Cat And Monkey: ಮರಿ ಮಂಗನಿಗೆ ಮಮ್ಮಿ ಆದ ಬೆಕ್ಕು: ವಿಡಿಯೋ ವೈರಲ್
ಬೆಕ್ಕು ಮರಿ ಮಂಗವನ್ನು ತಾಯಿಯಂತೆ ಹೊತ್ತು ಓಡಾಡುವ ವಿಡಿಯೋ ವೈರಲ್ ಆಗಿದೆ. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ವಿಡಿಯೋವನ್ನು 6 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
ಪ್ರಾಣಿಗಳು ಅಂದ್ರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ. ಅದರಲ್ಲೂ ಸಾಕು ಪ್ರಾಣಿಗಳು ಅದೇನೇ ಮಾಡಿದರೂ ಚಂದ. ಅದು ಹೇಗೇ ಇದ್ದರೂ ಅಂದವೆ. ಸಾಮಾಜಿಕ ಜಾಲತಾಣದಲ್ಲಿ ಇಂತಹದ್ದೇ ವಿಡಿಯೋಗಳು ವೈರಲ್ ಆಗುತ್ತಿವೆ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲಿ ಕೆಲವು ವಿಡಿಯೋಗಳು ನೋಡುಗರಿಗೆ ಮಜಾ ಕೊಡುವುದರೊಂದಿಗೆ ಆಶ್ಚರ್ಯವನ್ನುಂಟು ಮಾಡುತ್ತವೆ. ಇಂತಹ ಒಂದು ವಿಡಿಯೋ ನೋಡುಗರ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ. ಪ್ರಾಣಿಗಳ ನಡುವೆ ಇರುವ ಬಾಂದವ್ಯವನ್ನು ಈ ವಿಡಿಯೋದಲ್ಲಿ ಕಾಣಬಹುದು. ವಿಡಿಯೋದಲ್ಲಿ ಬೆಕ್ಕೊಂದು ಮಂಗನಿಗೆ ತಾಯಿ ಆಗಿದೆ. ಆಶ್ಚರ್ಯ ಎನಿಸಿದರೂ ಇದು ನಿಜ. ತಾಯಿ ಆಗುವುದು ಅಂದರೆ ಮಗುವನ್ನು ಹೇರಲೇಬೇಕು ಎಂದಲ್ಲ. ಬದಲಿಗೆ ಬೆಕ್ಕು ಮರಿ ಮಂಗವನ್ನು ತಾಯಿಯಂತೆ ಹೊತ್ತು ಓಡಾಡುವುದು ವಿಡಿಯೋದಲ್ಲಿ ಕಂಡುಬಂದಿದೆ.

ಹೌದು ವಿಡಿಯೋದಲ್ಲಿ ಬೆಕ್ಕು ತನ್ನ ಮಗುವಿನಂತೆ ಮರಿ ಮಂಗನನ್ನು ಹೊತ್ತುಕೊಂಡಿರುವುದು ಕಂಡು ಬಂದಿದೆ. ಪ್ರಾಣಿ ಜಗತ್ತಿನಲ್ಲಿ ನಾಯಿ ಮತ್ತು ಬೆಕ್ಕು ಉತ್ತಮ ಸ್ನೇಹಿತರಾಗಿರುವುದನ್ನು ನಾವು ನೋಡಿದ್ದೇವೆ. ಬೆಕ್ಕು ನಾಯಿಮರಿಗಳನ್ನು ದತ್ತು ಪಡೆಯುವುದು ಸೇರಿದಂತೆ ನಂಬಲಾಗದ ಅದ್ಭುತ ಸಂಬಂಧಗಳನ್ನು ನಾವು ನೋಡಿದ್ದೇವೆ. ಇದೇ ರೀತಿಯ ಬಂಧವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರಿಲ್ಲ ನಾಯಿ ಬೆಕ್ಕು ಇಲ್ಲ. ಬದಲಿಗೆ ನಾಯಿ ಬದಲಿಗೆ ಮರಿ ಮಂಗವಿದೆ. ಮರಿ ಮಂಗ ತನ್ನ ತಾಯಿಯಂತೆ ಬೆಕ್ಕನ್ನು ಅಪ್ಪಿಕೊಂಡಿದೆ. ಬೆಕ್ಕು ತನ್ನ ಮರಿಯಂತೆ ಮಂಗನ್ನು ಹೊತ್ತು ಸಾಗುವುದನ್ನು ಕಾಣಬಹುದು.
Cat and a little monkey.. 😊 pic.twitter.com/qBCw9aPCtY
— Buitengebieden (@buitengebieden) January 31, 2023
ಈ ವಿಡಿಯೋವನ್ನು "ಬೆಕ್ಕು ಮತ್ತು ಮಂಗ" ಎಂಬ ಶೀರ್ಷಿಕೆಯೊಂದಿಗೆ @buitengebieden ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ವಿಡಿಯೋವನ್ನು 6 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
Found this guy in ORR today! @peakbengaluru pic.twitter.com/BIDtBTFRdx
— Aarun Gowda (@alwAYzgAMe420) January 14, 2023
ಬೆಕ್ಕಿನ ಬೈಕ್ ರೈಡ್
ಯಾವುದೇ ರಕ್ಷಣೆಯಿಲ್ಲದೆ ಬೆಕ್ಕುಗಳು ಬೈಕ್ನಲ್ಲಿ ಸಂಚರಿಸುತ್ತಿರುವ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಬೈಕ್ ಸವಾರನೊಬ್ಬ ತನ್ನ ಎರಡು ಸಾಕು ಬೆಕ್ಕುಗಳನ್ನು ಬೈಕ್ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಈ ಬೆಕ್ಕುಗಳು ಚಲಿಸುವ ಬೈಕ್‌ನಲ್ಲಿ ತುಂಬಾ ಸುಲಭವಾಗಿ ಕುಳಿತುಕೊಂಡಿವೆ. ಒಂದು ಬೆಕ್ಕು ಮನುಷ್ಯನ ಬೆನ್ನಿನ ಮೇಲೆ ಕುಳಿತುಕೊಂಡರೆ, ಇನ್ನೊಂದು ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದೆ. ಇವುಗಳನ್ನು ನೋಡಿದರೆ ಇವು ಎರಡಕ್ಕೂ ಭಯವೇ ಇಲ್ಲ ಅನ್ನಿಸುತ್ತದೆ. ಇದನ್ನು ನೋಡಿದರೆ ಈ ಬೆಕ್ಕುಗಳಿಗೆ ಬೈಕ್ ಸವಾರಿ ಮಾಡಿ ಅಭ್ಯಸವಿರುವಂತೆ ಕಾಣಿಸುತ್ತದೆ. ಈ ವೈರಲ್ ವಿಡಿಯೋ ಬೆಂಗಳೂರಿನದ್ದು ಎಂದು ಹೇಳಲಾಗುತ್ತಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications