U T Khader Profile: ಕೋಲಕ್ಕೂ ಸೈ, ಬ್ರಹ್ಮಕಲಶಕ್ಕೂ ಸೈ, ರಾಜ್ಯದ ಸಂಭಾವಿತ ರಾಜಕಾರಣಿ
ಕರ್ನಾಟಕ ಕಾಂಗ್ರೆಸ್ಸಿನ ಪ್ರಮುಖ ನಾಯಕರಲ್ಲೊಬ್ಬರಾದ ಯು.ಟಿ.ಖಾದರ್ ಹಾಲೀ ಶಾಸಕರು ಮತ್ತು ಮಂಗಳೂರು (ಉಳ್ಳಾಲ ಎಂದೂ ಕರೆಯಲ್ಪಡುತ್ತದೆ) ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸುತ್ತಾರೆ. ರಾಜ್ಯದ ಸಂಭಾವಿತ ರಾಜಕಾರಣಿ ಎಂದೇ ಹೆಸರಾಗಿರುವ ಖಾದರ್ ಅವರ ವ್ಯಕ್ತಿಚಿತ್ರ
ಕರ್ನಾಟಕ ಕಾಂಗ್ರೆಸ್ಸಿನ ಪ್ರಮುಖ ನಾಯಕರಲ್ಲೊಬ್ಬರಾದ ಯು.ಟಿ.ಖಾದರ್ ಅವರು ಹಾಲೀ ಶಾಸಕರು ಮತ್ತು ಮಂಗಳೂರು (ಉಳ್ಳಾಲ ಎಂದೂ ಕರೆಯಲ್ಪಡುತ್ತದೆ) ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು. ರಾಜ್ಯದ ಮುಸ್ಲಿಂ ನಾಯಕರಲ್ಲಿ ಪ್ರಭಾವೀ ಮುಖಂಡರಾಗಿರುವ ಖಾದರ್ ಹುಟ್ಟಿದ್ದು ಮಂಗಳೂರಿನಲ್ಲಿ. ಇವರ ತಂದೆ ಯು.ಟಿ.ಫರೀದ್ ನಿಧನದ ನಂತರ ಆಗಿನ ಉಳ್ಳಾಲ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾದರು.
ಅಲ್ಲಿಂದ ಇಲ್ಲಿಯವರೆಗೆ ಯು.ಟಿ.ಖಾದರ್ ಸತತವಾಗಿ ಆರಿಸಿ ಬರುತ್ತಿದ್ದಾರೆ. ಯಾವುದೇ ಗುರುತರ ಆರೋಪವಿಲ್ಲದೇ, ಎಲ್ಲಾ ರಾಜಕೀಯ ಮುಖಂಡರ ಜೊತೆ ಹೊಂದಿಕೊಂಡು ಸಾಗುವ, ರಾಜ್ಯದ ಸಂಭಾವಿತ ರಾಜಕಾರಣಿ ಎಂದು ಕರೆಯಲ್ಪಡುವ ಖಾದರ್ ಅವರು 2007ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ಪದವೀಧರರಾಗಿರುವ ಖಾದರ್ ಅವರು ಹುಟ್ಟಿದ್ದು ಅಕ್ಟೋಬರ್ 12, 1969ರಂದು. ಇವರ ತಂದೆ ಹಾಜಿ ಹಾಜಿ ಯು.ಟಿ.ಫರೀದ್, 1972, 1978, 1999 ಮತ್ತು 2004ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಸಿದ್ದರಾಮಯ್ಯನವರ ಸರಕಾರದಲ್ಲಿ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಕುಮಾರಸ್ವಾಮಿಯವರ ಸರಕಾರದಲ್ಲಿ ವಸತಿ, ನಗರಾಭಿವೃದ್ದಿ ಖಾತೆಯ ಸಚಿವರಾಗಿಯೂ ಖಾದರ್ ಕಾರ್ಯ ನಿರ್ವಹಸಿದ್ದರು.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಒಟ್ಟು ಹದಿಮೂರು ಅಸೆಂಬ್ಲಿ ಕ್ಷೇತ್ರದಲ್ಲಿ ಗೆದ್ದ ಏಕೈಕ ಕಾಂಗ್ರೆಸ್ ಅಭ್ಯರ್ಥಿ ಎಂದರೆ ಅದು ಯು.ಟಿ.ಖಾದರ್. 1992ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐನಲ್ಲಿ ಸಕ್ರಿಯರಾಗಿ ನಂತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು.
