BSNL ಸಿಹಿ ಸುದ್ದಿ: 365 ಮತ್ತು 425 ದಿನಗಳ ರಿಚಾರ್ಜ್ ಯೋಜನೆ ಘೋಷಣೆ: ಪ್ಲಾನ್ ಮೊತ್ತ, ಪ್ರಯೋಜನಗಳು
ಬೆಂಗಳೂರು, ಜನವರಿ 17: ಖಾಸಗಿ ಟಿಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯುತ್ತಿರುವ ಭಾರತ ಸರ್ಕಾರಿ ಸ್ವಾಮ್ಯದ 'ಭಾರತ್ ಸಂಚಾರ್ ನಿಗಮ್ ಲಿಮಿಟೆಡ್' (BSNL) ಸಂಸ್ಥೆ ಬಜೆಟ್ ಸ್ನೇಹಿ ಎರಡು ಹೊಸ ರೀಚಾರ್ಜ್ ಪ್ಲಾನ್‌ಗಳನ್ನು ಘೋಷಣೆ ಮಾಡಿದೆ. ಈಗಾಗಲೇ ಹಲವು ಪ್ಲಾನ್‌ಗಳು ಜಾರಿಯಲ್ಲಿವೆ. ಇದೀಗ ಒಂದು ವರ್ಷ ಮಾತ್ರವಲ್ಲದೇ 425 ದಿನಗಳ ರಿಚಾರ್ಜ್ ಪ್ಲಾನ್ ಸಹ ಘೋಷಣೆ ಆಗಿದೆ. ಬಿಎಸ್‌ಎನ್‌ಎಲ್ ಗ್ರಾಹಕರು ಕೂಡಲೇ ಪ್ಲಾನ್ ವಿವರ, ಪ್ರಯೋಜನ, ವ್ಯಾಲಿಡಿಟಿ, ದಿನದ ಪಾವತಿ ಹಣ, ಒಟ್ಟು ಮೊತ್ತದ ವಿವರ ತಿಳಿಯಿರಿ ಪ್ಲಾನ್ ಪಡೆಯಬಹುದು.
BSNL ಕೈಗೆಟುಕುವ ದರದಲ್ಲಿ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಅದರ ಬೆನ್ನಲ್ಲೆ 365 ದಿನ ಮತ್ತು 425 ದಿನಗಳ ಸುದೀರ್ಘ ಅವಧಿಯ ಪ್ಲಾನ್ ಅನ್ನು ಘೋಷಿಸಿದೆ. ಬಹುಕಾಲದವರೆಗೆ ರೀಚಾರ್ಜ್, ಸಿಮ್ ಸಕ್ರಿಯವಾಗಿರುವವರಿಗೆ ಈ ಪ್ಲಾನ್ ಸೂಕ್ತ ಎನ್ನಬಹುದು.

BSNL ಇತರ ಟೆಲಿಕಾಂ ಕಂಪನಿಗಳಿಗಿಂತಲೂ ಗ್ರಾಹಕ ಸ್ನೇಹಿ ಯೋಜನೆ ನೀಡುತ್ತಿದೆ. ಬಳಕೆದಾರರು ಪ್ರತಿ ದಿನ ಕೇವಲ 3 ರೂಪಾಯಿ ವ್ಯಯಿಸಿದರೆ ನೀವು 425 ದಿನ ಮತ್ತು 365 ದಿನಗಳ ಯೋಜನೆಯ ಲಾಭ ಪಡೆದುಕೊಳ್ಳಬಹುದು.
365 ದಿನದ ರೀಚಾರ್ಜ್ ಯೋಜನೆ ವಿವರ
BSNL ಗ್ರಾಹಕರು 1,198 ರೂಪಾಯಿ ನೀಡಿದರೆ ಒಂದು ವರ್ಷ ಪೂರ್ಣ 365 ದಿನಗಳ ಅವಧಿಗೆ ಪ್ಲಾನ್ ಪಡೆಯಬಹದು. ನಿತ್ಯ ಕೇವಲ 3.28 ರೂ. ವ್ಯಯಿಸಿದರೆ ಈ ಯೋಜನೆ ನಿಮ್ಮದಾಗುತ್ತದೆ. ಯೋಜನೆಯಿಂದಾಗಿ ಮಾಸಿ 300 ನಿಮಿಷಗಳ ಕರೆಗಳು ನಿಮ್ಮದಾಗುತ್ತವೆ. ದೇಶಾದ್ಯಂತ ಯಾವುದೇ ನೆಟ್‌ವರ್ಕ್ ಅಡಿ ನೀವು ಸಂಪರ್ಕ ಸಾಧಿಸಬಹುದು.
ಹೆಚ್ಚುವರಿಯಾಗಿ ಚಂದಾದಾರರಿಗೆ ಮಾಸಿಕ 3GB ಡೇಟಾ ಮತ್ತು 30 ಉಚಿತ ಎಸ್‌ಎಂಎಸ್ ಗಳನ್ನು ಪಡೆಯಬಹುದು. ಉಚಿತ ರಾಷ್ಟ್ರೀಯ ರೋಮಿಂಗ್ ಸೇವೆ ಇದರಲ್ಲಿರುವುದು ಯೋಜನೆಯ ಮತ್ತೊಂದು ವಿಶೇಷತೆ.

425 ದಿನಗಳ ರಿಚಾರ್ಜ್ ಯೋಜನೆ ವಿವರ
BSNL ತನ್ನ ಬಳಕೆದಾರರಿಗೆ ಇದೇ ಮೊದಲ ಬಾರಿಗೆ 425 ದಿನಗಳ ಯೋಜನೆ ಪರಿಚಯಿಸಿದೆ. ಈ ಯೋಜನೆಯ ಚೆಂದಾದಾರರಾಗಲು 2,399 ರೂ. ನೀಡಿ ಪ್ಲಾನ್ ಪಡೆಯಬೇಕು. ಇದರಿಂದ ನೀವು ಅನಿಯಮಿತ ಕರೆಗಳನ್ನು ಆನಂದಿಸಬಹುದು. ಪ್ರತಿದಿನ 2ಜಿಬಿ ಇಂಟರ್‌ನೆಟ್ ಸಿಗಲಿದೆ. ಅವಧಿಯವರೆಗೆ ಒಟ್ಟು 850GB ಹೈ-ಸ್ಪೀಡ್ ಡೇಟಾದ ಪ್ರಯೋಜನ ಸಿಗಲಿದೆ. 100 ಉಚಿತ ಎಸ್‌ಎಂಎಸ್, ಉಚಿತ ರಾಷ್ಟ್ರೀಯ ರೋಮಿಂಗ್ ಸೇವೆ ಈ ಪ್ಲಾನ್‌ನಲ್ಲಿದೆ.
ಟವರ್, ಇಂಟರ್‌ನೆಟ್ ಸೇವೆಯ ಅಪ್‌ಗ್ರೇಡ್
BSNL ತನ್ನ 3ಜಿ ಟವರ್ ಸ್ಥಳಗಳಲ್ಲಿ 4ಜಿ ಟವರ್ ಅಳಡಿಕೆ, ಸುಧಾರಿತ ನೆಟ್‌ವರ್ಕ್ ಸಲಕರಣೆ ಅವಳಡಿಕೆ ಮಾಡುತ್ತಿದೆ. ಇದರ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ 5ಜಿಗೆ ಅಪ್‌ಗ್ರೇಡ್ ಆಗಲಿದೆ. ಈಗಾಗಲೇ ಬಿಎಸ್ಎನ್‌ಎಲ್ ಕಂಪನಿಯು ದೇಶಾದ್ಯಂತೆ ಸುಂಆರು 100,000 ಹೊಸ 4ಜಿ ಟವರ್‌ಗಳನ್ನು ಸ್ಥಾಪಿಸುವ ಕಾರ್ಯದಲ್ಲಿ ನಿರತವಾಗಿದೆ.
BSNL ಜನವರಿ 15 ರಿಂದಲೇ 3ಜಿ ಸೇವೆಯನ್ನು ಸ್ಥಗಿತಗೊಳಿಸಿದೆ. ಇದು ಸಹ 4ಜಿ ಅಂತರ್ಜಾಲ ಸೇವೆಯ ಭಾಗವಾಗಿದ್ದು, ಶೀಘ್ರವೇ ನೂರರಷ್ಟು 4ಜಿ ಇಂಟರ್‌ನೆಟ್ ಸೇವೆ ಜಾರಿಯಾಗಲಿದೆ. ಆದರೆ 3ಜಿ ಸೇವೆ ಸ್ಥಗಿತ ನಿರ್ಧಾರವು ಬಳಕೆದಾರರ ಮೇಲೆ ಪ್ರಮುಖ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ. ಬಳಕೆದಾರರಿಗೆ 4ಜಿ ಜೊತೆಗೆ 5ಜಿ ಸೇವೆಯನ್ನು ಶೀಘ್ರವೇ ನೀಡಲು ಸಕಲ ತಯಾರಿಲ್ಲಿ ಕಂಪನಿ ಇದೆ. ಈ ಮಧ್ಯೆ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಘೋಷಿಸುತ್ತಿದೆ.












Click it and Unblock the Notifications