• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Corona Update: ಮೋದಿ ಸಂದೇಶ, ನಿಲ್ಲದ ಸೋಂಕು, ಲಾಕ್‌ಡೌನ್‌ ಸಂಕಷ್ಟ

|

ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆ ಈಗ ಇಡೀ ದೇಶಕ್ಕೆ ಕಂಟಕ ತಂದಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಂದ ದೇಶದಲ್ಲಿ ಸೋಂಕು ಹರಡುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅದಕ್ಕೆ ಪುಷ್ಠಿ ನೀಡುವಂತೆ ಹೊಸ ಪ್ರಕರಣಗಳು ದಾಖಲಾಗುತ್ತಿದೆ.

ಈ ನಡುವೆ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಸಂದೇಶ ರವಾನಿಸಿದ್ದಾರೆ. ಜನತಾ ಕರ್ಫ್ಯೂ, ಲಾಕ್‌ಡೌನ್‌ ಬಳಿಕ ಇನ್ನೊಂದು ಕೆಲಸ ಮಾಡುವಂತೆ ಜನರಿಗೆ ತಿಳಿಸಿದ್ದಾರೆ. ಹಾಗಿದ್ರೆ, ದೇಶದಲ್ಲಿ ಕೊರೊನಾಗೆ ಸಂಬಂಧಪಟ್ಟಂತೆ ಏನೆಲ್ಲಾ ಬೆಳವಣಿಗೆ ಆಗಿವೆ ಎಂದು ಒಂದು ಸುತ್ತು ನೋಡೋಣ.

ನರೇಂದ್ರ ಮೋದಿ ಸಂದೇಶ

* ಏಪ್ರಿಲ್.05 ಭಾನುವಾರ ರಾತ್ರಿ 9 ಗಂಟೆಗೆ ಪ್ರತಿಯೊಂದು ಮನೆಯ ಲೈಟ್ ಗಳನ್ನು ಬಂದ್ ಮಾಡಿ. ಮೊಬೈಲ್ ಫ್ಲಾಶ್ ಲೈನ್, ದೀಪ, ಮೇಣದಬತ್ತಿಯನ್ನು ರಾತ್ರಿ 9 ಗಂಟೆ 9 ನಿಮಿಷಗಳ ಕಾಲ ಹಚ್ಚಿ ಇಡಬೇಕು ಎಂದು ಪ್ರಧಾನಿ ಮೋದಿ ಸಂದೇಶ. ಬನ್ನಿ ಎಲ್ಲರೂ ಕೈ ಜೋಡಿಸೋಣ. ಭಾರತೀಯರೆಲ್ಲ ಒಂದಾಗೋಣ. ದೇಶದಿಂದ ಕೊರೊನಾ ವೈರಸ್ ಮಹಾಮಾರಿಯನ್ನು ಹೋಗಲಾಡಿಸೋಣ ಎಂದು ಪ್ರಧಾನಮಂತ್ರಿ ಸಂದೇಶ ರವಾನಿಸಿದ್ದಾರೆ.

ದೇಶದಲ್ಲಿ ಒಟ್ಟು ಪ್ರಕರಣಗಳು ಯಾವುದು?

* ಭಾರತದಲ್ಲಿ ಒಟ್ಟು 2301 ಪ್ರಕರಣಗಳು ದೃಢಪಟ್ಟಿವೆ. 56 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಆದರೆ, ಈ ಕ್ಷಣಕ್ಕೆ ಸೋಂಕಿತರ ಸಂಖ್ಯೆ 2,567 ದಾಟಿದೆ ಮತ್ತು 70 ರವರೆಗೂ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳುತ್ತಿದೆ. ಕರ್ನಾಟಕದಲ್ಲಿ 125 ಸೋಂಕಿತರು ಪತ್ತೆಯಾಗಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ.

ರೊಬೋಟ್ ಚಿಕಿತ್ಸೆ

* ತಮಿಳುನಾಡಿನ ಸರ್ಕಾರಿ ಸ್ಟಾನ್‌ಲೀ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ವೈರಸ್ ಸೋಂಕಿತ ರೋಗಿಗಳಿಗೆ ರೊಬೋಟ್ ಮೂಲಕ ಆಹಾರ, ಔಷಧವನ್ನು ನೀಡುತ್ತಿರುವುದು.

ಮದ್ಯ ಸಿಗದೆ ಮತ್ತೊಂದು ಆತ್ಮಹತ್ಯೆ!

* ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ನಗರದ ಹೋಟೆಲ್ಲೊಂದರಲ್ಲಿ ಕೆಲಸ ಮಾಡುತ್ತಿದ್ದ ಯೋಗೀಶ್ (40) ಎಣ್ಣೆ ಸಿಗದಿದ್ದಕ್ಕೆ ಪರಿಚಿತರ ಬಳಿ ಬೇಸರ ತೋಡಿಕೊಂಡಿದ್ದ, 4 ದಿನಗಳ ಹಿಂದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಕ್ರೀಡಾಪಟುಗಳ ಜೊತೆ ಸಂವಾದ

* ಪ್ರಧಾನಿ ನರೇಂದ್ರ ಮೋದಿಯವರು 40 ಕ್ರೀಡಾಪಟುಗಳ ಜೊತೆಗೆ ಕೊರೊನಾ ವೈರಸ್ ಕುರಿತಾಗಿ ವಿಡಿಯೋ ಸಂವಾದ ನಡೆಸಿದರು.

ಆಶಾ ಕಾರ್ಯಕರ್ತೆಯರಿಗೆ ಅನುಮತಿ ಕೊಟ್ಟಿದ್ದು ಯಾರು?

* ಆಶಾ ಕಾರ್ಯಕರ್ತೆಯರಿಗೆ ಯಾರು ಅನುಮತಿ ಕೊಟ್ಟಿರೋದು, ಸರ್ಕಾರದ ಅನುಮತಿ ತೆಗೆದುಕೊಂಡು ಹೋಗಿದ್ರಾ.?, ಸರ್ವೇ ಮಾಡಲು ಆಶಾ ಕಾರ್ಯಕರ್ತೆಯರು ಹೋಗಿದ್ದಾರೆ , ಎನ್ ಸಿಆರ್ ಮಾಡಲು ಹೋಗಿದ್ದಾರೆ ಜನ ತಪ್ಪು ತಿಳಿದುಕೊಂಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಸರ್ವೇ ಮಾಡಲು ಯಾರು ಹೇಳಿದ್ರು - ಜಮೀರ್ ಅಹಮದ್ ಖಾನ್

ಮೊದಲ ಕೊರೊನಾ ರೋಗಿ ಚೇತರಿಕೆ

* ಒಡಿಶಾದಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತನ ಆರೋಗ್ಯದಲ್ಲಿ ಚೇತರಿಕೆ. ಚಿಕಿತ್ಸೆ ಬಳಿಕ ಕೊರೊನಾ ಸೋಂಕು ನೆಗೆಟಿವ್. ಶುಕ್ರವಾರ ಆಸ್ಪತ್ರೆಯಿಂದ ವ್ಯಕ್ತಿ ಡಿಸ್ಚಾರ್ಜ್.

ಶೃಂಗೇರಿ ಮಠ ದೇಣಿಗೆ

* ಕೊರೊನಾ ನಿಯಂತ್ರಣ ಮಾಡಲು ಶೃಂಗೇರಿ ಮಠ ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದೆ. 10 ಲಕ್ಷ ರೂಪಾಯಿಗಳನ್ನು ಶೃಂಗೇರಿ ಮಠ ನೀಡಿದೆ.

ಬೆಳಗಾವಿ ಕೈದಿಗಳು ಬಿಡುಗಡೆ

* ಕೊರೊನಾ ವೈರಸ್ ಹರಡುವ ಭೀತಿಯಿಂದ ಬೆಳಗಾವಿಯ ಹಿಂಡಲಗಾ ಜೈಲಿನಿಂದ 57 ವಿಚಾರಣಾಧೀನ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಬೆಳಗಾವಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಪಡೆದು ರಿಲೀಸ್ ಮಾಡಲಾಗಿದೆ ಎಂದು ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಮಾಹಿತಿ ನೀಡಿದ್ದಾರೆ.

ಗೌತಮ್ ಗಂಭೀರ್ ನೆರವು

* ಸಂಸದ, ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಪಿಎಂ ಪರಿಹಾರ ನಿಧಿಗೆ ತಮ್ಮ ಎರಡು ವರ್ಷದ ವೇತನ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ. ಗಂಭೀರ್ ಸಂಸದರ ಒಂದು ತಿಂಗಳ ವೇತನದ ಜೊತೆಗೆ ಸಂಸದರ ನಿಧಿಯಿಂದ ಒಂದು ಕೋಟಿ ರೂ ನೀಡಿದ್ದರು. ವೈದ್ಯಕೀಯ ಪರಕರಗಳ ಖರೀದಿಗಾಗಿ ದೆಹಲಿ ಸರ್ಕಾರಕ್ಕೆ 50ಲಕ್ಷ ರೂ ದೇಣಿಗೆ ನೀಡಿದ್ದರು.

ಜಗತ್ತಿನ ಅಂಕಿ-ಅಂಶಗಳು

* ಇದುವರೆಗೂ ಜಗತ್ತಿನಲ್ಲಿ ಒಟ್ಟು 1,026,739 ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 54,045 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 218,586 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. ಇಟಲಿಯಲ್ಲಿ 13,915 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಪೇನ್ ದೇಶದಲ್ಲಿ 10,935 ಜನರು ಸಾವನ್ನಪ್ಪಿದ್ದಾರೆ.

English summary
Coronavirus Complete Report And Daily Roundup across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X