ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಚ್ ಮಿ ಇಫ್ ಯು ಕ್ಯಾನ್: ಡ್ರೋನ್ ಪ್ರತಾಪ್ ಸೈಕೋ ಅನಾಲಿಸಿಸ್!

|
Google Oneindia Kannada News

ನಿರುಪಯುಕ್ತ ವಸ್ತುಗಳಿಂದ ಡ್ರೋನ್ ತಯಾರಿಸಿರುವುದಾಗಿ ಸುಳ್ಳು ಹೇಳಿಕೊಂಡಿದ್ದ ಡ್ರೋನ್ ಪ್ರತಾಪ್ ವಿರುದ್ಧ ಕೊನೆಗೂ ಪೊಲೀಸರಲ್ಲಿ ದೂರು ದಾಖಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿದ್ದಾನೆ. ಈತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಾಮಾಜಿಕ ಕಾರ್ಯಕರ್ತ ಜೇಕಬ್ ಜಾರ್ಜ್ ಎಂಬುವರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

Recommended Video

Twitter Hackers ಮಾಡಿದ್ದೇನು , ಕದ್ದಿದ್ದೆಷ್ಟು ? | Oneindia Kannada

ಈ ನಡುವೆ ಡ್ರೋಣ್ ಪ್ರತಾಪ್ ತನ್ನ ಓದು, ಸಾಧನೆ ಬಗ್ಗೆ ಏಕೆ ಹೀಗೆಲ್ಲ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾನೆ. ಪ್ರತಾಪ್ ಡ್ರೋನ್ ತಯಾರಿಕೆಯ ಪ್ರಾಥಮಿಕ ಜ್ಞಾನವನ್ನೂ ಹೊಂದಿಲ್ಲ ಎಂಬುದು ಬಹಿರಂಗವಾದರೂ ಆತನ ಮನಸ್ಥಿತಿ, ಸುಳ್ಳೂ ಹೇಳುವ ರೀತಿ ನೀತಿ ಯಾವುದು ಬದಲಾಗಿಲ್ಲ. ಇದು ಕೇವಲ ವಂಚಕನೊಬ್ಬನ ಮನಸ್ಥಿತಿಯೇ ಅಥವಾ ಇದು ಮಾನಸಿಕ ಅಸ್ವಸ್ಥನೊಬ್ಬನ ಪರಿಸ್ಥಿತಿಯೇ ಎಂಬುದರ ಬಗ್ಗೆ ಖ್ಯಾತ ಮನೋವಿಜ್ಞಾನಿ ಡಾ. ಅ. ಶ್ರೀಧರ ಅವರನ್ನು ಪ್ರಶ್ನೆ ಮಾಡಿದಾಗ ಅವರು ಪ್ರತಾಪ್ ಬಗ್ಗೆ ನೀಡಿದ ಸೈಕೋ ವಿಶ್ಲೇಷಣೆ ಇಲ್ಲಿದೆ:

ಡ್ರೋನ್ ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲುಡ್ರೋನ್ ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲು

ಇತ್ತೀಚಿನ ದಿನಗಳಲ್ಲಿ ಪ್ರಚಾರದಲ್ಲಿರುವ ಮಂಡ್ಯ ಜಿಲ್ಲೆಯ ಪ್ರತಾಪ್‌ ಎಂಬಾತನ ಭ್ರಾಂತ ಮತ್ತು ಅತಿಭ್ರಮೆಯ ಕಲ್ಪನೆಗಳು ಅವನಿಗೆ ಮಹಾಸಾಧಕ, ಮೇಧಾವಿ ಎನ್ನುವಂತಹ ಬಿರುದುಗಳನ್ನು ಕೊಟ್ಟಿದ್ದು, ಮತ್ತೀಗ ಅವನೊಬ್ಬ ಸುಳ್ಳುಗಾರ, ಮೋಸಗಾರ ಎನ್ನುತ್ತಿರುವುದು ಬಲ್ಲ ಸಂಗತಿ. ಈ ಹಿನ್ನೆಲೆಯಲ್ಲಿ ಅವನ ಮನಸನ್ನು ವಿಶ್ಲೇಷಿಸುವ ಅಗತ್ಯವಿದೆ.

