ನೀವು ಧರಿಸುವ ಬಟ್ಟೆಯ ಮಾಸ್ಕ್ ಕೊರೊನಾ ಸೋಂಕಿನಿಂದ ರಕ್ಷಿಸಬಲ್ಲದೇ?
ದೇಶದಲ್ಲಿ ಕೊರೊನಾದ ಮೂರನೇ ಅಲೆ ಶುರುವಾಗಿದೆ, ಈಗಾಗಲೇ ಸಾಕಷ್ಟು ರಾಜ್ಯಗಳಲ್ಲಿ ಹಲವು ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ಕೊರೊನಾ ಶುರುವಾಗುತ್ತಿದ್ದಂತೆ ಜನರು ಯೂಸ್ ಆಂಡ್ ಥ್ರೋ, ಅಥವಾ ಎನ್ 95 ಮಾಸ್ಕ್ ಬಳಕೆಯನ್ನು ಶುರು ಮಾಡಿದರು. ಲಾಕ್‌ಡೌನ್ ಮುಗಿಯುತ್ತಿದ್ದಂತೆ ಕ್ರಮೇಣವಾಗಿ ಮಾರುಕಟ್ಟೆಗಳು ತೆರೆಯುತ್ತಿದ್ದಂತೆ ಬಟ್ಟೆಯ ಮಾಸ್ಕ್‌ಗಳು ಜನರ ಗಮನ ಸೆಳೆದವು, ಯಾವುದೇ ಉಡುಪುಗಳನ್ನು ಕೊಂಡರೂ ಅದರೊಂದಿಗೆ ಮ್ಯಾಚಿಂಗ್ ಮಾಸ್ಕ್ ಕೂಡ ನೀಡಲು ಶುರು ಮಾಡದರು. ಹಾಗೆಯೇ ಬಟ್ಟೆಯಿಂದ ಮಾಡಿದ ವಿವಿಧ ಮಾಸ್ಕ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.
ಹಾಗಾದರೆ ಬಟ್ಟೆಯ ಮಾಸ್ಕ್ ಎಷ್ಟು ಸುರಕ್ಷಿತ, ಕೊರೊನಾವನ್ನು ನಿಯಂತ್ರಿಸುವ ಶಕ್ತಿ ಅದರಲ್ಲಿದೆಯೇ? ಎಂಬ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದಾರೆ.

ಎರಡಕ್ಕಿಂತ ಹೆಚ್ಚಿನ ಪದರಗಳಿರಲಿ
ಹಲವು ತಜ್ಞರು ನೀಡಿರುವ ಅಭಿಪ್ರಾಯದಂತೆ, ಸಾಮಾನ್ಯವಾಗಿ ಬಟ್ಟೆಯ ಮಾಸ್ಕ್‌ಗಳು ಕೊರೊನಾ ಸೋಂಕನ್ನು ತಡೆಯುವಲ್ಲಿ ಯಶಸ್ವಿಯಾಗುವುದಿಲ್ಲ, ಬಟ್ಟೆಯ ಮಾಸ್ಕ್ ಧರಿಸುವುದಾದರೆ ಎರಡು ಅಥವಾ ಮೂರು ಪದರಗಳಿರುವ ಮಾಸ್ಕ್‌ಗಳನ್ನೇ ಧರಿಸಿ ಎಂದು ಸಲಹೆ ನೀಡಿದ್ದಾರೆ. ಒಂದೇ ಪದರವನ್ನು ಹೊಂದಿರುವ ಮಾಸ್ಕ್‌ಗಳು ಏರೋಸೋಲ್ಸ್‌ಗಳನ್ನು ತಡೆಯುವಲ್ಲಿ ವಿಫಲವಾಗುತ್ತದೆ, ಸುಲಭವಾಗಿ ಕೊರೊನಾ ಸೋಂಕಿನ ಕಣಗಳು ದೇಹದ ಒಳಗೆ ಹೋಗಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಸಿಡಿಸಿ ನೀಡಿರುವ ಮಾಹಿತಿ ಏನು?
