ. ಒಂದು ಮತ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮತ್ತೊಂದು ಮತ ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲುತ್ತದೆ. ಇನ್ನು ಚುನಾವಣೆ ಪ್ರಕ್ರಿಯೆ ಬಗ್ಗೆ ಅನುಮಾನ ಹೊಂದಿದ್ದರೆ ಅಥವಾ ಈ ಕುರಿತಾಗಿ ತಕರಾರು ಇದ್ದರೆ ಸೋತ ಅಭ್ಯರ್ಥಿ ಅಮೆರಿಕದ ಸುಪ್ರೀಂಕೋರ್ಟ್ ಮೊರೆ ಹೋಗಲು ಅವಕಾಶ ಇದೆ. ಇದೀಗ ಟ್ರಂಪ್ ಕೂಡ ಅಂಚೆ ಮತದಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ತಾವು ಸೋತರೆ ಅಧಿಕಾರ ಹಸ್ತಾಂತರ ಸುಪ್ರೀಂಕೋರ್ಟ್‌ನಲ್ಲಿ ನಿರ್ಧಾರವಾಗಬಹುದು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+