ಕೊರೊನಾವೈರಸ್ ಸೋಂಕು ಟ್ರ್ಯಾಕ್: ಆರೋಗ್ಯ App ಬಳಕೆ ಹೇಗೆ?
ಬೆಂಗಳೂರು, ಏಪ್ರಿಲ್ 2: ಕೊರೊನಾವೈರಸ್ ವಿರುದ್ಧ ನಿರ್ಣಾಯಕ ಹೋರಾಟದಲ್ಲಿ ಸಾರ್ವಜನಿಕರ ಸಹಕಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತೊಮ್ಮೆ ಬಯಸಿವೆ. ಸೋಂಕಿತರ ಮೇಲೆ ನಿಗಾ ಇಡಲು ರಾಜ್ಯ ಸರ್ಕಾರ ಕೊರೊನಾ ವಾಚ್ ಆಪ್ ಬಿಡುಗಡೆ ಮಾಡಿತ್ತು. ಈಗ ಕೇಂದ್ರ ಸರ್ಕಾರವು ಆರೋಗ್ಯ ಆಪ್(Aarogya App) ಹೊರ ತಂದಿದೆ.
ಕೊರೊನಾವೈರಸ್ ಸೋಂಕು, ಹೋಂ ಕ್ವಾರಂಟೈನ್ ಇರುವವರು ನಡೆದುಕೊಳ್ಳಬೇಕಾದ ರೀತಿ ನೀತಿ, ಲಾಕ್ಡೌನ್ ನಿಯಮದ ಬಗ್ಗೆ ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಂ, ಇನ್ಸ್ಟಾಗ್ರಾಂ, ಟಿಕ್ ಟಾಕ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈಗ ಮತ್ತೊಂದು ಆಂಡ್ರಾಯ್ಡ್ ಆಪ್ ನಿಮ್ಮ ಮುಂದಿಡಲಾಗಿದೆ. ಈ ಮೂಲಕ ಸೋಂಕಿತ ವ್ಯಕ್ತಿಗಳನ್ನು ಟ್ರ್ಯಾಕ್ ಮಾಡಿ, ಆರೊಗ್ಯವಂತರಿಗೆ ರೋಗ ಹರಡದಂತೆ ತಡೆಗಟ್ಟಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ವಾಟ್ಸಾಪ್ ಹಾಗೂ ಫೇಸ್ಬುಕ್ ಮೆಸೇಂಜರ್ ಆಪ್ ಮೂಲಕ ರಿಯಲ್ ಟೈಂನಲ್ಲಿ ಚಾಟ್ ಬಾಟ್ ಬಳಸಿ ಮಾಹಿತಿ ಪಡೆಯುವ ಸೌಲಭ್ಯ ಸದ್ಯ ಬಳಕೆಯಲ್ಲಿದೆ. ಆಂಡ್ರಾಯ್ಡ್ ಅಪ್ಲಿಕೇಷನ್ ನಲ್ಲಿ ಅಪೋಲೋ ಆಸ್ಪತ್ರೆಯ ಎಐ ಆಧಾರಿತ ಚಾಟ್ ಬಾಟ್ ಮಾದರಿಯಲ್ಲಿ ಕನ್ನಡ ಭಾಷೆಯಲ್ಲೇಮಾಹಿತಿ ಹಾಗೂ ನೆರವು ಪಡೆದುಕೊಳ್ಳಬಹುದು.

ಈ ಆಪ್ ಮೂಲಕ ಕೊವಿಡ್19 ಪಾಸಿಟಿವ್ ರೋಗಿಗಳ ಚಲನವಲನಗಳನ್ನು ರಿಯಲ್ ಟೈಮಲ್ಲಿ ಟ್ರ್ಯಾಕ್ ಮಾಡಬಹುದು. ಕೊರೊನಾ ಸೋಂಕಿತರು, ಹೋಂ ಕ್ವಾರಂಟೈನ್ ಆಗಿರುವವರು ಎಲ್ಲೆಲ್ಲಿದ್ದಾರೆ ಎಂದು ಗುರುತಿಸಬಹುದು. ಒಂದು ವೇಳೆ ಸೋಂಕಿತ ವ್ಯಕ್ತಿಯೇನಾದರೂ ಆರೋಗ್ಯವಂತರ ಬಳಿಗೆ(1 ಮೀಟರ್ ಅಂತರ) ಸುಳಿದರೆ ಅಲರ್ಟ್
ವೈದ್ಯಕೀಯ ನೆರವು ಪಡೆಯುವುದು ಎಲ್ಲಿ? ಕೈಗೆ ಕ್ವಾರಂಟೈನ್ ಸ್ಟ್ಯಾಂಪ್ ಇರುವವರು ಎಲ್ಲೆಂದರಲ್ಲಿ ಓಡಾಡುತ್ತಿದ್ದರೆ ಯಾರಿಗೆ ಕರೆ ಮಾಡಿ ತಿಳಿಸಬೇಕು ಎಂಬೆಲ್ಲ ಮಾಹಿತಿ ಈ ಆಪ್ ನಲ್ಲಿದೆ. ಗೂಗಲ್ ಪ್ಲೇಸ್ಟೋರಿನಲ್ಲಿ NIC eGov Mobile AppsTools ಅಭಿವೃದ್ಧಿಪಡಿಸಿರುವ Aarogya Setu ಆಪ್ ಮಾತ್ರ ಡೌನ್ಲೋಡ್ ಮಾಡಿಕೊಳ್ಳಿ.

ಕೊರೊನಾ ಕುರಿತ ಸಹಾಯವಾಣಿ
ಮೈಗೋವ್ ಕೊರೊನಾ ಸಹಾಯಕೇಂದ್ರ ವಾಟ್ಸಾಪ್ ಚಾಟ್‌ಬಾಟ್ ಬಿಟ್ಟು ಕೇಂದ್ರ ಸಹಾಯವಾಣಿ ಮತ್ತು ಆಯಾ ರಾಜ್ಯಗಳ ಸಹಾಯವಾಣಿ ಕೇಂದ್ರಗಳು ಕಾರ್ಯರೂಪದಲ್ಲಿದೆ ಸಹಾಯವಾಣಿ ಸಂಖ್ಯೆ + 91-11-23978046ಗೆ ಕರೆ ಮಾಡಿ ನೊವೆಲ್ ಕೊರೊನಾ ವೈರಾಣು ಕುರಿತ ಮಾಹಿತಿ, ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. Karnataka Health Dept - 080-46848600. ರಾಜ್ಯ ಸಹಾಯವಾಣಿ - 104 Helpline - 080-6669200 ರಾಷ್ಟ್ರೀಯ ಸಹಾಯವಾಣಿ - 1075












Click it and Unblock the Notifications