ಅಮೆರಿಕ ಮೂಲದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಷನ್ ನೀಡಿರುವ ಮಾಹಿತಿ ಪ್ರಕಾರ, ಎರಡು ವರ್ಷಕ್ಕಿಂತ ಹೆಚ್ಚಿನ ಮಕ್ಕಳು ಎರಡೂ ಲಸಿಕೆಯನ್ನು ಪಡೆಯದವರು ಮನೆಯ ಒಳಗೂ ಮಾಸ್ಕ್ ಧರಿಸಬೇಕು ಎಂದು ಹೇಳಿದ್ದಾರೆ.

ಬಟ್ಟೆಯ ಮಾಸ್ಕ್ ಒಳಗೆ ಯೂಸ್ ಆಂಡ್ ಥ್ರೋ ಮಾಸ್ಕ್ ಧರಿಸಿ
ಒಂದೊಮ್ಮೆ ನೀವು ಬಟ್ಟೆಯ ಮಾಸ್ಕ್ ಧರಿಸುತ್ತಿದ್ದರೆ ಅದರೊಳಗೆ ಒಂದು ಯೂಸ್ ಆಂಡ್ ಥ್ರೋ ಮಾಸ್ಕ್ ಧರಿಸಿ, ಎರಡನೇ ಮಾಸ್ಕ್ ಸಂಪೂರ್ಣವಾಗಿ ನಿಮ್ಮ ಮೂಗು ಹಾಗೂ ಗಲ್ಲವನ್ನೂ ಮುಚ್ಚುವಂತಿರಲಿ. ಹಾಗೆಯೇ ಬಟ್ಟೆಯ ಮಾಸ್ಕ್ ಧರಿಸಿದರೂ ಶುಚಿಯಾಗಿಟ್ಟುಕೊಳ್ಳಿ, ಒಮ್ಮೆ ಬಳಸಿದ ಬಳಿಕ ತೊಳೆಯಿರಿ, ಹಾಗೆಯೇ ಯೂಸ್ ಆಂಡ್ ಥ್ರೋ ಮಾಸ್ಕ್‌ನ್ನು ಒಮ್ಮೆ ಬಳಸಿದ ಬಳಿಕ ಬಿಸಾಡಿರಿ ಎಂದು ಸಲಹೆ ನೀಡಿದ್ದಾರೆ.

ಎನ್95 ಮಾಸ್ಕ್ ಕೊರೊನಾ ವಿರುದ್ಧ ಎಷ್ಟು ಹೋರಾಡಬಲ್ಲದು?
ಎನ್95 ಮಾಸ್ಕ್ ಕೊರೊನಾ ಸೋಂಕಿನ ಕಣಗಳನ್ನು ಮೂಗು ಅಥವಾ ಬಾಯಿಯ ಮೇಲಕ ದೇಹದ ಒಳಕ್ಕೆ ಪ್ರವೇಶಿಸದಂತೆ ತಡೆಯುತ್ತದೆ. ಎನ್ 95 (N 95) ಅಥವಾ ಕೆಎನ್ 95 ಮಾಸ್ಕ್ ಬಳಸುವುದು ವಾಯುಗಾಮಿ ವೈರಸ್ ಅನ್ನು ಎದುರಿಸಲು ಉತ್ತಮ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ. ಜನರಿಗೆ ಎರಡು ಎನ್ 95 ಅಥವಾ ಕೆಎನ್ 95 ಮಾಸ್ಕ್ ಗಳನ್ನು ಖರೀದಿಸಲು ಮತ್ತು ದಿನಕ್ಕೆ ಒಂದು ಮಾಸ್ಕ್ ಬಳಸಲು ಅವರು ಸಲಹೆ ನೀಡಿದ್ದಾರೆ.