Catch me if you can: Drone Pratap suffers delusion of the grandeur

ಗ್ರಾಮಾಂತರ ಪ್ರದೇಶದಿಂದ ಬಂದಂತಹ ಈ ವ್ಯಕ್ತಿಯಲ್ಲಿ ಹುಟ್ಟಿರುವ ಭ್ರಮೆಯಾಧಾರಿತ ಆಲೋಚನೆಗಳು ಆಧುನಿಕ ವಿಜ್ಞಾನ ತಂತ್ರಜ್ಞಾನದ ಸಾಧನೆಗಳು ಎಷ್ಟೊಂದು ಸರಾಗವಾಗಿ ಕೆಲವರಿಗೆ ಲಭ್ಯ ಎನ್ನುವಂತಹ ತಪ್ಪುಕಲ್ಪನೆಗಳನ್ನು ಜನರಲ್ಲಿ ಮತ್ತು ಸರ್ಕಾರಗಳಲ್ಲಿಯೂ ಮೂಡಿಸಿದೆ.

'ಡ್ರೋಣ್' ಎಂದು ಕಾಗೆ ಹಾರಿಸಿದ್ದ 'ಪ್ರತಾಪ್' ವಿರುದ್ಧ ದೂರು ದಾಖಲು!'ಡ್ರೋಣ್' ಎಂದು ಕಾಗೆ ಹಾರಿಸಿದ್ದ 'ಪ್ರತಾಪ್' ವಿರುದ್ಧ ದೂರು ದಾಖಲು!

ಆದರೆ ಈ ವ್ಯಕ್ತಿಯು ಮಾನಸಿಕ ಬಳಲಿಕೆ ಎನ್ನಬಹುದಾದ ಸಂಭ್ರಮೆಯ ಸ್ಥಿತಿಯಲ್ಲಿರಬಹುದು ಎನ್ನುವುದು ನನ್ನ ಅನಿಸಿಕೆ. ಆತನು ಸಂಭ್ರಮೆ ಎನ್ನುವ ಮನೋದೌರ್ಬಲ್ಯದಿಂದ ಬಳಲುತ್ತಿರಬಹುದು. ಅಂದರೆ, ಉತ್ಪ್ರೇಕ್ಷೆಯಿಂದ ಕೂಡಿರುವಂತಹ ಅತಿವಿಜೃಂಭಣೆಯ ಭಾವನೆಗಳು. ಇಂಗ್ಲಿಷ್‌ ಭಾಷೆಯಲ್ಲಿದನ್ನು ಡೆಲ್ಯುಷ್ಝ ನ್ ಅಫ್‌ ಗ್ರ್ಯಾಂಡ್ಜರ್‌(delusion of the grandeur)ಎನ್ನುತ್ತಾರೆ.

Catch me if you can: Drone Pratap suffers delusion of the grandeur

ಈ ಸ್ಥಿತಿಗೆ ಕಾರಣಗಳು ಬಾಲ್ಯದ ದಿನಗಳಲ್ಲಿ ಅನುಭವಿಸಿರಬಹುದಾದ ಕೌಟುಂಬಿಕ-ಸಾಮಾಜಿಕ ಸಂಘರ್ಷಗಳು. ಇದನ್ನು ವಿವರಿಸುವಂತಹ ಚಲನಚಿತ್ರಗಳು ಹಲವಾರು ಬಂದಿವೆ. ಆದರೆ 2000 ಆರಂಭದಲ್ಲಿ ಹೊರಬಂದ ಡೆವಿಡ್‌ ಸ್ಪೆಲ್‌ ಬರ್ಗ್‌ ಅವರ ಇಂಗ್ಲಿಷ್‌ ಚಲನಚಿತ್ರ ಕ್ಯಾಚ್‌ ಮಿ ಇಫ್‌ ಯು ಕ್ಯಾನ್. ಇದರ ನಾಯಕ ನಟ ಡಿ ಕ್ಯಾಪ್ರಿಯೊ ಅದ್ಬುತವಾಗಿ ಭ್ರಮೆಯಾರಿಸಿದ ನಯ ವಂಚಕನ ಪಾತ್ರ ನಿರ್ವಹಿಸಿರುತ್ತಾರೆ. ( ಈ ಕತೆಯು ನಿಜ ವ್ಯಕ್ತಿಯೊಬ್ಬನ ಬದುಕಿನಿಂದ ಹೊರತಂದಿದ್ದು)

English summary
Catch me if you can: Psychiatrist Dr. A Sridhar says Drone Pratap may be suffering from delusion of the grandeur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X