Get Updates
Get notified of breaking news, exclusive insights, and must-see stories!

ಚಂದ್ರಯಾನ 2 : 'ಬಾಹುಬಲಿ' ಯಾರನ್ನು ಹೊತ್ತೊಯ್ಯಬೇಕು?

ಬೆಂಗಳೂರು, ಜುಲೈ 16: ಮಹತ್ವದ ಯೋಜನೆ ಚಂದ್ರಯಾನ 2ದ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಚಂದ್ರಯಾನ 2 ಬಗ್ಗೆ ಮಾಹಿತಿ, ವಿಡಿಯೋ, ಬಾಹುಬಲಿ, ವಿಕ್ರಮ್, ಪ್ರಜ್ಞಾನ್ ಬಗ್ಗೆ ಟ್ವಿಟ್ಟರ್ ನಲ್ಲಿ ಚರ್ಚೆ ಮುಂದುವರೆದಿದೆ. ಈ ನಡುವೆ ಜುಲೈ 15ರಂದು 2.51ಕ್ಕೆ ನಭಕ್ಕೆ ಹಾರಬೇಕಿದ್ದ ರಾಕೆಟ್ ಉಡಾವಣೆಯನ್ನು ರದ್ದು ಪಡಿಸಲಾಗಿದೆ. ತಾಂತ್ರಿಕ ಕಾರಣದಿಂದ ಕೊಂಚ ಹಿನ್ನಡೆಯಾಗಿದ್ದು, ಮತ್ತೊಮ್ಮೆ ಕೌಂಟ್ ಡೌನ್ ಶುರು ಮಾಡಲಿದ್ದಾರೆ.

2009 ರಲ್ಲಿ ನಡೆದಿದ್ದ ಚಂದ್ರಯಾನ 1 ರ ಯಶಸ್ಸೇ ಚಂದ್ರಯಾನ 2 ಕ್ಕೆ ಸ್ಫೂರ್ತಿಯಾಗಿದ್ದು, ಆಗಲೂ ಚಂದ್ರನ ಮೇಲಿರುವ ವಾಸಯೋಗ್ಯ ವಾತಾವರಣ, ನೀರು ಮತ್ತಿತರ ಖನಿಜಗಳ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಚಂದ್ರಯಾನ 1 ರಲ್ಲಿ ಆರ್ಬಿಟರ್ ಘಟಕವನ್ನು ಬಳಸಲಾಗಿತ್ತಾದರೂ, ರೋವರ್ ಘಟಕವನ್ನು ಬಳಸಲಾಗಿರಲಿಲ್ಲ. ಆ ಕಾರಣದಿಂದ ಚಂದ್ರಯಾನ 2 ಮತ್ತಷ್ಟು ಕುತೂಹಲ ಸೃಷ್ಟಿಸಿದೆ.

ಒಟ್ಟು 3.8 ಟನ್ ಸಾಮರ್ಥ್ಯದ 'ಬಾಹುಬಲಿ' ರಾಕೆಟ್ GSLV MKIII, ಗಗನನೌಕೆ 11 ಪೇ ಲೋಡ್ ಗಳನ್ನು ಹೊತ್ತೊಯ್ಯಲಿದ್ದು, ಇವುಗಳಲ್ಲಿ ಭಾರತದ 6, ಯುರೋಪಿನ 3, ಅಮೆರಿಕದ 2 ಪೇ ಲೋಡ್ ಗಳು ಇರಲಿವೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 15ರಂದು ನಸುಕಿನ 2.51ಕ್ಕೆ ಚಂದ್ರಯಾನ-2 ಉಡಾವಣೆಯಾಗಲಿದೆ. ಈ ನಡುವೆ 'ಬಾಹುಬಲಿ' ರಾಕೆಟ್ ಚಂದ್ರಯಾನಕ್ಕೆ ಭಾರತದಿಂದ ಯಾರನ್ನಾದರೂ ಹೊತ್ತೊಯ್ಯಬಲ್ಲ ಅವಕಾಶ ಬಂದರೆ ಯಾರನ್ನು ಕರೆದೊಯ್ಯಬೇಕು ಎಂಬ ತಮಾಷೆ ಪ್ರಶ್ನೆಗೆ ಟ್ವಿಟ್ಟರ್ ನಲ್ಲಿ ಹಾಸ್ಯಮಯ ಉತ್ತರಗಳು ಬಂದಿವೆ.

Chandrayaan-2: ISRO asks Twitterati what they would carry to the Moon? See the best answers

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+