ಅದರ ನಂತರ ಅದನ್ನು ಕಾಗದದ ಚೀಲದಲ್ಲಿ ಇರಿಸಿ ಮತ್ತು ಇನ್ನೊಂದನ್ನು ಬಳಸಿ. ಪ್ರತಿ 24 ಗಂಟೆಗಳಿಗೊಮ್ಮೆ ಅಂತಹ ಮಾಸ್ಕ್‌ಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಿ. ಮಾಸ್ಕ್ ಚೆನ್ನಾಗಿದ್ದರೆ ಅದನ್ನು ಮತ್ತೆ ಹಲವಾರು ವಾರಗಳವರೆಗೆ ಬಳಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಮಾಸ್ಕ್ ಧರಿಸದೆಯೇ ಉದ್ಯಾನವನಗಳು ಮತ್ತು ಕಡಲತೀರಗಳಿಗೆ ಹೋಗುವುದು ಸುರಕ್ಷಿತವೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಡಾ.ಫಾಹಿಮ್ ಯೂನುಸ್, ಇಬ್ಬರು ವ್ಯಕ್ತಿಗಳ ನಡುವೆ 6 ಅಡಿ ಅಂತರವಿದ್ದರೆ, ಮಾಸ್ಕ್ ಇಲ್ಲದೆಯೇ ಅಂತಹ ಸ್ಥಳಗಳಲ್ಲಿ ನಡೆಯುವುದು ಸುರಕ್ಷಿತ ಎಂದು ಹೇಳಿದ್ದಾರೆ. ಗಾಳಿಯಲ್ಲಿ ಹರಡುವ ವೈರಸ್ ವಿಷಯಕ್ಕೆ ಬಂದಾಗ, ಬಟ್ಟೆಯಿಂದ ಮಾಡಿದ ಮಾಸ್ಕ್ ಗಳಿಗಿಂತ ಎನ್ 95 ಮಾಸ್ಕ್‌ಗಳು ಖಂಡಿತವಾಗಿಯೂ ಉತ್ತಮವಾಗಿವೆ ಎಂದು ಹೇಳಲಾಗಿದೆ.
N95 ಮತ್ತು ಸರ್ಜರಿ ಮಾಸ್ಕ್‌ಗಳು ವೈಯಕ್ತಿಕ ರಕ್ಷಣಾ ಸಾಧನಗಳ ಉದಾಹರಣೆಗಳಾಗಿದ್ದು ಅದನ್ನು ಧರಿಸಿದವವರಿಗೆ ಗಾಳಿಯಲ್ಲಿರುವ ಸೂಕ್ಷ್ಮ ಕಣಗಳಿಂದ ರಕ್ಷಣೆ ಸಿಗುತ್ತದೆ. ಇದು ಗಾಳಿಯಲ್ಲಿರುವ 95 ಪ್ರತಿಶತದಷ್ಟು ಕಣಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ.
N95 ಮಾಸ್ಕ್ ಗಳನ್ನು ಮರುಬಳಕೆ ಮಾಡಬಹುದೇ ಎಂಬ ಸ್ಥಿತಿ ಸ್ಪಷ್ಟವಾಗಿಲ್ಲ. ಡಾ. ಫಹೀಮ್ ಯೂನಿಸ್ ಅವರ ಪ್ರಕಾರ, ಅದನ್ನು ಮತ್ತೆ ಬಳಸಬಹುದು. ಅದೇ ಸಮಯದಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಈ ಹಿಂದೆ ಎನ್ 95 ಮಾಸ್ಕ್ ಅನ್ನು ಒಮ್ಮೆ ಮಾತ್ರ ಬಳಸಬಹುದು ಎಂದು ಹೇಳಿದೆ. ಮಾರುಕಟ್ಟೆಯಲ್ಲಿ N95 ಮಾಸ್ಕ್ ಗಳು ಲಭ್ಯವಿದ್ದು, ಅವು ಕೊಳೆಯಾದಾಗ ಅವುಗಳನ್ನು ತೊಳೆದು ಅದನ್ನು ಮರುಬಳಕೆ ಮಾಡಬಹುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications