BSNL 5ಜಿ ಸಿಮ್ ಫಸ್ಟ್ ಲುಕ್: ಸಾಮಾಜಿಕ ತಾಣದಲ್ಲಿ ಟ್ರೆಂಡ್ ಆಗುತ್ತಿದೆ ವಿಡಯೋ
ಜುಲೈನಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ರಿಚಾರ್ಜ್ ಬೆಲೆಯನ್ನು ಗಗನಕ್ಕೆ ಏರಿಸುವುದ್ದರಿಂದ ಗ್ರಾಹಕ ಕಂಗಾಲಾಗಿದ್ದರು. ಹೀಗಾಗಿ ಅಗ್ಗದ ಬೆಲೆಯ ರಿಚಾರ್ಜ್ ನೆಟ್‌ವರ್ಕ್‌ನತ್ತ ಮುಖ ಮಾಡಿದ್ದವು. ಈ ವೇಳೆ ಗ್ರಾಹಕರ ಮೊದಲ ಚಾಯ್ಸ್ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಆಗಿತ್ತು. ಖಾಸಗಿ ಟೆಲಿಕಾಂ ಸಂಸ್ಥೆಗಳ ಭರಾಟೆಯಲ್ಲಿ ಮತ್ತೆ ಬಳಕೆದಾರ ಬಿಎಸ್‌ಎನ್‌ಎಲ್ ಕಂಪನಿಯ ಸಿಮ್‌ನತ್ತ ವಾಲಿದ್ದಾರೆ.
ಬಿಎಸ್‌ಎನ್‌ಎಲ್‌ನ ಹಳೆಯ ಗ್ರಹಾಕರು ಮತ್ತೆ ಹಳೆ ಕಂಪನಿಗೆ ವಾಪಸ್ ಆಗಿದ್ದಾರೆ. ಇದರಿಂದ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿದೆ. ಒಂದೇ ತಿಂಗಳಲ್ಲಿ 27 ಲಕ್ಷಕ್ಕೂ ಹೆಚ್ಚು ಬಳಕೆದಾರರು ಬಿಎಸ್‌ಎನ್‌ಎಲ್‌ನತ್ತ ವಾಲಿದ್ದಾರೆ. ಹೀಗಾಗಿ ಬಿಎಸ್‌ಎನ್‌ಎಲ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಅಪ್‌ಡೇಟ್ ಆಗುತ್ತಲೆ ಇದೆ. ಈಗ ಬಿಎಸ್‌ಎನ್‌ಎಲ್ ತನ್ನ 5ಜಿ ಸಿಮ್ ಲಾಂಚ್ ಮಾಡಿದೆ.

5ಜಿ ಲುಕ್ ರಿಲೀಸ್
ಬಿಎಸ್‌ಎನ್‌ಎಲ್ ತನ್ನ 5ಜಿ ಸಿಮ್ ಲಾಂಚ್ ಮಾಡಿದ್ದು ಇದರ ವಿಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು BSNL 5G ಪರೀಕ್ಷೆ ನಡೆಸಿದ್ದರು. ಈ ವೇಳೆ ಕೇಂದ್ರ ಸಚಿವರು ಮೊದಲ ವಿಡಿಯೋ ಕಾಲ್ ಸಹ ಮಾಡಿದ್ದರು. ಈಗ ಬಿಎಸ್‌ಎನ್‌ಎಲ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.
ಕೆಲವು ದಿನಗಳ ಹಿಂದೆ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ಈಗ ಬಿಎಸ್‌ಎನ್‌ಎಲ್ 5G ಸಿಮ್ ಲಾಂಚ್ ಮಾಡಿದ ವಿಡಿಯೋ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ BSNL 5G ಸಿಮ್ ಅನ್ನು ಬಿಡುಗಡೆ ಮಾಡಿದೆ. ಇದು ಬಿಎಸ್‌ಎನ್‌ಎಲ್ ಸಿಮ್ ಮಾತ್ರ ಎಂದು ವಿಡಿಯೋದಲ್ಲಿ ಹೇಳಲಾಗುತ್ತಿದೆ. ಸದ್ಯ, ಈ ವಿಡಿಯೋ ಕುರಿತು ಕಂಪನಿಯಿಂದ ಯಾವುದೇ ಮಾಹಿತಿ ಹೊರ ಬಂದಿಲ್ಲ.
BSNL ने 5G सिम बेचना शुरू कर दिया है 👇 pic.twitter.com/LBftGZJVag
— ashokdanoda (@ashokdanoda) July 31, 2024
ಬಾಕ್ಸ್‌ನಲ್ಲಿರುವ ಸಿಮ್‌ಗಳನ್ನು ತೆರೆದ ಅಧಿಕಾರಿಗಳು ಆ ಸಿಮ್‌ನ್ನು ತೊರಿಸುತ್ತಿರುವ ವಿಡಿಯೋ ಸಮಾಜಿಕ ತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ಸಿಮ್ ಕಾರ್ಡ್ ಮೇಲೆ 5ಜಿ ಎಂದು ಬರೆಯಲಾಗಿದೆ. ಈ ವಿಡಿಯೋವನ್ನು ಮಹಾರಾಷ್ಟ್ರದ ಕಚೇರಿಯಲ್ಲಿ ಸೆರೆ ಹಿಡಿಯಲಾಗಿದೆ.
ದೇಶದಲ್ಲಿ ಆರಂಭವಾಗಿವೆ 4ಜಿ ಸೇವೆ
ಈಗಾಗಲೇ ಬಿಎಸ್‌ಎನ್‌ಎಲ್ ಕಂಪನಿ 5ಜಿ ಸೇವೆಗೆ ಸಂಬಂಧಿಸಿದಂತೆ ಕಾರ್ಯವನ್ನು ಆರಂಭಿಸಿದೆ. ದೇಶದಲ್ಲಿ ಇನ್ನು ಸರ್ಕಾರಿ ಸೌಮ್ಯದ ಕಂಪನಿ ಇನ್ನು ಎಲ್ಲ ಪ್ರದೇಶಗಳಲ್ಲಿ 4ಜಿ ಸೇವೆಗಳನ್ನೇ ಸರಿಯಾಗಿ ಆರಂಭಿಸಿಲ್ಲ. ತಮಿಳುನಾಡಿನಲ್ಲಿ ಬಿಎಸ್‌ಎನ್‌ಎಲ್ 4ಜಿ ಸೇವೆಗಳು ಆರಂಭವಾಗಿವೆ. ಅಲ್ಲದೆ ಉತ್ತರ ಭಾರದ ಕೆಲವು ರಾಜ್ಯಗಳಲ್ಲಿ ಈ ಸೇವೆ ಆರಂಭಿಸಲಾಗಿದೆ. ಅಲ್ಲದೆ 9000ಕ್ಕೂ ಹೆಚ್ಚು ಟವರ್‌ಗಳನ್ನು ಅಳವಡಿಸಲಾಗಿದೆ.
ಖಾಸಗಿ ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ನೀಡಲು ಬೇಕಿದ್ದ ಎಲ್ಲ ಸಿದ್ಧತೆಗಳನ್ನು ಬಿಎಸ್ಎನ್ಎಲ್ ಮಾಡಿಕೊಳ್ಳುತ್ತಿದೆ. ಹೀಗಾಗಿ ಬಳಕೆದಾರರು ಈಗ ಈ ಅಗ್ಗದ ರಿಚಾರ್ಜ್ ಹಾಗೂ ಉತ್ತಮ ನೆಟ್‌ವರ್ಕ್ ಹೊಂದಿರುವ ನೆಟ್‌ವರ್ಕ್‌ನತ್ತ ವಾಲುತ್ತಿದ್ದಾರೆ. 5G ನೆಟ್‌ವರ್ಕ್‌ನ ಪ್ರಯೋಗವನ್ನು ದೆಹಲಿಯ JNU ಕ್ಯಾಂಪಸ್, ದೆಹಲಿ IIT, ದೆಹಲಿ ಸಂಚಾರ ಭವನ, ಹೈದರಾಬಾದ್, ಸರ್ಕಾರಿ ಕಚೇರಿ, ಬೆಂಗಳೂರಿನ ಸರ್ಕಾರಿ ಕಚೇರಿ, ಸೇರಿದಂತೆ ಆಯ್ದ ಸ್ಥಳಗಳಲ್ಲಿ ಪ್ರಯೋಗಿಸಲು ಸಿದ್ಧತೆ ನಡೆಸಲಾಗುತ್ತಿದೆ.












Click it and Unblock the Notifications