ಎನ್‌ಎಸ್‌ಯುಐ ಅಧ್ಯಕ್ಷರಾಗಿದ್ದ ಖಾದರ್
1994ರಲ್ಲಿ ಎನ್‌ಎಸ್‌ಯುಐ ಅಧ್ಯಕ್ಷರಾಗಿ, ಮಂಗಳೂರು ವಿವಿಯ ಸೆನೆಟ್ ಆಗಿ ಕೂಡಾ ಖಾದರ್ ನೇಮಕಗೊಂಡರು. 2002ರಲ್ಲಿ ಅಖಿಲ ಭಾರತ ಸೇವಾದಳದ ಮಾರ್ಗದರ್ಶಕರಾಗಿ, ಸತತವಾಗಿ ಮಂಗಳೂರು ಕ್ಷೇತ್ರದಿಂದ ಆರಿಸಿ ಬರುತ್ತಿದ್ದಾರೆ. ಹಾಲೀ ವಿಧಾನಸಭೆಯಲ್ಲಿ ಖಾದರ್, ವಿರೋಧ ಪಕ್ಷದ ಉಪ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಖಾದರ್ ಒಟ್ಟು ಆಸ್ತಿ ಎಷ್ಟು
ಕಳೆದ ಚುನಾವಣೆಯಲ್ಲಿ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಅವರ ಒಟ್ಟು ಆಸ್ತಿ ಮೌಲ್ಯ 2.47 ಕೋಟಿ ರೂಪಾಯಿ. ಕಳೆದ ಚುನಾವಣೆಯಲ್ಲಿ ಖಾದರ್ ಅವರು ಬಿಜೆಪಿಯ ಸಂತೋಷ್ ಕುಮಾರ್ ಬೊಳಿಯಾರ್ ವಿರುದ್ದ 19,739 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು. ಇದರ ಹಿಂದಿನ ಅಂದರೆ 2013ರ ಚುನಾವಣೆಯಲ್ಲಿ ಇವರ ಗೆಲುವಿನ ಅಂತರ ಸುಮಾರು 29 ಸಾವಿರ ಎನ್ನುವುದು ಗಮನಿಸಬೇಕಾದ ವಿಚಾರ.
ಕೋಲಕ್ಕೂ ಸೈ, ಕಂಬಳಕ್ಕೂ ಸೈ
ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಕೋಲ, ಕಂಬಳ, ಬ್ರಹ್ಮಕಲಶ, ಧಾರ್ಮಿಕ ಸಭೆಗಳಲ್ಲಿ ಭಾಗವಹಿಸುವ ಖಾದರ್, ವಿವಾದಕಾರಿ ಹೇಳಿಕೆಗಳನ್ನು ನೀಡದೇ ವಿಷಯಾಧಾರಿತವಾಗಿ ಮಾತನಾಡುವ ರಾಜಕಾರಣಿ ಎಂದೇ ಹೆಸರಾಗಿರುವವರು. ಕಾಂಗ್ರೆಸ್ ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಮಂಚೂಣಿಯಲ್ಲಿ ನಿಂತು ಭಾಗವಹಿಸುವ ಖಾದರ್ ಅವರು ಮತ್ತೆ ಮಂಗಳೂರು ಕ್ಷೇತ್ರದಿಂದ (2023) ಸ್ಪರ್ಧಿಸುತ್ತಿದ್ದಾರೆ.
ಮುಸ್ಲಿಂ ಪ್ರಾಭಲ್ಯವಿರುವ ಮಂಗಳೂರು ಕ್ಷೇತ್ರ
ಮುಸ್ಲಿಂ ಪ್ರಾಭಲ್ಯವಿರುವ ಮಂಗಳೂರು ಕ್ಷೇತ್ರದಲ್ಲಿ ಈ ಬಾರಿಯೂ ಖಾದರ್ ಅವರಿಗೆ ಕೇಕ್ ವಾಕ್ ಅಲ್ಲ ಎನ್ನುವುದು ಸದ್ಯದ ಚಿತ್ರಣ. ದಿನದಿಂದ ದಿನಕ್ಕೆ ಪ್ರಭಲಗೊಳ್ಳುತ್ತಿರುವ ಬಿಜೆಪಿ ಒಂದು ಕಡೆಯಾದರೆ, ಎಸ್ ಡಿ ಪಿ ಐ ಕಾಂಗ್ರೆಸ್ ನ ಮತ ವಿಭಜನೆ ಮಾಡುವ ಆತಂಕವೂ ಈ ಬಾರಿ ಕಾಂಗ್ರೆಸ್ ಗೆ ಇದೆ. ಯಾಕೆಂದರೆ, ಅಭ್ಯರ್ಥಿಯನ್ನು ಈಗಾಗಲೇ ಎಸ್ ಡಿ ಪಿ ಐ ಘೋಷಿಸಿದೆ.
ಬಿಜೆಪಿಯಿಂದ ಈ ಬಾರಿ ಯಾರಿಗೆ ಟಿಕೆಟ್
ಬಿಜೆಪಿಯಿಂದ ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಸಂತೋಷ್ ಶೆಟ್ಟಿ ಬೋಳಿಯಾರ್, ಸ್ಥಳೀಯ ಬಿಜೆಪಿ ಮುಖಂಡರಾದ ಸತೀಶ್ ಕುಂಪಲ, ಚಂದ್ರಹಾಸ್ ಪಂಡಿತ್, ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್ ವೆಲ್ ಹೆಸರೂ ಈ ಬಾರಿಯ ಚುನಾವಣಾ ರೇಸ್ ನಲ್ಲಿ ಬಿಜೆಪಿ ಟಿಕೆಟಿನಿಂದ ಕೇಳಿ ಬರುತ್ತಿದೆ. 16ನೇ ಕರ್ನಾಟಕ ವಿಧಾನಸಭೆಗೆ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣಾ ದಿನಾಂಕ ಪ್ರಕಟವಾಗಲಿದೆ. ಮೂರು ಪಕ್ಷಗಳು ಭರ್ಜರಿ ಪೂರ್ವತಯಾರಿಯ ಮೂಲಕ ಆಖಾಡಕ್ಕೆ ಇಳಿದಾಗಿದೆ.
ಕುತೂಹಲಕ್ಕೆ ಕಾರಣವಾದ ಮಂಗಳೂರು ಕ್ಷೇತ್ರ
ಬಿಜೆಪಿಯ ಅಭ್ಯರ್ಥಿಯಾರಾಗಬಹುದು ಮತ್ತು ಎಸ್ ಡಿ ಪಿ ಐ ಮತ್ತು ಒಂದು ವೇಳೆ ಓವೈಸಿ ಪಕ್ಷದ ಅಭ್ಯರ್ಥಿ ಕಣಕ್ಕಿಳಿದರೆ ಮಂಗಳೂರು ಅಸೆಂಬ್ಲಿ ಕ್ಷೇತ್ರದ ಚುನಾವಣೆ ಈ ಬಾರಿಯೂ ರಂಗೇರಬಹುದು. ಏನೇ ಆದರೂ, ಖಾದರ್ ಅವರನ್ನು ಮಣಿಸುವುದು ಸುಲಭದ ಕೆಲಸವಲ್ಲ ಎನ್ನುವುದು ಸ್ಥಳೀಯವಾಗಿ ಇರುವ ಅಭಿಪ್ರಾಯ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video












Click it and Unblock the Notifications